BBK10: ವೀಕೆಂಡ್ ಕಥೆಯಲ್ಲಿ ಕಿಚ್ಚನ ಗೈರು? ನಿಜವಾದ ಕಾರಣ ಏನು ಗೊತ್ತಾ..?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ವಾರವಿಡೀ ಮನೆ ಮಂದಿ ಬೇರೆಯದ್ದೇ ರೀತಿ ನಡೆದುಕೊಳ್ಳುತ್ತಾರೆ. ಅದರಲ್ಲೂ ಈ ಸೀಸನ್‌ನ ಸ್ಪರ್ಧಿಗಳು ಅದೆಷ್ಟೋ ಬಾರಿ ಕಿಚ್ಚ ತಿಳಿಸಿ ಹೇಳಿದರು, ಅದನ್ನು ಸರಿ ಪಡಿಸಿಕೊಳ್ಳುವ ಉಸಾಬರಿಗೆ ಹೋಗಿಲ್ಲ. ಟಾಸ್ಕ್ ವಿಚಾರದಲ್ಲಿ ತಪ್ಪು ಮಾಡುತ್ತಾರೆ, ಲಕ್ಸುರಿ ಬಜೆಟ್ ನಲ್ಲಿ ಎಡವುತ್ತಾರೆ. ಆದರೂ ಕಿಚ್ಚನ ಪಂಚಾಯ್ತಿಯಲ್ಲಿ ವಿಚಾರ ಬಂದಾಗ ಸೈಲೆಂಟ್ ಆಗಿ ಬಿಡುತ್ತಾರೆ.

ವಾರವಿಡೀ ನೋಡದ ಅದೆಷ್ಟೋ ಜನ ವೀಕೆಂಡ್ ಶೋಗಾಗಿಯೇ ಕಾಯುತ್ತಾ ಇರುತ್ತಾರೆ. ಯಾಕಂದರೆ ಕಿಚ್ಚ ಸುದೀಪ್ ಯಾವ ವಿಚಾರದ ಮೇಲೆ ಗಮನ ಚೆಲ್ಲಬಹುದು ಎಂಬುದೇ ಅದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಆದರೆ ಈ ವಾರ ಕಿಚ್ಚನ ಪಂಚಾಯ್ತಿ ಮಿಸ್ ಆಗುವ ಸಾಧ್ಯತೆ ಇದೆ‌.

Bigg Boss Kannada Season 10 Kichcha Sudeep will be absent this weekend why?

ಕಿಚ್ಚನ ಪಂಚಾಯ್ತಿ ಇಲ್ಲದೆ ವಾರ ಮುಕ್ತಾಯ

ಪ್ರತಿ ವಾರವೂ ಮನೆಯಲ್ಲಿ ಏನಾದರೊಂದು ತಪ್ಪು ನಡೆಯುತ್ತಲೇ ಇರುತ್ತದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಸ ಮಾಡಿದ ಕಾರಣಕ್ಕಾಗಿ ಮನೆಗೆ ಕ್ಯಾಪ್ಟನ್ ಹುದ್ದೆಯನ್ನೇ ತೆಗೆದು ಬಿಟ್ಟಿದ್ದರು. ಆದರೆ, ಅದನ್ನು ಕ್ಷಮಿಸಿದ ಸುದೀಪ್, ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ನೀಡಿದ್ದರು. ವಾರವಿಡೀ ಟಾಸ್ಕ್‌ಗಳ ಆಟ, ಕಿರುಚಾಟ, ಮತ್ತದೇ ಮನ:ಸ್ತಾಪಗಳು, ಒಂದಾ-ಎರಡಾ ಸಿಕ್ಕಾಪಟ್ಟೆ ವಿಚಾರಗಳು ಹುಟ್ಟಿಕೊಂಡಿದ್ದವು. ಹೀಗಾಗಿ ಕಿಚ್ಚ ಸುದೀಪ್ ಯಾವುದರ ಮೇಲೆ ಬೆಳಕು ಚೆಲ್ಲುತ್ತಾರೆ ಎಂಬ ಕುತೂಹಲವು ಇತ್ತು.

ಕಿಚ್ಚ ಬರದೆ ಇರಲು ಕಾರಣವೇನು?

ಕಿಚ್ಚ ಸುದೀಪ್ ಈ ವಾರ ವೀಕೆಂಡ್ ಶೋನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ. ಸಿಸಿಎಲ್ ಕಿಚ್ಚ ಸುದೀಪ್ ಮುಂದಾಳತ್ವದಲ್ಲಿಯೇ ನಡೆಯುವ ಮ್ಯಾಚ್. ಹೀಗಾಗಿ ಅವರು ಅಲ್ಲಿರಲೇಬೇಕು. ಈ ಬಾರಿಯ ಮ್ಯಾಚ್ ಡಿಸೆಂಬರ್ 23 ರಂದು ಉದ್ಘಾಟನೆಯಾಗಲಿದೆ. ಈ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಕ್ರಿಕೆಟ್ ತಾರೆಯರು ಬರಲಿದ್ದಾರೆ. ಹೀಗಾಗಿ ಬಿಗ್ ಬಾಸ್‌ಗೆ ಗೈರಾಗಿದ್ದಾರೆ ಎನ್ನಲಾಗಿದೆ.

ಕಿಚ್ಚನಿಲ್ಲದೆ ಎಲಿಮಿನೇಷನ್ ಹೇಗಿರಲಿದೆ..?

ಕಿಚ್ಚ ಸುದೀಪ್ ಪ್ರತಿ ಸೀಸನ್‌ನಲ್ಲೂ ಕೆಲವೊಂದು ಸಲ ಬ್ಯುಸಿ ಶೆಡ್ಯೂಲ್‌ನಿಂದ ಯಾವುದಾದರೊಂದು ವೀಕೆಂಡ್ ಹೊರಗೆ ಉಳಿಯುತ್ತಾರೆ. ಅಂತ ಸಂದರ್ಭದಲ್ಲಿ ಎಲಿಮಿನೇಷನ್ ರೌಂಡ್ ಅನ್ನು ಬಿಗ್ ಬಾಸ್ ತನ್ನದೇ ಆದ ಮುಂದಾಳತ್ವದಲ್ಲಿ ಮುಂದುವರೆಸಲಿದೆ‌. ಯಾವುದಾದರೂ ವಿಭಿನ್ನ ಟಾಸ್ಕ್ ಕೊಡುವ ಮೂಲಕ ಎಲಿಮಿನೇಷನ್ ಮಾಡಲಾಗುತ್ತದೆ. ಈ ವಾರವೂ ಎಲಿಮಿನೇಷನ್ ಆಗಲಿದೆ. ಆದರೆ‌ ಕಿಚ್ಚನ ಗೈರು ಈ ವೀಕೆಂಡ್‌ನಲ್ಲಿ ಕಾಣಿಸಲಿದೆ.

ಜಿಯೋ ಲೈವ್‌ನಲ್ಲಿ ತಿಳಿದ ಸತ್ಯ

ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಮನೆಯಲ್ಲಿ ನಡೆಯುವ ದಿನ 24 ಗಂಟೆಯ ಲೈವ್ ಕಾರ್ಯಕ್ರಮವನ್ನು ಬಿಟ್ಟಿರುತ್ತಾರೆ. ಈ ಲೈವ್ ನೋಡಿದಾಗ, ಶುಕ್ರವಾರದಂದು ಸ್ಪರ್ಧಿಗಳು ತಾವೂ ಧರಿಸಿದ ಬಟ್ಟೆಯಲ್ಲಿಯೇ ಇದ್ದದ್ದು ಕಂಡು ಬಂದಿದೆ. ವೀಕೆಂಡ್ ಶೋ ಬರುತ್ತೆ ಎಂದಾಗ, ಕಿಚ್ಚನ‌ ಪಂಚಾಯ್ತಿ ಇರುತ್ತೆ ಎಂದಾಗ ಸ್ಪರ್ಧಿಗಳು ಸಿದ್ಧವಾಗುವ ರೀತಿಯೇ ಬೇರೆ ಇರುತ್ತದೆ. ಆದರೆ ಈ ವಾರ ಆ ಯಾವ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹೀಗಾಗಿ‌ ಬಿಗ್ ಬಾಸ್ ಪ್ರೇಮಿಗಳು ಈ ವಾರ ಕಿಚ್ಚನ ಪಂಚಾಯ್ತಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

More from Filmibeat

English summary
BBK 10 December 22nd episode about Kiccha Sudeep weekend absent:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X