BBK10: ವಿನಯ್ ಪರ ಬ್ಯಾಟ್ ಬೀಸಿದ ನಟಿ ಅನು ಪೂವಮ್ಮ; ಎಷ್ಟು ಹಣ ತೆಗೆದುಕೊಂಡಿದ್ದೀರಿ? ಅಂತ ಅನಿಕಾಗೆ ಕ್ಲಾಸ್!

By ಎಸ್ ಸುಮಂತ್

ಬಿಗ್ ಬಾಸ್ ದಿನೇ ದಿನೇ ಕ್ರೇಜ್ ಹೆಚ್ಚಿಸುತ್ತಾ ಇದೆ. ನೂರು ದಿನಗಳ ಪಯಣದಲ್ಲಿ ಇನ್ನೊಂದು ತಿಂಗಳು ಕಳೆದರು ಸಾಕು. ಬಿಗ್ ಬಾಸ್ ಕಪ್ ಎತ್ತಿಕೊಂಡು ವಿನ್ನರ್ ಖುಷಿಯಲ್ಲಿ ತೇಲುತ್ತಾ ಇರುತ್ತಾರೆ. ಗೆಲುವು ಒಬ್ಬರದ್ದೇ ಆಗಬೇಕಾದರೆ ಆಟದ ರೀತಿಯಲ್ಲೂ ಬದಲಾವಣೆ ಆಗಲಿದೆ. ಶಕ್ತಿ ಮತ್ತು ಯುಕ್ತಿ ಇದ್ದವರಷ್ಟೇ ಗೆಲ್ಲುವಂತಹ ಆಟಗಳನ್ನೇ ಬಿಗ್ ಬಾಸ್ ನೀಡುತ್ತಾ ಹೋಗುತ್ತದೆ.

ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಗೆಲುವಿಗಾಗಿ ಆಟ ಶುರುವಾಗಿದೆ. ಅದಕ್ಕೆ ಕಾರ್ತಿಕ್ ವರಸೆಯೇ ಬದಲಾಗಿ ಹೋಗಿದೆ. ತನಗೆ ಮೈನಸ್ ಪಾಯಿಂಟ್ ಆಗಬಹುದು ಎನಿಸುವ ನಡವಳಿಕೆಯನ್ನೇ ಬದಲಾಯಿಸಿಕೊಂಡಿದ್ದಾರೆ. ಸಂಗೀತಾ ಅವರನ್ನೇ ದೂರ ಮಾಡಿಕೊಂಡಿದ್ದಾರೆ. ಇದೇನು ಹೊಸದಲ್ಲದ ಜಗಳ. ಆದರೆ, ಈ ಬಾರಿ ಸೀರಿಯಸ್ ಆಗಿನೆ ದೂರವಾದವರಂತೆ ಕಾಣುತ್ತಿದ್ದಾರೆ.

Bigg Boss Kannada Season 10; kannada actress Anu Poovamma supporting Vinay

ವಿನಯ್ ಬೆಂಬಲಕ್ಕೆ ನಿಂತ ಅನು ಪೂವಮ್ಮ

ಅನು ಪೂವಮ್ಮ, ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ಅನಿಕಾ ಪಾತ್ರ ಮಾಡುತ್ತಿದ್ದಾರೆ. ನೆಗೆಟಿವ್ ಶೇಡ್ ಇರುವಂತ ಪಾತ್ರ ಅದು. ಇದೀಗ ಬಿಗ್ ಬಾಸ್ ಸ್ಪರ್ಧಿ ವಿನಯ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಮೂಲಕ ವಿಡಿಯೋ ಹಾಕಿ, ಶುಭಕೋರಿದ್ದಾರೆ. ಅವರ ಗೆಲುವನ್ನು ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

ವಿನಯ್ ಆಟಕ್ಕೆ ಬಹುಪರಾಕ್

ಅನು ಪೂವಮ್ಮ ಅವರ Instagram ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, "ಹಾಯ್ ಎಲ್ಲರೂ ಹೇಗಿದ್ದೀರಾ..? ವಿನಯ್ ಬಿಗ್ ಬಾಸ್‌ನಲ್ಲಿ ಚೆನ್ನಾಗಿಯೇ ಆಡುತ್ತಾ ಇದ್ದೀಯಾ. ನಾನು ಪ್ರತಿ ದಿನ ಬಿಗ್ ಬಾಸ್ ನೋಡುತ್ತೇನೆ. ನಿನ್ನ ಎಪಿಸೋಎಡ್‌ ನೋಡುತ್ತೇನೆ. ನಿಜಕ್ಕೂ ಖುಷಿ ಆಗುತ್ತಿದೆ. ಫಿನಾಲೆಯಲ್ಲಿ ನಿನ್ನ ನೋಡುತ್ತೀನಿ" ಅಂತ ವಿಡಿಯೋ ಮಾಡಿ, ಹಂಚಿಕೊಂಡಿದ್ದಾರೆ. ವಿನಯ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಅನುಗೆ ಎದುರಾಯ್ತು ನೆಗೆಟಿವ್ ಕಮೆಂಟ್

ಅನು ಪೂವಮ್ಮ ಈ ವಿಡಿಯೋ ಹಾಕಿದ ಮೇಲೆ ಸಾಕಷ್ಟು ನೆಗೆಟಿವ್ ಕಮೆಂಟ್ ಗಳು ಬರುತ್ತಿವೆ. ಕೆಲವರಂತೂ ಅನು ಪೂವಮ್ಮ ಅವರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. "ಈ ರೀತಿ ಹೇಳುವುದಕ್ಕೆ ಎಷ್ಟು ಹಣ ತೆಗೆದುಕೊಂಡಿದ್ದೀರಿ..?, ಯಾವ ಬಾಯಿಂದ ಹೇಳುತ್ತಿದ್ದೀಯಾ ತಾಯಿ. ನಿನ್ನ ಕಣ್ಣಿಗೆ ಅವನು ಚೆನ್ನಾಗಿ ಆಡುತ್ತಿದ್ದಾನೆ ಅನ್ಸುತ್ತಾ, ನಾವೇನು ಬಿಗ್ ಬಾಸ್ ನೋಡೋದಿಲ್ವಾ" ಎಂದೆಲ್ಲಾ ನೆಗೆಟಿವ್ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನು ಅದೇ ಪೋಸ್ಟ್ ಅನ್ನು ವಿನಯ್ ಬೆಂಬಲಿಗರು ನೋಡಿದ್ದು, ಪಾಸಿಟಿವ್ ಕಮೆಂಟ್ ಹಾಕುತ್ತಿದ್ದಾರೆ. ವಿನಯ್ ಬೆಂಕಿ, ವಿನಯ್ ಗೆದ್ದೇ ಗೆಲ್ಲುತ್ತಾರೆ ಅಂತೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.

ಬಿಗ್ ಬಾಸ್ ಗೆಲುವಿಗಾಗಿ ಆಡುತ್ತಿದ್ದಾರಾ ವಿನಯ್?

ಬಿಗ್ ಬಾಸ್ ಮನೆಗೆ ವಿನಯ್ ಕಾಲಿಟ್ಟಾಗಿನಿಂದ ಒಂದು ಗತ್ತನ್ನು ಕಾಪಾಡಿಕೊಂಡೆ ಬಂದಿದ್ದಾರೆ. ಆರಂಭದಲ್ಲಿ ಸ್ವಲ್ಪ ರೂಡ್ ಆಗಿ ನಡೆದುಕೊಳ್ಳುತ್ತಿದ್ದರು. ಮಾತಿಗೆ ಮುಂಚೆ ಅಗ್ರೆಸ್ಸಿವ್ ಆಗಿ ಆಡುತ್ತಿದ್ದರು. ಆಗ ಪರಿಸ್ಥಿತಿಗಳು ಅದೇ ರೀತಿ ನಿರ್ಮಾಣವಾಗುತ್ತಿದ್ದವು. ಆದರೆ, ಈಗ ಕೆಲವೊಮ್ಮೆ ಮಾತ್ರ ಅಗ್ರೆಸ್ಸಿವ್ ಆಗಿ ಆಡುತ್ತಾರೆ. ಆದರೆ ಎಲ್ಲಿಯೂ ಅವರು ನಡೆದುಕೊಳ್ಳುವ ರೀತಿಯಾಗಿ, ಮಾಡುವ ಸ್ಟಾಟರ್ಜಿಯಾಗಲಿ ಬದಲಾವಣೆಯಾಗಿಲ್ಲ. ಅದನ್ನು ಸಂಗೀತಾ ಅಚ್ಚುಕಟ್ಟಾಗಿ ಗಮನಿಸಿದ್ದಾರೆ. ವಿನಯ್ ತಮ್ಮ ತಂಡದವರ ಮನಸ್ಸು ಎಲ್ಲಿಯೂ ಅಲುಗಾಡದಂತೆ ಅದ್ಭುತವಾಗಿ ನೋಡಿಕೊಳ್ಳುತ್ತಾರೆ. ಅವರ ಸೇಫ್ ಆಟವೋ, ಅವರು ಇರುವುದೇ ಆ ರೀತಿಯೋ ನೋಡುಗರಿಗೂ ಸ್ವಲ್ಪ ಪ್ರಶ್ನಾತೀತವೇ ಸರಿ. ಗೆಲ್ಲುವ ಕುದುರೆಯೂ ಇರಬಹುದು ಎಂದೇ ಹೇಳಲಾಗುತ್ತಿದೆ.

More from Filmibeat

English summary
BBK 10: Anu Poovamma supporting Vinay matter goes viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X