BBK10: ಕ್ಯಾಪ್ಟನ್ ಆದವರೇ ಈ ವಾರ ಎಲಿಮಿನೇಟ್.. ನೀತೂ ಜಾಗಕ್ಕೆ ಬಂದವರು ಯಾರು ?

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್‌ನಲ್ಲಿ ಹಲವು ವಿಶೇಷತೆಗಳು ನಡೆಯುತ್ತಿವೆ. ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿಯೇ ಎರಡು ಮೊದಲುಗಳು ನಡೆದಿವೆ. ಅದರಲ್ಲಿ ಒಂದು 50 ದಿನಕ್ಕೆ ಬಿಗ್ ಬಾಸ್ ಮನೆಮಂದಿಗೆ ವಿಶೇಷ ವಿಟಿ ತೋರಿಸಿರುವುದು. ಮತ್ತೊಂದು ಕ್ಯಾಪ್ಟನ್ ಆದವರೇ ಮನೆಯಿಂದ ಹೊರಗೆ ಬಂದಿರುವುದು.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕೆಂದು ಮನೆಯ ಸದಸ್ಯರೆಲ್ಲಾ ಕಷ್ಟಪಡುತ್ತಾರೆ. ಕ್ಯಾಪ್ಟನ್ ಟಾಸ್ಕ್‌ಗಾಗಿ ಮುಂದೆ ನಿಲ್ಲುತ್ತಾರೆ. ಕ್ಯಾಪ್ಟನ್ ಆದರೆ, ಎಲಿಮಿನೇಷನ್ ಆಗುವುದರಿಂದ ಒಂದು ವಾರ ಪಾರಾಗಬಹುದು ಕೂಡ. ಆದರೆ, ಬಿಗ್ ಬಾಸ್‌ ಇತಿಹಾಸದಲ್ಲಿ ಇದೇ ಮೊದಲು, ಕ್ಯಾಪ್ಟನ್ ಆದವರೆ ಮನೆಯಿಂದ ಹೊರಗೆ ಹೋಗಿದ್ದಾರೆ.

Bigg Boss Kannada Season 10 in the history of bigg boss first time captain Neethu out

ಕ್ಯಾಪ್ಟನ್ ಆಗಿದ್ದ ನೀತೂ ಔಟ್

ಇವತ್ತು ಎಲಿಮಿನೇಷನ್ ದಿನ. ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿ ನಕ್ಕು, ನಲಿಸಿದ ಬಳಿಕ ಮನೆಯಿಂದ ಒಬ್ಬರನ್ನು ಹೊರಗೆ ಹೋಗುವವರನ್ನು ಘೋಷಿಸಲಾಗುತ್ತದೆ. ಇಂದು ಅಂದಾಜಿನ ಪ್ರಕಾರ, ಸಿರಿ ಹೊರಗೆ ಬರಬಹುದು ಎಂದೇ ಊಹೆ ಮಾಡಲಾಗಿತ್ತು. ಯಾಕಂದ್ರೆ ಈ ವಾರ ನೀತೂ ಕ್ಯಾಪ್ಟನ್ ಆಗಿದ್ದರು. ಆದರೆ, ನೀತೂ ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯವರು ಕೂಡ ಬೇಸರ ಮಾಡಿಕೊಂಡಿದ್ದಾರೆ. ಮನೆಯಲ್ಲಿ‌ ಇನ್ನಷ್ಟು ದಿನ ಇರಬೇಕಿತ್ತು ಎಂದಿದ್ದಾರೆ.

ನೀತೂ ಬಳಿಕ ಕ್ಯಾಪ್ಟನ್ ಆದ ಮೈಕೆಲ್

ನೀತೂ ಬಿಗ್ ಬಾಸ್ ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿದ್ದವರು. ಟಾಸ್ಕ್ ವಿಚಾರದಲ್ಲಿ ಚೆನ್ನಾಗಿಯೇ ಆಡುತ್ತಿದ್ದರು. ಆದರೆ, ನಾಮಿನೇಷನ್ ಸಾಲಿನಲ್ಲಿ ಪ್ರತಿಸಲ ಇರುತ್ತಿದ್ದರು. ಸಿರಿ ಹಾಗೂ ನೀತೂ ನಡುವೆ ಎಲಿಮಿನೇಷನ್ ಸ್ಪರ್ಧೆ ಏರ್ಪಟ್ಟಿದ್ದಾಗ ಸುದೀಪ್ ಕೂಡ ಇದೊಂದು ಇತಿಹಾಸ ಎಂದು ನೆನಪಿಸಿದ್ದರು. ಕ್ಯಾಪ್ಟನ್ ಆದವರು ಇದೇ ಫಸ್ಟ್ ಟೈಮ್ ಮನೆಯಿಂದ ಹೊರಗೆ ಹೋಗುತ್ತಿರುವುದು ಎಂದು ಹೇಳಿದ್ದರು.

ಮೈಕೆಲ್‌ಗೆ ಜವಾಬ್ದಾರಿ ವಹಿಸಿದ ನೀತೂ

ನೀತೂ ಈ ವಾರದ ಕ್ಯಾಪ್ಟನ್ ಆಗಿದ್ದರು. ಆದರೆ, ಮನೆಯಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದನ್ನು ಕಂಡು ನೋಡುಗರು ಕೂಡ ಶಾಕ್ ಆಗಿದ್ದಾರೆ. ಹಾಗಾದರೆ, ಮತ್ತೆ ಕ್ಯಾಪ್ಟನ್ಸಿ ಟಾಸ್ಕ್ ಆಡಿಸುತ್ತಾರಾ ಎಂಬ ಅನುಮಾನ ಮೂಡಿತ್ತು. ಆದರೆ, ಅದು ಆ ರೀತಿ ಆಗಲಿಲ್ಲ. ನೀತೂಗೆ ಬಿಗ್ ಬಾಸ್ ವಿಶೇಷ ಅಧಿಕಾರ ನೀಡಿತ್ತು. ನಿಮ್ಮ ನಂತರದ ಕ್ಯಾಪ್ಟನ್ ನೇಮಕ ಮಾಡಿ ಎಂದು ಕೇಳಿದಾಗ, ನೀತೂ, ಮೈಕೆಲ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. "ಕ್ಯಾಪ್ಟನ್ ಆಗ್ಬೇಕು ಅಂತ ಇದ್ದರು. ಸಲಹೆ ಕೊಡುವಾಗಲೂ ಚೆನ್ನಾಗಿದ್ದರು. ಕ್ಯಾಪ್ಟನ್ ಆದಾಗಲೂ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದಿದ್ದಾರೆ. ಕ್ಯಾಪ್ಟನ್ ಟಾಸ್ಕ್ ಆಡುವಾಗ, ಮೈಕೆಲ್ ಒಂದು ಕ್ಷಣದಲ್ಲಿ ಮಿಸ್ ಮಾಡಿ, ನೀತೂ ಜಯಗಳಿಸಿದ್ದರು.

ನೀತೂ ಹೋಗಿದ್ದಕ್ಕೆ ಪ್ರತಾಪ್ ಕಣ್ಣೀರು

ನೀತೂಗೆ ತುಂಬಾ ನಿರೀಕ್ಷೆ ಇತ್ತು. ಜನ ಉಳಿಸುತ್ತಾರೆ ಎಂದು ನಂಬಿದ್ದರು. ಸುದೀಪ್ ಕೇಳಿದಾಗಲೂ ನಾನು ಸೇವ್ ಆಗಿರಬಹುದು ಎಂದೇ ಹೇಳಿದರು. ಆದರೆ, ಮನೆಯಿಂದ ಹೊರಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಮನೆಯಿಂದ ಹೊರಗೆ ಬರುವಾಗ ಪ್ರತಾಪ್ ತುಂಬಾನೇ‌ ಕಣ್ಣೀರು ಹಾಕಿದರು. ನೀತೂ ದೀದಿ‌ ಹೋಗಬೇಡಿ ಎಂದೇ ಮನವಿ ಮಾಡಿದರು. ನೀತೂ ಹೋದ ಮೇಲೆ ತನಿಷಾ ಕೂಡ ಕಣ್ಣೀರು ಹಾಕಿದರು. ಸಿರಿ ಕೂಡ ನೀತೂ ಮಾತುಗಳನ್ನು ನೆನೆದರು. ಇವತ್ತಿಗೆ ಹೀಗೆ, ಇನ್ನು ಮುಂದೆ ಆಟ ಟಫ್ ಆಗುತ್ತಾ ಸಾಗುವುದರಲ್ಲಿ ಅನುಮಾನವಿಲ್ಲ.

More from Filmibeat

English summary
Bigg Boss Kannada Season 10 in the history of bigg boss first time captain Neethu out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X