BBK10: ಸಂಗೀತಾ ಶನಿ.. ನಮ್ರತಾ ಡಮ್ಮಿ ಕ್ಯಾಂಡಿಡೇಟ್; ಸಂತು-ಪಂತುಗೆ ಬೆವರಿಳಿಸಿದ ಕಿಚ್ಚ ಸುದೀಪ್
ವಾರದ ಕಥೆ ಕಿಚ್ಚನ ಜೊತೆ, ಸೂಪರ್ ಸಂಡೇ ವಿತ್ ಸುದೀಪ ಶೋಗಾಗಿ ಸಾಕಷ್ಟು ಜನ ಕಾಯುತ್ತಾರೆ. ಅದಕ್ಕೆ ಕಾರಣವೂ ಇದೆ. ವಾರಪೂರ್ತಿ ಸ್ಪರ್ಧಿಗಳು ಮಾಡಿದ ತಪ್ಪು, ರೂಲ್ಸ್ ಬ್ರೇಕ್ ಅಥವ ತಪ್ಪಿಲ್ಲದೆ ಹೋದವರನ್ನು ಟಾರ್ಗೆಟ್ ಮಾಡುವುದು, ಬಿಗ್ ಬಾಸ್ ನಿಯಮಗಳನ್ನು ಅರಿಯದೆ ಹೋಗುವುದು ಸೇರಿದಂತೆ ವಾರದ ವಿಚಾರದ ಮೇಲೆ ಕಿಚ್ಚ ಸುದೀಪ್ ಬೆಳಕು ಚೆಲ್ಲುತ್ತಾರೆ.
ಎಸ್ ಆರ್ ನೋ ರೌಂಡ್ ವೀಕೆಂಡ್‌ನಲ್ಲಿ ಯಾವಾಗಲೂ ಇರುತ್ತದೆ. ಆ ರೌಂಡ್‌ನಲ್ಲಿ ಮನೆಯಲ್ಲಿ ಸ್ಪರ್ಧಿಗಳು ನಡೆದುಕೊಳ್ಳುವ ರೀತಿ, ಬಂದಂತ ಅಭಿಪ್ರಾಯಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ಸ್ಪರ್ಧಿಗಳು ಬೋರ್ಡ್ ತೋರಿಸಿ, ವಿವರಣೆಯನ್ನು ನೀಡಬೇಕಾಗುತ್ತದೆ. ಇಂದಿನ ರೌಂಡ್‌ನಲ್ಲಿ ನಮ್ರತಾ ಹಾಗೂ ಸಂಗೀತಾ ವಿಚಾರವೇ ಹೈಲೈಟ್ ಆಗಿತ್ತು.

ಬಿಗ್ ಬಾಸ್ ಮನೆಯಲ್ಲಿ ಸದಾ ಗಾಸಿಪ್ ಮಾಡುವವರು ಎಂದರೆ ಸಂತು-ಪಂತು. ಬಿಗ್ ಬಾಸ್‌ನ ಇಷ್ಟು ದಿನದ ಜರ್ನಿಯಲ್ಲಿ ಒಬ್ಬೊಬ್ಬರ ಮನಸ್ಸು ಒಂದೊಂದು ರೀತಿ ಆಗಿತ್ತು. ಫಸ್ಟ್ ಹಾಫ್ ಒಬ್ಬರ ಜೊತೆಗೆ ಇದ್ದರೆ ಸೆಕೆಂಡ್ ಹಾಫ್ ಇನ್ನೊಬ್ಬರ ಜೊತೆಗೆ ಇರುವುದನ್ನು ಎಲ್ಲರೂ ಗಮನಿಸಿದ್ದಾರೆ. ಆದರೆ, ಬಿಗ್ ಬಾಸ್ ಆರಂಭದಿಂದ ಬೇರೆಯಾಗದೆ ಅದೇ ಫ್ರೆಂಡ್ಶಿಪ್ ಉಳಿಸಿಕೊಂಡಿದ್ದು ಮಾತ್ರ ಸಂತು-ಪಂತು. ಕುಂತಲ್ಲೆಲ್ಲಾ ಮನೆಯವರ ಬಗ್ಗೆಯೇ ಮಾತನಾಡುತ್ತಿರುತ್ತಾರೆ.
ಬಿಗ್ ಬಾಸ್ ಮನೆಯ ಶನಿ ಸಂಗೀತಾ
ಸಂಗೀತಾ ಬಿಗ್ ಬಾಸ್ ಮನೆಯ ಶನಿ ಇದ್ದಂತೆ. ಈ ಸಾಲನ್ನು ಹೇಳಿದವರು ಯಾರು ಎಂಬ ವಿಚಾರ ಮಾತ್ರ ವೇದಿಕೆ ಮೇಲೆ ಬರಲಿಲ್ಲ. ಆದರೆ, ಈ ಮಾತನ್ನು ತುಕಾಲಿ ಅವರೇ ಹೇಳಿರುವುದು ಎಂಬುದು ಮಾತ್ರ ಅರ್ಥವಾಗಿದೆ. ತುಕಾಲಿ ಕೂಡ ನೋ ಎಂಬ ಬೋರ್ಡ್ ಅನ್ನೇ ಹಿಡಿದಿದ್ದರು. ಆಗ ಸುದೀಪ್ ತುಕಾಲಿ ಅವರನ್ನು ಕೇಳಿದಾಗ, ನಂಗೆ ಗೊತ್ತಿಲ್ಲ ಅಣ್ಣ. ನಾನು ಹೇಳೆ ಇಲ್ಲ ಅಣ್ಣ. ಈ ಬಗ್ಗೆ ನಂಗೆ ಗೊತ್ತೆ ಇಲ್ಲ ಅಣ್ಣ ಅಂತ ಹೇಳಿದ್ದಾರೆ.
ನಮ್ರತಾ ಡಮ್ಮಿ ಕ್ಯಾಂಡಿಡೇಟ್ ಅಂತೆ
ಬಳಿಕ ನಮ್ರತಾ ವಿಚಾರದಲ್ಲೂ ಸಂತು - ಪಂತು ಮಾತನಾಡಿದ್ದಾರೆ. ನಮ್ರತಾ ಈ ಮನೆಯ ಡಮ್ಮಿ ಕ್ಯಾಂಡಿಡೇಟ್ ಅಂತ ಹೇಳಿದ್ದು ಯಾರು ಎಂದಾಗ ಆ ಮಾತನ್ನು ವರ್ತೂರು ಸಂತೋಷ್ ಬಹಳ ಬೇಗನೇ ಒಪ್ಪಿಕೊಂಡಿದ್ದಾರೆ. ಹೌದು ಅಣ್ಣ ನಾವೇ ಮಾತನಾಡಿದ್ದೇವೆ. ಆದರೆ ಅದು ತಮಾಷೆಯಾಗಿ ಮಾತನಾಡಿದ್ದು ಎಂದಿದ್ದಾರೆ.
ಇಬ್ಬರಿಗೂ ಭಯ ಬೀಳಿಸಿದ ಕಿಚ್ಚ
ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲೂ ಹಲವು ವಿಚಾರಗಳನ್ನು ಚರ್ಚೆ ಮಾಡಲಾಯಿತು. ಚರ್ಚೆಯ ಜೊತೆಗೆ ಸಂಗೀತಾ ಹಾಗೂ ನಮ್ರತಾ ಹಿಂದೆ ನಡೆಯುತ್ತಿದ್ದ ವಿಚಾರವನ್ನು ತಿಳಿಯುವಂತೆ ಮಾಡಲಾಯಿತು. ನಗು ನಗುತ್ತಲೇ ಸಂತೂ ಹಾಗೂ ಪಂತುಗೆ ಕಿಚ್ಚ ಸುದೀಪ್ ಬೆವರಿಳಿಸಿದರು. ಹೆಣ್ಣು ಮಕ್ಕಳ ನಡುವೆಯೇ ನಾವೂ ಬಾಳಿ ಬದುಕುವುದು. ಮನೆಯ ಹೆಣ್ಣು ಮಕ್ಕಳು ಮಾತ್ರ ಹೆಣ್ಣು ಹೊರಗಡೆಯವರು ಹೆಣ್ಣು ಮಕ್ಕಳಲ್ಲ ಅಂತ ಹೇಳುವವರನ್ನು ನಾನು ಗೌರವಿಸುವುದಿಲ್ಲ. ಎಲ್ಲಾ ಹೆಣ್ಣು ಮಕ್ಕಳಿಗೆ ಗೌರವ ನೀಡಲೇಬೇಕು ಎಂದು ಬುದ್ದಿವಾದ ಹೇಳಿದ್ದಾರೆ. ಕಡೆಗೆ ತುಕಾಲಿ, ಹೆಣ್ಣು ಮಕ್ಕಳಿಗೆ ಕ್ಷಮೆಯನ್ನು ಕೇಳಿದ್ದಾರೆ.


Click it and Unblock the Notifications











