BBK10: ಕೊವೀಡ್‌ನಿಂದ ತಂದೆ ಕಳೆದುಕೊಂಡ ಕಾರ್ತಿಕ್.. ತಾಯಿಯ ಕಣ್ಣಿನ ಆಪರೇಷನ್‌ಗೂ ಕಷ್ಟಪಟ್ಟಿದ್ದ ಸಂಗೀತಾ..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ವಿಚಾರಗಳು ಹೊರಗೆ ಬರುತ್ತವೆ. ಎಷ್ಟೋ ವರ್ಷಗಳಿಂದ ಮನಸ್ಸಲ್ಲಿಯೇ ಇಟ್ಟುಕೊಂಡ ವಿಚಾರಗಳು ಬಯಲಾಗುತ್ತವೆ. ಎಷ್ಟೋ ಜನರ ಮನಸ್ಸನ್ನು ಬಿಗ್ ಬಾಸ್ ಮನೆ ಹಗುರ ಮಾಡಿ ಕಳುಹಿಸುತ್ತೆ. ಈಗ ಬಿಗ್ ಬಾಸ್ ಮನೆಯಲ್ಲಿ ಭಾವನಾತ್ಮಕ ಸಮಯ ಶುರುವಾಗಿದೆ.

ಬಿಗ್ ಬಾಸ್‌ನಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಎರಡಕ್ಕೂ ಟಾಸ್ಕ್ ನೀಡುತ್ತದೆ. ಬಿಗ್ ಬಾಸ್ ಮನೆಯಲ್ಲಿ 50 ದಿನ ಪೂರೈಸಿ ಬಂದಿರುವವರಿಗೆ ಮನಸ್ಸಿನ ಭಾರ ಅದಾಗಲೇ ಹೆಚ್ಚಾಗಿರುತ್ತದೆ. ಬಿಗ್ ಬಾಸ್ ಹಗುರ ಮಾಡಿಕೊಳ್ಳಲು ಅವಕಾಶ ಕೊಟ್ಟ ತಕ್ಷಣ, ಹಲವು ಕಷ್ಟಗಳು, ಮನಸ್ಸಿನ ಆಸೆಗಳು, ಬೇಸರದ ಸಂಗತಿಗಳನ್ನೆಲ್ಲಾ ಇದ್ದಕ್ಕಿದ್ದ ಹಾಗೇ ಹೊರಗೆ ಹಾಕೇ ಹಾಕುತ್ತಾರೆ. ಇದು ಕ್ಯಾಮರಾ ಎಂಬುದು ನೆನಪಿರುವುದಿಲ್ಲ. ಆ ನೋವು ಅಷ್ಟೇ ಕಾಣಿಸುತ್ತಾ ಇರುತ್ತದೆ.

Bigg Boss Kannada Season 10 Karthik and Sangeetha tough movements in life

ಬಿಗ್ ಬಾಸ್ ಸದಸ್ಯರಿಗೆ ಹೊಸ ಟಾಸ್ಕ್

ಬಿಗ್ ಬಾಸ್ ನೀಡಿದ ಟಾಸ್ಕ್‌ನಲ್ಲಿ ಜೀವನದಲ್ಲಿ ಒಂದು ಬಾರಿ ಕಳೆದುಕೊಂಡಿದ್ದು ಮರಳಿ ಸಿಗುವುದಿಲ್ಲ. ಅದು ಸಮಯವಾದರೂ ಸರಿ, ಸಂಬಂಧವಾದರೂ ಸರಿ. ಕೆಲವೊಂದು ಸಲ ನಾವೂ ತೆಗೆದುಕೊಂಡ ನಿರ್ಧಾರ ನಮ್ಮವರನ್ನು ದೂರ ಮಾಡಿರುತ್ತೆ. ನಿಮ್ಮಲ್ಲೂ ಅಂತಹ ಸನ್ನಿವೇಶ ಎದುರಾಗಿರಬಹುದು. ಆ ಮನಸ್ಸಿನ ಭಾರವನ್ನು ಕಳೆದುಕೊಳ್ಳಬಹುದು ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದೆ. ಎಲ್ಲರ ಜೀವನದಲ್ಲೂ ಅಷ್ಟೇ ಯಾರೋ ಮಾಡಿದ ತಪ್ಪಿಗೆ ಎಷ್ಟೋ ಬಾರಿ ಸಂಬಂಧವೇ ಇಲ್ಲದವರು ನೋವು ಅನುಭವಿಸುತ್ತಾರೆ. ಆ ನೋವಿನ ನಷ್ಟ ಅವರಿಗೆ ಮಾತ್ರವೇ ಗೊತ್ತಿರುತ್ತೆ. ಅಂಥ ನೋವನ್ನು ಹಂಚಿಕೊಳ್ಳಲು ಬಿಗ್ ಬಾಸ್ ಅವಕಾಶ ನೀಡಿದೆ.

ಸಂಗೀತಾ ಜೀವನ ಕಲಿತಿದ್ದು ಹೇಗೆ..?

ಸಂಗೀತಾ ಅವರು ಶಿಸ್ತು ಬದ್ಧ ಕುಟುಂಬದಲ್ಲಿ ಬೆಳೆದವರು. ಅವರ ತಂದೆ ಏರ್ ಫೋರ್ಸ್ ನಲ್ಲಿದ್ದವರು. "ಟ್ರಾನ್ಸಫರ್ ಆಗುತ್ತಲೇ ಇತ್ತು. ಫ್ರೆಂಡ್ಸ್ ಬದಲಾಗುತ್ತಲೆ ಇದ್ದರು. ನಾನು ಕಾಲೇಜಿನಲ್ಲಿ ಓದುವಾಗ ಅಪ್ಪ ರಿಟೈರ್ಮೆಂಟ್ ತೆಗೆದುಕೊಂಡರು. ಆದರೆ, ಆಗ ಅಪ್ಪನಿಗೆ ಬೇರೆ ಕೆಲಸ ಬೇಗ ಸಿಗಲಿಲ್ಲ. ಈ ಕಡೆ ಅಮ್ಮನಿಗೆ ಕಣ್ಣಿನ ಸಮಸ್ಯೆಯೂ ಇತ್ತು. ಕಾಲೇಜು ಫೀಸ್ ಕಟ್ಟುವುದಕ್ಕೂ ಕಷ್ಟ. ಆದರೆ, ನನಗೆ ಅಮ್ಮನ ಕಣ್ಣಿನ ಆಪರೇಷನ್ ಮಾಡಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿ ಮದುವೆ ಮನೆಯಲ್ಲಿ ಸ್ವಾಗತ ಕೋರುವ ಕೆಲಸವನ್ನು ಮಾಡಿದ್ದೀನಿ. ಆದರೆ, ಬೇರೆ ಕೆಲಸ ಮಾಡಿಸಿಕೊಂಡವರು ಹಣವನ್ನೇ ಕೊಡದೆ ಆಟ ಆಡಿಸಿದ್ದು ಇದೆ. ಕೆಲವೊಂದು ಘಟನೆ ಜೀವನದ ಪಾಠ ಕಲಿಸಿದೆ. ಈಗ ಎಲ್ಲಿಗೆ ಬೇಕಾದರೂ ಒಬ್ಬಳೆ ಹೋಗುತ್ತೀನಿ" ಎಂದು ಜೀವನದ ಅನುಭವ ಹೇಳಿದ್ದಾರೆ.

ತಂದೆಯನ್ನು ನೆನೆದ ಕಾರ್ತಿಕ್

ಕಾರ್ತಿಕ್ ತಂದೆ ಈಗ ಜೀವಂತ ಇಲ್ಲ. ಆದರೆ, ತಂದೆಯಿಂದ ದೂರವಾಗಿರುವ ನೋವನ್ನು ನೆನೆದಿದ್ದಾರೆ. ಈಗ ಅವರಿಗೆ ಲವ್ ಯೂ ಎಂದು ಹೇಳಬೇಕು ಎನಿಸಿದರು ಹೇಳುವುದಕ್ಕೆ ಆಗುತ್ತಿಲ್ಲ. ಎಲ್ಲರೂ ತಂದೆ ತಾಯಿಯನ್ನು ಇದ್ದಾಗಲೇ ಪ್ರೀತಿಸಿ ಎಂದು ಸಲಹೆ ನೀಡಿದ್ದಾರೆ.

Bigg Boss Kannada Season 10 Karthik and Sangeetha tough movements in life

ಕೊರೊನಾದಿಂದ ಕಾರ್ತಿಕ್ ಬಾಳಲ್ಲಿ ಕತ್ತಲು

"2016ರಲ್ಲಿ ಅಪ್ಪನಿಗೆ ಸ್ಟ್ರೋಕ್ ಆಗಿತ್ತು. ಕುಡಿದು ಕುಡಿದು ಆರೋಗ್ಯ ಹಾಳಾಗಿತ್ತು. ಕಣ್ಣು, ಕಿಡ್ನಿಗೆ ಸಮಸ್ಯೆ ಆಗಿತ್ತು. ಕುಡಿಯುವುದನ್ನೇನೋ ಬಿಟ್ಟರು. ಟ್ಯಾಬ್ಲೆಟ್ ತೆಗೆದುಕೊಂಡು ಮಲಗುತ್ತಿದ್ದರು. ಅದು ಕೊರೊನಾ ಟೈಮ್. ಉಸಿರಾಟದ ಸಮಸ್ಯೆ ಆಗಿ ಬದುಕಲ್ಲ ಎಂದು ಡಾಕ್ಟರ್ ಹೇಳಿದರು. ಆಸ್ಪತ್ರೆಯಲ್ಲಿ ನಂಗೆ ಕಿಟಕಿಯಿಂದ ಕಾಣಿಸುತ್ತಾ ಇದ್ದರು. ಆದರೆ, ಡಾಕ್ಟರ್ ಅಪ್ಪನನ್ನು ಉಳಿಸುವುದಕ್ಕೆ ಆಗಲ್ಲ ಎಂದರು. ಅಮ್ಮನಿಗೆ ವಿಚಾರ ಗೊತ್ತಿಲ್ಲ. ಕೊರೊನಾ ಆಗಿದ್ದರಿಂದ ಊಟವನ್ನ ದೂರದಲ್ಲಿಯೇ ಕೊಡುತ್ತಾ ಇದ್ವಿ. ಬರೀ ಸನ್ನೆಯಲ್ಲಿಯೇ ಹಣದ ವಿಚಾರವಾಗಿ ಕೇಳುತ್ತಾ ಇದ್ದರು. ಆಸ್ಪತ್ರೆಯಿಂದ ಫೋನ್ ಬರ್ತಾ ಇತ್ತು. ಈಗ ಹಾರ್ಟ್ ಅಟ್ಯಾಕ್ ಆಗಿ ಬಿಡಬಹುದು ಬನ್ನಿ ಅನ್ನೋರು. ಹೋದರೆ ಈಗ ಆಗಿಲ್ಲ ಅಂತ ವಾಪಸ್ ಕಳುಹಿಸುತ್ತಾ ಇದ್ದರು. ನಿಮ್ಮ ತಂದೆ ಸಾಯುತ್ತಾರೆ ಬನ್ನಿ, ಅಂತ ಹೇಳಿದಾಗ ಅದನ್ನು ತಡೆದುಕೊಳ್ಳುವುದು ಸುಲಭ ಅಲ್ಲ. ಕೋವಿಡ್ ಎಂಬ ಹಾಳಾದ್ದು ಬಂದು ತಂದೆಯನ್ನು ದೂರದಿಂದಾನೇ ನೋಡಿ, ಹಾರ ಹಾಕಿ ಕಳುಹಿಸಿಕೊಡಬೇಕಾಯ್ತು" ಎಂದು ನೋವು ಹಂಚಿಕೊಂಡಿದ್ದಾರೆ.

More from Filmibeat

English summary
Bigg Boss Kannada Season 10: episode about Karthik and Sangeetha life journey|
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X