BBK10: ನೋ ಮಿಡ್ ನೈಟ್ ಎಲಿಮಿನೇಷನ್;6 ಮಂದಿಯೂ ಫಿನಾಲೆಗೆ.. ಕಿಚ್ಚ ಸುದೀಪ್ ಸ್ಪೆಷಲ್ ಗಿಫ್ಟ್!
ಬಿಗ್ ಬಾಸ್ ಸೀಸನ್ 10.. ಒಂಭತ್ತು ಸೀಸನ್‌ಗಳು ಒಂದೇ ರೀತಿಯಲ್ಲಿ ನಡೆದಿದೆ. ಟಾಸ್ಕ್‌ಗಳು ಚೇಂಜ್ ಇರಬಹುದು, ಸದಸ್ಯರು ಚೇಂಜ್ ಇರಬಹುದು. ಆದರೆ, ಫಿನಾಲೆ ತಲುಪಿದ್ದು ಐದೇ ಜನ. ಗೆದ್ದಿದ್ದು ಒಬ್ಬರೇ. ಆದರೆ, ಈ ಬಾರಿಯ ಸೀಸನ್‌ನಲ್ಲಿ ಕಿಚ್ಚ ಸುದೀಪ್ ಕಡೆಯಿಂದ ಇಡೀ ಮನೆಗೆ ಸ್ಪೆಷಲ್ ಉಡುಗೊರೆ ಸಿಕ್ಕಿದೆ.
ಸೀಸನ್ ಹತ್ತು ದಾಖಲೆಯನ್ನೇ ಮಾಡಿದೆ ಎಂದರೆ ತಪ್ಪಾಗಲಾರದು. ಟಾಸ್ಕ್‌ಗಳಲ್ಲಿ, ದುಬಾರಿ ಬಜೆಟ್‌ನಲ್ಲಿ, ಅದರಲ್ಲೂ ರೂಲ್ಸ್ ಬ್ರೇಕ್ ಮಾಡುವ ವಿಚಾರದಲ್ಲೂ ದಾಖಲೆಯನ್ನೆ ಬರೆದಿದೆ. ಹತ್ತನೇ ಸೀಸನ್‌ನಲ್ಲಿ ಹತ್ತತ್ತು ಅದ್ಭುಗಳೇ ಕಂಡಿದೆ. ಹೀಗಿರುವಾಗ ವಿಶೇಷ ಉಡುಗೊರೆ ಇಲ್ಲದೆ ಹೋದರೆ ಹೇಗೆ..? ಹೀಗಾಗಿ ಕಿಚ್ಚನಿಂದ ಮಿಡ್ ನೈಟ್ ಎಲಿಮಿನೇಷನ್ ಕ್ಯಾನ್ಸಲ್ ಆಗಿದೆ.

ಮಿಡ್ ನೈಟ್ ಎಲಿಮಿನೇಟ್ ಆದ ಪ್ರತಾಪ್
ಇನ್ನು ಎರಡು ದಿನ ಕಳೆದರೆ ಬಿಗ್ ಬಾಸ್ ಸದಸ್ಯರು ಫಿನಾಲೆ ವೇದಿಕೆ ಮೇಲೆ ನಿಂತಿರುತ್ತಾರೆ. ಆದರೆ, ಪ್ರತಿ ಸೀಸನ್‌ನಲ್ಲೂ ಐವರು ಸದಸ್ಯರು ಮಾತ್ರ ಫಿನಾಲೆ ವೇದಿಕೆ ಪ್ರವೇಶ ಮಾಡುತ್ತಿದ್ದರು. ಹೆಚ್ಚು ಜನ ಉಳಿದುಕೊಂಡರೆ ಮಿಡ್ ನೈಟ್ ಎಲಿಮಿನೇಷನ್ ಮಾಡಲಾಗುತ್ತಿತ್ತು. ಕಳೆದ ವಾರ ನಮ್ರತಾ ಮನೆಗೆ ಹೋದಾಗಲು ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದ್ದರು. ಆರು ಜನರಲ್ಲಿ ಯಾರೂ ಬೇಕಾದರೂ ಮಿಡ್ ನೈಟ್ ನಲ್ಲಿ ಎಲಿಮಿನೇಟ್ ಆಗಬಹುದು ಎಂದು. ಇಂದು ಬಿಗ್ ಬಾಸ್ ಇದ್ದಕ್ಕಿದ್ದ ಹಾಗೇ ಪ್ರತಾಪ್ ಔಟ್ ಎಂದು ಘೋಷಣೆ ಮಾಡಿದ್ದರು.
ಸಂಗೀತಾ ಕಣ್ಣಲ್ಲಿ ಧಾರಾಕಾರ ನೀರು
ಪ್ರತಾಪ್ ಮತ್ತು ಸಂಗೀತಾ ಮನೆಯಲ್ಲಿ ಎಷ್ಟು ಆತ್ಮೀಯರಾಗಿದ್ದಾರೆ ಎಂಬುದು ಹೇಳಬೇಕಿಲ್ಲ. ಫಿನಾಲೆಗೆ ಈಗಾಗಲೇ ಸಂಗೀತಾ ತಲುಪಿ ಆಗಿದೆ. ಜೊತೆಗೆ ಯಾರು ಬರಬೇಕು ಎಂದರೆ ಪ್ರತಾಪ್ ಅಂತಾನೆ ಹೇಳುತ್ತಾರೆ. ಇಂಥ ತಮ್ಮ ಮನೆಯಿಂದ ಹೊರ ಹೋಗುತ್ತಿರುವುದನ್ನು ಸಂಗೀತಾ ಸಹಿಸಿಕೊಳ್ಳಲು ಆಗಲಿಲ್ಲ.ಕಣ್ಣೀರು ಹಾಕಿದ್ದಾರೆ. ದೀದಿಯ ಕಣ್ಣೀರು ಕಂಡ ಪ್ರತಾಪ್ ತಾನೂ ಜೋರಾಗಿ ಅತ್ತಿದ್ದಾನೆ. ಮನೆಯವರಿಗೆಲ್ಲರಿಗೂ ಈ ಎಲಿಮಿನೇಷನ್ ಖಂಡಿತ ಶಾಕ್ ಎನಿಸಿದೆ.
ಪ್ರತಾಪ್ ಹೆಸರು ಕೇಳಿ ನೆಟ್ಟಿಗರು ಕಂಗಾಲು
ಆರಂಭದಿಂದ ಒಂದಷ್ಟು ಕುಗ್ಗಿದ್ದ ಪ್ರತಾಪ್‌ಗೆ ಕಿಚ್ಚ ಸುದೀಪ್ ಧೈರ್ಯ ತುಂಬಿದ್ದರು. ಬೂಸ್ಟ್ ಮಾಡಿದ್ದರು. ಮನೆಯವರು ಮನಸ್ಸು ನೋಯಿಸಿದ್ದಕ್ಕೆ ಕಣ್ಣೀರು ಹಾಕುತ್ತಿದ್ದನ್ನು ಬಿಟ್ಟರೆ ಪ್ರತಾಪ್ ಆಟದಲ್ಲಿ ಹಿಂದೆ ಉಳಿದವರಲ್ಲ. ಫಿನಾಲೆಗೆ ಪ್ರತಾಪ್ ಬರುತ್ತಾರೆ ಎಂದೇ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಟ್ರೆಂಡ್ ಆಗುತ್ತಿದೆ. ಹೀಗಿರುವಾಗ ಮಿಡ್ ನೈಟ್ ಎಲಿಮಿನೇಷನ್ ಲಿಸ್ಟ್‌ನಲ್ಲಿ ಪ್ರತಾಪ್ ಇದಾನೆ ಎಂಬುದೇ ನೋಡುಗರಿಗೂ ಶಾಕ್ ಆಗಿದೆ. ಪ್ರತಾಪ್ ಔಟ್ ಆದ್ರಾ ಎಂಬ ಆಶ್ಚರ್ಯದಿಂದ, ದುಃಖದಿಂದ ನೋಡಿದವರೇ ಹೆಚ್ಚಾಗಿದ್ದಾರೆ.
ಕಿಚ್ಚನಿಂದ ಸಿಕ್ತು ಉಡುಗೊರೆ
ಈ ಸೀಸನ್‌ನಲ್ಲಿ ಹಲವು ಬಾರಿ ಎಲಿಮಿನೇಷನ್ ಪ್ರಕ್ರಿಯೆ ಕ್ಯಾನ್ಸಲ್ ಆಗಿದೆ. ಕೆಲವೊಂದು ಸಲ ಪರಿಸ್ಥಿತಿ, ಮನೆಯ ವಾತಾವರಣ, ಇನ್ನು ಕೆಲವೊಂದು ಸಲ ಬಿಗ್ ಬಾಸ್ ಕಡೆಯಿಂದ ಸಿಕ್ಕ ಉಡುಗೊರೆಯಾಗಿ ಔಟ್ ಆಗಬೇಕಾದವರು ಉಳಿದುಕೊಂಡಿದ್ದಾರೆ. ಈಗ ಮಿಡ್ ನೈಟ್ ಎಲಿಮಿನೇಷನ್ ಅಂತ ಪ್ರತಾಪ್ ಹೆಸರು ತೆಗೆದುಕೊಂಡ ಬಿಗ್ ಬಾಸ್, ಸಪ್ರೈಸ್ ನೀಡಿದೆ. ಬಾಗಿಲು ಓಪನ್ ಮಾಡದೆ, ಲೆಟರ್ ಓದಲು ಸೂಚಿಸಿದೆ. ಆ ಲೆಟರ್‌ನಲ್ಲಿ 'ಈ ವಾರ ಮಿಡ್ ನೈಟ್ ಎಲಿಮಿನೇಷನ್ ಇಲ್ಲ. ಆರು ಜನ ಫಿನಾಲೆಗೆ ಹೋಗುತ್ತಾ ಇದ್ದೀರಾ. ಇದು ಸುದೀಪ್ ಅವರ ಉಡುಗೊರೆ' ಎಂದು ಬರೆಯಲಾಗಿದೆ.


Click it and Unblock the Notifications











