BBK 10: ಬಿಗ್‌ಬಾಸ್ ಮನೆಯಲ್ಲಿ ಲೇಡೀಸ್ ಟ್ಯಾಯ್ಲೆಟ್ ಬಳಸಿದ್ದಕ್ಕೆ ಜಗಳ.. ಯೂಸ್ ಮಾಡಿ ಸಿಕ್ಕಿಬಿದ್ದವರು ಸ್ನೇಕ್ ಶ್ಯಾಮ್

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 10 ಅಂತಾನೇ ಅಲ್ಲ. ಪ್ರತಿ ಸೀಸನ್‌ನಲ್ಲೂ ಈ ಟಾಯ್ಲೆಟ್ ವಿಚಾರ ಚರ್ಚೆಗೆ ಬಂದೇ ಬರುತ್ತೆ. ಇದನ್ನೆಲ್ಲಾ ನೋಡುವಾಗ ಪ್ರೇಕ್ಷಕರಿಗೆ ಅನ್ನಿಸುವುದು. ಸ್ಪರ್ಧಿಗಳಲ್ಲಿ ಟಾಯ್ಲೆಟ್ ಗಲೀಜು ಮಾಡುವವರು ಮನೆಯಲ್ಲಿ ಹೇಗಪ್ಪ ಇರುತ್ತಾರೆ ಅಂತ. ಒಳ್ಳೆ ಎಲ್ ಕೆ ಜಿ ಮಕ್ಕಳು ದೂರು ಹೇಳುವ ರೀತಿ, ಕುಂತಾಗ, ನಿಂತಾಗ ಟಾಯ್ಲೆಟ್ ವಿಚಾರವೇ ಬರುತ್ತೆ.

ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಆಟವನ್ನು ಅವರವರೇ ಆಡಬೇಕು. ಅಡುಗೆ ಅವರೇ ಮಾಡಿಕೊಳ್ಳಬೇಕು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅದರಲ್ಲಿ ಟಾಯ್ಲೆಟ್ ಕೂಡ ಒಂದು. ಪ್ರತಿ ಸೀಸನ್‌ನಲ್ಲೂ ಲೇಡೀಸ್ ಟಾಯ್ಲೆಟ್ ಬಳಸಿದವರು ಯಾರು ಎಂಬ ಪ್ರಶ್ನೆ ಮೂಡುತ್ತಾ ಇತ್ತು. ಈ ಬಾರಿಯ ಸೀಸನ್‌ನಲ್ಲಿ ಆ ಕಳ್ಳ ಸಿಕ್ಕಿದ್ದಾರೆ.

bbk10-snake-shyam-contestant-


ಲೇಡೀಸ್ ಟಾಯ್ಲೆಟ್ ಬಳಸಿದವರ ವಿರುದ್ಧ ಗರಂ

ಬಿಗ್ ಬಾಸ್ ಮನೆಯಲ್ಲಿ ಹದಿನೇಳು ಜನರಿದ್ದಾರೆ. ಪುರುಷರು ಮತ್ತು ಮಹಿಳೆಯರು ಸೇರಿ. ಇಬ್ಬರಿಂದ ಎರಡು ಬಾತ್ ರೂಮ್ ಇದೆ. ಅದನ್ನು ಅವರವರೇ ಸ್ವಚ್ಛ ಮಾಡಿಕೊಳ್ಳಬೇಕು. ಕ್ಲೀನಿಂಗ್ ಮಾಡದೆ ಹೋದರೆ, ಹೆಣ್ಣು ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ಕಾಳಜಿಯಿಂದಾನೇ ಆದಷ್ಟು ಹೆಣ್ಣು ಮಕ್ಕಳ ಟಾಯ್ಲೆಟ್ ನೀಟಾಗಿ‌ ಇರುತ್ತೆ. ಆದರೆ ಕಣ್ತಪ್ಪಿಸಿ ಹೋಗಿ ಬಂದರೆ ಅದು ಕೋಪಕ್ಕೆ ಕಾರಣವಾಗುತ್ತದೆ. ಬೆಳ್ಳಂ ಬೆಳಗ್ಗೆ ಈಶಾನಿಯ ಕೋಪಕ್ಕೆ ಕಾರಣವಾಗಿದ್ದು ಕೂಡ ಟಾಯ್ಕೆಟ್ ಬಳಕೆಯೇ.

ಮನೆಯವರ ಬಳಿ ಹೆಸರೇಳದೆ ಉಳಿದ ಈಶಾನಿ

ಈಶಾನಿಗೆ ಸತ್ಯ ಗೊತ್ತಿದೆ. ಆದರೆ, ಅದನ್ನು ಎಲ್ಲರ ಬಳಿ ಹೇಳುವುದಕ್ಕೆ ಆಗುತ್ತಿಲ್ಲ. ವಿನಯ್ ಜೊತೆ ಅಡುಗೆ ಮನೆಯಲ್ಲಿ ಕೂತು ಮಾತನಾಡುವಾಗ ಇದೇ ವಿಚಾರ ಚರ್ಚೆಗೆ ಬಂದಿದೆ. "ಆ ಟಾಯ್ಲೆಟ್ ಯೂಸ್ ಮಾಡಿದವರು ಯಾರು ಅಂತ ಗೊತ್ತು. ಆದರೆ ಹೆಸರು ಹೇಳುವುದಕ್ಕೆ ಆಗಲ್ಲ. ಎಲ್ಲರೂ ಹೇಳುವಾಗ ಮುಖದಲ್ಲಿ ಒಂದು ಬದಲಾವಣೆ ಕೂಡ ಕಾಣಿಸುತ್ತಾ ಇತ್ತು" ಎಂದು ಹೆಸರು ಹೇಳದೆ ಸುಮ್ಮನೆ ಆಗಿದ್ದಾಳೆ.

bbk10-snake-shyam-contestant-

ಸಿಕ್ಕಿ ಬಿದ್ದರು ಸ್ನೇಕ್ ಶ್ಯಾಮ್

ಬಿಗ್ ಬಾಸ್ ಇಂದಿನಿಂದ ನಾಮಿನೇಷನ್ ಪ್ರಕ್ರಿಯೆ ಶುರು ಮಾಡಿದ್ದಾರೆ. ಅದರಂತೆ ಪ್ರತಿಯೊಬ್ಬರು ಇಬ್ಬರ ಹೆಸರನ್ನು ಹೇಳಿ, ಅದಕ್ಕೆ ಸೂಕ್ತ ಕಾರಣ ನೀಡಿ ನಾಮಿನೇಷನ್ ಮಾಡಬೇಕು. ಆದರೆ, ಈ ನಾಮಿನೇಷನ್‌ನಲ್ಲಿ ವೈಟಿಂಗ್ ಲೀಸ್ಟ್‌ನಲ್ಲಿದ್ದು ಒಳಗೆ ಬಂದವರು ಭಾಗಿಯಾಗುವಂತೆ ಇಲ್ಲ. ಹೀಗೆ ನಾಮಿನೇಷನ್ ಪ್ರಕ್ರಿಯೆ ಶುರುವಾದ ಕೂಡಲೇ ಈಶಾನಿನೇ ಶ್ಯಾಮ್ ಅವರ ಹೆಸರನ್ನು ತೆಗೆದಿದ್ದಾರೆ. ಲೇಡೀಸ್ ಟಾಯ್ಲೆಟ್ ಬಳಕೆಯಿಂದಾಗಿ ನಾಮಿನೇಟ್ ಮಾಡುತ್ತಿದ್ದೇನೆ ಎಂಬ ಸತ್ಯ ಹೊರ ಹಾಕಿದ್ದಾರೆ. ಸ್ನೇಹಿತ್ ಕೂಡ ಅದೇ ಕಾರಣ ನೀಡಿ ನಾಮಿನೇಟ್ ಮಾಡಿದ್ದಾರೆ. ಆದರೆ, ಈ ವೇಳೆ ಶ್ಯಾಮ್ ಅವರು, ಯಾಕೆ ಲೇಡೀಸ್ ಟಾಯ್ಲೆಟ್ ಹೋದೆ ಎಂಬ ವಿವರಣೆಯನ್ನು ನೀಡಿದ್ದಾರೆ.

ಹೆಚ್ಚು ಬಾರಿ ನಾಮಿನೇಟ್ ಆಗಿದ್ದು ಶ್ಯಾಮ್

ಈ ವಾರದ ನಾಮಿನೇಷನ್ ಲೀಸ್ಟ್‌ನಲ್ಲಿ ಹೆಚ್ಚು ಬಾರಿ ನಾಮಿನೇಟ್ ಆಗಿರುವುದು ಶ್ಯಾಮ್ ಅವರೇ. ಲೇಡೀಸ್ ಟಾಯ್ಲೆಟ್ ಬಳಕೆ ಮಾಡಿದ್ದಕ್ಕೆ ನಾಮಿನೇಟ್ ಮಾಡಿದವರು ಕೆಲವರಷ್ಟೇ. ಅನಾರೋಗ್ಯದ ಕಾರಣವನ್ನು ನೀಡಿಯೇ ಹೆಚ್ಚು ಮಂದಿ ನಾಮಿನೇಟ್ ಆಗಿದ್ದಾರೆ. ಅವರ ದೇಹ ಮುಂದಿನ ದಿನಗಳಲ್ಲಿ ಟಾಸ್ಕ್‌ಗಳಿಗೆ ಸ್ಪಂದಿಸುವ ನಂಬಿಕೆ ಮನೆಯವರಿಗೆ ಇಲ್ಲದೆ ಇರುವುದು. ಹೀಗಾಗಿ ಅವರನ್ನು ನಾಮಿನೇಟ್ ಮಾಡಿದ್ದಾರೆ.

More from Filmibeat

English summary
Bigg Boss Kannada Season 10 finaly Snake Shyam found using the ladies toilet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X