ಸಂಕ್ರಾಂತಿ ದಿನದಂದೇ ನಾಮಿನೇಷನ್: ಕಾರ್ತಿಕ್ ಮೇಲೆ ಹೆಚ್ಚಾಯ್ತು ತನಿಷಾ ದ್ವೇಷ..! ಹಿಂಗ್ಯಾಕಾಯ್ತು?
ಬಿಗ್ ಬಾಸ್ ಸೆಮಿ ಫೈನಲ್‌ಗೆ ತಲುಪುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಆಟವನ್ನು ಬದಲಾಯಿಸಿದ್ದಾರೆ. ತನಿಷಾ ಹಾಗೂ ಕಾರ್ತಿಕ್ ಇಬ್ಬರು ಕೂಡ ಸ್ನೇಹಕ್ಕೆ ಒಳ್ಳೆಯ ಅರ್ಥವನ್ನ ಕೊಟ್ಟಿದ್ದರು. ಆದರೆ ಕಾರ್ತಿಕ್ ಮಾಡಿದ ಒಂದೇ ಒಂದು ತಪ್ಪು ಕಾರ್ತಿಕ್ ಮೇಲೆ ದ್ವೇಷ ಕಾರುವಂತೆ ಮಾಡಿದೆ. ತನಿಷಾ ಅವರನ್ನು ಕಳೆದ ವಾರ ನಾಮಿನೇಟ್ ಮಾಡಿದ್ದೆ ಈಗ ಕಾರ್ತಿಕ್ ಪಾಲಿಗೆ ಮುಳುವಾಗಿರುವಂತೆ ಕಾಣಿಸುತ್ತಿದೆ. ವಿನಯ್ ಅವರನ್ನು ಸೇವ್ ಮಾಡುವ ಬರದಲ್ಲಿ ಕಾರ್ತಿಕ್ ತೆಗೆದುಕೊಂಡ ನಿರ್ಧಾರದಿಂದ ತನಿಷಾ ಕಾರ್ತಿಕ್ ನಡುವೆ ದ್ವೇಷ ಹುಟ್ಟಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಯಾರೂ ಕೂಡ ಎಲಿಮಿನೇಟ್ ಆಗಿಲ್ಲ. ತುಕಾಲಿ ಸಂತೋಷ ಅಥವಾ ವರ್ತೂರು ಸಂತೋಷ್ ಇವರು ಇಬ್ಬರಲ್ಲಿ ಯಾರಾದರೂ ಒಬ್ಬರು ಮನೆಯಿಂದ ಹೊರಗಡೆ ಹೋಗುತ್ತಾರೆ ಎನ್ನಲಾಗಿತ್ತು. ಆದರೆ ಇಬ್ಬರಿಗೂ ಕೂಡ ಈಗ ಜೀವದಾನ ದೊರಕಿದ್ದು ಸಂಕ್ರಾಂತಿ ಹಬ್ಬದ ದಿನವೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಈಗ ಮನೆಯವರ ಟಾರ್ಗೆಟ್ ಆಗಿರುವುದು ಪ್ರತಾಪ್ ಹಾಗೂ ಕಾರ್ತಿಕ್. ಸಂಗೀತಾ ಕೂಡ ಇನ್ಮುಂದೆ ನಾನು ಪ್ರತಾಪ್ ಗೆ ಸಪೋರ್ಟ್ ಮಾಡೋದಿಲ್ಲ ಎಂದು ಅಂದಿದ್ದರು ಅದೇ ರೀತಿ ನಡೆದುಕೊಳ್ಳುತ್ತಾ ಇದ್ದಾರೆ.

ಕಾರ್ತಿಕ್ ಮೇಲೆ ಕೆಂಡ ಕಾರಿದ ಬೆಂಕಿ, ನಂಗೆ ಸ್ನೇಹ ಬೇಡವೆಂದ ತನಿಷಾ
ಸಂಕ್ರಾಂತಿ ಹಬ್ಬದ ದಿನದಂದೇ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದ್ದು ,ಕಾರ್ತಿಕ್ ಅವರ ಹೆಸರನ್ನು ಇಬ್ಬರು ತೆಗೆದುಕೊಂಡಿದ್ದಾರೆ. ಮೊದಲಿಗೆ ಬಂದ ತನಿಷಾ ನಾನು ಕಾರ್ತಿಕ್ ಅವರ ಹೆಸರನ್ನು ತೆಗೆದುಕೊಳ್ಳುತ್ತೇನೆ ಅವರು ಆಡುವ ಮಾತು ಇತ್ತೀಚಿಗೆ ಸರಿ ಇಲ್ಲ ಎಂದು ಕಾರಣ ಕೊಟ್ಟಿದ್ದಾರೆ. ಜೊತೆಗೆ ನನಗೆ ಕಾರ್ತಿಕ್ ಅವರ ಫ್ರೆಂಡ್ ಶಿಪ್ ಬೇಡವೇ ಬೇಡ ಎಂದು ಕಾರ್ತಿಕ್ ಫೋಟೋವನ್ನು ತೆಗೆದುಕೊಂಡ ತನಿಷಾ ಫೋಟೋವನ್ನ ಹರಿದು ಬೆಂಕಿಗೆ ಹಾಕಿದ್ದಾರೆ.
ನಾನು ಒಮ್ಮೆ ದ್ವೇಷ ಮಾಡಲು ಶುರು ಮಾಡಿದರೆ ಅದರ ಬೂದಿಯು ಸಿಗಬಾರದು ಆ ರೀತಿ ದ್ವೇಷ ಮಾಡುತ್ತೇನೆ. ಹೊರಗಡೆ ಹೋದ ಮೇಲು ನನಗೆ ಕಾರ್ತಿಕ್ ಫ್ರೆಂಡ್ಶಿಪ್ ಬೇಡ ಅಂದು ನನಗೆ ಚೂರಿ ಹಾಕಿದ್ದು ನನ್ನ ಹಾರ್ಟಿಗೆ ಚೂರಿ ಹಾಕಿದಂತೆ ಆಯಿತು ಎಂದು ಕಳೆದ ಬಾರಿ ನಡೆದ ನಾಮಿನೇಷನ್ ಪ್ರಕ್ರಿಯೆಯನ್ನು ಇಲ್ಲೂ ಕೂಡ ತನಿಷಾ ಕ್ಯಾರಿ ಮಾಡಿದ್ದಾರೆ. ತನಿಷಾ ಆಡಿದ ಮಾತುಗಳು ಕಾರ್ತಿಕ್‌ಗೆ ಬೇಸರ ತರಿಸಿದೆ. ಯಾಕೆಂದರೆ ನೆನ್ನೆ ಸುದೀಪ್ ಮುಂದೆ ಸಂಗೀತಾ ಕೂಡ ನಾನು ಕಾರ್ತಿಕ್ ಅವರ ಜೊತೆಗೆ ಫ್ರೆಂಡ್ಶಿಪ್ ಮುರಿದುಕೊಳ್ಳುತ್ತೇನೆ ಎಂದಿದ್ದರು.

ಕಾರ್ತಿಕ್ ನಾಮಿನೇಟ್ ಮಾಡಿದ ತುಕಾಲಿ, ಪ್ರತಾಪ್ ಬಗ್ಗೆ ಕಿಡಿ ಕಾರಿದ ಸಂಗೀತಾ
ಪ್ರತಾಪ್ ಸಂಗೀತಾ ಮೇಲೆ ಒಳ್ಳೆಯ ಅಭಿಪ್ರಾಯವನ್ನು ಇಟ್ಟುಕೊಂಡಿದ್ದರು. ಸಂಗೀತಾ ಕೂಡ ಅಷ್ಟೇ ತಮ್ಮ ತಮ್ಮ ಎಂದುಕೊಂಡೆ ಸಪೋರ್ಟ್ ಮಾಡುತ್ತಾ ಬಂದಿದ್ದರು. ಆದರೆ ಕಳೆದ ಬಾರಿ ಸಂಗೀತಾ ಅವರನ್ನು ಆಟದಿಂದ ಹೊರಗಿಟ್ಟಾಗ ಪ್ರತಾಪ್ ಮೇಲಿನ ಅಭಿಪ್ರಾಯ ಬದಲಾಗಿ ಹೋಗಿದೆ. ಇನ್ಮುಂದೆ ನಾನು ಪ್ರತಾಪ್‌ಗೆ ಸಪೋರ್ಟ್ ಮಾಡೋದಿಲ್ಲ ಎಂದೇ ಸಂಗೀತಾ ಹೇಳಿದ್ದರು. ಈಗ ಅದೇ ರೀತಿ ನಡೆದುಕೊಳ್ಳುತ್ತಿದ್ದು ನಾಮಿನೇಷನ್ ಪ್ರಕ್ರಿಯೆಯಲ್ಲಿ ಪ್ರತಾಪ್ ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ.
ತುಕಾಲಿ ಸಂತೋಷ್ ಕಳೆದ ಬಾರಿಯೂ ಕೂಡ ಕಾರ್ತಿಕ್ ಹೆಸರನ್ನೇ ತೆಗೆದುಕೊಂಡಿದ್ದರು. ಈಗಲೂ ಕೂಡ ಕಾರ್ತಿಕ್ ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಬಿಗ್ ಬಾಸ್ ಮನೆಯಲ್ಲಿರುವ ಎಂಟು ಮಂದಿ ಸದಸ್ಯರಲ್ಲಿ ಈ ವಾರ ಯಾರು ನಾಮಿನೇಟ್ ಆಗುತ್ತಾರೆ ಎಂಬುದು ಸಂಜೆ ತಿಳಿಯಲಿದೆ.


Click it and Unblock the Notifications











