BBK10: ಹೀರೋ ಆದವ್ರು ವಿಲನ್ ಆದ್ರು.. ವಿಲನ್ ಆದ್ರು ಹೀರೋ ಆದ್ರು .. ಕಿಚ್ಚ ಪ್ರಶ್ನೆಗೆ ಸಂಗೀತಾ ಏನಂದ್ರು?
ಬಿಗ್ ಬಾಸ್ ಸೀಸನ್ 10ರಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಅದರಲ್ಲೂ ಇನ್ನು 50 ದಿನ ಕಳೆದಿಲ್ಲ. ಅಷ್ಟರಲ್ಲಿಯೇ ಯೋಚನೆಗೂ ನಿಲುಕದಷ್ಟು ಬದಲಾವಣೆಗಳು ಸಂಭವಿಸಿವೆ. ಈ ಸೀಸನ್ ಒಂದು ರೀತಿಯಲ್ಲಿ ವಿಭಿನ್ನವಾಗಿ ಕಾಣುತ್ತದೆ. ಒಂಬತ್ತು ಸೀಸನ್‌ಗಳು ಬೇರೆಯದ್ದೇ ರೀತಿ ಕಂಡಿತ್ತು. ಆದರೆ, ಈ ಸೀಸನ್ ಅದೆಲ್ಲದ್ದಕ್ಕೂ ವಿಭಿನ್ನವಾಗಿ ಕಾಣುತ್ತಿದೆ.
ಇವತ್ತಿನ ದಿನಕ್ಕಾಗಿ ಬಿಗ್ ಬಾಸ್ ಪ್ರೇಕ್ಷಕರು ಕಾಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕಾನ್ಸೆಪ್ಟ್ ಬಗ್ಗೆ ಮಾತನಾಡಿ ಎಂದು ಮನವಿ ಕೂಡ ಮಾಡಿದ್ದಾರೆ. ಸದ್ಯಕ್ಕೆ ಕಲರ್ಸ್ ಕನ್ನಡದ ಸೋಷಿಯಲ್ ಮೀಡಿಯಾದಲ್ಲಿ ಬಿಟ್ಟಿರುವ ಪ್ರೋಮೋದಲ್ಲಿ ಕಿಚ್ಚ, ಹೊಸ ಫ್ರೆಂಡ್‌ಶಿಪ್ ಹಾಗೂ ಹಳೆ ಫ್ರೆಂಡ್‌ಶಿಪ್ ಬಗ್ಗೆ ಚರ್ಚೆ ಮಾಡುವ ಸೂಚನೆ ನೀಡಿದ್ದಾರೆ.

ಮನೆಯ ಸದಸ್ಯರಿಂದ ಪದೇ ಪದೆ ತಪ್ಪು
ಮನೆಯ ಸದಸ್ಯರು ತಪ್ಪು ಮಾಡುತ್ತಿದ್ದರು, ಗಾಸಿಪ್ ಮಾಡುತ್ತಿದ್ದರು. ಆದರೆ, ಪದೇ ಪದೆ ಒಂದೇ ತಪ್ಪನ್ನು ಮಾಡುತ್ತಿರಲಿಲ್ಲ. ಈ ಸೀಸನ್‌ನಲ್ಲಿ ಏನು ಆಗುತ್ತಿದೆ ಎಂಬುದೇ ನೋಡುಗರಿಗೂ ಚಿಂತೆ. ಲಕ್ಸುರಿ ಬಜೆಟ್ ಸರಿಯಾಗಿ ಆಡುತ್ತಿಲ್ಲ. ಕಳಪೆ ಮತ್ತು ಉತ್ತಮ ಕೊಡಬೇಕಾದವರಿಗೆ ಕೊಡುತ್ತಿಲ್ಲ. ಆಟದಲ್ಲಿ ಮಾಡಿದ ಗುಂಪಲ್ಲೇ ನಿರ್ಧಾರಗಳು ನಡೆಯುತ್ತಿವೆ. ಬಿಗ್ ಬಾಸ್ ಕೊನೆಯಲ್ಲಿ ಗೆಲ್ಲುವುದು ಒಬ್ಬರೆ ಎಂದು ಗೊತ್ತಿದ್ದರು. ಒಂದು ಗುಂಪಿನ ಎಲ್ಲರೂ ಸೇರಿ, ವಿನಯ್ ಪರವಾಗಿ ನಿಲ್ಲುತ್ತಿದ್ದಾರೆ. ಈ ತಪ್ಪನ್ನು ಕಿಚ್ಚ ಮೊದಲೇ ಹೇಳಿ ಎಚ್ಚರಿಸಿದ್ದಾರೆ ಕೂಡ.
ಸಂಗೀತಾಗೆ ಬುದ್ದಿ ಹೇಳುತ್ತಾರಾ ಕಿಚ್ಚ?
ಈ ಬಾರಿಯ ಸೀಸನ್‌ನಲ್ಲಿ ತಪ್ಪು ಎಂದರೂ ಅದನ್ನೇ ಮಾಡುತ್ತಿದ್ದಾರೆ. ಜೈಲಿಗೆ ಹಾಕಿದರೆ ವರ್ತೂರು ಸಂತೋಷ್ ನಿಯಮವನ್ನೇ ಮುರಿದು ಹೊರಗೆ ಬಂದಿದ್ದಾರೆ. ವಿನಯ್ ಅಂಡ್ ಟೀಂ ಕದ್ದು ಹಾಲು ಕುಡಿದಿದ್ದಾರೆ. ಹೀಗೆ ಒಂದಾ, ಎರಡಾ, ಗೊತ್ತಿದ್ದು ಗೊತ್ತಿದ್ದೇ ಹಲವು ತಪ್ಪುಗಳನ್ನು ಮಾಡಿದ್ದಾರೆ. ಅದರ ಜೊತೆಗೆ ಸಂಗೀತಾ ವಿಚಾರ ಮುಖ್ಯವಾಗಿದೆ. ತಪ್ಪುಗಳ ಜೊತೆಗೆ ಸಂಗೀತಾಗೆ, ಸುದೀಪ್ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ.

ಸಂಗೀತಾ ತಪ್ಪಿನ ಅರಿವು ಮಾಡುವ ಪ್ರಯತ್ನ
ಸಂಗೀತಾ, ಕಾರ್ತಿಕ್ ಮತ್ತು ತನಿಷಾ ಜೊತೆಗಿದ್ದಾಗ ತುಂಬಾ ಖುಷಿಯಾಗಿದ್ದರು. ಅದರಲ್ಲೂ ಕಾರ್ತಿಕ್ ಅವರ ಜೊತೆಗೆ ಹೆಚ್ಚಿನ ಬಾಂಧವ್ಯ ಬೆಳೆಸಿಕೊಂಡಿದ್ದರು. ಈಗ ಕಾರ್ತಿಕ್ ಇಲ್ಲದೆ ಏನನ್ನೋ ಕಳೆದುಕೊಂಡಂತೆ ಆಗಿದೆ. ಹೀಗಾಗಿ ಬಿಗ್ ಬಾಸ್ ಬಳಿ ನೋವನ್ನು ತೋಡಿಕೊಂಡಿದ್ದರು. ಈ ವಾರದ ಕಥೆಯಲ್ಲಿ ಕಿಚ್ಚನ ಮುಂದೆ ಆ ನೋವು ಬ್ಪಾಸ್ಟ್ ಆಗಬಹುದು.
ಮತ್ತೆ ಸರಿ ಹೋಗುತ್ತಾ ಹಳೆಯ ದೋಸ್ತಿ?
ಕಾರ್ತಿಕ್ ಹಾಗೂ ಸಂಗೀತಾ ನಡುವೆ ಬಿಟ್ಟಿರುವ ಬಿರುಕು, ವಿನಯ್ ಅಂಡ್ ಟೀಂಗೆ ಲಾಭವಾಗಿದೆ. ಸಂಗೀತಾ ನೀಡಿದ ಟಾಸ್ಕ್‌ಗಳು ಕಾರ್ತಿಕ್‌ಗೆ ದ್ವೇಷವೆನಿಸಿರಬಹುದು ಅಥವಾ ನಡೆದುಕೊಂಡ ರೀತಿಯಲ್ಲಿ ಸ್ವಲ್ಪ ಮನಸ್ತಾಪಗಳು ಮೂಡಿರಬಹುದು. ಪಂಚಾಯ್ತಿಯಲ್ಲಿ ಇಬ್ಬರ ನಡುವೆ ಇರುವ ಮನ:ಸ್ತಾಪಗಳನ್ನು ಮನಬಿಚ್ಚಿ ಮಾತನಾಡಿದಾಗ, ಸರಿ ತಪ್ಪುಗಳು ಸರಿಯಾಗಬಹುದು. ಇಬ್ಬರು ಮತ್ತೆ ಒಂದಾಗಲಿ, ಮೊದಲು ಸಂಗೀತಾ, ನಮ್ರತಾ ಸಹವಾಸ ಬಿಡಲಿ ಎಂದೇ ಕಿಚ್ಚನ ಪ್ರೋಮೋಗೆ ಅಭಿಮಾನಿಗಳು ಮನವಿ ಮಾಡುವ ಕಮೆಂಟ್ ಹಾಕುತ್ತಿದ್ದಾರೆ.


Click it and Unblock the Notifications











