ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕಾರ್ತಿಕ್-ವಿನಯ್ ಹೈಡ್ರಾಮಾ..! ಪಂಚಾಯಿತಿ ಕಟ್ಟೆ ಏರುತ್ತಾ ದೋಸ್ತಿಗಳ ಫೈಟ್?
ಒಂದು ವಾರದಿಂದಲೂ ವಿನಯ್ ಹಾಗೂ ಕಾರ್ತಿಕ್ ಇಬ್ಬರು ಬಹಳ ಚೆನ್ನಾಗಿಯೇ ಇದ್ದರು. ಚೆನ್ನಾಗಿ ಆಟವಾಡಿದರು. ಆದರೆ ಇದರ ಮಧ್ಯೆ ವಿನಯ್ ಕಾರ್ತಿಕ್ ಹಾಗೂ ಸಂಗೀತಾದು ಫೇಕ್ ರೋಮ್ಯಾನ್ಸ್ ಎಂದೆಲ್ಲ ಮಾತನಾಡಿದರು. ಆದರೂ ಕೂಡ ಕಾರ್ತಿಕ್ ಏನು ಗೊತ್ತಿಲ್ಲದಂತೆ ಇದ್ದರು.
ಇದಕ್ಕೂ ಮೊದಲು ಸಂಗೀತಾ ವಿನಯ್ ಟೀಮ್ ಗೆ ಬಂದಾಗ ನಾನಂತೂ ಸಂಗೀತಾ ಹಾಗೂ ಕಾರ್ತಿಕ್ ನಡುವೆ ಹುಳಿ ಹಿಂಡುವ ಕೆಲಸವನ್ನ ಮಾಡುತ್ತೇನೆ ಎಂದು ವಿನಯ್ ಅಂದಿದ್ದರು. ಇದಕ್ಕೆ ಸಾಕ್ಷಿಯಾಗಿ ನಮ್ರತಾ ಹಾಗೂ ಸ್ನೇಹಿತ ಇದ್ದರು. ಆದರೆ ಅದೇ ಕೆಲಸವನ್ನು ಈಗ ವಿನಯ್ ಮಾಡಲು ಹೊರಟಂತೆ ಕಾಣುತ್ತಿದೆ. ಯಾವುದಾದರೂ ಒಂದು ಸಣ್ಣ ವಿಚಾರವನ್ನೇ ಇಟ್ಟುಕೊಂಡು ಬಿಗ್ ಬಾಸ್ ಮನೆಯಲ್ಲಿ ದೋಸ್ತಿಗಳು ಕಚ್ಚಾಟವನ್ನು ಮಾಡುತ್ತಿದ್ದಾರೆ.

ಫೇಕ್ ಲವ್.. ಫೇಕ್ ರೋಮ್ಯಾನ್ಸ್... ಎಂಬ ಮಾತು ಮುಗಿದಿತ್ತು. ಆದರೆ. ಇಂದು ಕೂಡ 'ಒಂದು ಜೋಡಿ ಇದೆ ಆ ಜೋಡಿಯನ್ನು ನೋಡಲು ತುಂಬಾ ಖುಷಿ ಆದರೆ ಆ ಜೋಡಿ ಡುಬಾಕ್ ಜೋಡಿ' ಎಂದು ವಿನಯ್ ಹೇಳಿದ್ದಾರೆ ಈ ಮಾತು ಕಾರ್ತಿಕ್ ಕಿವಿಗೆ ಬಿದ್ದಿದೆ.
ಈ ಒಂದೇ ಮಾತು ಇಡೀ ಬಿಗ್ ಬಾಸ್ ಮನೆಯ ವಾತಾವರಣವನ್ನೇ ಹದಗೆಡಿಸಿ ಬಿಟ್ಟಿದೆ. ಜೋರಾಗಿ ವಿನಯ್ ಹಾಗೂ ಕಾರ್ತಿಕ್ ಇಬ್ಬರು ಮತ್ತೊಮ್ಮೆ ಕಿತ್ತಾಡಿಕೊಂಡಿದ್ದಾರೆ. ಇವರಿಬ್ಬರು ಚೆನ್ನಾಗಿ ಇದ್ದರೆ ಇಡೀ ಮನೆ ಶಾಂತವಾಗಿ ಇರುತ್ತದೆ. ಇವರು ಯಾವಾಗ ಕಿತ್ತಾಡಲು ಶುರು ಮಾಡುತ್ತಾರೋ ಆಗ ಮತ್ತಷ್ಟು ದುಷ್ಮನಿ ಬೆಳೆಯುತ್ತದೆ. ಆದರೆ ವಿನಯ್ ಗೆ ಕಾರ್ತಿಕ್ ಮೇಲೆ ಆಗಾಗ ಕೋಪ ಬರುತ್ತದೆ ಅದಕ್ಕಾಗಿ ಒಂದಲ್ಲ ಒಂದು ಕಿತಾಪತಿ ತೆಗೆದು ಇಬ್ಬರೂ ಕೂಡ ಜಗಳವಾಡುತ್ತಾರೆ.
ವಿನಯ್‌ಗೆ ಸಂಗೀತಾ ಕಾರ್ತಿಕ್ ಜೊತೆ ಇರುವುದು ಇಷ್ಟವಾಗುವುದಿಲ್ಲ. ಅವರ ಟೀಮ್‌ನಲ್ಲಿ ಇದ್ದಾಗಲೂ ಕೂಡ ವಿನಯ್ ಸಂಗೀತಾ ಇನ್ನೆರಡು ದಿನಗಳಲ್ಲಿ ಕಾರ್ತಿಕ್ ಟೀಂನ್ನು ಸೇರುತ್ತಾಳೆ ಎಂದು ಹೇಳಿದ್ದರು. ಇದೇ ವೇಳೆ ಕಿಚ್ಚ ಸುದೀಪ್ ಈಗ ಸಂಗೀತಾ ನಿಮ್ಮ ಟೀಮ್‌ಗೆ ಬಂದಿರುವುದು ಹೇಗೆ ಅನಿಸುತ್ತಿದೆ ಎಂದು ಕೇಳಿದಾಗಲೂ ಕೂಡ ಇನ್ನೆರಡು ದಿನಗಳಲ್ಲಿ ಅವರಿಬ್ಬರು ಸರಿ ಹೋಗುತ್ತಾರೆ.
ಚೆನ್ನಾಗಿ ಇರುತ್ತಾರೆ ಎಂದಿದ್ದರು. ಸಂಗೀತಾ ಹಾಗೂ ಕಾರ್ತಿಕ್ ಇಬ್ಬರು ಮತ್ತೊಮ್ಮೆ ಮಾತನಾಡಲು ಶುರು ಮಾಡಿದ ಮೇಲೆ ನಾನು ಹೇಳಿದ್ದೆ ಆಯಿತು ನೋಡಿದ್ಯಾ ಎಂದು ತುಕಾಲಿ ಸಂತೋಷ್ ಬಳಿ ಹೇಳಿದ್ದರು. ಮನೆಯಲ್ಲಿ ಆಗಾಗ ಬಕ್ರಾ ಕಾರ್ಯಕ್ರಮ ನಡೆಯುತ್ತಾ ಇರುತ್ತದೆ ನೋಡುವವರು ಬಕ್ರಗಳಾಗುತ್ತಾರೆ ಎಂದಿದ್ದರು.

ಕಾರ್ತಿಕ್-ವಿನಯ್ ನಡುವೆ ಫೈಟ್
ವಿನಯ್ ಆ ಮಾತು ಹೇಳದೆ ಸುಮ್ಮನೆ ಇದ್ದಿದ್ದರೆ ಬಿಗ್ ಬಾಸ್ ಮನೆ ಶಾಂತವಾಗಿ ಇರುತ್ತಿತ್ತು. ನನಗೆ ಒಂದು ಜೋಡಿ ಖುಷಿ ಕೊಡುತ್ತಿದೆ ಅದು ತೆರೆಯ ಮೇಲಿರುವ ಡುಬಾಕ್ ಜೋಡಿ ಎಂಬ ಮಾತನ್ನು ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದಾರೆ. ಈ ಮಾತು ಕಾರ್ತಿಕ್ ಹಾಗೂ ಸಂಗೀತಾ ಕಿವಿಗೂ ಬಿದ್ದಿದೆ. ಕಾರ್ತಿಕ್ ಇದೇ ವೇಳೆ ಯಾರದು ಡುಬಾಕ್ ಜೋಡಿ ಎಂದು ಕೇಳಿದ್ದಾರೆ. ವಿನಯ್ ಇದೇ ವೇಳೆ ನಾವು ಏನನ್ನು ಮಾತನಾಡಿಕೊಳ್ಳುತ್ತೇವೆ ಅದೆಲ್ಲವನ್ನು ನಿನಗೆ ಹೇಳಿ ಮಾತನಾಡಬೇಕಾ ಎಂದು ಜೋರಾಗಿ ಕಿರುಚಾಟ ನಡೆಸಿದ್ದಾರೆ. ಇದಕ್ಕೆ ಕಾರ್ತಿಕ್ ನಾನು ನನ್ನ ಫ್ರೆಂಡ್ಸ್‌ಗೆ ಬೌಂಡರಿ ಕೊಟ್ಟಿರುತ್ತೇನೆ ಎಂದು ಹೇಳಿದ್ದಾರೆ.
ನೀನು ಯಾವ ಫ್ರೆಂಡ್..? ನಿನಗೆ ನನ್ನ ಮುಂದೆ ನಿಂತು ಮಾತನಾಡುವ ಯೋಗ್ಯತೆ ಇಲ್ಲ ಎಂದು ಬಹಳ ಕೋಪದಿಂದ ವಿನಯ್ ಕಾರ್ತಿಕ್‌ಗೆ ಅಂದಿದ್ದಾರೆ. ವಿನಯ್ ಆಡಿದ ಪ್ರತಿ ಮಾತು ಇಬ್ಬರ ಮನಸ್ತಾಪ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಕಾರ್ತಿಕ್ ಇಂತಹ ವ್ಯಕ್ತಿಗಳ ಜೊತೆಗೆ ನನಗೆ ಇರೋದ್ದಕ್ಕು ಇಷ್ಟವಿಲ್ಲ ಎಂದಾಗ ವಿನಯ್ ಇಂತಹ ಚಿಲ್ಲರೆ ಮನುಷ್ಯರನ್ನು ನನ್ನ ಹತ್ತಿರಕ್ಕೂ ಸೇರಿಸೋದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ತನಿಷಾ ವಿನಯ್‌ರನ್ನು ಸುಮ್ಮನೆ ಇರಿ ಎಂದು ಹೇಳಿದ್ದಾರೆ.
ಪಂಚಾಯ್ತಿ ಮೆಟ್ಟಿಲು ಏರುತ್ತಾ ಫೈಟ್?
ಇಂದು ಕಿಚ್ಚ ಸುದೀಪ್ ಅವರು ವಾರದ ಕಥೆ ಕಿಚ್ಚನ ಜೊತೆ ನಡೆಸಿಕೊಡುತ್ತಾರೆ. ಈ ದೋಸ್ತಿಗಳು ಹಾಗಾಗ ಕಿತ್ತಾಡುತ್ತಿರುವುದಕ್ಕೆ ಬುದ್ದಿಯನ್ನು ಹೇಳಿದ್ದಾರೆ. ವಿನಯ್‌ಗೂ ಸಹ ಸಾಕಷ್ಟು ಬುದ್ದಿ ಹೇಳಿದ್ದರು. ಆದರೆ ವಿನಯ್ ಒಂದು ವಾರ ಬದಲಾದಂತೆ ಕಂಡರೆ ಮತ್ತೊಂದು ವಾರ ಕೋಪದಿಂದ ಕೂಗಾಡುತ್ತಾರೆ. ಈ ವಾರ ಕಿಚ್ಚನ ಪಂಚಾಯ್ತಿಯಲ್ಲಿ ದೋಸ್ತಿಗಳ ಫೈಟ್‌ಗೆ ಸುದೀಪ್ ಎನು ಹೇಳುತ್ತಾರೋ ಕಾದು ನೋಡಬೇಕಾಗಿದೆ.


Click it and Unblock the Notifications











