BBK 10: ಬಿಗ್ ಬಾಸ್‌ 10ರ ಮೊದಲ ಕ್ಯಾಪ್ಟನ್ ಯಾರು? ಸಮರ್ಥರು ಅಸಮರ್ಥರಂತೆ ನಡೆದುಕೊಂಡಿದ್ದಕ್ಕೆ ಬಿಗ್ ಬಾಸ್ ಶಿಕ್ಷೆ

By ಎಸ್ ಸುಮಂತ್

ವೋಟಿಂಗ್ ಸಿಸ್ಟಮ್‌ನಿಂದಾಗಿ ಈ ಬಾರಿ ಆರು ಜನ ಕಂಟೆಸ್ಟೆಂಟ್ ಗಳು ಅಸಮರ್ಥರಾಗಿ ಮನೆಯ ಒಳಗೆ ಹೋಗಿದ್ದಾರೆ. ಬಿಗ್ ಬಾಸ್ ಕೊಡುವ ಟಾಸ್ಕ್ ಗಳಲ್ಲಿ ಅವರು ಗೆದ್ದಾಗ ಮಾತ್ರ ಅವರು ಸಮರ್ಥರಾಗುತ್ತಾರೆ. ಅಲ್ಲಿಯ ತನಕ ತಾಳ್ಮೆ ಇರಬೇಕು, ರಿಸ್ಕ್ ಇದ್ದೆ‌ ಇರುತ್ತದೆ. ಆದರೆ, ಅಸಮರ್ಥರ ಜೊತೆಗೆ ಸಮರ್ಥರು ನಡೆದುಕೊಳ್ಳುತ್ತಿರುವುದೇ ಬೇರೆ ರೀತಿಯಾಗಿದೆ.

ಅಡುಗೆ, ಬಾತ್ ರೂಮ್ ಕ್ಲೀನಿಂಗ್ ಎಲ್ಲಾ ಅಸಮರ್ಥರೇ ಮಾಡಬೇಕಾಗಿದೆ. ಆದರೆ, ಅರ್ಜೆಂಟ್‌ನಲ್ಲಿ ಬಾತ್ ರೂಮನ್ನ ಮೊದಲು ಅಸಮರ್ಥರು ಬಳಕೆ ಮಾಡಿದ್ದಕ್ಕೆ‌ ಇಶಾನಿ ಬೇರೆ ರೀತಿಯಾಗಿಯೇ ನಡೆದುಕೊಂಡಿದ್ದಾರೆ. ಅವರನ್ನೇನೋ ಕೆಲಸದವರಂತೆ ಟ್ರೀಟ್ ಮಾಡಿದ್ದಾರೆ. ಇದು ಬಿಗ್ ಬಾಸ್‌ಗೂ ಇಷ್ಟವಾಗಿಲ್ಲ.

bbk-10-first-captain-snehith-gowda-

ಕ್ಯಾಪ್ಟನ್ ಟಾಸ್ಕ್‌ನಲ್ಲಿ ಮೂವರು

ಕ್ಯಾಪ್ಟನ್ ಟಾಸ್ಕ್‌ನಲ್ಲಿ ಆರು ಜನ ಇದ್ದರು. ಚೂಯಿಂಗ್ ಗಮ್ ಅಂಟಿಸುವ ಸ್ಪರ್ಧೆ. ಅದರಲ್ಲಿ ಮೂವರು ವಿನ್ ಆಗಿದ್ದರು. ಬಳಿಕ ಬಿಗ್ ಬಾಸ್ ಗಡಿಯಾರದ ಹಲಗೆಯಲ್ಲಿ ಮೂವರಿಗೂ ನಿಲ್ಲಲು ಹೇಳಿದರು. ಹಲವು ಗಂಟೆಗಳ ಬಳಿಕ ತುಕಾಲಿ ಸಂತು ಕೆಳಗೆ ಬಿದ್ದರು. ಶೂ ಕೂಡ ಹಾಕಿಕೊಂಡಿರಲಿಲ್ಲ. ಆ ರೀತಿ ಹಲಗೆಯ ಮೇಲೆ ನಿಲ್ಲುವುದು ಸುಲಭವಾಗಿರಲಿಲ್ಲ. ಎರಡು‌ ಕೈಯನ್ನು ಮೇಲಕ್ಕೆ ಎತ್ತಿ, ಕಾಲಲ್ಲಿ ಬ್ಯಾಲೆನ್ಸ್ ಮಾಡಬೇಕಿತ್ತು.

ಕೊನೆಯಲ್ಲಿ ಕೈಬಿಟ್ಟ ನಮ್ರತಾ

ನಮ್ರತಾ ಫಿಟ್ನೆಸ್ ಅನ್ನು ಚೆನ್ನಾಗಿಯೇ ಕಾಪಾಡಿಕೊಂಡಿದ್ದಾರೆ. ಹೀಗಾಗಿ ಈ ಟಾಸ್ಕ್ ನಲ್ಲಿ ಅವರು ಗೆಲ್ಲುತ್ತಾರೆ, ಮೊದಲ ಕ್ಯಾಪ್ಟನ್ ಆಗುತ್ತಾರೆ ಎಂದೇ ನಂಬಲಾಗಿತ್ತು. ಆದರೆ ನಮ್ರತಾಗೆ ಅದು ಜಸ್ಟ್ ಮಿಸ್ ಆಯ್ತು. ತುಕಾಲಿ ಸಂತು ಬಳಿಕ ಅವರೇ ಬಿದ್ದಿದ್ದು. ಅದಕ್ಕೂ ಮುನ್ನ ಬಿಗ್ ಬಾಸ್ ನಮ್ರತಾ ಅವರಿಗೆ ಎನರ್ಜಿ ತುಂಬುವ ಕೆಲಸ ಮಾಡಿತ್ತು. ಯಾಕಂದ್ರೆ ನಿಂತು ನಿಂತು ಸೊಂಟ ನೋವು ಬಂದು ಕಣ್ಣಲ್ಲಿ ನೀರು ಬರುತ್ತಿತ್ತು. ಆಟ ಬಿಟ್ಟು ಕೊಡುತ್ತೀರಾ ಅಂತ ಕೂಡ ಕೇಳಿದ್ದರು. ನಮ್ರತಾ ಇಲ್ಲ ಎಂದಾಗ, ನಿಮ್ಮ ಸ್ಮೈಲ್ ಚೆನ್ನಾಗಿದೆ ಅಂತೆಲ್ಲಾ ಹೇಳಿ ಒಂದಷ್ಟು ಎನರ್ಜಿ ತುಂಬಿದ್ದರು.


ಮೊದಲ ಕ್ಯಾಪ್ಟನ್ ಆದ ಸ್ನೇಹಿತ್

ನಮ್ರತಾ ಮತ್ತು ಸಂತೋಷ್‌ರಷ್ಟು ಸ್ನೇಹಿತ್ ಕಷ್ಟಪಡಲಿಲ್ಲ. ಬಹಳ ಆರಾಮಾವಾಗಿ ಹಲಗೆಯ ಮೇಲೆ ನಿಂತಿದ್ದರು. ಇಬ್ಬರು ಕೆಳಗೆ ಬಿದ್ದ ಮೇಲೆ ಬಿಗ್ ಬಾಸ್ ಕ್ಯಾಪ್ಟನ್ ಅನ್ನು ಅನೌನ್ಸ್ ಮಾಡಿದರು. ಸ್ನೇಹಿತ್ ಸೀಸನ್ 10ನ ಮೊದಲ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಅದೇ ಖುಷಿಯಲ್ಲಿ ಹಲಗೆಯಿಂದ ಕೆಳಗೆ ಇಳಿದರು. ಮನೆಯವರೆಲ್ಲ ಸ್ನೇಹಿತ್‌ಗೆ ವಿಶ್ ಮಾಡಿದರು.

ಸ್ನೇಹಿತ್ ಆಯ್ಕೆ ಯಾರದ್ದು..?

ಮನೆಯ ಕ್ಯಾಪ್ಟನ್ ಎಂದಾಗ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ. ಸಮನಾಗಿ ನೋಡಬೇಕಾಗುತ್ತದೆ, ನಿಯಮಗಳನ್ನಯ ಸರಿಯಾಗಿ ಪಾಲಿಸಬೇಕಾಗುತ್ತದೆ. ಈಗ ಮೊದಲ ಕ್ಯಾಪ್ಟನ್‌ಗೆ ಬಿಗ್ ಬಾಸ್ ಮೊದಲ ಟಾಸ್ಕ್ ಕೊಟ್ಟಿದೆ. ಅದು ಏನಂದ್ರೆ ಅಸಮರ್ಥರ ಜೊತೆಗೆ ಸಮರ್ಥರು ಕೂಡ ಅಸಮರ್ಥರಾಗಿ ನಡೆದುಕೊಂಡಿದ್ದಾರೆ. ಅದಕ್ಕೆ ಸಮರ್ಥರಲ್ಲಿ ಯಾರಾದರೊಬ್ಬರು ಶಿಕ್ಷೆ ಅನುಭವಿಸಲೇಬೇಕಾಗಿದೆ. ಆ ಟಾಸ್ಕ್ ಅನ್ನು ಸ್ನೇಹಿತ್ ಗೆ ನೀಡಲಾಗಿದೆ. ಈಗ ಸ್ನೇಹಿತ್ ಆಯ್ಕೆ ಮಾಡುವ ಒಬ್ಬ ಸಮರ್ಥ ಸ್ಪರ್ಧಿಗೆ ಬಿಗ್ ಬಾಸ್ ಕೊಡುವ ಶಿಕ್ಷೆಯನ್ನು ಅನುಭವಿಸಲೇಬೇಕಾಗಿದೆ‌. ಯಾಕಂದ್ರೆ ಸಂಗೀತಾ‌ ಬೇಸರ ಮಾಡಿಕೊಂಡು ಒಂದು ಮಾತು ಹೇಳಿದರು. ನಾವೂ ಅಸಮರ್ಥರ ಲಿಸ್ಟ್‌ನಲ್ಲಿದ್ದೀವಿ. ಆದ್ರೆ ನಾವೂ ಸೇವಕರಲ್ಲ ಎಂದು. ಸಮರ್ಥರು ಅವರನ್ನ ಕಾಣುತ್ತಿರುವುದು ಆ ರೀತಿಯಾಗಿದೆ.

More from Filmibeat

English summary
Bigg Boss Kannada Season 10 First Captain Snehith Gowda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X