ಫಿನಾಲೆ ಹತ್ತಿರವಾಗುತ್ತಿದ್ದಂತೆ ದೊಡ್ಮನೆಯಲ್ಲಿ ಕಾರ್ತಿಕ್‌ಗೆ ಕಾಡುತ್ತಿದಿಯಾ ಒಂಟಿತನ..! ಹೀಗ್ಯಾಕಂದ್ರು ಕಿಚ್ಚ ಸುದೀಪ್?
ಬಿಗ್ ಬಾಸ್ ಸೀಸನ್ 10 ಇನ್ನೇನು ಫೈನಲ್ ಹಂತಕ್ಕೆ ಬಂದು ತಲುಪಿದೆ. ಈಗ ದೊಡ್ಮನೆಯಲ್ಲಿ ಏಳು ಮಂದಿ ಸದಸ್ಯರುಗಳು ಇದ್ದಾರೆ. ಅದರಲ್ಲಿ ಎಲ್ಲರಿಗೂ ಕೂಡ ಸ್ನೇಹಿತರು ಇರುವಂತೆ ಕಾಣಿಸುತ್ತಿದೆ. ಆದರೆ ಕಾರ್ತಿಕ್ ಮಾತ್ರ ಒಂಟಿಯಾಗಿದ್ದಾರೆ. ಈ ಒಂದು ವಿಚಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದನ್ನು ಮಾಡಿದ್ದು ಅದೇ ವಿಚಾರವನ್ನು ಕಿಚ್ಚ ಸುದೀಪ್ ಸಹ ಕೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಂದು ಹೊಸ ಕಾರನ್ನು ಲಾಂಚ್ ಮಾಡುವ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಬಿಗ್ ಬಾಸ್ ಎಲ್ಲರೂ ಕೂಡ ಮೂರು ಜೋಡಿಗಳಂತೆ ಆಟ ಆಡಬೇಕು ಎಂದು ಹೇಳಿದ್ದರು. ಈ ವೇಳೆ ಕಾರ್ತಿಕ್‌ಗೆ ಯಾರು ಕೂಡ ಜೊತೆಯಾಗಲಿಲ್ಲ. ಕಾರ್ತಿಕ್ ಬೇಸರದಿಂದಲೇ ನಾನು ಉಸ್ತುವಾರಿ ನೋಡಿಕೊಳ್ತೇನೆ ಎಂದರು. ಸಂಗೀತಾ ನಾನು ಪ್ರತಾಪ್ ಜೊತೆ ಆಡುತ್ತೇನೆ ಎಂದು ಹೇಳಿದರೆ ನಮ್ರರಾ ವಿನಯ್ ಅವರನ್ನ ಆಯ್ಕೆ ಮಾಡಿಕೊಂಡರು.

ಇನ್ನು ಯಾವಾಗಲೂ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಜೊತೆಗೆ ಇದ್ದು ಆಟವನ್ನು ಆಡುತ್ತಾರೆ. ಈ ವೇಳೆ ಕಾರ್ತಿಕ್ ಮುಂದೆ ಬಂದು ಬೇಸರದಿಂದ ನನಗೆ ಜೋಡಿ ಯಾರಿಲ್ಲ ನಾನು ಆಟದ ಉಸ್ತುವಾರಿಯನ್ನು ನೋಡಿಕೊಳ್ಳುತ್ತೇನೆ ಎಂದು ತಾವೇ ಹೇಳಿದರು. ಈ ವೇಳೆಯೂ ಕೂಡ ಕಾರ್ತಿಕ್‌ಗೆ ಒಂಟಿತನ ತುಂಬಾನೇ ಕಾಡಿದೆ. ತನಿಷಾ ಬಿಗ್ ಬಾಸ್ ಮನೆಯಲ್ಲಿ ಇರುವ ಅಷ್ಟು ದಿನವೂ ಕೂಡ ಕಾರ್ತಿಕ್‌ಗೆ ಒಂಟಿತನ ಕಾಡದಂತೆ ಅವರನ್ನು ರಕ್ಷಣೆ ಮಾಡಿಕೊಂಡು ಬಂದಿದ್ದರು. ಯಾವಾಗಲೂ ಕಾರ್ತಿಕ್ ಜೊತೆಗೆ ನಿಂತುಕೊಂಡು ಸಪೋರ್ಟ್ ಮಾಡುತ್ತಿದ್ದರು.
ಈಗ ಬಿಗ್ ಬಾಸ್ ಮನೆಯಿಂದ ತನಿಷಾ ಎಲಿಮಿನೇಟ್ ಆಗಿದ್ದು ಕಾರ್ತಿಕ್ ಸಂಪೂರ್ಣವಾಗಿ ಒಂಟಿ ಎಂದು ಅನಿಸುತ್ತಿದೆ. ಇದಕ್ಕೂ ಮೊದಲು ಸಂಗೀತಾ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಂಗೀತಾ ಆಡಿದ ಬಕೆಟ್ ಹಿಡಿಯುವ ಎಂಬ ಒಂದೇ ಒಂದು ಮಾತು ಕಾರ್ತಿಕ್ ಹಾಗೂ ಸಂಗೀತಾ ಸ್ನೇಹವನ್ನೇ ನುಂಗಿ ಹಾಕಿದೆ. ಇನ್ನು ಎಷ್ಟೋ ಸಲ ಸಂಗೀತಾ ಜೊತೆಗೆ ಚೆನ್ನಾಗಿರಬೇಕು ಎಂದುಕೊಂಡಾಗಲೂ ಕೂಡ ಸಂಗೀತಾ ಅದಕ್ಕೆ ಸ್ಪಂದಿಸಲಿಲ್ಲ. ಕಾರ್ತಿಕ್ ತನಿಷಾರನ್ನು ನಾಮಿನೇಷನ್ ಮಾಡಿದ ದಿನದಿಂದಲೇ ಅವರಿಗೆ ಒಂಟಿತನ ಶುರುವಾಗಿ ಮಾನಸಿಕವಾಗಿ ಸಹ ಕುಗ್ಗಿ ಹೋಗಿದ್ದರು. ಈಗ ಕಿಚ್ಚ ಸುದೀಪ್ ಸಹ ಅದೇ ಮಾತನ್ನು ಕೇಳಿದ್ದಾರೆ.
ಸ್ನೇಹದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದ ವಿನಯ್
ಕಿಚ್ಚ ಸುದೀಪ್ ಸೂಪರ್ ಸಂಡೇ ವಿಥ್ ಸುದೀಪ ಕಾರ್ಯಕ್ರಮವನ್ನು ನಡೆಸಿಕೊಡಲು ಬಂದಾಗ ಎಲ್ಲರಿಗೂ ಸಹ ಬೋರ್ಡನ್ನು ಹಿಡಿದುಕೊಳ್ಳಲು ಹೇಳಿದ್ದಾರೆ. ಈ ವೇಳೆ ಕಾರ್ತಿಕ್ ಅವರು ಒಂಟಿಯಾದ್ರು ಎಂಬ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಸಹ ಸ್ಪರ್ಧಿಗಳೆಲ್ಲರೂ ಕೂಡ ಹೌದು ಎಂದು ಉತ್ತರ ನೀಡಿದ್ದಾರೆ. ಕಾರ್ತಿಕ್ ಸ್ನೇಹದ ಪರಿಧಿಯೊಳಗೆ ಬದುಕುತ್ತಾ ಇದ್ದರು. ಆದರೆ ಈಗ ತಮ್ಮ ಸ್ನೇಹಿತರು ಮನೆಯಿಂದ ಹೊರಗೆ ಹೋದಮೇಲೆ ಕಾರ್ತಿಕ್ ಒಂಟಿಯಾಗಿದ್ದಾರೆ ಎಂದು ಹೇಳಿದ್ದಾರೆ.

ವಿನಯ್ ಎಲ್ಲವನ್ನು ತುಲನೆ ಮಾಡಿ ಕಾರ್ತಿಕ್ ಸ್ನೇಹದಿಂದ ತುಂಬಾ ನಿರೀಕ್ಷೆ ಮಾಡಿದ್ದ ಎಂದು ನನಗೆ ಅನಿಸುತ್ತದೆ. ಆದರೆ ಯಾರಿಂದಲೂ ಏನನ್ನು ಕೂಡ ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಇದ್ದಾಗ ಅವರಿಗೆ ಒಂಟಿತನ ಕಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ತನಿಷಾ ಕೂಡ ಇಲ್ಲದೆ ಇರುವುದು ಕಾರ್ತಿಕ್‌ಗೆ ಯಾರು ಸ್ನೇಹಿತರಿಲ್ಲ ಎಂಬ ಒಂಟಿತನ ಕಾಡುತ್ತಿದೆ ಎಂದು ಹೇಳಿದ್ದಾರೆ.
ಸೋತು ಸಾಕಾಗಿದೆ: ಸಾಯೋಕೆ ರೆಡಿಯಿಲ್ಲ
ನಾನು ಜಗಳ ಮಾಡಿದವರಾ ಜೊತೆಗೆ ಸಾರಿ ಕೇಳಿದ್ದೇನೆ ಎಂದು ಸಂಗೀತಾ ವಿಚಾರವನ್ನು ಸುದೀಪ್ ಮುಂದೆ ಹೇಳಿರುವಂತೆ ಕಾಣಿಸುತ್ತಿದೆ. ಅವರು ಯಾವುದಕ್ಕೂ ಸ್ಪಂದಿಸದೆ ಹೋದಾಗ ಬೇಸರವಾಗಿದೆ ಇಲ್ಲಿ ತನಕ ಸೋತು ಸೋತು ಸಾಕಾಗಿದೆ ನಾನು ಸಾಯೋದಕ್ಕೆ ರೆಡಿ ಇಲ್ಲ ಎಂದು ಕಾರ್ತಿಕ್ ಮಾರ್ಮಿಕವಾಗಿ ಸುದೀಪ್ ಮುಂದೆ ನುಡಿದಿದ್ದಾರೆ. ಆದರೆ ಈ ಮಾತನ್ನು ಯಾರಿಗೆ ಹೇಳಿದ್ದಾರೆ ಎಂಬುದನ್ನು ಪ್ರೋಮೋ ದಲ್ಲಿ ಸ್ಪಷ್ಟ ಪಡಿಸಿಲ್ಲ.
ನಂಬಿಕೆ ದ್ರೋಹ ಮಾಡಿದ್ರು ಎಂಬ ಪದ ಬಳಸಿದ ಸಂಗೀತಾ
ಸಂಗೀತಾ ಕಾರ್ತಿಕ್ ವಿರುದ್ಧ ಸುದೀಪ್ ಮುಂದೆಯೇ ಮಾತನಾಡಿದ್ದಾರೆ. ಕಾರ್ತಿಕ್ ಸ್ನೇಹಕ್ಕೆ ಬೆಲೆ ಕೊಡಲಿಲ್ಲ ಅವರು ಸ್ನೇಹಿತರಿಗೆ ತುಂಬಾ ಹರ್ಟ್ ಆಗುವ ರೀತಿಯಲ್ಲಿ ಮಾತನಾಡುತ್ತಾರೆ. ಜೊತೆಗೆ ನಂಬಿಕೆ ದ್ರೋಹವನ್ನು ಕೂಡ ಮಾಡಿದ್ದಾರೆ ಎಂಬ ಪದವನ್ನು ಬಳಸಿದ್ದು ಕಾರ್ತಿಕ್‌ಗೆ ಸ್ವಲ್ಪವೂ ಕೂಡ ಇಷ್ಟವಾಗಿಲ್ಲ. ಸಂಗೀತಾ ಮಾತಿಗೆ ಕಾರ್ತಿಕ್ ಸುದೀಪ್ ಮುಂದೆ ಖಡಕ್ ಉತ್ತರವನ್ನು ನೀಡಿದ್ದಾರೆ. ನನ್ನನ್ನ ಮೆಟ್ಟಿಲಾಗಿ ಹತ್ತಿ ಹೋದವರಲ್ಲಿ ಸಂಗೀತಾ ಕೂಡ ಒಬ್ಬರು ಎಂದು ಕಾರ್ತಿಕ್ ಹೇಳಿದ್ದಾರೆ. ಸಂಗೀತ ಹೇಳಿದ ಮಾತಿಗೆ ಕಾರ್ತಿಕ್ ಅಭಿಮಾನಿಗಳು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











