ಸಂಗೀತಾ, ತನಿಷಾ ಇಬ್ಬರಿಗೂ ಬೇಡವಾದ ಕಾರ್ತಿಕ್..! ಓಡುವ ಕುದುರೆಗಷ್ಟೇ ಬೆಲೆ ಎಂದ ವೀಕ್ಷಕರು

By Shruthi Harishgowda

ಕಾರ್ತಿಕ್ ಬಿಗ್ ಬಾಸ್ ಮನೆಯಲ್ಲಿ ಇರುವ ಅತ್ಯುತ್ತಮ ಆಟಗಾರ. ಯಾಕೆಂದರೆ ವಿನಯ್‌ಗೆ ಸರಿಸಾಟಿಯಾಗಿ ನಿಂತುಕೊಂಡು ಎದುರಾಳಿ ತಂಡದಲ್ಲಿದ್ದವರ ಎದೆಯಲ್ಲಿ ನಡುಕ ಹುಟ್ಟಿಸುತ್ತಾ ಇದ್ದರು. ಆದರೆ ನೆನ್ನೆ ನಡೆದ ಟಾಸ್ಕ್ ವೇಳೆ ಕಾರ್ತಿಕ್‌ಗೆ ಬ್ಯಾಕ್ ಪೇನ್ ಬಂದಿದೆ. ಇದರಿಂದಾಗಿ ತುಂಬಾ ಬಳಲಿದಂತೆ ಕಂಡಿದ್ದಾರೆ. ಜೊತೆಗೆ ವೈದ್ಯರನ್ನು ಕಾಣಬೇಕು ಎಂದು ಹೇಳಿದ್ದರು ಈ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಇಂದು ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಕಾರ್ತಿಕ್ ಅನ್ನು ಇಬ್ಬರು ತಂಡದ ಮಾಲೀಕರು ಖರೀದಿ ಮಾಡಿಲ್ಲ.

ಬಿಗ್ ಬಾಸ್ ಮನೆಯಲ್ಲಿ ತನಿಷಾ ಹಾಗೂ ಸಂಗೀತಾ ಇಬ್ಬರ ಮಾಲೀಕತ್ವದಲ್ಲಿ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರನ್ನು ಹೆಚ್ಚಿನ ಪಾಯಿಂಟ್ಸ್ ಕೊಟ್ಟು ಖರೀದಿ ಮಾಡಬೇಕಾಗಿದೆ. ಸಂಗೀತಾ ಹಾಗೂ ತನಿಷಾ ಇಬ್ಬರೂ ಕೂಡ ಚೇರ ಹಾಕಿಕೊಂಡು ಕುಳಿತುಕೊಂಡಿದ್ದು ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರ ಹೆಸರನ್ನು ಕರೆಯುತ್ತಾ, ಎಷ್ಟು ಪಾಯಿಂಟ್ ಕೊಟ್ಟು ಅವರನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದಾರೆ ಅದನ್ನ ಎಲ್ಲರಿಗೂ ಕೂಡ ತೋರಿಸಬೇಕಾಗಿದೆ. ತನಿಷಾ ಬಹಳ ಬುದ್ಧಿವಂತಿಕೆಯಿಂದ ಆಟವನ್ನ ಆಡುತ್ತಿದ್ದಾರೆ.

 Bigg Boss Kannada Season 10: Karthik become unwanted person for Sangeetha and Tanisha

ಇನ್ನು ಸಿರಿ ಅವರು ಬಂದು ನಿಂತುಕೊಂಡಾಗ ಎರಡು ತಂಡದವರು ಕೂಡ ಇಷ್ಟು ಪಾಯಿಂಟ್ ಕೊಟ್ಟು ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಾದ ಮೇಲೆ ಬಿಗ್ ಬಾಸ್ ವಿನಯ್ ಹಾಗೂ ನಮ್ರತಾ ಇಬ್ಬರನ್ನು ಹೊರತುಪಡಿಸಿ ಮನೆಯ ಉಳಿದ ಸದಸ್ಯರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದ್ದಾರೆ. ಆದರೆ ಇಲ್ಲಿ ನಮ್ರತಾ ಹಾಗೂ ವಿನಯ್ ಅವರನ್ನು ಯಾಕೆ ಹರಾಜು ಪ್ರಕ್ರಿಯೆಯಿಂದ ಹೊರಗೆ ಇಡಲಾಗಿದೆ ಎಂಬುವುದು ಮಾತ್ರ ಗೊತ್ತಿಲ್ಲ.

ಇಬ್ಬರೂ ಮಾಲೀಕರಿಗೂ ಬೇಡವಾದ ಕಾರ್ತಿಕ್

ಬಿಗ್ ಬಾಸ್ ಮನೆಯಲ್ಲಿ ಈಗ ಪ್ರತಿದಿನವೂ ಕೂಡ ಟ್ವಿಸ್ಟ್ ಮೇಲೆ ಟ್ವಿಸ್ಟ್ ನಡೆಯುತ್ತಿದೆ. ಇನ್ನು ಕಾರ್ತಿಕ್ ಹಾಗೂ ತನಿಷಾ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಕೂಡ ಸ್ನೇಹಿತರು. ಕಾರ್ತಿಕ್ ಯಾವುದೇ ವಿಚಾರವನ್ನು ಮಾತನಾಡುವಾಗಲೂ ತನಿಷಾ ಜೊತೆಯೇ ಮಾತನಾಡುತ್ತಿದ್ದರು ತನಿಷಾ ಕೂಡ ಕಾರ್ತಿಕ್ ಅವರನ್ನು ತಮ್ಮ ಜೊತೆಯಾಗಿಸಿಕೊಂಡಿದ್ದರು. ಆದರೆ ಈಗ ಅವರೇ ಒಂದು ತಂಡವನ್ನ ಖರೀದಿ ಮಾಡುವ ಮಾಲೀಕರಾಗಿದ್ದು ಕಾರ್ತಿಕ್‌ಗೆ ಬ್ಯಾಕ್ ಪೇನ್ ಬಂದಿದೆ ಎಂಬ ವಿಚಾರ ತಿಳಿದು ಅವರನ್ನ ಖರೀದಿ ಮಾಡಿಲ್ಲ. ಇದು ಕಾರ್ತಿಕ್‌ಗೂ ಬೇಸರ ತಂದಿದೆ. ಇಷ್ಟು ದಿನ ಫ್ರೆಂಡ್ ಎಂದುಕೊಂಡು ಜೊತೆಗೆ ಆಟವಾಡಿ ನನಗೆ ತನಿಷಾ ಏನಾದರೂ ಮೋಸ ಮಾಡಿಬಿಟ್ರಾ ಎಂಬ ಗಿಲ್ಟ್ ಕಾರ್ತಿಕ್ ಅವರನ್ನ ಕಾಡುತ್ತಿದೆ.

 Bigg Boss Kannada Season 10: Karthik become unwanted person for Sangeetha and Tanisha

ಇನ್ನು ಕಾರ್ತಿಕ್ ಹೆಸರನ್ನು ಬಿಗ್ ಬಾಸ್ ಕರೆದಾಗ ಕಾರ್ತಿಕ್ ಬಂದು ತನಿಷಾ ಹಾಗೂ ಸಂಗೀತಾ ಮುಂದೆ ನಿಂತುಕೊಂಡಿದ್ದಾರೆ. ಈ ವೇಳೆ ಇಬ್ಬರೂ ಕೂಡ ಕಾರ್ತಿಕ್‌ನ್ನು ಖರೀದಿ ಮಾಡಲು ಮುಂದಾಗಿಲ್ಲ. ತನಿಷಾ ಕಾರ್ತಿಕ್ ಅವರು ನಾನು ನಿರೀಕ್ಷೆ ಮಾಡಿದ ಮಟ್ಟಕ್ಕೆ ಪರ್ಫಾರ್ಮ್ ಮಾಡಿಲ್ಲ ಎಂಬ ಕಾರಣವನ್ನು ಕೊಟ್ಟು ಕಳಪೆ ಖರೀದಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಕಾರ್ತಿಕ್ ಗೆ ತುಂಬಾ ಬೇಸರವಾಗಿದೆ ಸಂಗೀತಾ ಏನು ಮಾತನಾಡದೆ ತಾನು ಖರೀದಿ ಮಾಡುತ್ತಿಲ್ಲ ಎಂಬುದನ್ನು ಮೌನವಾಗಿಯೇ ಹೇಳಿದ್ದಾರೆ.

ಕಾರ್ತಿಕ್ ಸೋಲ್ಡ್ ಆಗದ್ದಕ್ಕೆ ತುಕಾಲಿ, ವರ್ತೂರು ಬೇಸರ

ಕಾರ್ತಿಕ್ ಅನ್ನು ಇಬ್ಬರೂ ಕೂಡ ಖರೀದಿ ಮಾಡದೆ ಇರುವುದಕ್ಕೆ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಇಬ್ಬರೂ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ತುಕಾಲಿ ಸಂತೋಷ್ ಇವನಿಗೋಸ್ಕರ ಇಬ್ಬರೂ ಕೂಡ ಹೊಡೆದಾಡಿಕೊಳ್ಳುತ್ತಿದ್ದರು .ಇವತ್ತು ಅವನನ್ನು ಹತ್ತು ರೂಪಾಯಿಗೂ ಕೇಳಲಿಲ್ಲ. ಅವನ ಕೈನಲ್ಲಿ ಆಗಲ್ಲ ಓಡಲು ಆಗುತ್ತಿಲ್ಲ ಎಂಬುದನ್ನು ತಿಳಿದು ಇಬ್ಬರು ಸಹ ಅವನ ಕೈಬಿಟ್ಟು ಬಿಟ್ರು ಎಂದು ವರ್ತೂರು ಬಳಿ ತುಕಾಲಿ ಹೇಳಿದ್ದಾರೆ. ಟಾಸ್ಕ್ ಮಾಡಲು ಆಗುತ್ತಿಲ್ಲ ಎಂಬ ವಿಚಾರದಿಂದಾಗಿ ಇಬ್ಬರೂ ಕೂಡ ಅವನನ್ನ ಖರೀದಿ ಮಾಡಿಲ್ಲ ಎಂದು ಮಾತನಾಡಿಕೊಂಡಿದ್ದಾರೆ. ವೀಕ್ಷಕರು ಅಷ್ಟೇ ಓಡುವ ಕುದುರೆಗಷ್ಟೇ ಇಲ್ಲಿ ಬೆಲೆ ಎಂಬ ಮಾತನ್ನು ಹೇಳಿದ್ದಾರೆ.

More from Filmibeat

English summary
Bigg Boss Kannada: Karthik become unwanted person for Sangeetha and Tanisha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X