BBK10: ಮನೆಯ ಹೆಣ್ಣು ಮಕ್ಕಳಿಗೆ ಸೀರೆ ಕೊಟ್ಟು ಗೌರವಿಸಿದ ಪ್ರತಾಪ್ ತಾಯಿ: ಡ್ರೋನ್‌ಗೆ ತಂದೆ-ತಾಯಿ ಹೇಳಿದ್ದೇನು?
ಬಿಗ್ ಬಾಸ್ ಮನೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಎಲ್ಲರ ಜರ್ನಿ ಮುಗಿಯಲಿದೆ. ಸಂಗೀತಾ, ನಮ್ರತಾ, ಸಿರಿ, ತನಿಷಾ, ಕಾರ್ತಿಕ್, ವಿನಯ್, ತುಕಾಲಿ, ವರ್ತೂರು ಸಂತೋಷ್, ಪ್ರತಾಪ್, ಮೈಕಲ್ ಮಾತ್ರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಇನ್ನು ಮುಂದೆ ಕಾಂಪಿಟೇಷನ್ ಟಫ್ ಆಗುವುದಕ್ಕೆ ಶುರುವಾಗುತ್ತೆ. ಹೀಗಾಗಿ ವೀಕೆಂಡ್‌ನಲ್ಲಿ ಯಾರಿಗೆಲ್ಲಾ ಮನೆಯ ಋಣ ತೀರುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಬಿಗ್ ಬಾಸ್ ಮನೆ ಮಂದಿ, ತಮ್ಮ ಸ್ವಂತ ಮನೆ, ಜನರ ಸಂಪರ್ಕ ಬಿಟ್ಟು 81 ದಿನಗಳಾಗಿವೆ. ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಭಾವನೆಗೆ ಬಿಗ್ ಬಾಸ್ ಸ್ಪಂದಿಸುತ್ತಾ ಇದೆ. ಅದಕ್ಕಾಗಿಯೇ ಮನೆ ಮಂದಿಯನ್ನು ಕರೆಸಿ, ಸ್ಪರ್ಧಿಗಳಿಗೆ ಖುಷಿ ನೀಡುತ್ತಿದ್ದಾರೆ. ಇಂದು ಬಿಗ್ ಬಾಸ್ ಮನೆಗೆ ಡ್ರೋನ್ ಪ್ರತಾಪ್ ತಂದೆ-ತಾಯಿ ಬಂದಿದ್ದಾರೆ.

ಮಗನ ಬಗ್ಗೆ ಹೆಮ್ಮೆ ಪಟ್ಟ ಮರಿಮಾದಯ್ಯ
ಬಿಗ್ ಬಾಸ್ ಮನೆಗೆ ಪ್ರತಾಪ್ ಬಂದಾಗಲೇ ತನ್ನ ತಂದೆ ತಾಯಿಯ ಬಗ್ಗೆ ಮಾತನಾಡಿದ್ದರು. ಪ್ರತಾಪ್ ವೈಯಕ್ತಿಕ ವಿಚಾರಗಳಿಂದ ತಮ್ಮ ತಂದೆ ತಾಯಿಯಿಂದ ಹಲವು ವರ್ಷಗಳಿಂದ ದೂರ ಉಳಿದಿದ್ದರು. ಆ ಬೇಸರವನ್ನು ಪ್ರತಾಪ್ ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರು. ಈಗ ಬಿಗ್ ಬಾಸ್ ಮನೆ ಕಡೆಯಿಂದ ಆ ಒಂದು ಅದೃಷ್ಟ ಸಿಕ್ಕಿದೆ. ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಬಿಗ್ ಬಾಸ್, ಮಗನ ಬಗ್ಗೆ ಏನಾದರೂ ಹಂಚಿಕೊಳ್ಳಿ ಎಂದಾಗ ಖುಷಿ ಪಟ್ಟಿದ್ದಾರೆ, ಹೆಮ್ಮೆಯಿಂದ ಫೀಲ್ ಮಾಡಿದ್ದಾರೆ.
ಬಿಗ್ ಬಾಸ್‌ಗೆ ಥ್ಯಾಂಕ್ಸ್ ಹೇಳಿದ ತಂದೆ
ಬಿಗ್ ಬಾಸ್ ಮನೆಯೊಳಗೆ ಬಂದ ಪ್ರತಾಪ್ ತಂದೆ-ತಾಯಿ, ಮಗನನ್ನು ನೋಡಿದ ಖುಷಿಯಲ್ಲಿದ್ದಾರೆ. "ನೀವೂ ಪ್ರತಾಪ್ ತಂದೆ ಅಲ್ವಾ ಅಂತ ಎಲ್ಲಿಯೇ ಹೋದರೂ ಬಂದು ಸೆಲ್ಫಿ ತೆಗೆಸಿಕೊಳ್ಳುತ್ತಾರೆ. ಮಗ ತಪ್ಪು ಮಾಡಿದರೆ ನೀವೆಲ್ಲಾ ಕ್ಷಮಿಸಿ. ಅವನು ನನ್ನ ಮಗ. ತಪ್ಪು ಮಾಡಿದ ಅಂತ ದೂರ ಬಿಡುವುದಕ್ಕೆ ಆಗಲ್ಲ. ಆ ದೇವರೆ ನನ್ನ ಮಗನನ್ನು ಮತ್ತೆ ಕೊಟ್ಟಿದ್ದಾನೆ. ಬಿಗ್ ಬಾಸ್‌ನಿಂದಾಗಿ ಮತ್ತೆ ಸಿಕ್ಕಿದ್ದಾನೆ" ಎಂದು ಖುಷಿ ಪಟ್ಟಿದ್ದಾರೆ.

ಪ್ರತಾಪ್ ಮುಖದಲ್ಲಿ ಫುಲ್ ಖುಷಿ
ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಶುರುವಾಗಿದೆ. ಹೀಗಾಗಿ ಪ್ರತಾಪ್‌ಗೆ ಸಂತಸವಾಗುವಂತಹ ಘಟನೆಗಳು ನಡೆದಿವೆ. ಅದರಲ್ಲಿ ಅವರ ತಂದೆ ತಾಯಿ ಮನೆಗೆ ಬಂದಿದ್ದು ಒಂದಾದರೇ, ಮತ್ತೊಂದು ಅವರೇ ತಯಾರು ಮಾಡಿದ ಡ್ರೋನ್ ಅನ್ನು ಬಿಗ್ ಬಾಸ್ ತರಿಸಿದ್ದರು. ಈ ವೇಳೆ ಮನೆಯಲ್ಲಿ ಮಾತನಾಡಿದ ಪ್ರತಾಪ್ ಮತ್ತೆ ತಂದೆ ತಾಯಿ ಜೊತೆಗೆ ಮಾತನಾಡಿದ್ದೀನಿ. ನಾನು ಮಾಡಿದ ಡ್ರೋನ್ ತರಿಸಿದ್ರು. ನನ್ನ ತಂದೆ ತಾಯಿ ಜೊತೆಗೆ ಇನ್ನು ಯಾವತ್ತು ಮಾತು ಬಿಡಲ್ಲ. ಯಾವುದೇ ಸಂದರ್ಭ ಬಂದರು ಮಾತು ಬಿಡುವುದಿಲ್ಲ. ಥ್ಯಾಂಕ್ಯೂ ಬಿಗ್ ಬಾಸ್" ಎಂದು ಖುಷಿ ಪಟ್ಟರು.
ಮನೆಯ ಹೆಣ್ಣು ಮಕ್ಕಳಿಗೆ ಸೀರೆ
ಬಿಗ್ ಬಾಸ್ ಮನೆಗೆ ಬಂದ ಡ್ರೋನ್ ಪ್ರತಾಪ್ ತಂದೆ-ತಾಯಿ ಮುದ್ದೆ ಬಸ್ಸಾರು ಮಾಡಿಕೊಂಡು ಬಂದಿದ್ದರು. ಮನೆಯವರಿಗೆಲ್ಲಾ ತಿನ್ನಿಸಿದರು. ಈ ವೇಳೆ ಮಾತನಾಡುತ್ತಾ, ಇಲ್ಲಿ ಎಲ್ಲರೂ ಇಷ್ಟ ಆಗಿಬಿಟ್ಟಿದ್ದೀರಿ. ಇಲ್ಲಿ ಯಾರು ಇಷ್ಟವಿಲ್ಲ ಎಂಬಂತೆ ಇಲ್ಲ ಎಂದಿದ್ದಾರೆ. ಜೊತೆಗೆ ಮನೆಯ ಹೆಣ್ಣು ಮಕ್ಕಳಿಗೆ ಸೀರೆ ನೀಡಿ ಗೌರವಿಸಿದ್ದಾರೆ. ಜೊತೆಗೆ ಪ್ರತಾಪ್ ತಂದೆಗೆ ಸಂಗೀತಾ ಕ್ಯಾಪ್ಟನ್ ಆಗಬೇಕೆಂಬ ಅಭಿಪ್ರಾಯವನ್ನು ತಿಳಿಸಿದ್ದಾರೆ.


Click it and Unblock the Notifications











