ಕಾರ್ತಿಕ್ ಲವ್ ಸ್ಟೋರಿಗೆ ಹುಳಿ ಹಿಂಡುತ್ತಾರಂತೆ ವಿನಯ್..! ಟೈಮ್ ಪಾಸ್‌ಗೆ ಟೀಮ್‌ನಲ್ಲಿದ್ರಂತೆ ಸಂಗೀತಾ!?
ಬಿಗ್ ಬಾಸ್ ಮನೆಗೆ ಬಂದ ಮೇಲೆ ಕಾರ್ತಿಕ್ ಹಾಗೂ ವಿನಯ್ ನಡುವಳಿಕೆಯಲ್ಲಿ ಬದಲಾವಣೆ ಕಾಣುತ್ತಿದೆ. ಇಷ್ಟು ದಿನ ಸ್ನೇಹಿತರಂತೆ ಇದ್ದಂತಹ ವಿನಯ್ ಹಾಗೂ ಕಾರ್ತಿಕ್ ಇಬ್ಬರ ನಡುವೆ ಅಪಸ್ವರ ಎದ್ದಿದ್ದು, ಈಗ ಸ್ನೇಹವನ್ನೇ ಮುರಿದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಫ್ರೆಂಡ್ಶಿಪ್ ಅಂದರೆ ಅದಕ್ಕೊಂದು ಬಾಂಧವ್ಯ ಇರುತ್ತದೆ ಜೊತೆಗೆ ನಂಬಿಕೆ ಇರುತ್ತದೆ. ಆದರೆ ಬಿಗ್ ಬಾಸ್ ಮನೆಗೆ ಬಂದಾಗಿನಿಂದ ವಿನಯ್ ಹಾಗೂ ಕಾರ್ತಿಕ್ ಆ ಪದಕ್ಕೆ ಅರ್ಥವೇ ಇಲ್ಲದಂತೆ ಮಾಡಿಬಿಟ್ಟಿದ್ದಾರೆ.
ಇನ್ನು ಸಂಗೀತಾ ಪರ ಹೋದಾಗ ವಿನಯ್, ಕಾರ್ತಿಕ್‌ಗೆ ಜೋರಾಗಿ ಬೈದಿದ್ದರೂ ನೀನು ಹೊರಗಡೆ ಈ ರೀತಿ ಇರಲಿಲ್ಲ ಎಂದು ಅಂದಿದ್ದರು. ಸುಮ್ಮನೆ ಕ್ರಶ್ ಕ್ರಶ್ ಎಂದುಕೊಂಡು ಸಂಗೀತಾ ಹಿಂದೆ ಓಡಾಡುತ್ತಾ ಇದ್ದಾನೆ ಎಂದು ಕಾರ್ತಿಕ್‌ಗೆ ಬೈದಿದ್ದರು. ಆದರೆ ಇಂದು ಕಾರ್ತಿಕ್‌ನ ಲವ್ ಬಗ್ಗೆ ನಮ್ರತಾ ಹಾಗೂ ಸ್ನೇಹಿತ್ ಮುಂದೆ ಮಾತನಾಡಿದ್ದು, ನಾನು ಕಾರ್ತಿಕ್ ಲವ್‌ಗೆ ಹುಳಿ ಹಿಂಡುವ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಈಗಾಗಲೇ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಮನಸ್ತಾಪವಾಗಿದ್ದು ಇನ್ಯಾವ ಲವ್‌ಗೆ ವಿನಯ್ ಹುಳಿ ಹಿಂಡುತ್ತಾರೆ ನೋಡಬೇಕಾಗಿದೆ.

ಈ ಕಡೆ ನಮ್ರತಾ, ಸಂಗೀತಾ ಹಾಗೂ ಕಾರ್ತಿಕ್ ನಡುವೆ ಮನಸ್ತಾಪ ಆಗಿರುವುದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ನೋಡುತ್ತಾ ಇದ್ದಾಳೆ. ಕಾರ್ತಿಕ್ ಹಾಗೂ ಸಂಗೀತಾ ನಡುವೆ ಜಗಳವಾದಾಗ ಯಾವ ಎಲ್ಲಾ ಮಾತುಕತೆ ನಡೆದಿದ್ದವು ಎಂಬುದನ್ನು ತಿಳಿದುಕೊಂಡಿದ್ದು, ನಿನ್ನ ಬಗ್ಗೆ ಕಾರ್ತಿಕ್ ಆ ರೀತಿ ಎಲ್ಲಾ ಮಾತನಾಡುತ್ತಾ ಇದ್ದರು ಎಂದು ಹೇಳಿದ್ದಾರೆ. ಇದೇ ವೇಳೆ ಕಾರ್ತಿಕ್ ನಿಮಗೆ ಕ್ಲೋಸ್ ಆಗಿ ಇರಲಿಲ್ಲವಂತೆ ಫ್ರೆಂಡ್ ಆಗಿ ಮಾತ್ರ ಇದ್ದರಂತೆ ಎಂದು ಹೇಳಿದ್ದಾಳೆ ಇನ್ನೂ ನಮ್ರತಾ ಸಂಗೀತಾಗೆ ಕಿವಿ ಹಿಂಡುವ ಕೆಲಸ ಮಾಡುತ್ತಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ರತಾ ಮಾಡುತ್ತಿರುವುದು ಸರಿ ಇಲ್ಲ ಸ್ನೇಹಿತರ ನಡುವೆ ತಂದು ಹಾಕುವ ಕೆಲಸವನ್ನು ಮಾಡಿದ್ದಾರೆ ಎಂದು ಛೀಮಾರಿ ಹಾಕಿದ್ದಾರೆ.
ಕಾರ್ತಿಕ್ ವಿನಯ್ ನಡುವೆ ಸ್ನೇಹ ಮುರಿದುಬಿತ್ತಾ?
ಕಾರ್ತಿಕ್‌ಗೆ ಉರಿಸುತ್ತಾರಂತೆ ವಿನಯ್..!
ಅದ್ಯಾಕೋ ಗೊತ್ತಿಲ್ಲ ವಿನಯ್ ಹಾಗೂ ಕಾರ್ತಿಕ್ ನಡುವೆ ಜಗಳ ಬಂದಿದ್ದೆ ಸಂಗೀತಾರಿಂದ. ಆದರೆ ಈಗ ಸಂಗೀತಾ ವಿನಯ್ ಟೀಮ್ ಸೇರಿಕೊಂಡಿದ್ದು ಅವರು ಸೇಫ್ ಆಗಿ ಆಟವಾಡುತ್ತಿದ್ದಾರೆ. ಇಲ್ಲಿ ಮಾತ್ರ ವಿನಯ್ ಕಾರ್ತಿಕ್ ಮೇಲೆ ಹಗೆ ಸಾಧಿಸುತ್ತಾ ಇದ್ದಾರೆ . ಆಟ ಜಂಜಾಟದಲ್ಲಿ ಕಾರ್ತಿಕ್ ಹಾಗೂ ವಿನಯ್ ನಡುವಿನ ಸ್ನೇಹ ಮುರಿದುಬಿತ್ತಾ ಎಂಬ ಅನುಮಾನ ಈಗ ಹಲವರಲ್ಲಿ ಕಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿನಯ್ ಮಾತನಾಡುತ್ತಿರುವೆ ಸಾಕ್ಷಿಯಾಗಿದೆ. ಕಾರ್ತಿಕ್ ಪ್ರತಿ ಮಾತಿಗೂ ಕೋಪ ಮಾಡಿಕೊಂಡಿದ್ದು ಇನ್ನೂ ಜೋರಾಗಿ ನಾನು ಉರಿಸುತ್ತೇನೆ ಎಂದು ವಿನಯ್ ಸ್ನೇಹಿತ್ ಹಾಗೂ ನಮ್ರತಾ ಬಳಿಯಲ್ಲಿ ಹೇಳಿದ್ದಾರೆ.
ಕೋಪ ಮಾಡಿಕೊಂಡಾಗ ಕಾರ್ತಿಕ್ ಯಾವ ರೀತಿ ವರ್ತಿಸುತ್ತಾರೆ ಎಂಬುದನ್ನು ವಿನಯ್ ತೋರಿಸಿದ್ದಾರೆ, ಇದಕ್ಕೆ ನಮ್ರತಾ ಜೋರಾಗಿ ನಗ್ಗಿದ್ದಾರೆ ಇನ್ನು ನಾನು ವಿನಯ್ ಪ್ರೀತಿಗೆ ಹುಳಿ ಹಿಂಡುವ ಕೆಲಸವನ್ನ ಮಾಡುತ್ತೇನೆ. ಯಾವಾಗಲೂ ಕೊತ ಕೊತ ಅಂತಾ ವಿನಯ್ ಕುದಿಯುತ್ತಾ ಇರುತ್ತಾನೆ. ಸಿಟ್ರಿಕ್ ಆಸಿಡ್ ಹಾಕುವ ಕೆಲಸ ನಾನು ಮಾಡುತ್ತೇನೆ. ಯಾವಾಗಲೂ ಕಾರ್ತಿಕ್ ಉರಿದು ಹೋಗಬೇಕು ಎಂದೆಲ್ಲ ವಿನಯ್ ಮಾತನಾಡಿದ್ದಾರೆ.

ಸಂಗೀತಾ ತಲೆ ಕೆಡಿಸಿದ ನಮ್ರತಾ, ಟೈಮ್ ಪಾಸ್‌ಗೋಸ್ಕರ ಗ್ರೂಪಲ್ಲಿ ಇದರಂತೆ!
ಸಂಗೀತಾ ಬಳಿ ನಮ್ರತಾ ಕಾರ್ತಿಕ್ ಬಗ್ಗೆ ಮಾತನಾಡಿದ್ದಾರೆ ಅವರು ನಿಮ್ಮ ಜೊತೆ ಜಗಳ ಮಾಡಿಕೊಂಡು ನನ್ನ ಜೊತೆಗೆ ಫ್ಲಾರ್ಟ್ ಮಾಡುತ್ತಿದ್ದರು. ಅದೇ ರೀತಿ ಅಲ್ಲಿಂದ ನಾನು ಎಸ್ಕೇಪ್ ಆದೆ ಎಂದು ಹೇಳಿದಾಗ ಹೌದು ಎಂದು ಸಂಗೀತಾ ಅದಕ್ಕೆ ದನಿಗೂಡಿಸಿದ್ದಾರೆ. ನಿಮ್ಮ ಜೊತೆಗೆ ಜಗಳ ಮಾಡಿಕೊಂಡು ದೂರ ಹೋದಾಗಲೇ ನನಗೂ ಸಹ ಅನ್ನಿಸಿದ್ದು ನಾವಿಬ್ಬರು ಫ್ರೆಂಡ್ಸ್ ಅಂತ ಮಾತ್ರ ಯಾವಾಗಲೂ ಕಾರ್ತಿಕ್ ಹೇಳುತ್ತಾ ಇದ್ದರು ಎಂದು ನಮ್ರತಾ ಸಂಗೀತಾಗೆ ಹೇಳಿದ್ದಾರೆ.
ನಮ್ರತಾ ಹೇಳಿದ ಮಾತು ಸಂಗೀತಾಗೆ ಸ್ವಲ್ಪ ಬೇಸರವನ್ನು ತರಿಸಿದೆ. ನಂತರ ನೀವು ಅವರ ಗ್ರೂಪ್ನಲ್ಲಿ ಇದ್ದಿದ್ದು ಡಿಸ್ ಅಡ್ವಾನ್ಟೇಜ್ ಅಲ್ವಾ ಎಂದು ನಮ್ರತಾ ಕೇಳಿದ್ದಕ್ಕೆ ಇಲ್ಲ ನಾನು ಟೈಮ್ ಪಾಸ್‌ಗೋಸ್ಕರ ಅವರ ಗುಂಪಿನಲ್ಲಿ ಇದ್ದೆ ಎಂದು ಸಂಗೀತಾ ಹೇಳಿದ್ದಾರೆ. ಸಂಗೀತಾ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಸ್ನೇಹಿತರು ಎಂದುಕೊಂಡು ಚನ್ನಾಗಿ ಇದ್ದು, ಜಗಳ ಮಾಡಿಕೊಂಡ ಮಾತ್ರಕ್ಕೆ ಅಂತಹ ಬಾಂಧವ್ಯವನ್ನೇ ಟೈಮ್ ಪಾಸ್ ಎಂದು ಬಿಟ್ಟರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications











