BBK10: ಮತ್ತೆ ಮತ್ತೆ ಸಂಗೀತಾ-ವಿನಯ್ ನಡುವೆ ಜಗಳ..! ಏನಿದೆ ಇಬ್ಬರ ಮಧ್ಯೆ ಅಂತಹ ದ್ವೇಷ..?

By Shruthi Harishgowda

ಬಿಗ್ ಬಾಸ್ ಮನೆ ಒಂದು ತಿಂಗಳಲ್ಲೇ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ ಇಲ್ಲಿ ಧರ್ಮರಾಯನು ಇದ್ದಾನೆ, ಕರ್ಣನು ಇದ್ದಾನೆ, ಶಕುನಿಯೂ ಇದ್ದಾನೆ, ಧುರ್ಯೋಧನನು ಇದ್ದಾನೆ ಎಂದು ಜನರು ಹೇಳುತ್ತಿದ್ದಾರೆ ಇದರಂತೆ ಮನೆಯಲ್ಲಿ ಈಗ ಮಹಾಭಾರತವೇ ಶುರುವಾಗಿದೆ. ಆ ಮಹಾಭಾರತದಲ್ಲೂ ಸಹ ಹೆಣ್ಣಿನಿಂದಲೇ ಕಲಹ ಶುರುವಾಯಿತು ಆದರೆ‌ ಇಲ್ಲಿ ಎಲ್ಲದ್ದಕ್ಕೂ ಗಂಡೇ ಕಾರಣ ಎಂಬಂತೆ ಆಗಿದೆ.

ವಿನಯ್ ಎಲ್ಲರ ಜೊತೆಗೆ ಜಗಳಕ್ಕೆ ನಿಂತುಕೊಳ್ಳುತ್ತಾರೆ.‌ ಬಿಗ್ ಬಾಸ್ ಮನೆಯಲ್ಲಿ ನಾನೇ ಎಲ್ಲಾ, ನಾನು ಹೇಳಿದ್ದೇ ಕರೆಕ್ಟ್ ಎಂಬುದು ಅವರ ತಲೆಯಲ್ಲಿ ಕುಳಿತುಕೊಂಡು‌ ಬಿಟ್ಟಿದೆ.‌ ಕಿಚ್ಚ ಸುದೀಪ್ ಸಹ ಕಳೆದ ವಾರ ವಿನಯ್‌ಗೆ ಕ್ಲಾಸ್ ತೆಗೆದುಕೊಳ್ಳದೆ ಹೋಗಿದ್ದು ಸಹ ಒಂದು ರೀತಿಯಲ್ಲಿ ಅಹಂ ಬರಲು‌ ಕಾರಣವಾಗಿದೆ. ಈಗ ಮನೆಯಲ್ಲಿ ಸಂಗೀತಾ ಮತ್ತು ವಿನಯ್ ನಡುವೆ ಜಗಳ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ಇಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಕಿರಿಕ್ ಆಗುತ್ತಿತ್ತು. ಈಗ ಅದು ದೊಡ್ಡಮಟ್ಟದಲ್ಲಿ ಆಗುತ್ತಿದೆ. ಈಗ ತಮ್ಮ ತಮ್ಮ ಯೋಗ್ಯತೆಯನ್ನು ಅಳೆದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ.

Bigg boss kannada season 10: huge fight between Vinay Gowda and Sangeetha Sringeri

ವಿನಯ್ ಯಾಕೋ‌ ಅತಿರೇಕವಾಗಿ ಆಡುತ್ತಿದ್ದು ಸಂಗೀತಾ ಅದಕ್ಕೆ ಸಕ್ಕತ್ ಆಗಿ ಟಕ್ಕರ್ ಕೊಡುತ್ತಾ ಇದ್ದಾರೆ. ನಾನೇನು ಕಮ್ಮಿ ಇಲ್ಲ ಎಂದು ಮಾತಿಗೆ ಮಾತು ಕೊಟ್ಟು ವಿನಯ್ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹಳ್ಳಿಯ ವಾತಾವರಣದಲ್ಲಿ ಇರುವಂತಹ ಒಂದು ಟಾಸ್ಕ್ ನಡೆಯುತ್ತಾ ಇದೆ. ಒಂದು ಟೀಂಗೆ ಸಂಗೀತಾ ಕ್ಯಾಪ್ಟನ್, ಮತ್ತೊಂದು ಟೀಂಗೆ ವಿನಯ್ ಕ್ಯಾಪ್ಟನ್ ಆಗಿದ್ದಾರೆ.‌ ಆಟದ ನಡುವೆ ಜಗಳ ಶುರುವಾಗಿದೆ. ಮೊದಲು ವಿನಯ್, ಸಂಗೀತಾ ಮೇಲೆ ಜೋರಾಗಿ ಮಾತನಾಡಿದ್ದಾರೆ. ಇದನ್ನು ಸಂಗೀತಾ ಖಂಡಿಸಿದ್ದಾರೆ.

ಜಗಳವಾಡುತ್ತಿರುವ ವಿನಯ್ -ಸಂಗೀತಾ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹರಹರ ಮಹಾದೇವ' ಧಾರಾವಾಹಿಯ ಮೂಲಕ ಶಿವ ಹಾಗೂ ಸತಿ ಪಾತ್ರವನ್ನ ಮಾಡಿದ್ದ ವಿನಯ್ ಹಾಗೂ ಸಂಗೀತ ಇಬ್ಬರೂ ಬಿಗ್ ಬಾಸ್ ಶುರುವಾದಾಗಿನಿಂದಲೂ ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ದಾರೆ. ಇವರಿಬ್ಬರು ಉತ್ತಮ ಸ್ನೇಹಿತರು ಎಂದು ತಿಳಿದುಕೊಂಡಿದ್ದ ಪ್ರೇಕ್ಷಕರು ಇವರಿಬ್ಬರ ಕಿತ್ತಾಟ ನೋಡಿ ಇವರೇನು ದುಶ್ಮನ್‌ಗಳ ಎಂದು ಅಂದುಕೊಂಡಿದ್ದಾರೆ. ಸಂಗೀತ ಮತ್ತು ವಿನಯ್ ಎಷ್ಟರಮಟ್ಟಿಗೆ ಕಿತ್ತಾಡುತ್ತಾರೆ ಎಂದರೆ ಅವರವರ ಯೋಗ್ಯತೆಯ ಬಗ್ಗೆ ಅವರವರ ಮಾತನಾಡಿಕೊಂಡು ವೀಕ್ಷಕರ ಮುಂದೆ ತಮ್ಮ ಮಾನ ತಾವೇ ಹರಾಜಿಗಿಟ್ಟುಕೊಂಡಿದ್ದಾರೆ.

ಸಂಗೀತಾ ತಿರುಗೇಟು

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗೋಸ್ಕರ ಹಳ್ಳಿಯ ವಾತಾವರಣ ನಿರ್ಮಿಸಲಾಗಿದೆ. ಅಲ್ಲಿ ಮಣ್ಣಿನಿಂದ ಸಣ್ಣ ಸಣ್ಣ ವಸ್ತುಗಳನ್ನ ಮಾಡಲಾಗುತ್ತಿತ್ತು. ಅಲ್ಲಿಗೆ ಬಂದ ವಿನಯ್ ಆ ವಸ್ತುಗಳನ್ನು ಮುಟ್ಟಿದ್ದಾರೆ. ಈ ವೇಳೆ ಸಂಗೀತಾ ಅದನ್ನ ಮುಟ್ಟಬೇಡಿ ಎಂದು ಹೇಳಿದ್ದಕ್ಕೆ ಕೋಪ ಮಾಡಿಕೊಂಡ ವಿನಯ್ ನೀನು ನನ್ನ ಕೈಯನ್ನ ಮುಟ್ಟಬೇಡ ಎಂದು ಜೋರಾಗಿ ಹೇಳಿದ್ದಾರೆ. ಬಿಗ್ ಬಾಸ್ ಇಲ್ಲಿ ಮೋಸ ನಡೆಯುತ್ತಿದೆ ಎಂದು ಜೋರಾಗಿ ಸಂಗೀತಾ ಕೂಗಿದಾಗ ವಿನಯ್ ನೀನು ಗೌರವ ಕೊಟ್ಟು ಮಾತನಾಡು ಎಂದಿದ್ದಾರೆ. ಇದಕ್ಕೆ ಸಂಗೀತ ನಾನು ರೌಡಿ ಎಂದು ಹೇಳಿದಾಗ ಇದಕ್ಕೆ ವಿನಯ್ ನಿನ್ನ ಯೋಗ್ಯತೆಗೆ ಎಂದಿದ್ದಾರೆ. ಸಂಗೀತಾ, ಮೊದಲು ನಿನ್ನ ಯೋಗ್ಯತೆ ನೋಡಿಕೋ ಎಂದು ತಿರುಗೇಟು ಕೊಟ್ಟಿದ್ದಾರೆ.

Bigg boss kannada season 10: huge fight between Vinay Gowda and Sangeetha Sringeri

ಜಗಳದಿಂದ ರಣರಂಗವಾದ ಮನೆ

ಅಂದಹಾಗೆ ವಿನಯ್ ಹಾಗೂ ಸಂಗೀತ ಜಗಳ ಮಾಡುತ್ತಿರುವುದು ಇದೇ ಮೊದಲಲ್ಲ. ಬಿಗ್ ಬಾಸ್ ಮನೆಗೆ ಬಂದ ಮೇಲೆ ಇದು ಎಷ್ಟನೇ ಬಾರಿ ಜಗಳವಾಡುತ್ತಿದ್ದಾರೆ ಅಂದ್ರೆ, ಅದಕ್ಕೆ ಲೆಕ್ಕವಿಲ್ಲ. ಈ ಬಾರಿ ಯಾಕೋ ವಿನಯ್, ಸಂಗೀತಾ ಬಗ್ಗೆ ಅತಿಯಾಗಿ ಮಾತನಾಡಿದ್ದು ಇದು ಸಂಗೀತಾಗೆ ಇಷ್ಟವಾಗಲಿಲ್ಲ. ಇದಕ್ಕೆ ಜೋರಾಗಿ ಜಗಳ ಮಾಡಿದ್ದಾರೆ. ಪರಸ್ಪರರು ಕಾಲು ಎಳೆದುಕೊಂಡು ಕಿತ್ತಾಡಿದ್ದಾರೆ.

ಸಂಗೀತಾ ಬೆನ್ನಿಗೆ ಕಾರ್ತಿಕ್

ಅಷ್ಟಕ್ಕೂ ಸಹ ಅಲ್ಲಿ ಜಗಳ ನಿಲ್ಲಲೇ ಇಲ್ಲ. ಇಬ್ಬರು ಸಹ ಒಂದೇ ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದರಿಂದ ತುಂಬಾ ಕ್ಲೋಸ್ ಆಗಿ ಇರುತ್ತಾರೆ ಎಂದು ಕೊಂಡರೆ. ಇವರು ಬರೀ ಜಗಳವಾಡುವುದರಲ್ಲಿ ಕಾಲಹರಣ ಮಾಡುತ್ತಾ ತಮ್ಮ ತಮ್ಮ ಯೋಗ್ಯತೆಯನ್ನ ಜನರ ಮುಂದೆ ತೋರಿಸುತ್ತಿದ್ದಾರೆ ಎಂದು ವೀಕ್ಷಕರು ಮಾತನಾಡುವಂತಾಗಿದೆ.

More from Filmibeat

English summary
BBK10: Here is the details about Sangeetha Sringeri and vinay gowda fight;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X