BBK10: ಕಾರ್ತಿಕ್‌ಗೆ ಬಿಸಿ ತುಪ್ಪವಾಗಿ ಬಿಟ್ಟರಾ ನಮ್ರತಾ? ಅಮ್ಮನ ಹತ್ತಿರ ಹೆಣ್ಣು ಕೇಳಿ ಅಂದ್ರು ಉತ್ತರವಿಲ್ಲ!

By ಎಸ್ ಸುಮಂತ್

ಬಿಗ್ ಬಾಸ್ ಮನೆ ಎಂದ ಮೇಲೆ ಅಲ್ಲೊಂದಿಷ್ಟು ಲವ್ ಸ್ಟೋರಿಗಳು, ಫ್ಲರ್ಟ್ ಮಾಡುವ ಜೋಡಿಗಳು ಸಿಗದೆ ಹೋಗುತ್ತಾರೆಯೇ. ಪ್ರತಿ ಸೀಸನ್‌ನಲ್ಲೂ ಪ್ರೇಮಿಗಳಂತೂ ಹುಟ್ಟಿಕೊಳ್ಳುತ್ತಾರೆ. ಬೆಂಬಲಕ್ಕಾಗಿಯಾದರೂ, ಟೈಮ್ ಪಾಸ್‌ಗಾಗಿಯೂ ಜೋಡಿಗಳಾಗುತ್ತಾರೆ. ಆದರೆ ಸೀರಿಯಸ್ ಆಗಿ ತೆಗೆದುಕೊಂಡು, ಬಿಗ್ ಬಾಸ್ ಮುಗಿದ ಮೇಲೂ ಆ ಪ್ರೀತಿ ಉಳಿಸಿಕೊಂಡಿದ್ದು ಮಾತ್ರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ.

ಬಿಗ್ ಬಾಸ್ ಸೀಸನ್ 10 ಈಗ ನಡೆಯುತ್ತಿದೆ. ಇದರಲ್ಲೂ ಹಲವು ಜೋಡಿಗಳು ಕಣ್ಣಿಗೆ ಬಿದ್ದಿವೆ. ಆರಂಭದಿಂದ ಸಂಗೀತಾ ಹಾಗೂ ಕಾರ್ತಿಕ್ ಜೋಡಿಯಾಗಿಯೇ ಕಂಡರು. ನಮ್ರತಾರನ್ನು ಸ್ನೇಹಿತ್ ಕಾಡಿಸುವುದಕ್ಕೆ ಶುರು ಮಾಡಿದ್ದರು. ಇದರ ನಡುವೆ ಕಾರ್ತಿಕ್ ಫ್ಲರ್ಟ್ ಮಾಡುವುದಕ್ಕೆ ಪ್ರಯತ್ನ ನಡೆಯುತ್ತಲೇ ಇತ್ತು. ಇದೀಗ ನಮ್ರತಾ ಅವರೇ ಐ ಲೈಕ್ ಯೂ ಎಂದರೂ ಕಾರ್ತಿಕ್ ಬಾಯಿಂದ ಉತ್ತರ ಬರುತ್ತಿಲ್ಲ.

Bigg Boss Kannada Season 10 Karthik confused on Namratas words

ನಮ್ರತಾರನ್ನೇ ನೋಡುತ್ತಾ ಕುಳಿತ ಕಾರ್ತಿಕ್

ಆರಂಭದಿಂದ ಸಂಗೀತಾ ಅವರ ಜೊತೆಗೇನೆ ಕಾರ್ತಿಕ್ ಹೆಚ್ಚು ಬಾಂಧವ್ಯ ಬೆಳೆಸಿಕೊಂಡಿದ್ದದ್ದು. ಎಷ್ಟೇ ಜಗಳವಾಡಿದರೂ ಬೇಗ ಸರಿ ಆಗುತ್ತಿದ್ದರು. ಆದರೆ, ಸಂಗೀತಾ ಇಲ್ಲದೆ ಕಾರ್ತಿಕ್ ಜೀರೋ ಎಂಬ ಮಾತುಗಳು ಬಂದ ಮೇಲೆ, ಸಂಗೀತಾಗೆ ನೋವಾಗುವಂತೆ ಮಾತನಾಡಿ ದೂರವಾಗಿ ಬಿಟ್ಟರು. ತುಂಬಾ ಮಿಸ್ ಮಾಡಿಕೊಂಡ ಕಾರ್ತಿಕ್, ಹೊಸ ವರ್ಷದ ದಿನ ಕ್ಷಮೆ ಕೇಳಿದರು ಆ ಸಂಬಂಧ ಅಲ್ಲಿಗೆ ಸರಿ ಆಗಿಲ್ಲ. ಹೀಗಾಗಿ ನಮ್ರತಾ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಕಾರ್ತಿಕ್.

ಫ್ಲರ್ಟ್ ಮಾಡಬೇಡಿ ಎಂದ ನಮ್ರತಾ

ಕಾರ್ತಿಕ್ ಒಂದೇ ಸಮ ನೋಡುತ್ತಿದ್ದ ರೀತಿ ನಮ್ರತಾಗೆ ಕೊಂಚ ಅಂಜಿಕೆ ಮೂಡಿಸಿದೆ ಎನಿಸುತ್ತದೆ. ಅದೇ ಕಾರಣಕ್ಕೆ ನಗುತ್ತಲೆ ಕಾರ್ತಿಕ್, ನೀವೂ ಇಲ್ಲಿಂದ ಎದ್ದು ಹೋಗಿ. ನನ್ನ ಜೊತೆಗೆ ಫ್ಲರ್ಟ್ ಮಾಡಬೇಡಿ ಎಂದಿದ್ದಾರೆ. ಅದೇ ಸಮಯಕ್ಕೆ ತನಿಷಾ ಕೂಡ ಅಲ್ಲಿಗೆ ಬಂದಿದ್ದು, ಒಂದಷ್ಟು ರೇಗಿಸಿದ್ದಾರೆ.

ಕಾರ್ತಿಕ್ ಸೀರಿಯಸ್ ಆಗಿದ್ದಾರಾ..?

ಕಾರ್ತಿಕ್ ಮನೆಯಲ್ಲಿ ಸುಮಾರು ಸಲ ಡೇಟಿಂಗ್ ಹೋಗೋಣಾ ಎಂದಿದ್ದಾರೆ. ಅದಕ್ಕಾಗಿ ಸಿದ್ಧತೆ ಕೂಡ ಮಾಡಿಕೊಂಡಿದ್ದರು. ಆದರೆ ಆ ಡೇಟಿಂಗ್ ಆಸೆಯನ್ನು ಅಲ್ಲಿಯೇ ಕೈ ಬಿಡುವಂತೆ ಆಗಿತ್ತು. ಈಗ ನಮ್ರತಾ ಸಿಕ್ಕ ಪಟ್ಟೆ ರೇಗಿಸಿದ್ದಾರೆ. ನೀವೂ ಈ ಮನೆಯಲ್ಲಿ ನನ್ನ ಜೊತೆಗೆ ಫ್ಲರ್ಟ್ ಮಾಡುತ್ತಿದ್ದೀರಾ ಎಂದರೆ ಕಾರ್ತಿಕ್ ಉತ್ತರ ಇಲ್ಲಪ್ಪ ಎಂಬುದೇ ಆಗಿದೆ.ಆಗ ಡೇಟ್ ಹೋಗೋಣಾ ಎಂದು ಹೇಳಿದ್ದಾರೆ.

ಅಮ್ಮನ ಬಳಿ ಹೆಣ್ಣು ಕೇಳಿ ಎಂದ ನಮ್ರತಾ

ನಮ್ರತಾ ಮಾತಿಗೆ ಕಾರ್ತಿಕ್ ಫುಲ್ ನಾಚಿಕೆ ಪಟ್ಟುಕೊಂಡಿದ್ದಾರೆ. ಅದರಲ್ಲೂ ನಮ್ರತಾ ಹೇಳಿದ ಮಾತಿಗೆ ಕಾರ್ತಿಕ್ ಏನು ಉತ್ತರ ಕೊಡಬೇಕೆಂದು ತಿಳಿಯದೆ ಗೊಂದಲಕ್ಕೆ ಒಳಗಾಗಿ ಬಿಟ್ಟಿದ್ದರೆ. ಅಮ್ಮನ ಬಳಿ ಮಾತಾಡ್ಲಾ..? ನಿಜಕ್ಕೂ ನಂಗೆ ನೀವೂ ಲೈಕ್ ಆಗಿದ್ದೀರಾ ಎಂದಾಗ, ಕಾರ್ತಿಕ್‌ಗೆ ಅದನ್ನ ತಮಾಷೆಯಾಗಿ ಸ್ವೀಕರಿಸಬೇಕೋ..? ಸೀರಿಯಸ್ ಆಗಿ ಹೇಳುತ್ತಾ ಇದ್ದಾರೋ ಎಂಬುದು ತಿಳಿಯುತ್ತಿಲ್ಲ. ಬೇಡ ಎಂದು ಅದೃಷ್ಟವನ್ನು ಕಳೆದುಕೊಳ್ಳಲ್ಲ, ಯೆಸ್ ಅಂತ ಹೇಳಿ ಜೋಕರ್ ಆಗಿಬಿಡುತ್ತೀನಾ ಎಂಬ ಗೊಂದಲ ಕಾರ್ತಿಕ್ ಮನಸ್ಸಲ್ಲಿದೆ.

More from Filmibeat

English summary
BBK 10 Karthik is confused by Namrata's words
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X