Bigg Boss Kannada 10: ಸಂಗೀತಾ-ಕಾರ್ತಿಕ್ ಮತ್ತೆ ಸ್ನೇಹಿತರಾದ್ರು; ವಿನಯ್ ಮಾತಿಗೆ ಕಣ್ಣೀರು ಹಾಕಿದ ವೀಕ್ಷಕರು

By ಎಸ್ ಸುಮಂತ್

ಬಿಗ್ ಬಾಸ್ ಇನ್ನೆರಡು ದಿನ. ಫಿನಾಲೆ ವೇದಿಕೆಯಲ್ಲಿ ಗೆಲ್ಲುವವರು ನಿಂತಿರುತ್ತಾರೆ. ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರಿಗೆ ಒಂದು ಸ್ಪೆಷಲ್‌ ಮೂಮೆಂಟ್ ಕ್ರಿಯೇಟ್ ಮಾಡಿದೆ. ತಮಗೆ ತಾವೇ ಪ್ರಶ್ನಿಸಿಕೊಂಡು, ಪಶ್ಚಾತ್ತಾಪ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯ ಇಷ್ಟು ದಿನದ ಜರ್ನಿಯಲ್ಲಿ ಆರಂಭದಲ್ಲಿದ್ದ ಸ್ನೇಹ, ಬಾಂಧವ್ಯ ಕಡೆಯ ತನಕ ಇರುವುದು ಕಷ್ಟ. ಈ ಸೀಸನ್‌ನಲ್ಲೂ ಅದೇ ಆಗಿದೆ. ಕಾರ್ತಿಕ್ ಹಾಗೂ ಸಂಗೀತಾ ಎಷ್ಟೇ ಜಗಳವಾಡಿದರೂ ಮತ್ತೆ ಮತ್ತೆ ಒಂದಾಗುತ್ತಿದ್ದರು. ಆದರೆ, ಕಳೆದ ಕೆಲವು ವಾರಗಳಿಂದ ಇಬ್ಬರು ದೂರ ದೂರ ಆಗಿದ್ದಾರೆ. ಇಂದು ಆ ಎಲ್ಲಾ ತಪ್ಪುಗಳನ್ನು ತಿದ್ದಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿದೆ. ಕಳೆದು ಹೋಗಿದ್ದ ಫ್ರೆಂಡ್‌ಶಿಪ್ ಕೂಡ ಮತ್ತೆ ಸರಿಹೋಗಿದೆ.

Bigg Boss Kannada Season 10 Karthik and Sangeetha Sringeri are reunited

ಸಂಗೀತಾಗೆ ಪತ್ರ ಬರೆದ ಕಾರ್ತಿಕ್

ಬಿಗ್ ಬಾಸ್ ಮನಸ್ಸಲ್ಲಿರುವ ಕೆಲವೊಂದಿಷ್ಟು ನೋವುಗಳನ್ನು ಹೊರ ಹಾಕುವುದಕ್ಕೆ ಅವಕಾಶ ನೀಡಿತ್ತು. ಅದುವೇ ಕನ್ನಡಿ ಮುಂದೆ ಕುಳಿತು ತಮ್ಮ ತಪ್ಪುಗಳನ್ನು ಹೇಳಿಕೊಳ್ಳುವ ವಿಚಾರ. ಈ ಅವಕಾಶವನ್ನು ಬಳಸಿಕೊಂಡ ಕಾರ್ತಿಕ್, ಸಂಗೀತಾ ಕ್ಷಮೆ ಕೇಳಿದ್ದನ್ನು ಎಲ್ಲರಿಗೂ ಹೇಳಿದ್ದು, ಸಂಗೀತಾಗೆ ಶನಿ ಎಂದಿದ್ದು, ತನಿಷಾನ ನಾಮಿನೇಟ್ ಮಾಡಿದ್ದೆಲ್ಲವನ್ನು ನೆನೆದು ಕ್ಷಮೆ ಕೇಳಿದರು. ಜೊತೆಗೆ ಸಂಗೀತಾಗೆ ಕ್ಷಮಾಪಣಾ ಪತ್ರವನ್ನು ಬರೆದರು.

ಕಾರ್ತಿಕ್ ನೆನೆದ ಸಂಗೀತಾ

ಸಂಗೀತಾ ಕೂಡ ಕಾರ್ತಿಕ್ ಅವರನ್ನು ಸಾಕಷ್ಟು ಮಿಸ್ ಮಾಡಿಕೊಂಡಿದ್ದಾರೆ. ಈಗ ಪತ್ರ ಬರೆಯುವುದಕ್ಕೆ ಅವಕಾಶ ಸಿಕ್ಕಾಗ ಕಾರ್ತಿಕ್‌ಗೆ ಪತ್ರ ಬರೆದಿದ್ದಾರೆ. ಮನೆಗೆ ಬಂದ ಆರಂಭದಿಂದ ಕಾರ್ತಿಕ್ ಕೊಟ್ಟ ಸ್ನೇಹ, ಧೈರ್ಯ, ಸಪೋರ್ಟ್ ಎಲ್ಲದರ ಬಗ್ಗೆ ಹೇಳಿ ಥ್ಯಾಂಕ್ಸ್ ಹೇಳಿದ್ದಾರೆ. ಕಡೆಯಲ್ಲಿ ಇಬ್ಬರು ಪತ್ರಗಳನ್ನು ಎಕ್ಸ್‌ಚೆಂಜ್ ಮಾಡಿಕೊಂಡು, ಇಬ್ಬರ ಸ್ನೇಹವನ್ನು ಉಳಿಸಿಕೊಂಡಿದ್ದಾರೆ.

ಕಾರ್ತಿಕ್ ಫ್ರೆಂಡ್‌ಶಿಪ್ ಬಗ್ಗೆ ವಿನಯ್ ಪತ್ರ

"ಡಿಯರ್ ಕಾರ್ತಿಕ್. ನನ್ನ ನಿನ್ನ ಸ್ನೇಹ ಹತ್ತು ವರ್ಷ. ನಿನ್ನ ನೋಡಿದಾಗ ಮಂಜು ಮಂಜಾಗಿತ್ತು. ಅದೊಂದು ಪಾರ್ಟಿ ಆಗಿತ್ತು. ನನ್ನನ್ನು ನಾನು ನೋಡಿಕೊಂಡಂತೆ ಆಗುತ್ತಿತ್ತು. ಆ ದಿನಗಳು ನಮ್ಮ ಸ್ಟ್ರಗಲ್ ಸ್ಟೇಜ್ ಆಗಿತ್ತು. ಈ ಒಂದು ವೇದಿಕೆ ನಮ್ಮಿಬ್ಬರಿಗೂ ದಾರಿ ಮಾಡಿಕೊಟ್ಟಿದೆ. ಅದನ್ನು ಬಳಸಿಕೊಳ್ಳಬೇಕು. ಆದರೆ, ಅದು ಸುಲಭವಲ್ಲ. ಯುದ್ಧ ಇನ್ನು ಇದೆ. ಫ್ರೆಂಡ್ ಆಗಿ, ಅಣ್ಣನಾಗಿ ಪ್ರತಿ ಸಲ ಜೊತೆಗೆ ನಿಂತಿರುತ್ತೀನಿ. ಬಿಗ್ ಬಾಸ್ ಮನೆಯಲ್ಲಿ ಫಸ್ಟ್ ಟೈಮ್ ನಿನ್ನ ನೋಡಿದಾಗ ತುಂಬಾ ಖುಷಿ ಆಯ್ತು. ಕೆಲ ಮಾತುಗಳನ್ನು ನಾನು ಒಪ್ಪಲ್ಲ. ಆದರೆ, ಅದೊಂದು ಗೇಮ್. ಈಗಲೂ ಸುದೀಪ್ ಸರ್ ಕೈನಲ್ಲಿ ಒಂದು ಕಡೆ ನಾನು ಇನ್ನೊಂದು ಕಡೆ ನೀನು ಇರಬೇಕೆಂದು ಬಯಸುತ್ತೀನಿ" ಎಂದು ಪತ್ರ ಬರೆದಿದ್ದರು.

Bigg Boss Kannada Season 10 Karthik and Sangeetha Sringeri are reunited

ಆ ದಿನ ನೆನೆದು ಕಾರ್ತಿಕ್ ಕಣ್ಣೀರು

ನನ್ನ ದೊಡ್ಡ ಅಣ್ಣ. ಇಂಡಸ್ಟ್ರಿಗೆ ಹೊಸದಾಗಿ ಬಂದಾಗ ನನ್ನ ಹತ್ತಿರ ದುಡ್ಡೆ ಇರಲಿಲ್ಲ. ಇನ್ನು ನೆನಪಿದೆ. ಒಂದು ರೂಪಾಯಿ ಕೇಳ್ತಾ ಇರಲಿಲ್ಲ. ಮನೆಗೆ ಕರೆದು ಊಟ ಮಾಡಿಸಿ, ಮಲಗಿಸಿಕೊಂಡು ಕಳುಹಿಸುತ್ತಾ ಇದ್ದ. ಇಲ್ಲಿ ಏನೇ ಆದರೂ ಅದು ಗೇಮ್ ಅಷ್ಟೇ. ಯಾವತ್ತಿಗೂ ನಿನ್ನ ಬಿಟ್ಟು ಕೊಡುವುದಿಲ್ಲ ಎಂದು ಹಳೆಯ ದಿನಗಳನ್ನು ನೆನೆದಿದ್ದಾರೆ.

More from Filmibeat

English summary
BBK 10 Karthik and Sangeetha are reunited
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X