BBK10: ಎಂಟು ಜನ ನಾಮಿನೇಟ್: ನೀತು, ಭಾಗ್ಯಶ್ರೀ, ಇಶಾನಿ ಮೂವರಲ್ಲಿ ಒಬ್ಬರು ಎಲಿಮಿನೇಟ್?

By Shruthi Harishgowda

ಬಿಗ್ ಬಾಸ್ ಸೀಸನ್ 10 ಶುರುವಾದ ಕೆಲವೇ ದಿನಗಳಲ್ಲಿ ಮನೆಯಲ್ಲಿ ಕುರುಕ್ಷೇತ್ರವೇ ಏರ್ಪಟ್ಟಿತ್ತು. ಎರಡು ಗುಂಪುಗಳ ನಡುವೆ ಜಗಳವಾಗುವುದು ಸಾಮಾನ್ಯವಾಗಿ ಹೋಗಿತ್ತು. ಒಂದು ತಿಂಗಳು ಕಳೆದ ನಂತರ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರು ಕೊಂಚ ಬದಲಾದಂತೆ ಕಾಣುತ್ತಾ ಇದ್ದಾರೆ. ಇಷ್ಟು ದಿನ ಬಿಗ್ ಬಾಸ್ ಮನೆಯೊಳಗೆ ಶತ್ರುಗಳಂತೆ ಇದ್ದ ಸಂಗೀತ ಹಾಗೂ ವಿನಯ್ ಇಬ್ಬರು ಸ್ನೇಹದಿಂದ ವರ್ತಿಸುತ್ತಾ ಇದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕೊಂಚ ಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಕೂಡ ಹೊಂದಿಕೊಂಡು ಹೋಗುವಂತಹ ಗುಣವನ್ನು ಅಳವಡಿಸಿಕೊಂಡಿದ್ದಾರೆ. ಈಗ ಬಿಗ್ ಬಾಸ್ ಮನೆಯೊಳಗೆ ಮೂರು ಬಣಗಳಾಗಿದ್ದು ಎಲ್ಲರೂ ಕೂಡ ಸೇಫ್ ಆಗಿ ಆಟ ಆಡಬೇಕು ಎಂದುಕೊಂಡಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಡ್ರೋಣ್ ಪ್ರತಾಪ್ ಒಂದು ಟೀಮ್ ಆಗಿದ್ದಾರೆ.

Bigg-boss-kannada-nomination-list

ತುಕಾಲಿ ಸಂತೋಷ್ ಈಗ ವಿನಯ್‌ ಟೀಂ ಬಿಟ್ಟು ಬಂದಿದ್ದು ವಿನಯ್‌ಗೂ ಕೋಪ ಬಂದಿದೆ. ಇಷ್ಟು ದಿನ ನಮ್ಮ ಟೀಮ್‌ನಲ್ಲೇ ಇದ್ದು ನಮ್ಮ ಸೀಕ್ರೆಟ್ ಎಲ್ಲವನ್ನು ತಿಳಿದುಕೊಂಡಿರುವ ತುಕಾಲಿ ಸಂತೋಷ್ ಈಗ ಬೇರೆ ಟೀಂಗೆ ಹೋಗಿದ್ದಾರೆ ಎಂದು ನಮ್ರತಾ ಬಳಿಯೂ ಹೇಳಿದ್ದಾರೆ.

ಒಂದು ಬಾರಿ ಭಾಗ್ಯಶ್ರೀ ಸೇಫ್ ಆಗಿದ್ದರು. ದಸರಾ ಹಬ್ಬದ ಪ್ರಯುಕ್ತ ಸುದೀಪ್ ಮನೆಯಿಂದ ಭಾಗ್ಯಶ್ರೀ ಹೊರಗೆ ಹೋಗೋದು ಬೇಡ ಅಂದಿದ್ದರು. ಈಗ ಮತ್ತೊಮ್ಮೆ ಭಾಗ್ಯಶ್ರೀ ನಾಮಿನೇಟ್ ಆಗಿದ್ದಾರೆ. ಕಳೆದ ಬಾರಿ ವರ್ತೂರು ಸಂತೋಷ್ ನಾಮಿನೇಟ್ ಆಗದಿದ್ದರೂ ಅವರಿಗೆ ಬಂದ ವೋಟುಗಳ ಪ್ರಕಾರ ಸುದೀಪ್ ಸೇಫ್ ಎಂದು ಹೇಳಿದ್ದರು. ಆದರೆ ವರ್ತೂರು ಸಂತೋಷ್‌ಗೆ ಬಿಗ್ ಬಾಸ್ ಮನೆಯಲ್ಲಿ ಇರಲು ಇಷ್ಟವಾಗಲಿಲ್ಲ, ಇದಕ್ಕಾಗಿ ನಾನೇ ಬಿಗ್ ಬಾಸ್ ಮನೆ ಬಿಟ್ಟು ಹೋಗುತ್ತೇನೆ ನನ್ನನ್ನ ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು. ಸಂತೋಷ್‌ ವರ್ತನೆ ಇಷ್ಟವಾಗದೇ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದ ಸುದೀಪ್ ವೇದಿಕೆಯನ್ನೇ ಬಿಟ್ಟು ಹೋಗಿದ್ದರು. ಈ ವೇಳೆ ಈಶಾನಿ ಹಾಗೂ ನೀತು ಸೇಫ್ ಆಗಿದ್ದರು.

ಮತ್ತೆ ಕಾರ್ತಿಕ್, ಇಶಾನಿ, ನೀತು ನಾಮಿನೇಟ್

ಅದೇನೋ ಗೊತ್ತಿಲ್ಲ ಬಿಗ್ ಬಾಸ್ ಶುರುವಾದಾಗಿನಿಂದಲೂ ಸಹ ಕಾರ್ತಿಕ್ ಮಾತ್ರ ನ್ಯಾಮಿನೇಷನ್‌ನಲ್ಲಿ ಇದ್ದೆ ಇರುತ್ತಾರೆ. ಮನೆಯ ಸದಸ್ಯರೆಲ್ಲರೂ ಕೂಡ ಕಾರ್ತಿಕ್ ಹೆಸರನ್ನು ತೆಗೆದುಕೊಂಡು ನಾಮಿನೇಟ್ ಮಾಡಿದ್ದಾರೆ. ಕಳೆದ ವಾರವು ಸಹ ಸುದೀಪ್, ಏನ್ರೀ ಕಾರ್ತಿಕ್ ನಿಮ್ಮ ಹೆಸರು ಪ್ರತಿವಾರವು ಇದ್ದೇ ಇರುತ್ತದೆ ಎಂದು ಕಾಲೆಳೆದಿದ್ದರು. ಈ ವಾರವೂ ಕೂಡ ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಇವರನ್ನು ವೀಕ್ಷಕರು ಸೇವ್ ಮಾಡುತ್ತಾರಾ ನೋಡಬೇಕಾಗಿದೆ.

Bigg-boss-kannada-nomination-list

ಆನೆಯನ್ನು ನಾಮಿನೇಟ್ ಮಾಡಿದ ಸದಸ್ಯರು

ವಿನಯ್ ಕೂಡ ಈ ಬಾರಿ ನಾಮಿನೇಟ್ ಆಗಿದ್ದಾರೆ. ಆದರೆ ಕಳೆದ ವಾರದಂತೆ ಟಾಸ್ಕ್ ಏನಾದರೂ ನೀಡಿ ಯಾರನ್ನಾದರೂ ಸೇವ್ ಮಾಡಬಹುದು ಎಂದಾದರೆ ವಿನಯ್ ಹಾಗೂ ಕಾರ್ತಿಕ್ ಇವರು ಕೂಡ ನಾಮಿನೇಷನ್ ಪ್ರಕ್ರಿಯೆಯಿಂದ ಹೊರಗುಳಿಯವ ಸಾಧ್ಯತೆ ಹೆಚ್ಚಾಗಿದೆ. ಇನ್ನು ತುಕಾಲಿ ಸಂತೋಷ್ ಕೂಡ ನಾಮಿನೇಟ್ ಪಟ್ಟಿಯಲ್ಲಿದ್ದಾರೆ.ವರ್ತೂರ್ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಮೂವರದ್ದು ಒಂದು ಟೀಂ ಆಗಿದ್ದು ಡ್ರೋನ್ ಏನಾದರೂ ಅವಕಾಶ ಸಿಕ್ಕರೆ ತುಕಾಲಿ ಅವರನ್ನ ಸೇವ್ ಮಾಡುವ ಸಾಧ್ಯತೆ ಇದೆ.

ಈ ವಾರ ಮನೆಗೆ ಹೋಗೋರು ಯಾರು?

ಈ ವಾರ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ವಿನಯ್, ಕಾರ್ತಿಕ್, ನಮ್ರತಾ, ತುಕಾಲಿ ಸಂತೋಷ್, ತನಿಷಾ, ಈಶಾನಿ, ಭಾಗ್ಯಶ್ರೀ, ನೀತು ಇದ್ದಾರೆ. ಇವರಲ್ಲಿ ಮನೆಗೆ ಹೋಗೋದು ಯಾರು? ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಅದಕ್ಕೆಲ್ಲ ಉತ್ತರವನ್ನ ಕಿಚ್ಚ ಸುದೀಪ್ ನೀಡಲಿದ್ದಾರೆ. ವಿನಯ್, ಕಾರ್ತಿಕ್, ನಮ್ರತಾ, ತುಕಾಲಿ ಸಂತೋಷ್, ತನಿಷಾ ಇವರು ತಮ್ಮದೇ ಆದಂತಹ ಅಭಿಮಾನಿಗಳನ್ನು ಹೊಂದಿದ್ದು ಇವರು ಸೇವ್ ಆಗುವ ಲಕ್ಷಣಗಳು ಹೆಚ್ಚಾಗಿದೆ.

ಇಶಾನಿ, ನೀತು, ಭಾಗ್ಯ ಎಲಿಮಿನೇಟ್?

ನೀತು, ಭಾಗ್ಯಶ್ರೀ, ಇಶಾನಿ ಈ ಮೂವರ ಪೈಕಿ ಯಾರಾದರೂ ಒಬ್ಬರು ಮನೆಗೆ ಈ ವಾರ ಹೋಗಲಿದ್ದಾರೆ. ಕಳೆದ ವಾರವೂ ಸಹ ಈಶಾನಿ ಹಾಗೂ ನೀತು ಇಬ್ಬರಲ್ಲಿ ಒಬ್ಬರು ಮನೆಗೆ ಹೋಗಬೇಕಾಗಿತ್ತು. ವರ್ತೂರ್ ಸಂತೋಷ್ ಅವರಿಂದಾಗಿ ಈ ಇಬ್ಬರು ಉಳಿದುಕೊಂಡಿದ್ದಾರೆ. 24 ಗಂಟೆಗಳ ಕಾಲ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್ ಶೋ ಉಚಿತವಾಗಿ ನೋಡುವ ಅವಕಾಶ ಇದೆ. ಮಿಸ್ ಮಾಡಿಕೊಳ್ಳಬೇಡಿ.

More from Filmibeat

English summary
Bigg Boss kannada 10: bhagyashree, vinay gowda and 6 others nominated for eviction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X