ಎಲ್ಲಾ ಮರೆತು ಕಾರ್ತಿಕ್ ಬಳಿ ಕೊನೆತನಕ ಸ್ನೇಹಿತರಾಗಿ ಇರೋಣ ಎಂದ ವಿನಯ್..! ಮತ್ತೆ ಚಿಗುರಿದ ಸ್ನೇಹ

By Shruthi Harishgowda

ಬಿಗ್ ಬಾಸ್ ಸೀಸನ್ 10 ಹಲವಾರು ರೋಚಕತೆಗಳನ್ನ ಪಡೆದುಕೊಂಡು ಸಾಗುತ್ತಾ ಇದೆ. ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಎಲ್ಲರಿಗೂ ಕೂಡ ಸರಿಯಾಗಿ ತೆಗೆದುಕೊಂಡಿದ್ದರು. ಎಲ್ಲಿಗೆ ಬಂದಿರುವ ಎಲ್ಲರೂ ಕೂಡ ಮನುಷ್ಯರೇ, ಮಾನವೀಯತೆಯಿಂದ ವರ್ತಿಸುವುದನ್ನ ಕಲಿಯೋಣ ಎಂಬ ಪಾಠವನ್ನು ಕಿಚ್ಚ ಸುದೀಪ್ ಮಾಡಿದ್ದರು. ಈಗ ಅದು ವಿನಯ್ ಅವರಲ್ಲಿ ಸಾಕಷ್ಟು ಬದಲಾವಣೆ ತಂದಂತೆ ಕಾಣಿಸುತ್ತಾ ಇದೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರವೂ ಕೂಡ ಸೂಪರ್ ಸಂಡೇ ವಿತ್ ಸುದೀಪದಲ್ಲಿ ಒಂದೊಂದು ಗೇಮ್ ಗಳನ್ನು ಆಡಿಸಲಾಗುತ್ತದೆ ಅದರಂತೆ ಇಂದು ಕೂಡ ಗೇಮ್ ಆಡಿಸಿದ್ದು ವಿನಯ್ ಕಾರ್ತಿಕ್‌ಗೆ ಸರ್ಪ್ರೈಸ್ ನೀಡಿದ್ದಾರೆ.

ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ 'ನಿಮ್ಮ ಕಡೆಯಿಂದ ತಪ್ಪಾಗಿರಬಹುದು ಅಥವಾ ಅವರ ಕಡೆಯಿಂದಲೇ ತಪ್ಪಾಗಿರಬಹುದು ಅದನ್ನ ಹೇಳಿ ಸರಿಪಡಿಸಿಕೊಳ್ಳೋಣ' ಎಂಬ ಮಾತನ್ನು ಹೇಳಿದ್ದಾರೆ ನಂತರ ಅವರ ಮುಂದೆ ಒಂದಷ್ಟು ಹೂಗಳನ್ನ ಇಟ್ಟಿದ್ದಾರೆ. ಒಬ್ಬಬ್ಬರು ಒಂದೊಂದು ಹೂಗಳನ್ನು ತೆಗೆದುಕೊಂಡು ತಾವು ಯಾರ ಮೇಲೆ ದ್ವೇಷದಿಂದ ವರ್ತಿಸಿದ್ದರು ಅವರ ಬಳಿಗೆ ಹೋಗಿ ಹೂವನ್ನ ನೀಡಿದ್ದಾರೆ. ಡ್ರೋನ್ ಪ್ರತಾಪ್ ಗೆ ವರ್ತೂರು ಸಂತೋಷ್ ಒಂದು ಹೂ ನೀಡಿದ್ದು ನಂತರ ಸಂಗೀತಾಗೆ ನಮ್ರತಾ ಹೂವು ನೀಡಿದ್ದಾರೆ. ಇದೆಲ್ಲ ಆದಮೇಲೆ ಕಾರ್ತಿಕ್‌ಗೆ ವಿನಯ್ ಹೂವನ್ನು ನೀಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗುವಂತೆ ಮಾಡಿದ್ದಾರೆ.

Bigg Boss Kannada Season 10: Friendship Flower Blossomed Again in Bigg Boss house!

ಕಾರ್ತಿಕ್ ಹಾಗೂ ವಿನಯ್ ನಡುವೆ ಶುಕ್ರವಾರ ಎಂತಹ ಜಗಳ ಏರ್ಪಟ್ಟಿತ್ತು ಎಂಬುದು ಬಿಗ್ ಬಾಸ್ ವೀಕ್ಷಕರಿಗೆ ಗೊತ್ತಿದೆ. ಯಾಕೆಂದರೆ ವಿನಯ್ ರಾಕ್ಷಸನಾಗಿದ್ದು ಕಾರ್ತಿಕ್ ಗಂಧರ್ವನಾಗಿದ್ದನು. ವಿನಯ್ ಕಾರ್ತಿಕ್ ಮುಖಕ್ಕೆ ಜೋರಾಗಿ ಏನೇನೋ ಮಿಶ್ರಣ ಮಾಡಿದ ಹಿಟ್ಟಿನಿಂದ ಜೋರಾಗಿ ಹೊಡೆದಾಗ ಕೋಪ ಬಂದಿದೆ. ಇದಕ್ಕೆ ಕಾರ್ತಿಕ್ ಜೋರಾಗಿ ಕೋಪ ಮಾಡಿಕೊಂಡು ಚಪ್ಪಲಿಯನ್ನು ನೆಲಕ್ಕೆ ಬಡಿದರು. ‌ಅದು ಹೋಗಿ ವಿನಯ್‌ಗೆ ತಾಕೀತು. ಈ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳವೇ ನಡೆದು ಇಬ್ಬರ ಸ್ನೇಹ ದೂರವಾಯಿತು ಎಂದೇ ವೀಕ್ಷಕರು ತಿಳಿದುಕೊಂಡಿದ್ದರು. ಈಗ ಇಬ್ಬರ ನಡುವೆ ಸ್ನೇಹದ ಹೂ‌ ಚಿಗುರಿದೆ.

ಕಾರ್ತಿಕ್ - ವಿನಯ್ ನಡುವೆ ಮತ್ತೆ ಚಿಗುರುದ ಸ್ನೇಹ

ವಿನಯ್ ಮಾತನಾಡುತ್ತಿದ್ದಂತೆ ಭಾವುಕರಾದ ಕಾರ್ತಿಕ್

ಬಿಗ್ ಬಾಸ್ ಮನೆಯಲ್ಲಿ ಯಾರು ಶತ್ರುಗಳು ಅಲ್ಲ ಮಿತ್ರರು ಅಲ್ಲ ಎಂಬ ಮಾತು ಪ್ರತಿ ಬಾರಿಯೂ ಸಹ ಪ್ರೂವ್ ಆಗುತ್ತಿದೆ. ಅದರಂತೆ ಚೆನ್ನಾಗಿ ಕಿತ್ತಾಡಿಕೊಂಡಿದ್ದ ಇಬ್ಬರು ಈಗ ಮಿತ್ರರಂತೆ ಇರೋಣ ಎಂಬ ಮಾತು ಹೇಳಿದ್ದಾರೆ. ಕಾರ್ತಿಕ್ ಮತ್ತು ವಿನಯ್ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದರು. ಈಗ ವಿನಯ್ ನನಗೆ ಕಾರ್ತಿಕ್ ಸ್ನೇಹ ಬೇಕು ಎಂಬ ಮಾತು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಕೊಟ್ಟ ಒಂದು ಅವಕಾಶವನ್ನು ವಿನಯ್ ಸರಿಯಾಗಿ ಬಳಸಿಕೊಂಡಿದ್ದಾರೆ. ಕಾರ್ತಿಕ್ ನಾನು ಮತ್ತು ನೀನು ಹಲವಾರು ವರ್ಷಗಳಿಂದ ಸ್ನೇಹಿತರು. ಆದರೆ ಯಾರೋ ಮೂರನೇಯವರಿಂದ ಮಿಸ್ ಅಂಡರ್ಸ್ಟ್ಯಾಂಡಿಂಗ್ ಆಯ್ತು, ನಾನು ಕೂಡ ರೂಡ್‌ ಆಗಿ ಬೀಹೇವ್ ಮಾಡಿದೆ ಎಂದು ಮನದಲ್ಲಿ ಇದ್ದ ಮಾತನ್ನು ವಿನಯ್ ಕಾರ್ತಿಕ್ ಮುಂದೆ ಹೇಳಿದ್ದಾರೆ.

ಇಷ್ಟೆಲ್ಲಾ ಆದಮೇಲೆ ನೀನು ನನ್ನನ್ನು ಫ್ರೆಂಡ್ ಆಗಿ ಟ್ರೀಟ್ ಮಾಡುತ್ತೀಯೋ ಇಲ್ಲವೋ ಗೊತ್ತಿಲ್ಲ ಆದರೆ ನಾನಂತೂ ನಿನ್ನನ್ನು ಕೊನೆಯ ತನಕವೂ ನನ್ನ ಫ್ರೆಂಡ್ ಎಂದು ವಿನಯ್ ಹೇಳಿದ್ದಾರೆ. ವಿನಯ್ ಮಾತು ಕೇಳಿದ ಕೂಡಲೇ ಕಾರ್ತಿಕ್ ಎದ್ದು ಹೋಗಿ‌ ಶೇಕ್ ಹ್ಯಾಂಡ್ ಮಾಡಿ ಇಬ್ಬರು ಕೂಡ ಭುಜಕ್ಕೆ ಭುಜ ಹೊಡೆದುಕೊಂಡು ಮತ್ತೆ ಸ್ನೇಹಿತರಾಗಿ ಇರೋಣ ಎಂದು ಹೇಳಿಕೊಂಡಿದ್ದಾರೆ. ಈಗ ವಿನಯ್ ಹಾಗೂ ಕಾರ್ತಿಕ್ ನಡುವೆ ಸ್ನೇಹದ ಹೂವು ಅರಳಿದ್ದು ಅವರ ಅಭಿಮಾನಿಗಳಲ್ಲಿ ಸಂತೋಷವನ್ನು ತಂದಿದೆ.

Bigg Boss Kannada Season 10: Friendship Flower Blossomed Again in Bigg Boss house!

ತಮ್ಮ ನಿರ್ಧಾರ ಬದಲಿಸಿದ್ರಾ ವಿನಯ್?

ಟಾಸ್ಕ್ ವಿಚಾರದ ವೇಳೆ ಜಗಳ ಆದಾಗ ಕಾರ್ತಿಕ್ ಮೇಲೆ ವಿನಯ್ ಮುಗಿಬೀಳುತ್ತಿದ್ದರೂ ನೀನು ಯಾವ ಸೀಮೆ ಫ್ರೆಂಡ್ ನಿನ್ನಂಥವರನ್ನೆಲ್ಲ ನನ್ನ ಜೊತೆ ಇಟ್ಟುಕೊಳ್ಳಲು ನನಗೆ ಬೇಸರವಾಗುತ್ತದೆ ಎಂಬ ಮಾತನ್ನು ಹೇಳಿದ್ದರು. ಇಂತ ನನ್ನ ಮಕ್ಕಳ ಜೊತೆಗೆ ಆಟವಾಡಬೇಕಾ ಎಂಬ ಮಾತನ್ನು ಸಹ ಹೇಳಿದರು. ಸ್ನೇಹಿತ ಎಂಬುದನ್ನೇ ಮರೆತು ನೀನು ಹೊರಗಡೆ ಸಿಗು, ನಿನ್ನನ್ನು ಮಾತ್ರ ನಾನು ಸುಮ್ಮನೆ ಬಿಡುವುದಿಲ್ಲ ಎಂಬ ಬೆದರಿಕೆ ಮಾತು ಆಡಿದ್ದರು. ಇದರ ಜೊತೆಗೆ ಗುಲಾಮ ಎಂದು ಕರೆದು ಅವಮಾನಿಸಿದ್ದರು .ಈಗ ಇದಕ್ಕಿದ್ದಂತೆ ವಿನಯ್ ತಮ್ಮ ನಿರ್ಧಾರವನ್ನ ಬದಲಿಸಿ, ಸ್ನೇಹವನ್ನ ಮುಂದುವರಿಸೋಣ ಎಂಬ ಮಾತನ್ನು ಹೇಳಿರುವುದು ಆಶ್ಚರ್ಯ ತಂದಿದೆ.

More from Filmibeat

English summary
Tv, serial, reality show, kichcha sudeep, bigg boss, shruthi harishgowda, Filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X