BBK10: 9 ಸೀಸನ್ ಸ್ಪರ್ಧಿಗಳು ಇಂದಿನ ಬಿಗ್ ಬಾಸ್ ನೋಡಿ ಬಿದ್ದು ಬಿದ್ದು ನಗ್ತಾ ಇರೋದೇಕೆ..?

By ಎಸ್ ಸುಮಂತ್

ಬಿಗ್ ಬಾಸ್ 9 ಸೀಸನ್ ಮುಗಿದಿದೆ. ಇದು ಹತ್ತನೇ ಸೀಸನ್. ಆದರೆ ಈ ಸೀಸನ್ ನೋಡಿದ ಸಾಮಾನ್ಯ ಜನ ಕೂಡ ಏನಿದು ಎಂಬ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸೀಸನ್ 9 ಸ್ಪರ್ಧಿಗಳು ಕೂಡ ಈ 10ನೇ ಸೀಸನ್ ನೋಡಿ ನಗುತ್ತಿದ್ದಾರೆ. ಅಷ್ಟೇ ಅಲ್ಲ ಹಳೆಯ ಸ್ಪರ್ಧಿಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬೇಸರ ಕೂಡ ಹೊರ ಹಾಕಿದ್ದಾರೆ.

ಬಿಗ್ ಬಾಸ್ ಮನೆಯ ಒಳಗಿನ ನೀತಿ, ನಿಯಮಗಳು ಏನು ಎಂಬುದು ಸ್ಪರ್ಧಿಗಳಿಗೆ ಗೊತ್ತೆ ಇದೆ. ಜೊತೆಗೆ ಬಿಗ್ ಬಾಸ್ ಹೋಗುವುದಕ್ಕೂ ಮುನ್ನ ಒಂದಷ್ಟು ಎಪಿಸೋಡ್‌ಗಳನ್ನು ನೋಡಿರುತ್ತಾರೆ. ಆದರೆ, ಮಾಡುತ್ತಿರುವ ತಪ್ಪಿನಿಂದ ಹೊರಗೆ ಬರುತ್ತಲೇ ಇಲ್ಲ. ಬದಲಿಗೆ ಮಾಡಿದ ತಪ್ಪನ್ನೇ ಮಾಡುತ್ತಿದ್ದಾರೆ.

Bigg Boss Kannada Season 10 Insults from older competitors

ದುಬಾರಿ ಬಜೆಟ್ ಬೆಲೆಯೇ ಗೊತ್ತಿಲ್ವಾ..?

ಮನೆ ಮಂದಿಗೆ ಮೊದಲೇ ಬಯಸಿದ್ದೆಲ್ಲವೂ ಸಿಗುವುದಿಲ್ಲ. ಲಕ್ಸುರಿ ಪಾಯಿಂಟ್ಸ್ ಅಂತ ಪಡೆದಾಗ, ಅದಕ್ಕೆ ಇಷ್ಟವಾದ ಪದಾರ್ಥಗಳನ್ನು ಪಡೆಯಬಹುದು. ಆದರೆ, ಅದಕ್ಕೂ ಕಾಲ ಮಿತಿ ಇರುತ್ತದೆ. ಎಚ್ಚರ, ಸೂಕ್ಷ್ಮತೆ ಇರಬೇಕು. ಇದನ್ನೇ ಮನೆ ಮಂದಿ ಮಿಸ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಮನೆ ಮಂದಿಯಲ್ಲಿ ಇಲ್ಲದ ಹೊಂದಾಣಿಕೆಯೇ ಇಲ್ಲ.

ಈ ಸೀಸನ್‌ನಲ್ಲಿ ತಪ್ಪಾಗುತ್ತಿರುವುದು ಎಲ್ಲಿ?

ಈ ಸೀಸನ್ ನೋಡಿ ಹಿಂದಿನ ಸೀಸನ್ ಅವರು ನಗುತ್ತಿದ್ದಾರೆ, ಯಾಕೆ ಅಂತ ಗೊತ್ತಾ..? ಎಂದು ಕಿಚ್ಚ ಸುದೀಪ್ ಕೇಳಿದ್ದು ಬುದ್ದಿಯನ್ನು ಹೇಳಿದ್ದಾರೆ. ಒದ್ದಾಡಿ ತೆಗೆದುಕೊಂಡ ಪಾಯಿಂಟ್ಸ್ ಅನ್ನ ಯಾವುದೋ ಕಾರಣಕ್ಕೆ ಕಳೆದುಕೊಳ್ಳುತ್ತಿರಿ. ಲಕ್ಸುರಿ ಬಜೆಟ್ ಕಳೆದುಕೊಂಡಾಗ ವಾರವಿಡೀ ಜಗಳ ಆಡುತ್ತಾ ಇರುತ್ತೀರಿ. ಎಲ್ಲಿಂದ ಜಗಳಗಳು ಶುರುವಾಗುತ್ತೆ ಅನ್ನೋದನ್ನ ಕಂಡು ಹಿಡಿಯುವುದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಯಾರು ಹೆಚ್ಚು ಎಫರ್ಟ್ ಹಾಕುತ್ತಾರೋ ಅವರಿಗೆ ಬರೀ ಕಣ್ಣೀರು ಸಿಗುತ್ತೆ ಎಂಬ ಬುದ್ದಿ ಮಾತನ್ನು ಹೇಳಿದ್ದಾರೆ.

ಕಿಚ್ಚನ ಮಾತಿಗೆ ವಿನಯ್ ಹೇಳಿದ್ದೇನು?

ಕಿಚ್ಚನ ಮಾತಿಗೆ ವಿನಯ್ ತಪ್ಪೊಪ್ಪಿಕೊಂಡಿದ್ದಾರೆ. ದುಬಾರಿ ಬಜೆಟ್‌ನಿಂದಾಗಿ. ಪ್ರತಿ ವಾರ ಏನೋ ಒಂದು ಮಿಸ್ಟೆಕ್‌ನಿಂದ ಹಾಳಾಗುತ್ತ ಇದೆ. ತನಿಷಾ ಇಂದಾನೇ ಹಾಳಾಗ್ತಾ ಇದೆ. ಇನ್ನು ಮುಂದೆ ಈ ರೀತಿ ಆಗುವುದಕ್ಕೆ ಬಿಡಲ್ಲ. ಸರಿಯಾದ ರೀತಿಯಲ್ಲಿ ಆ ಲಕ್ಸುರಿ ಬಜೆಟ್ ಪಡೆದುಕೊಳ್ಳುತ್ತೀವಿ ಅಂತ ಜೋಶ್ ಆಗಿ ಹೇಳಿದ್ದಾರೆ.

ಕ್ಯಾಪ್ಟನ್ ಇಲ್ಲದೆ ಕಳೆದ ಮನೆ ಮಂದಿ

ಬರೀ ಲಕ್ಸುರಿ ಬಜೆಟ್ ಅಂತ ಮಾತ್ರವಲ್ಲ, ಬೇರೆ ಬೇರೆ ವಿಚಾರದಲ್ಲೂ ಈ ಸೀಸನ್ ಸ್ಪರ್ಧಿಗಳು ತಪ್ಪು ಮಾಡುತ್ತಿದ್ದಾರೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ರೂಮಿಗೆ ಬೀಗ ಹಾಕಿದ್ದರು. ಕಾರಣ ಮೋಸ ಮಾಡಿ ಕ್ಯಾಪ್ಟನ್ ಆಗಿದ್ದಕ್ಕೆ. ಈ ಒಂದು ವಾರಗಳ ಕಾಲ ಮನೆಗೆ ಒಬ್ಬ ಕ್ಯಾಪ್ಟನ್ ಇರಲಿಲ್ಲ. ಈ ವಾರದ ಪಂಚಾಯ್ತಿಯಲ್ಲಿ ಇದನ್ನು ಚರ್ಚೆ ಮಾಡಿ ಮನೆಯವರಿಗೆ ತಪ್ಪಿನ ಅರಿವು ಮೂಡಿಸಿದ್ದಾರೆ. ಬಳಿಕ ಮುಂದಿನ ವಾರದ ಜವಾಬ್ದಾರಿಯನ್ನು ಸಿರಿಗೆ ವಹಿಸಿದ್ದಾರೆ. ಮುಂದೆ ಯಾರೇ ಕ್ಯಾಪ್ಟನ್ ಆದರು ಅವರಿಗೆ ಮೊದಲು ಗೌರವ ಕೊಡುವುದನ್ನು ಕಲಿಯಿರಿ ಎಂದು ತಿಳಿಸಿ ಹೇಳಿದ್ದಾರೆ. ಎಲ್ಲರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಯಾರಿಗೆಲ್ಲಾ ಕ್ಯಾಪ್ಟನ್ ಆಗುವ ಆಸೆ ಇತ್ತೋ ಅವರೆಲ್ಲ ಈ ಬಾರಿ ಪ್ರಯತ್ನ ಮಾಡಬಹುದು. ಅದೇ ನಂಬರ್ ಮ್ಯಾಜಿಕ್ ಗೇಮ್ ಮೂಲಕ.

More from Filmibeat

English summary
BBK 10 December 17th episode about Insults from older competitors:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X