ಇದ್ದಕ್ಕಿದ್ದಂತೆ ಏನಾಯ್ತು ವರ್ತೂರು- ತನಿಷಾ ಮಧ್ಯೆ‌...? ತನಿಷಾ ವಿರುದ್ಧ ತಿರುಗಿಬಿದ್ದ ಸಂತೋಷ್, ನಮ್ರತಾಗೆ ಪುಲ್ ಖುಷಿ...!

By Shruthi Harishgowda

ಬಿಗ್ ಬಾಸ್ ಮನೆಯಲ್ಲಿ ಯಾವಾಗ ಏನೋ ಸಂಭವಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಇಷ್ಟು ದಿನಗಳ ಕಾಲ ಒಬ್ಬರನ್ನು ಬಿಟ್ಟು ಇರದ ರೀತಿ ತನಿಷಾ ಹಾಗೂ ವರ್ತೂರು ಸಂತೋಷ್ ಇದ್ದರು. ಒಬ್ಬರಿಗೆ ಒಬ್ಬರು ಸಾಕಷ್ಟು ಬಾರಿ ನೆರವಾಗಿದ್ದರು. ಇನ್ನೂ ತನಿಷಾ ಕಾಲು ಮುರಿದುಕೊಂಡು ಬಿಗ್ ಬಾಸ್ ಮನೆಯೊಳಗೆ ಇರದ ವೇಳೆ ವರ್ತೂರು ಸಂತೋಷ್ ಸಾಕಷ್ಟು ಬಾರಿ ತನಿಷಾ ಅವರನ್ನ ನೆನಪಿಸಿಕೊಂಡಿದ್ದರು.

ನನ್ನಿಂದಲೇ ತನಿಷಾ ಅವರ ಕಾಲು ಮುರಿದು ಹೋಗಿತ್ತು ಎಂದು ಪಶ್ಚಾತಾಪವನ್ನು ಪಟ್ಟಿದ್ದರು. ಅವರು ಆಸ್ಪತ್ರೆಯಲ್ಲಿ ಯಾವ ರೀತಿ ಇದ್ದಾರೋ ಯಾವ ರೀತಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೋ ಎಂದು ನೊಂದುಕೊಂಡಿದ್ದರು. ನಂತರ ಇದೇ ವಿಚಾರವಾಗಿ ತುಕಾಲಿ ಸಂತೋಷ್ ಬಳಿಯೂ ಹೇಳಿದ್ದರು. ಆವಾಗ ಆವಾಗ ಬೆಂಕಿಗೆ ಏನಾಗಿದೆಯೋ ಬೆಂಕಿ ಚೆನ್ನಾಗಿದ್ದಾಳೆನೋ ಎಂದು ಕೇಳುತ್ತಲೇ ಇದ್ದವರು ಈಗ ಒಮ್ಮೆಗೆ ತನಿಷಾ ಮೇಲೆ ತಿರುಗಿ ಬಿದ್ದಿದ್ದಾರೆ.

Bigg boss kannada season 10: First time Varthur Santhosh and Tanisha Kuppanda Big Fight

ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನವೂ ಕೂಡ ಟಾಸ್ಕ್‌ಗಳೇ ಆಗಲಿ ಮಾತನಾಡುವ ವಿಚಾರಗಳೇ ಆಗಲಿ ರೋಚಕತೆಯಿಂದ ಕೂಡಿರುತ್ತವೆ. ಇದಕ್ಕೂ ಮೊದಲು ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಕುಳಿತುಕೊಂಡು ತನಿಷಾ ಬಗ್ಗೆ ಮಾತನಾಡಿದ್ದರು. ತನಿಷಾ ಬೆಂಕಿಯಲ್ಲ ಕೆಂಡದ ಉಂಡೆಯಂತೆ ಯಾವಾಗ ಹೊತ್ತಿಕೊಳ್ಳುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದ್ದರು.

ತನಿಷಾ ಮೇಲೆ ವರ್ತೂರು ಸಂತೋಷ್‌ಗೆ ಸ್ವಲ್ಪ ಕಾಳಜಿ ಹೆಚ್ಚು ಅವರು ಚಿಕಿತ್ಸೆ ಮುಗಿಸಿ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಬಂದಾಗ ತಬ್ಬಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದರು. ಆದರೆ ಈಗ ಎಂಟನೇ ವಾರ ಕಳೆದು ಒಂಬತ್ತನೇ ವಾರಕ್ಕೆ ಕಾಲಿಟ್ಟ ಮೇಲೆ ವರ್ತೂರು ಸಂತೋಷ್‌ ಅವರಲ್ಲಿ ಒಂದಷ್ಟು ಬದಲಾವಣೆಯಾದಂತೆ ಕಾಣುತ್ತಿದೆ.

ತನಿಷಾ ಹಾಗೂ ವರ್ತೂರು ಸಂತೋಷ್ ಸ್ನೇಹದ ಮೇಲೆ ಯಾರದೋ ಕೆಟ್ಟ ದೃಷ್ಟಿ ಬಿದ್ದಂತೆ ಕಾಣುತ್ತಿದೆ ಇದಕ್ಕಾಗಿ ಇಬ್ಬರ ನಡುವೆ ಮನಸ್ತಾಪವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ನಾಮಿನೇಷನ್ ಪ್ರಕ್ರಿಯೆಯಲ್ಲಿ ಎಲ್ಲರೂ ಕೂಡ ಭಾಗಿಯಾಗುತ್ತಿದ್ದರು. ಆದರೆ ಬಿಗ್ ಬಾಸ್ ಇಂದು ಸ್ನೇಹಿತ್ ಅವರಿಗೆ ಮಾತ್ರ ನಾಮಿನೇಟ್ ಮಾಡುವ ವಿಶೇಷವಾದ ಒಂದು ಅಧಿಕಾರವನ್ನು ಕೊಟ್ಟಿದೆ.

ಇದೇ ವೇಳೆ ವರ್ತೂರು ಸಂತೋಷ್ ಅವರು ತನಿಷಾ ಮೇಲೆ ತಮಗೆ ಯಾವುದೇ ಅಭಿಪ್ರಾಯ ಇಲ್ಲದಂತೆ ನಾನು ತನಿಷಾ ಅವರನ್ನೇ ನಾಮಿನೇಟ್ ಮಾಡುತ್ತೇನೆ ಎಂಬ ಮಾತನ್ನು ಆಡಿದ್ದಾರೆ. ತನಿಷಾ ಹಾಗೂ ವರ್ತೂರು ಸಂತೋಷ್ ಈ ಇಬ್ಬರು ಕೂಡ ಸ್ನೇಹಿತರಂತೆ ಇದ್ದರೂ ಇದನ್ನು ಸುದೀಪ್ ಮುಂದೆಯೂ ಸಹ ಸಾಕಷ್ಟು ಬಾರಿ ಹೇಳಿದ್ದರು. ಆದರೆ ಈಗ ಇಬ್ಬರ ನಡುವೆ ಸಹ ಬಿರುಕು ಮೂಡಿದೆ ವರ್ತೂರು ಸಂತೋಷ್ ರವರ ಮಾತಿಗೆ ತನುಷ ಕೂಡ ಸರಿಯಾದ ರೀತಿಯಲ್ಲಿ ಉತ್ತರವನ್ನು ಕೊಟ್ಟಿದ್ದಾರೆ.

Bigg boss kannada season 10: First time Varthur Santhosh and Tanisha Kuppanda Big Fight

ತನಿಷಾ - ವರ್ತೂರು ನಡುವೆ ಮನಸ್ತಾಪ

ವಿಶೇಷ ಅಧಿಕಾರ ವಹಿಸಿಕೊಂಡಿರುವ ಸ್ನೇಹಿತ್ ಮುಂದೆ ಸಿರಿ, ನಮ್ರತಾ, ಕಾರ್ತಿಕ್, ತನಿಷಾ ಹಾಗೂ ವರ್ತೂರು ಸಂತೋಷ್ ಇಷ್ಟು ಜನ ಬಂದು ನಿಂತುಕೊಂಡಿದ್ದರು. ಸಿರಿ ನಾನು ಇನ್ನಷ್ಟು ನನ್ನನ್ನ ತೊಡಗಿಸಿಕೊಳ್ಳಲು ನನ್ನನ್ನ ಸೇವ್ ಮಾಡಿ ಕೇಳಿದ್ದಾರೆ. ನಮ್ರತಾ ಕೂಡ ನನ್ನಲ್ಲಿರುವ ಒಂದು ಟ್ಯಾಲೆಂಟ್ ತೋರಿಸಲು ನೀವು ನನ್ನನ್ನ ಸೇವ್ ಮಾಡಬೇಕು ಎಂದು ಸ್ನೇಹಿತ್ ಬಳಿಯಲ್ಲಿ ಕೇಳಿಕೊಂಡಿದ್ದಾರೆ. ಆದರೆ ಕಾರ್ತಿಕ್ ಮಾತ್ರ ನಾನು ನಾಮಿನೇಟ್ ಆಗುತ್ತೇನೆ. ನನ್ನ ಬದಲು ತನಿಷಾ ಅವರನ್ನ ಸೇವ್ ಮಾಡಬೇಕು ಅವರು ಆಟವಾಡುವಾಗ ಕಾಲು ಮುರಿದುಕೊಂಡಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ.

ಇನ್ನು ವರ್ತೂರು ಬಳಿ ಬಂದಾಗ ವರ್ತೂರು ಸಂತೋಷ್ ಬೇರೆಯದೆ ರೀತಿಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ಇಲ್ಲಿ ನಾವು ತ್ಯಾಗ ಮೂರ್ತಿಗಳಾಗಿ ಬಂದಿಲ್ಲ. ತನಿಷಾ ಅವರನ್ನ ನಾನೇನು ಬೇಕು ಎಂದು ತಳ್ಳಲಿಲ್ಲ ಅದಕ್ಕೋಸ್ಕರ ತನಿಷಾಗೆ ಇನ್ನೊಂದು ಚಾನ್ಸ್ ಸಿಗಲಿ ಎಂದು ನಾನು ಕೇಳಲ್ಲ. ನಾವು ಮಾನವೀಯತೆ ಎಂದುಕೊಂಡು ಹೋದರೆ ಹಿಂದೆ ಅಲ್ಲ ಮುಂದೇನೆ ಗುಂಡಿಯನ್ನ ತೋಡಿತ್ತಾರೆ ಎಂಬ ಮಾತನ್ನು ವರ್ತೂರು ಸಂತೋಷ್ ಹೇಳಿದ್ದಾರೆ.

ಇನ್ನು ವರ್ತೂರು ಸಂತೋಷ್ ರವರ ಮಾತಿಗೆ ತನಿಷಾ ಕೂಡ ರಿಯಾಕ್ಟ್ ಮಾಡಿದ್ದು ಇಂದು ಮಾತನಾಡುತ್ತಿರುವ ವರ್ತೂರು ಸಂತೋಷ್ ಇದೇ ಮಾತನ್ನ ಡೇ ಒನ್‌ನಿಂದ ಮಾತನಾಡಬೇಕಿತ್ತು ಎಂದು ಹೇಳಿದ್ದಾರೆ. ಬಂದಾಗಿನಿಂದಲೂ ಕೂಡ ಇದೇ ಮಾತನಾಡಿದ್ದರೆ ಅವರ ಮಾತನ್ನ ನಾನು ಮೆಚ್ಚಿಕೊಳ್ಳುತ್ತಾ ಇದ್ದೆ ಎಂದು ಹೇಳಿದ್ದಾರೆ.

ನಮ್ರತಾಗೆ ಖುಷಿ ಕೊಟ್ಟ ವರ್ತೂರು ಮಾತು

ವರ್ತೂರು ಸಂತೋಷ್ ನಾನು ಯಾವುದೇ ತ್ಯಾಗಕ್ಕೆ ಸಿದ್ಧವಿಲ್ಲ ಎಂದು ಹೇಳಿದಾಗ ನಮ್ರತಾ ಜೋರಾಗಿ ಖುಷಿಪಟ್ಟಿದ್ದಾರೆ ಇದು ಬೇಕು ಎಂದು ಹೇಳಿದ್ದಾರೆ. ಯಾಕೆ ಈ ರೀತಿ ನಮ್ರತಾ ರಿಯಾಕ್ಟ್ ಮಾಡಿದರೋ ಅದಂತೂ ತಿಳಿಯುತ್ತಾ ಇಲ್ಲ. ಇಷ್ಟು ದಿನ ತುಂಬಾ ಚೆನ್ನಾಗಿ ಬಿಗ್ ಬಾಸ್ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಇದ್ದಂತಹ ವರ್ತೂರು ಸಂತೋಷ್ ಹಾಗೂ ತನಿಷಾ ಮಧ್ಯೆ ಯಾಕೆ ಈ ರೀತಿ ಬಿರುಕು ಬಿಟ್ಟಿದೆಯೋ ಅದಂತೂ ಗೊತ್ತಾಗುತ್ತಾ ಇಲ್ಲ. ಬೆಂಕಿ ಬೆಂಕಿ ಅಂದುಕೊಂಡೆ ವರ್ತೂರ್ ಸಂತೋಷ್ ಅವರು ತನಿಷಾ ಮೇಲೆ ನೀರು ಸುರಿದುಬಿಟ್ರಾ ಎಂಬ ಅನುಮಾನ ಕಾಡುತ್ತಿದೆ.

More from Filmibeat

English summary
Bigg boss : Varthur Santhosh and Tanisha Kuppanda Big Fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X