BBK10: ಸಂಗೀತಾ ಎತ್ತಿಕೊಂಡು ಬಂದು ಸಂಭ್ರಮಿಸಿದ ವಿನಯ್.. ಮಂಕಾದ ಕಾರ್ತಿಕ್ !
ಬಿಗ್ ಬಾಸ್‌ನಲ್ಲಿ ಟಾಸ್ಕ್ ಗೆಲ್ಲುವುದು ಬಹಳ ಮುಖ್ಯವಾಗುತ್ತದೆ. ನೋಡುವುದಕ್ಕೆ ಇಷ್ಟೇನಾ ಎನಿಸುವಂತ ಟಾಸ್ಕ್‌ಗಳು ಆಡಿದಾಗಲೇ ಓ ಮೈ ಗಾಡ್ ಎನಿಸುವಷ್ಟು ಕಷ್ಟದ ಟಾಸ್ಕ್‌ಗಳಾಗಿ ಕಾಣುವುದು. ಗೆಲುವು, ಊಟ, ವಿಶೇಷತೆ ಏನೇ ಬೇಕಾದಾಗಲೂ ಬಿಗ್ ಬಾಸ್ ಸುಲಭವಾಗಿ ನೀಡುವ ಮಾತೇ ಇಲ್ಲ. ಅದಕ್ಕೊಂದಿಷ್ಟು ಟಾಸ್ಕ್‌ಗಳನ್ನು ನೀಡಿ, ಗೆದ್ದಾಗಲೇ ಬಯಸಿದ್ದೆಲ್ಲವೂ ಸಿಗುತ್ತದೆ. ಸೋತರೆ ನಿರ್ದಾಕ್ಷಿಣ್ಯವಾಗಿ ವಾಪಸ್ ಹೋಗುತ್ತದೆ.
ಪ್ರತಿ ಸಲ ಬಿಗ್ ಬಾಸ್‌ನಲ್ಲಿ ಟಾಸ್ಕ್ ಇರುತ್ತದೆ. ಬಿಗ್ ಬಾಸ್ ಕೊನೆಯಲ್ಲಿ ಒಬ್ಬರು ಮಾತ್ರ ವಿನ್ನರ್ ಆಗುವುದು. ಮನೆಯೊಳಗೆ ಏನೇ ಬಾಂಧವ್ಯ ಬೆಳೆದರೂ ಆಟ ಎಂದು ಬಂದಾಗ ಸ್ವತಂತ್ರವಾಗಿ ಆಡಲೇಬೇಕಾಗುತ್ತದೆ. ಇವತ್ತಿನ ಆಟ ಸಖತ್ ಮಜಾಭೂತವಾಗಿತ್ತು.

ಕಾರ್ತಿಕ್ ಜೊತೆಗೆ ಮನಸ್ತಾಪ ಇಷ್ಟವಿಲ್ಲ
ಸಂಗೀತಾ ಸಾಕಷ್ಟು ಅಪ್ಸೆಟ್ ಆಗಿದ್ದಾರೆ. ಅದಕ್ಕೆ ಒಂದು ಕಾರಣ ಕಾರ್ತಿಕ್ ತಲೆ ಬೋಳಿಸಿಕೊಂಡಿರುವುದು. ಅದಕ್ಕೆ ನಾನೇ ಕಾರಣ ಆಗಿಬಿಟ್ಟೆ ಎಂಬ ನೋವು ಸಂಗೀತಾಗೆ ಕಾಡುತ್ತಿದೆ. ಅಷ್ಟೇ ಅಲ್ಲ ಕಾರ್ತಿಕ್ ದೂರ ಆಗಿರುವುದು ಸಂಗೀತಾಗೆ ಇಷ್ಟವಿಲ್ಲ. ಇಷ್ಟು ದಿನ ಅಷ್ಟೊಂದು ಆತ್ಮೀಯವಾಗಿದ್ದು, ಇಷ್ಟು ಬೇಗ ದೂರ ಆಗುವುದು ಅಂದರೆ ಏನು ಎಂಬುದೇ ಸಂಗೀತಾ ಪ್ರಶ್ನೆ. ಇದನ್ನೇ ಬಿಗ್ ಬಾಸ್ ಬಳಿ ಹೇಳಿದ್ದಾರೆ.
ಬಿಗ್ ಬಾಸ್ ಕಡೆಯಿಂದ ರಿಸ್ಕಿ ಟಾಸ್ಕ್
ಬಿಗ್ ಬಾಸ್ ಟಾಸ್ಕ್ ನೀಡುವುದನ್ನು ನೋಡುವುದಕ್ಕೇನೆ ಖುಷಿ. ಇವತ್ತು ಒಂದು ಇಂಟ್ರೆಸ್ಟಿಂಗ್ ಟಾಸ್ಕ್ ನೀಡಿದ್ದು, ಅದರಲ್ಲೂ ಸಂಪತ್ತಿಗೆ ಸವಾಲ್ ಟೀಂ ಗೆದ್ದಿದೆ. ಒಂದು ಜೈಲಿನ ಒಳಗೆ ಡ್ರಮ್ ಇಡಲಾಗಿದೆ. ಆ ಡ್ರಮ್ ಮೇಲೆ ಹಗ್ಗ ಕಟ್ಟಲಾಗಿದೆ. ಹಗ್ಗ ಹಿಡಿದು ಬ್ಯಾಲೆನ್ಸ್ ಮಾಡಬೇಕು. ಹೊರಗೆ ಮತ್ತೊಂದು ತಂಡದವರು ಅವರನ್ನು ಬೀಳಿಸುವ ಪ್ರಯತ್ನ ಮಾಡಬೇಕು.
ಸಂಗೀತಾ ಆಟಕ್ಕೆ ಫುಲ್ ಹ್ಯಾಪಿ
ಆಟ ಮೂರು ಸುತ್ತಿನಲ್ಲಿ ನಡೆದಿದೆ. ಕಾರ್ತಿಕ್ ಆಟದ ರೂಲ್ಸ್ ಬ್ರೇಕ್ ಮಾಡಿದ್ದರು. ಹೀಗಾಗಿ ಎರಡನೇ ಬಾರಿಗೆ ಆಡಿ, ಅವರೇ ವಿನ್ ಆಗಿದ್ದರು. ಎರಡು ಬಾರಿ ಸಂಪತ್ತಿಗೆ ಸವಾಲ್ ತಂಡವೇ ಗೆದ್ದಿತ್ತು. ಆದರೆ, ಮೂರನೇ ಬಾರಿಗೆ ಗಜಕೇಸರಿ ತಂಡದಿಂದ ಸಂಗೀತಾ ಬಂದರು. ಅವರ ಫಿಟ್ನೆಸ್‌ಗೆ ಈ ಆಟ ಮಸ್ತ್ ಎನಿಸಿತ್ತು. ಬೆಳಗ್ಗೆಯಿಂದ ಇದ್ದ ನೋವೆಲ್ಲಾ ಈ ಆಟದ ಮೂಲಕ ಮರೆತಿದ್ದರು. ಎಂಜಾಯ್ ಮಾಡುತ್ತಾ, ಎದಿರಾಳಿ ತಂಡದವರಿಗೆ ಟಕ್ಕರ್ ಕೊಡುತ್ತಾ, ಯಾರೂ ನೇತಾಡದಂತೆ ನೇತಾಡುತ್ತಾ, ಟಾಸ್ಕ್ ಗೆದ್ದಿದ್ದಾರೆ.
ಸಂಗೀತಾರನ್ನು ಎತ್ತಿಕೊಂಡು ಬಂದ ವಿನಯ್
ಸಂಗೀತಾ ಅಷ್ಟು ಎಂಜಾಯ್ ಮಾಡಿಕೊಂಡು ಆಡಿದ ಕಾತಣಕ್ಕೆ ವಿನಯ್ ಫುಲ್ ಖುಷಿಯಾಗಿದ್ದರು. ತನಿಷಾ ಎಲ್ಲರಿಗೂ ಬಾಗಿಲು ತೆರೆದಂತೆ ಸಂಗೀತಾ ಬಿದ್ದಾಗಲೂ ತೆರೆದರು. ಆದರೆ ವಿನಯ್ ಓಡಿ ಬಂದು, ಹೆಗಲ ಮೇಲೆ ಹಾಕಿಕೊಂಡು ಸೆಲೆಬ್ರೆಟ್ ಮಾಡಿದರು. ಇದನ್ನು ನೋಡಿದ ಕಾರ್ತಿಕ್ ಮನಸ್ಸಿಗೆ ಕೊಂಚ ಬೇಸರವಾದಂತೆ ಕಂಡಿದೆ. ತನಿಷಾ ಹಾಗೂ ಕಾರ್ತಿಕ್ ಕೂತು ಮಾತನಾಡುತ್ತಿದ್ದರು. ಯಾಕೆ ಎಲ್ಲರೂ ನಮ್ಮನ್ನು ದುಷ್ಮನ್ ರೀತಿಯಾಗಿ ನೋಡುತ್ತಿದ್ದಾರೆ ಅಂತ. ಆ ಕಡೆಯಿಂದಾನೂ ಇವರ ಬಗ್ಗೆಯೇ ಮಾತುಗಳು ತೇಲಿ ಬಂದವು. ಅವರು ಗೆದ್ದರು ಅದನ್ನು ಸೆಲೆಬ್ರೆಟ್ ಮಾಡುವುದಕ್ಕೆ ಆಗುತ್ತಿಲ್ಲ. ಯಾಕಂದ್ರೆ, ನಾನು ನಿನ್ನ ಎತ್ತಿಕೊಂಡು ಬಂದಿದ್ದೀನಲ್ಲ ಅದಕ್ಕೆ ಉರಿದುಕೊಳ್ಳುತ್ತಿದ್ದಾರೆ ಅಂತ ವಿನಯ್ ಹೇಳಿದ್ದಾರೆ.


Click it and Unblock the Notifications











