BBK10:'ರಾಕ್ಷಸ ಗಣ'ದ ಕೈಯಲ್ಲಿ ಸಿಲುಕಿ ಒದ್ದಾಡಿದ 'ಗಂಧರ್ವರು.. ವಿನಯ್ ಹಿಂದೆ ಬಿದ್ದ ಸಂಗೀತಾ, ಕಾರ್ತಿಕ್!
ಬಿಗ್ ಬಾಸ್ ಮನೆಯಲ್ಲಿ ಮನರಂಜನೆಗಾಗಿಯೂ ಟಾಸ್ಕ್‌ಗಳನ್ನು ನೀಡುತ್ತಾರೆ. ಟಾಸ್ಕ್‌ಗಳ ನೆಪದಲ್ಲಿ ಮನೆಯ ವಾತಾವರಣವೇ ಆಗಾಗ ಬದಲಾಗಿ ಬಿಡುತ್ತದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಹಳ್ಳಿಯ ವಾತಾವತಣವನ್ನು ನಿರ್ಮಾಣ ಮಾಡಲಾಗಿತ್ತು. ಹಳ್ಳಿಯಲ್ಲಿ ಬದುಕುವಂತೆ ಬಿಗ್ ಬಾಸ್ ಮನೆ ಸದಸ್ಯರು ಬದುಕುವುದಕ್ಕೆ ಆಜ್ಞೆ ಮಾಡಲಾಗಿತ್ತು. ಅಡುಗೆ, ಜೀವನ ಎಲ್ಲವೂ ಹಳ್ಳಿಯಂತೆಯೇ ಇತ್ತು. ಅದರ ನಡುವೆ ಟಾಸ್ಕ್‌ಗಳನ್ನು ನೀಡಲಾಗಿತ್ತು.
ಇದೀಗ ಈ ವಾರ ಬೇರೆಯದ್ದೇ ವಾತಾವರಣ ನಿರ್ಮಾಣವಾಗಿದೆ. ಅದುವೇ ಗಂಧರ್ವ ಹಾಗೂ ರಾಕ್ಷಸರು ಇರುವ ಲೋಕವನ್ನೇ ಸೃಷ್ಟಿ ಮಾಡಿದೆ. ಎರಡು ತಂಡಗಳನ್ನಾಗಿ ಮಾಡಿ, ಹೊಸ ಟಾಸ್ಕ್‌ಗಳನ್ನು ನೀಡಲಾಗಿದೆ. ಟಾಸ್ಕ್ ನೆಪದಲ್ಲಿ ಕೆಲವರು ರೀವೆಂಜ್ ತೀರಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ.

ರಾಕ್ಷಸರ ಕೈಯಲ್ಲಿ ಸಿಲುಕಿದ ಗಂಧರ್ವರು
ಬಿಗ್ ಬಾಸ್ ಮನೆಯಲ್ಲಿ ಈಗ ಎಲ್ಲವೂ ಬದಲಾಗಿದೆ. ಅರ್ಧ ಜನ ರಾಕ್ಷಸರು ಹಾಗೂ ಇನ್ನರ್ಧ ಜನ ಗಂಧರ್ವರಾಗಿ ಬದಲಾಗಿದ್ದಾರೆ. ರಾಕ್ಷಸರು ಎಂದರೆ ಕಥೆ - ಪುರಾಣಗಳಲ್ಲಿ ಓದಿರುವ ನೆನಪು ಇದೆಯಲ್ಲ. ಎಲ್ಲರನ್ನು ಹಿಂಸಿಸುವುದೇ ರಾಕ್ಷಸರ ಗುಣವಾಗಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿರುವ ರಾಕ್ಷಸರು ಕೂಡ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಗಂಧರ್ವರನ್ನು ಹಿಂಸಿಸುವುದಕ್ಕೆ ಹೊರಟಿದ್ದಾರೆ.
ರಾಕ್ಷಸರಾಗಿ ಕಾಣಿಸಿಕೊಂಡ ಕಾರ್ತಿಕ್
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್‌ಗಳು ಕೊಟ್ಟಾಗ ಕೆಲವೊಂದು ಸಲ ವೈಯಕ್ತಿಕ ರಿವೇಂಜ್‌ಗಳು ಇರುತ್ತವೆ. ಈ ಟಾಸ್ಕ್‌ನಲ್ಲಿಯೂ ವೈಯಕ್ತಿಕ ರಿವೇಂಜ್‌ಗಳು ಶುರುವಾಗಿರುವಂತೆ ಕಾಣುತ್ತದೆ. ರಾಕ್ಷರಾಗಿ ಕಾರ್ತಿಕ್, ಸಂಗೀತಾ, ತನಿಶಾ, ಅವಿನಾಶ್, ಪ್ರತಾಪ್, ಸಿರಿ ಇದ್ದಾರೆ. ಗಂಧರ್ವರ ತಂಡದಲ್ಲಿ ನಮ್ರತಾ, ವಿನಯ್, ವರ್ತೂರು ಸಂತೋಷ್, ಮೈಕಲ್, ಪವಿ, ತುಕಾಲಿ ಸಂತೋಷ್ ಇದ್ದಾರೆ. ರಾಕ್ಷಸರಾದವರು ಗಂಧರ್ವರ ಬಟ್ಟೆಗಳನ್ನೆಲ್ಲಾ ಹರಡಿ, ಅದರ ಮೇಲೆಯೇ ಉರುಳಾಡಿದ್ದಾರೆ.

ಆನೆ ಕಂಡು ವಿನಯ್ ಹೇಳಿದ್ದೇನು..?
ಎಷ್ಟು ಹಿಂಸೆ ಕೊಡಬೇಕೋ ಅಷ್ಟು ಹಿಂಸೆಯನ್ನು ರಾಕ್ಷಸರು ಗಂಧರ್ವರಿಗೆ ನೀಡಿದ್ದಾರೆ. ಈ ವೇಳೆ ಆನೆಯನ್ನು ವಿನಯ್ ಮುಂದೆಯೇ ಕುಳಿತುಕೊಂಡು ಡಸ್ಟ್ ಬಿನ್‌ಗೆ ಹಾಕಿದ್ದಾರೆ. ಅಷ್ಟೇ ಅಲ್ಲ ಸಂಗೀತಾ, ವಿನಯ್ ಅವರನ್ನು ಪ್ರಾಣಿಯಂತೆ ಟ್ರೀಟ್ ಮಾಡಿದ್ದಾರೆ. ಕಪ್ಪೆಯಂತೆ ಜಿಗಿದು, ಸಂಗೀತಾರ ಹಿಂದೆ ಹಿಂದೆ ಬರಬೇಕು. ಇದೆಲ್ಲವನ್ನು ವಿನಯ್ ಮಾಡಿದ್ದಾರೆ. ಸಂಗೀತಾ ಹೇಳಿದಾಗ, ಹೌದು ನಾನು ದಡ್ಡ ಎಂದೇ ಒಪ್ಪಿಕೊಂಡಿದ್ದಾರೆ. ಆನೆಯನ್ನು ಡಸ್ಟ್ ಬಿನ್‌ಗೆ ಹಾಕಿದಾಗ, ನಾನು ಪಾತ್ರದಿಂದ ಹೊರಗೆ ಬಂದರೆ ಅದರ ಕಥೆಯೇ ಬೇರೆ. ಅವರನ್ನು ಈಗ ನೋಡಿದರೇನೆ ಅಯ್ಯೋ ಎನಿಸುತ್ತದೆ ಎಂದಿದ್ದಾರೆ.
ಈ ಹಿಂದೆಯೂ ನೀಡಿದ್ದರು ಇದೇ ಟಾಸ್ಕ್
ಬಿಗ್ ಬಾಸ್‌ನಲ್ಲಿ ಎಲ್ಲವೂ ಹೊಸ ಟಾಸ್ಕ್‌ಗಳನ್ನೇ ನೀಡಲಾಗುತ್ತದೆ. ಹಳೆಯ ಟಾಸ್ಕ್‌ಗಳು ರಿಪೀಟ್ ಆಗುವುದು ತೀರಾ ಕಡಿಮೆ. ಆದರೆ, ಈ ಬಾರಿ ಸೀಸನ್ 7ರಲ್ಲಿ ನೀಡಿದ್ದ ರಾಕ್ಷಸರು ಹಾಗೂ ಗಂಧರ್ವರ ಟಾಸ್ಕ್ ಅನ್ನೇ ನೀಡಲಾಗಿದೆ. ಈ ಬಾರಿಯೂ ಈ ಟಾಸ್ಕ್ ನೀಡಿದ್ದು, ಈ ವಾರಪೂರ್ತಿ ಮನೆಯೊಳಗೆ ಗಂಧರ್ವರು ಹಾಗೂ ರಾಕ್ಷಸರು ಇರಲಿದ್ದಾರೆ. ಆದರೆ, ಸ್ವಲ್ಪ ದಿನದಲ್ಲಿಯೇ ಪಾತ್ರಗಳು ಉಲ್ಟಾ ಆಗಲಿವೆ. ಸೀಸನ್ 7ರಲ್ಲಿಯೂ ಇದೇ ಆಗಿತ್ತು.


Click it and Unblock the Notifications











