BBK 10: ಬಿಗ್ ಬಾಸ್‌ನಲ್ಲಿ ಆರಂಭದಲ್ಲೇ ಲವ್ ಸ್ಟೋರಿ ಶುರು.. ಯಾರಿಗೆ ಯಾರು ಜೋಡಿ?
ಬಿಗ್ ಬಾಸ್ ಎಂದ ಮೇಲೆ ಮನೆಯೊಳಗೊಂದು ಲವ್ ಸ್ಟೋರಿ ಇರಲೇಬೇಕು ಅಲ್ಲವೇ. ಪ್ರತಿ ಸೀಸನ್‌ನಲ್ಲಿ ಲವ್ ಸ್ಟೋರಿಗಳು ಗಮನ ಸೆಳೆಯುತ್ತವೆ. ದಿನ ಕಳೆದಂತೆ, ಒಬ್ಬರಿಗೊಬ್ಬರು ಕ್ಲೋಸ್ ಆದ ಮೇಲೆ ಲವ್ ಆಗುತ್ತಾ ಇತ್ತು. ಆದರೆ, ಇದು ಸೀಸನ್ 10 ಅಲ್ವಾ. ಹಲವು ವಿಶೇಷತೆಗಳನ್ನು ಹೊಂದಿದೆ. ಹೀಗಾಗಿ ಆರಂಭದಲ್ಲಿಯೇ ಲವ್ ಸ್ಟೋರಿಗಳು ಶುರುವಾಗಿವೆ.
ಈಗಾಗಲೇ ಸಂಗೀತಾ ಹಾಗೂ ಕಾರ್ತೀಕ್ ನಡುವೆ ಸಂಥಿಂಗ್ ಸಂಥಿಂಗ್ ಅನ್ನೋ ಮಾತು ಮನೆಯೊಳಗೆ ಕೇಳಿಬರುತ್ತಿದೆ. ಸಂಗೀತಾ ಮೇಲೆ ಕಾರ್ತಿಕ್ ಸಿಕ್ಕಾಪಟ್ಟೆ ಕಾಳಜಿ ತೋರುತ್ತಾರೆ. ಸಂಗೀತಾಗೆ ಬೆಂಬಲವಾಗಿ ನಿಂತಿದ್ದಾರೆ. ಕಾರ್ತೀಕ್ ಕಾಳಜಿ ಮಾಡುತ್ತಿರೊದು ಸಂಗೀತಾ ಮೇಲೆ ಅನುಮಾನ ಮೂಡಿದೆ. ಅದಕ್ಕೆ ಮೊನ್ನೆ ರಾತ್ರಿ ನೇರವಾಗಿಯೇ ಕೇಳಿದ್ದಾರೆ. ಕಾರ್ತೀಕ್ ಕೂಡ ಅದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಬೆಸ್ಟ್ ಫ್ರೆಂಡ್ ನೀನು ನನಗೆ ಅಂತ. ಆದರೆ ಅದು ಎಷ್ಟು ದಿನ ಇರಿತ್ತೋ ಗೊತ್ತಿಲ್ಲ.

ಇಶಾನಿಗೆ ಎರಡು ಬ್ರೇಕಪ್
ಈ ಬಾರಿಯ ಬಿಗ್ ಬಾಸ್ ಮನೆಗೆ ರಾಪರ್ ಇಶಾನಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಯಾವಾಗಲೂ ಆ್ಯಕ್ಟೀವ್ ಆಗಿರುವಂತ ಕ್ಯಾರೆಕ್ಟರ್ ಇಶಾನಿಯದ್ದು. ಎಲ್ಲರ ಜೊತೆಗೂ ಬೇಗ ಬೆರೆಯುತ್ತಾರೆ. ಅದರಂತೆ ನಮ್ರತಾ ಜೊತೆಗೆ ಹೆಚ್ಚೆಚ್ಚು ಬೆರೆಯುತ್ತಾರೆ. ಈಗ ಬೆಳಗ್ಗೆಯೇ ನಮ್ರತಾ ಜೊತೆಗೆ ಹರಟೆ ಹೊಡೆಯುತ್ತಾ ಕುಳಿತಿದ್ದರು. ಆಗ ನಮ್ರತಾ, ಇಶಾನಿ ಅವರ ಲೈಫ್ ಜರ್ನಿ ಬಗ್ಗೆ ಕೇಳಿದ್ದಾರೆ. ಆಗ ತನ್ನ ಜೀವನದಲ್ಲಿ ನಡೆದ ಎರಡು ಲವ್ ಸ್ಟೋರಿ ಹೇಳಿದ್ದಾರೆ. ದುಬೈ ಹಾಗೂ ಯುಎಸ್‌ನಲ್ಲಿ ಲವ್ ಆಗಿತ್ತು. ಎರಡು ಬ್ರೇಕಪ್ ಆಗಿದೆ ಎಂದಿದ್ದಾರೆ. ಆಗ ಬೆಂಗಳೂರಿನಲ್ಲಿ ಯಾರು ಕನೆಕ್ಟ್ ಆಗಿಲ್ಲವಾ ಎಂದು ಕೇಳಿದಾಗ ಇಲ್ಲ ಎಂದಿದ್ದಾರೆ.
ಮೈಕೆಲ್, ಇಶಾನಿ ಒಂದು ಮಾಡಲು ಹೊರಟ ನಮ್ರತಾ
ನಮ್ರತಾಗೆ ಮೈಕೆಲ್ ಬಗ್ಗೆ ಅನುಮಾನ ಇದೆ ಅನ್ನಿಸುತ್ತಿದೆ. ಮೈಕೆಲ್‌ಗೂ, ಇಶಾನಿ ಮೇಲೆ ಲೈಟ್ ಆಗಿ ಮನಸ್ಸಾಗಿ ಎನಿಸುತ್ತಿದೆ. ಅದನ್ನು ಗಮನಿಸಿರುವ ನಮ್ರತಾ, ಇಶಾನಿ ಬಳಿ ಮೈಕೆಲ್ ಪರ ಬ್ಯಾಟ್ ಬೀಸಿದ್ದಾರೆ. ಒಂದು ವೇಳೆ ಮೈಕೆಲ್ ಮೇಲೆ ಲವ್ವಾದರೆ ಹೇಗೆ? ಒಪ್ಪಿಕೊಳ್ಳುತ್ತೀರಾ ಅಂತ. ಸಹಜವಾಗಿ ಲವ್ವಾದರೆ ಆಗಲಿ ಎಂದೇ ಇಶಾನಿ ಹೇಳಿದ್ದಾರೆ.
ಮೈಕೆಲ್, ಇಶಾನಿ ಫುಲ್ ಕ್ಲೋಸ್
ನಮ್ರತಾ ಹಾಗೂ ಇಶಾನಿ ನಡುವೆ ಪ್ರೀತಿ ವಿಚಾರ ಚರ್ಚೆಯಾದ ಮೇಲೆ ಹೊಸದೊಂದು ಕಥೆ ಶುರುವಾಗುತ್ತಿದೆ. ಮೈಕೆಲ್ ಮತ್ತು ಇಶಾನಿಯ ಆತ್ಮೀಯತೆ ಜಾಸ್ತಿಯಾಗಿದೆ. ಇಶಾನಿಗೆ ಮೈಕೆಲ್ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಿದೆ. ಮೈಕೆಲ್ ಬಳಿ ಕುಳಿತುಕೊಂಡು ನಿನ್ನ ಬಗ್ಗೆ ಹೇಳು ಎಂದೇ ಕೇಳುತ್ತಿದ್ದಾಳೆ. ಮೈಕೆಲ್ ಕೂಡ ಫುಲ್ ಖುಷಿಯಾಗಿದ್ದು, ತನ್ನ ಬಗ್ಗೆ ಎಲ್ಲಾ ಗೊತ್ತಲ್ವಾ ನಿಮಗೆ ಎಂದಿದ್ದಾರೆ.

ನಮ್ರತಾ ಕಿತಾಪತಿಗೆ ಇಶಾನಿ ನಾಚಿಕೆ
ಪಾಪ ಇಶಾನು ಹಾಗೂ ಮೈಕೆಲ್ ಇಬ್ಬರು ಕುಳಿತು, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಕೊಳ್ಳುತ್ತಾ ಇದ್ದರು. ಆದರೆ ಪ್ರೇಮಿಗಳ ನಡುವೆ ದುಷ್ಮನ್‌ಗಳು ಇದ್ದಂತೆ ನಮ್ರತಾ ಹಾಗೂ ಕಾರ್ತಿಕ್ ಬಂದಿದ್ದಾರೆ. ಮೈಕೆಲ್ ತುಂಬಾ ಖುಷಿಯಲ್ಲಿ, ನಿನಗೆ ಏನು ಇಷ್ಟ ಅಂತ ಇಶಾನಿಯನ್ನು ಕೇಳುತ್ತಿರುವಾಗಲೇ, ಪೀಟಿಲು ಕುಯ್ದಂತೆ ಇಬ್ಬರನ್ನು ಡಿಸ್ಟರ್ಬ್ ಮಾಡಿದ್ದಾರೆ.


Click it and Unblock the Notifications











