BBK10: ಈ ವಾರವೂ ಕಳಪೆಯಲ್ಲಿ ಯಡವಟ್ಟಾಯ್ತಾ..? ಕೋಪಗೊಂಡು ಜೈಲಿಂದ ಹೊರ ಬಂದ ವರ್ತೂರು..!

By ಎಸ್ ಸುಮಂತ್

ವಾರದ ಕೊನೆಯಲ್ಲಿ ಮನೆಯಲ್ಲಿ ಕಳಪೆ ಹಾಗೂ ಉತ್ತಮ ಯಾರೂ ಎಂಬ ನಿರ್ಧಾರ ಮಾಡಬೇಕು. ಇದಕ್ಕಿರುವ ಮಾನದಂಡ ಎಲ್ಲರಿಗೂ ಗೊತ್ತಿರುತ್ತದೆ. ಕಳಪೆ ಹಾಗೂ ಉತ್ತಮ ಎಂದುಕೊಡುವಾಗ ಯಾವುದೇ ರೀತಿಯ ಗುಂಪು ಲೆಕ್ಕಕ್ಕೆ ಬರುವುದಿಲ್ಲ. ಇಡೀ ವಾರ ಆ ಸದಸ್ಯನ ಆಟ, ಟಾಸ್ಕ್, ಮನೆಯಲ್ಲಿದ್ದ ರೀತಿ ಎಲ್ಲವನ್ನು ನೋಡಿ ಉತ್ತಮ ಅಥವಾ ಕಳಪೆಯನ್ನು ನೀಡಬೇಕಾಗುತ್ತದೆ.

ಆದರೆ ಸೀಸನ್ 10ರ ಸದಸ್ಯರೆಲ್ಲ ಕಿಚ್ಚನ ಕಡೆಯಿಂದ ಬುದ್ದಿವಾದ ಹೇಳಿಸಿಕೊಂಡಿದ್ದೇ ಆಯ್ತು. ಕಳಪೆ ಮತ್ತು ಉತ್ತಮ ಎರಡು ಬಾರೀ ಕೊಟ್ಟಿದ್ದು ರಾಂಗ್ ಆಗಿದೆ. ಕಿಚ್ಚನ ಪಂಚಾಯತಿಯಲ್ಲಿ ಎರಡು ಬಾರೀ ಬದಲಾವಣೆ ಮಾಡಿದ್ದಾರೆ. ಆದರೆ, ಈ ವಾರವೂ ಕಿಚ್ಚನಿಂದ ಪಾಠ ಕೇಳುತ್ತಾರಾ..? ಮನೆ ಮಂದಿ.

Bigg Boss Kannada Season 10: How did Varthur Santhosh come out of jail?

ವರ್ತೂರು ಸಂತೋಷ್‌ಗೆ ಕಳಪೆ ಪಟ್ಟ

ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಎರಡು ತಂಡಗಳಾಗಿವೆ. ಒಂದು ಗಜಕೇಸರಿ, ಇನ್ನೊಂದು ಸಂಪತ್ತಿಗೆ ಸವಾಲು. ಟಾಸ್ಕ್ ವಿಚಾರಕ್ಕೆ ಒಗ್ಗಟ್ಟಾಗಿರಲಿ ಎಂಬ ಕಾರಣಕ್ಕೆ ಬಿಗ್ ಬಾಸ್ ಕಡೆಯಿಂದಾನೇ ಈ ತಂಡಗಳಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ. ಆದರೆ ಈ ತಂಡಗಳು, ಎಲ್ಲಾ ನಿರ್ಧಾರದಲ್ಲೂ ತಂಡಗಳಾಗಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಕಳಪೆ ಹಾಗೂ ಉತ್ತಮ ನೀಡುವಾಗಲೂ ತಂಡವಾಗಿ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ.

ಕಳಪೆಯನ್ನು ಒಪ್ಪುತ್ತಿಲ್ಲ ವರ್ತೂರು

ಗಜಕೇಸರಿ ತಂಡದವರೆಲ್ಲಾ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಎಲ್ಲರೂ ವರ್ತೂರು ಸಂತೋಷ್ ಅವರ ಹೆಸರನ್ನೇ ಹೇಳಿದ್ದಾರೆ. ಟಾಸ್ಕ್‌ಗಳಲ್ಲಿ ಅಷ್ಟೊಂದು ಸಕ್ರಿಯ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯವನ್ನು ಸಂಗೀತಾ ನೀಡಿದ್ದಾರೆ. ಇದಕ್ಕೆ ವರ್ತೂರು ಸಂತೋಷ್ ಒಪ್ಪಿಗೆ ನೀಡಿಲ್ಲ. "ವಿಷಕಾರಿ ಎಂಬುದನ್ನೇ ನೀಡಿದರೂ ನನ್ನ ವ್ಯಕ್ತಿತ್ವ ಏನು ಎಂಬುದು ನನಗೆ ಗೊತ್ತು. ನರಿ ಬುದ್ದಿ ಏನು ಅಂತ ಗೊತ್ತು" ಎಂದು ವರ್ತೂರು ಸಂತೋಷ್ ಕಳಪೆ‌ಕೊಟ್ಟವರ ಮೇಲೆ ಕೋಪಗೊಂಡಿದ್ದಾರೆ.

ಸಂತೋಷ್‌ಗೆ ಟ್ರಿಗರ್ ಮಾಡಿದ್ರಾ ತುಕಾಲಿ?

ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಮೊದಲಿನಿಂದಾನೂ ಬೆಸ್ಟ್ ಫ್ರೆಂಡ್ಸ್ ರೀತಿ ಇದ್ದಾರೆ. ಆದರೆ, ತುಕಾಲಿ ಸಂತೋಷ್ ಮುಂದೆ ಚೆನ್ನಾಗಿ ಮಾತನಾಡಿ, ಹಿಂದೆ ಮಾತ್ರ ಅವರ ಬಗ್ಗೆನೇ ಪಿನ್ ಇಡುತ್ತಾರೆ. ಈಗ ವರ್ತೂರು ಸಂತೋಷ್‌ರನ್ನೇ ದಾರಿ ತಪ್ಪಿಸಿದ್ದಾರೆ. ಕಳಪೆ ಹೊತ್ತು ಜೈಲು ಸೇರಿದ್ದ ವರ್ತೂರು ಸಂತೋಷ್ ಮೊದಲೇ ಬೇಸರ ಮಾಡಿಕೊಂಡಿದ್ದರು. ಅವರ ಮನಸ್ಸು ಕಡೆಸಿದ ತುಕಾಲಿ ಸಂತೋಷ್, ಬಂದು ಬಿಡು ಏನು ಆಗುತ್ತೆ ನೋಡೋಣಾ ಎಂದಿದ್ದಾರೆ. ತುಕಾಲಿ ಮಾತನ್ನು ನಂಬಿ, ವರ್ತೂರು ಮಧ್ಯ ರಾತ್ರಿಯೇ ಜೈಲಿನ ಕಂಬಿಯಿಂದ ಹೊರ ಬಂದಿದ್ದಾರೆ.

Bigg Boss Kannada Season 10: How did Varthur Santhosh come out of jail?

ನಿಜವಾದ ಕಳಪೆ ನಮ್ರತಾ ಎಂದ ನೆಟ್ಟಿಗರು

ಈ ವಾರ ಕಿಚ್ಚನ ಪಂಚಾಯ್ತಿಗಾಗಿ ಜನ ಕಾಯುತ್ತಾ ಇದ್ದಾರೆ. ಯಾಕಂದ್ರೆ ಈ ವಾರ ಸಾಕಷ್ಟು ವಿಚಾರಗಳು ನಡೆದಿವೆ. ಮಾನವೀಯತೆ ಮರೆತ ಆಟಗಳು ಆಗಿವೆ. ಎರಡು ಬಾರೀ ಹೇಳಿದರೂ ಕಳಪೆಯನ್ನು ಕಳಪೆಯಲ್ಲದವರಿಗೇನೆ ನೀಡಿದ್ದಾರೆ. ಜನಾಭಿಪ್ರಾಯದಲ್ಲಿ ನಮ್ರತಾ ಕಳಪೆ ಹೊರಬೇಕಾಗಿದೆ. ಕಮೆಂಟ್ ಬಾಕ್ಸ್ ನಲ್ಲಿ ಸುದೀಪ್ ಅವರಿಗೆ ಈ ವಿಚಾರದಲ್ಲಿ ಮನವಿ ಮಾಡಿದ್ದಾರೆ. ಈ ವಾರವೂ ಕಳಪೆ ಮತ್ತು ಉತ್ತಮದ ಬಗ್ಗೆ ಕಿಚ್ಚ ಚರ್ಚೆ ಮಾಡಿ, ನ್ಯಾಯ ಕೊಡಿಸುತ್ತಾರಾ ನೋಡಬೇಕಿದೆ.

More from Filmibeat

English summary
BBK 10 November 24th episode about Varthur Santhosh made big mistake that came out of jail:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X