BBK10: "ಬಾರೋ ಲೋ ಗುಲಾಮ" ಎಂದ ವಿನಯ್.. ಕಾರ್ತಿಕ್ ನಡವಳಿಕೆ ಹಿಂದಿರುವ ಉದ್ದೇಶವೇನು?
ಬಿಗ್ ಬಾಸ್ ಮನೆಯಲ್ಲಿ ರಾಕ್ಷಸರನ್ನು ಸೃಷ್ಟಿ ಮಾಡಲಾಗಿದೆ. ನೋಡುತ್ತಿರುವವರಿಗೆ ಇವರು ನಿಜವಾಗಲೂ ರಾಕ್ಷಸರೇ ಎಂಬ ಫೀಲ್ ಬರಬೇಕು. ಆ ರೀತಿಯ ನಡವಳಿಕೆಗಳೇ ಹೆಚ್ಚಾಗಿ ಕಾಣಿಸುತ್ತಿವೆ. ಎಲ್ಲರೂ ಬಂದಿರುವುದು ಸ್ವತಂತ್ರವಾಗಿ ಆಡುವುದಕ್ಕೆ, ಒಬ್ಬಂಟಿಯಾಗಿ ಗೆಲ್ಲುವುದಕ್ಕೆ. ಆದರೆ, ಈಗಿನ ಸೀಸನ್‌ನಲ್ಲಿರುವ ಸದಸ್ಯರು ಆ ರೀತಿ ಕಾಣಿಸುತ್ತಿಲ್ಲ.
ಕಡೆ ಗಳಿಗೆಯಲ್ಲೂ ಅದೇಕೋ ತ್ಯಾಗ ಮೂರ್ತಿಗಳಾಗಿ ಬಿಡೋಣಾ ಎಂದುಕೊಂಡಿದ್ದಾರೋ ಏನೋ. ಎಲ್ಲರೂ ಒಂದೊಂದು ಗುಂಪಿನಿಂದ ಸ್ಪೂರ್ತಿ ಪಡೆದವರಂತೆ ಆಡುತ್ತಿದ್ದಾರೆ. ನಾವು ಈ ಟೀಂ. ಈ ಟೀಂನವರಿಗಾಗಿ ಮಾತ್ರ ಆಡಬೇಕು ಎಂಬ ರೀತಿಯಾಗಿ ಆಡುತ್ತಿದ್ದಾರೆ. ಅದರಲ್ಲೂ ವೈಯಕ್ತಿಕವಾಗಿ ಅಂತು ಜೋರಾಗಿಯೇ ಆಡುತ್ತಿದ್ದಾರೆ.

ಸ್ನೇಹಿತ್ ಕಡೆಯಿಂದ ಮನೆ ಮಂದಿಗೆ ಮನವಿ
ಟಾಸ್ಕ್ ಶುರುವಾದಾಗಿನಿಂದ ಮನೆಯ ಸದಸ್ಯರ ವೈಯಕ್ತಿಕ ನಿಂದನೆ ಶುರುವಾಗಿದೆ. ಆದರೆ, ಇದು ಟಾಸ್ಕ್‌ಗಳ ವಿಚಾರಕ್ಕೆ ಸರಿಯಲ್ಲ. ಬಿಗ್ ಬಾಸ್ ಕೂಡ ಸೂಚನೆ ನೀಡಿದೆ. ಹೀಗಾಗಿ ಇಂದು ಕ್ಯಾಪ್ಟನ್ ಸ್ನೇಹಿತ್, ಎಲ್ಲರಿಗೂ ಮೊದಲೇ ಸೂಚನೆ ನೀಡಲಾಗಿದೆ. ಯಾರೂ ಕೂಡ ಟಾಸ್ಕ್ ವಿಚಾರದಲ್ಲಿ ವೈಯಕ್ತಿಕ ನಿಂದನೆ ಮಾಡಬಾರದು ಎಂದೇ ಹೇಳಿದ್ದಾರೆ. ಹೆಸರು ಹಿಡಿದು ನಿಂದಿಸುವಂತಿಲ್ಲ ಎಂದಿದ್ದಾರೆ.
ಸ್ನೇಹಿತ್ ಮಾತಿಗೆ ನಮ್ರತಾ ಒಪ್ಪಿಗೆ ಇಲ್ಲ
ಕಳೆದ ಎರಡು ದಿನದಿಂದ ಸಂಗೀತಾ ತಂಡದವರು ರಾಕ್ಷಸರಾಗಿದ್ದಾರೆ. ಗಂಧರ್ವರನ್ನು ಆ ಸಮಯದಲ್ಲಿ ಗೋಳುಯ್ದುಕೊಂಡಿದ್ದು ಕಡಿಮೆ ಏನು ಅಲ್ಲ. ತಮಗೆ ಬೇಕಾದ ಸೇವೆಯನ್ನೆಲ್ಲಾ ಮಾಡಿಸಿಕೊಂಡರು. ಈ ವೇಳೆ ಸಂಗೀತಾ ಮತ್ತು ಬಳಗದಿಂದಾನೂ ಕೆಲವೊಂದು ವೈಯಕ್ತಿಕ ನಿಂದನೆ ಆಗಿದೆ. ಈಗ ಸ್ನೇಹಿತ್, ವೈಯಕ್ತಿಕ ನಿಂದನೆ ಮಾಡಬೇಡಿ ಎಂದಾಗ, ನಮ್ರತಾ ಅದನ್ನು ರಿಸೀವ್ ಮಾಡಿಕೊಳ್ಳಲಿಲ್ಲ. ಬದಲಿಗೆ ನಾವೂ ಮಾಡಿಯೇ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಾರೊ ಲೋ ಎಂದ ವಿನಯ್
ವಿನಯ್ ಈಗ ರಾಕ್ಷಸರ ತಂಡದಲ್ಲಿ ಇದ್ದಾರೆ. ಹೀಗಾಗಿ ಗಂಧರ್ವರನ್ನು ಕಾಡಿಸಬೇಕು. ಬಾತ್ ರೂಮಿನಲ್ಲಿ ಇದ್ದ ಕಾರ್ತಿಕ್‌ನನ್ನು ಬಾರೋ ಈಚೆ ಗುಲಾಮ ಎಂದು ಕರೆದಿದ್ದಾರೆ. ಬರ್ತೀನಿ ಇರು ಎಂದಾಗ, ಏನಂದೆ ನೀನು ಬರ್ತೀನಿ ಇರಲೋ. ಬಗ್ಗು, ಬಗ್ಗಿ ಒಂಟಿ ಕಾಲಿನಲ್ಲಿ ನಡೆದುಕೊಂಡು ಬಾ. ಹೋಯ್ ಎದ್ದೇಳು ಮೇಲೆ. ಏನಿದು ಅಂತ ತಿಳಿಯುತ್ತಿಲ್ಲವಾ. ಏನಿದು ಅಂತ ಗೊತ್ತಾಗುವುದಿಲ್ಲವಾ ಅಂತ ಸಂಗೀತಾ ಕಲಸಿದ ಹಿಟ್ಟನ್ನು ತೆಗೆದು ವಿನಯ್ ಬೀಸಿದ್ದಾರೆ.
ಕಾರ್ತಿಕ್ ಕಡೆಯಿಂದ ಸೇಫ್ ಗೇಮ್
ಕಾರ್ತಿಕ್ ಮೊದಲೆಲ್ಲಾ ಬೇಗ ಕೋಪ ಮಾಡಿಕೊಳ್ಳುತ್ತಿದ್ದರು. ಆದರೆ, ಇಂದು ವಿನಯ್ ಮಾತಿಗೆ ಯಾವುದೇ ಕೋಪ ತೋರಿಸುತ್ತಿಲ್ಲ. ವಿನಯ್ ಕರೆದಾಗ ನಿಧಾನವಾಗಿ ಬಂದಿದ್ದಾರೆ. ಬಗ್ಗು, ನಡೆದುಕೊಂಡು ಬಾ ಎಂದಾಗಲೂ ತುಂಬಾ ನಿಧಾನವಾಗಿ ಬಂದಿದ್ದಾರೆ. ಬಳಿಕ ಅಲ್ಲಿಗೆ ನಮ್ರತಾ ಕೂಡ ಬಂದಿದ್ದು, ಮತ್ತೊಂದು ರೀತಿಯ ಶಿಕ್ಷೆ ಕೊಡುವುದಕ್ಕೆ ಪ್ರಯತ್ನಿಸಿದ್ದಾರೆ. ಅದಕ್ಕೂ ವಿನಯ್ ಸಮಾಧಾನವಾಗಿಯೇ ನಡೆದುಕೊಂಡಿದ್ದಾರೆ. ಇದರ ಹಿಂದೆ ಇರುವುದು ಸಂಗೀತಾ ಅವರ ಸ್ಟ್ರಾಟರ್ಜಿ. ಎದುರಾಳಿಗಳಿಗೆ ಕೋಪ ಬಂದರೆ, ಅವರು ಅಗ್ರೆಸ್ಸಿವ್ ಆಗಿ ಆಡುತ್ತಾರೆ. ಆಗ ಶಿಕ್ಷೆ ನೀಡುವಂತ ಪರಿಸ್ಥಿತಿ ಬರುತ್ತದೆ ಎಂಬ ಕಾರಣಕ್ಕೆ ರಾಕ್ಷಸರು ಹೇಳಿದ ಕೆಲಸಗಳನ್ನು ಮಾಡದೇ, ರೂಲ್ಸ್ ಬ್ರೇಕ್ ಮಾಡುತ್ತಿದ್ದಾರೆ. ಇದರಿಂದಾನೇ ಸಾಕಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ.


Click it and Unblock the Notifications











