ಬಿಗ್ ಬಾಸ್ ಫೈನಲಿಸ್ಟ್‌ಗಳಿಗೆ ಕಿರಿಕ್ ಕೀರ್ತಿ, ಜಾಹ್ನವಿಯಿಂದ ಪ್ರಶ್ನೆಗಳ ಸುರಿಮಳೆ: ಸ್ಪರ್ಧಿಗಳಿಗೆ ಟೆನ್ಶನ್ ಟೆನ್ಶನ್..!?

By Shruthi Harishgowda

ಬಿಗ್ ಬಾಸ್ ಸೀಸನ್ 10 ಫೈನಲ್ ಗೆ ಇನ್ನೂ ಒಂದೇ ವಾರ ಬಾಕಿ ಇಂದು ಈಗ ದೊಡ್ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಷ್ಟೇ ಉಳಿದುಕೊಂಡಿದ್ದಾರೆ. ಈ ವಾರವು ಕೂಡ ಮಧ್ಯಂತರದ ಎಲಿಮಿನೇಷನ್ ನಡೆದು ಅದರಲ್ಲಿ ಯಾರಾದರೂ ಒಬ್ಬರು ಹೋಗಬಹುದು. ತನಿಷಾ ನಂತರ ಸುದೀಪ್ ಅವರು ನಮ್ರತಾ ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಈಗ ಎಲ್ಲರೂ ಕೂಡ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು ಯಾರಿಗೆ ಟ್ರೋಫಿ ಸಿಗಲಿದೆ ಎಂಬುದೇ ಕುತೂಹಲವಾಗಿದೆ. ಇಂದು ಬಿಗ್ ಬಾಸ್ ಮನೆಗೆ ಕಿರಿಕ್ ಕೀರ್ತಿ ಹಾಗೂ ಜಾಹ್ನವಿ ಆ್ಯಂಕರ್‌ಗಳಾಗಿ ಎಂಟ್ರಿಯನ್ನು ಕೊಟ್ಟಿದ್ದಾರೆ. ಇದ್ಯಾಕಪ್ಪ ಇವರಿಬ್ರು ಬಿಗ್ ಬಾಸ್ ಮನೆಗೆ ಬಂದು ಸದ್ದಿಲ್ಲದೆ ಕುಳಿತುಕೊಂಡಿದ್ದಾರೆ ಎಂದು ಕಣ್ಣು ಬಾಯಿ ಬಿಟ್ಟುಕೊಂಡು ಕಿರಿಕ್ ಕೀರ್ತಿ ಹಾಗೂ ಜಾಹ್ನವಿಯನ್ನು ನೋಡುತ್ತಿದ್ದಾರೆ.

Bigg Boss Kannada Season 10: Kirik Keerthi and Jhanvi questions bigg boss finale contestants

ಎಷ್ಟು ದಿನ ಹೊರಗೆ ಹೋದ ಮೇಲೆ ಬಿಗ್ ಬಾಸ್ ಸ್ಪರ್ಧಿಗಳನ್ನು ಸಂದರ್ಶನ ಮಾಡಲಾಗುತ್ತಿತ್ತು. ಆದರೆ ಈಗ ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಸಂದರ್ಶನವನ್ನು ಮಾಡಿ ನಂತರ ಹೊರಗೆ ಕಳುಹಿಸಲಾಗುತ್ತಿದೆ. ಕಿಚ್ಚ ಸುದೀಪ್ ಅವರು ವೇದಿಕೆಯ ಮೇಲೆ ಬಿಗ್ ಬಾಸ್ ಸೀಸನ್ 10ರ ಟ್ರೋಫಿಯನ್ನ ಅನಾವರಣ ಮಾಡಿದ್ದು ಎಲ್ಲರೂ ಕೂಡ ಟ್ರೋಫಿಯನ್ನ ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ.

ಕಿರಿಕ್ ಕೀರ್ತಿ- ಜಾಹ್ನವಿ ಎಂಟ್ರಿ: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಪ್ರಶ್ನೆ

ದೊಡ್ಮನೆಯಲ್ಲಿ ಇರುವ ಆರು ಮಂದಿ ಸ್ಪರ್ಧಿಗಳನ್ನು ಸಂದರ್ಶನ ಮಾಡಲು ಕಿರಿಕ್ ಕೀರ್ತಿ ಹಾಗೂ ಜಾಹ್ನವಿ ಬಂದಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್, ವಿನಯ್ ಕಾರ್ತಿಕ್ ಸಂಗೀತ ಹಾಗೂ ಪ್ರತಾಪ್ ಈ ಆರು ಮಂದಿ ಕೂಡ ಬಂದು ತಮ್ಮ ಸೀಟ್ ನಲ್ಲಿ ಕುಳಿತುಕೊಂಡಿದ್ದಾರೆ. ಪ್ರೊಮೋದಲ್ಲಿ ವಿನಯ್, ಕಾರ್ತಿಕ್, ಸಂಗೀತ ಮೂವರನ್ನು ಮಾತ್ರ ಮಾತನಾಡಿಸಲಾಗಿದ್ದು ಪ್ರಶ್ನೆಗಳನ್ನು ಕೇಳಲಾಗಿದೆ. ಉಳಿದವರ ಬಗ್ಗೆ ಯಾವುದೇ ಮಾಹಿತಿಯನ್ನ ನೀಡದೆ ಗುಪ್ತವಾಗಿ ಉಳಿಸಿದ್ದು ವೀಕ್ಷಕರಲ್ಲಿ ಕುತೂಹಲವನ್ನು ಕೆರಳಿಸಿದೆ.

Bigg Boss Kannada Season 10: Kirik Keerthi and Jhanvi questions bigg boss finale contestants

ಕಾರ್ತಿಕ್ ಹಾಗೂ ಸಂಗೀತ ಬಿಗ್ ಬಾಸ್ ಮನೆಗೆ ಎಂಟ್ರಿಯನ್ನು ಕೊಟ್ಟಾಗಿನಿಂದಲೂ ಕೂಡ ತುಂಬಾ ಸ್ನೇಹದಿಂದಲೇ ಇದ್ದರೂ ಇವರಿಬ್ಬರ ಸ್ನೇಹ ಎಲ್ಲರಿಗೂ ಕೂಡ ಇಷ್ಟವಾಗಿತ್ತು. ಬರು ಬರುತ್ತಾ ಸಂಗೀತ ಹಾಗೂ ಕಾರ್ತಿಕ್ ಸ್ನೇಹದ ನಡುವೆ ಬಿರುಕು ಮೂಡಿ ಈಗ ಇಬ್ಬರೂ ಕೂಡ ಶತ್ರುಗಳಂತೆ ವರ್ತಿಸುತ್ತಿದ್ದಾರೆ. ಇದೆ ಒಂದು ವಿಷಯವನ್ನು ಇಟ್ಟುಕೊಂಡು ಕಾರ್ತಿಕ್ ಅವರಿಗೆ ಪ್ರಶ್ನೆಯನ್ನ ಕೇಳಲಾಗಿದೆ. ನೀವು ಮಡಿಕೆಯನ್ನ ಹೊಡೆದು ಸಂಗೀತ ಇಂದ ದೂರವಾಗಿ ಝೀರೋ ಎಂಬುದನ್ನು ಸಾಬೀತು ಮಾಡುತ್ತೇನೆ ಎಂದು ಹೇಳಿದ್ರಿ ಆ ವಿಷಯ ಏನಾಯಿತು ಎಂದು ಕಾರ್ತಿಕ್ ಅವರಿಗೆ ಕಿರಿಕ್ ಕೀರ್ತಿ ಪ್ರಶ್ನೆಯನ್ನು ಕೇಳಿದ್ದಾರೆ.

ವಿನಯ್‌ಗೆ ಖಡಕ್ ಪ್ರಶ್ನೆ ಕೇಳಿದ ಕೀರ್ತಿ, ಜಾಹ್ನವಿ ಪ್ರಶ್ನೆಗೆ ವಿಚಲಿತರಾದ ಸಂಗೀತಾ

ಇನ್ನು ವಿನಯ್ ಬಳಿಗೆ ಬಂದ ಕಿರಿಕ್ ಕೀರ್ತಿ ನಿಮ್ಮ ಜೊತೆಗೆ ಇದ್ದವರೆಲ್ಲರೂ ಕೂಡ ನಿಮಗೆ ಜೈ ಜೈ ಎಂದು ಹೊರಗೆ ಹೋದ್ರಲ್ಲ ಯಾಕೆ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಈ ಮಾತಿಗೆ ವಿನಯ್ ಯಾವುದೇ ಉತ್ತರವನ್ನು ನೀಡಿಲ್ಲ. ವಿನಯ್ ಗೆ ತಮ್ಮ ಜೊತೆಗಿದ್ದವರೆಲ್ಲರೂ ಕೂಡ ಹೊರಗಡೆ ಹೋಗಿದ್ದು ಬಹಳಷ್ಟು ಬೇಸರವನ್ನು ತರಿಸಿದೆ. ಕೊನೆಗೆ ಉಳಿದುಕೊಂಡಿದ್ದು ನಮ್ರತಾ ಮಾತ್ರ ನಮೃತ ಕೂಡ ಈಗ ಎಲಿಮಿನೇಟ್ ಆಗಿದ್ದು ವಿನಯ್ ಬಿಗ್ ಬಾಸ್ ಮನೆಯಲ್ಲಿ ಒಬ್ಬರೇ ಉಳಿದುಕೊಂಡಿದ್ದಾರೆ.

ಇನ್ನು ಸಂಗೀತಾಗೆ ಜಾಹ್ನವಿ ಅವರು ಸಂಗೀತ ಊಹೆ ಮಾಡಿರದ ಪ್ರಶ್ನೆಯನ್ನ ಕೇಳಿದ್ದಾರೆ ಪ್ರತಾಪ್ ಇರುವ ಜನಬೆಂಬಲವನ್ನ ನೋಡಿ ನೀವು ಪ್ರತಾಪ್ ನನ್ನು ತಮ್ಮ ತಮ್ಮ ಎಂದು ಕರೆಯಲು ಶುರು ಮಾಡಿದ್ರಾ ಎಂದು ಕೇಳಿದ್ದಕ್ಕೆ ಸಂಗೀತ ಸ್ವಲ್ಪ ಸಿಡಿಮಿಡಿಗೊಂಡಂತೆ ಕಾಣುತ್ತಿದೆ. ಮೊದಲ ದಿನದಿಂದಲೂ ಕೂಡ ನಾನು ಯಾವುದೇ ಸ್ಟ್ಯಾಟರ್ಜಿಯನ್ನು ಮಾಡಿಲ್ಲ ಎಂದು ಸಂಗೀತ ತಮ್ಮ ಉತ್ತರವನ್ನು ನೀಡಿದ್ದಾರೆ. ಮಾತನಾಡುತ್ತಿದ್ದರೆ ವಿನಯ್ ಅವರಿಗೆ ನಗು ಬಂದಿದೆ ಯಾಕೆಂದರೆ ವಿನಯ್ ಕೂಡ ಅದನ್ನೇ ಹೇಳುತ್ತಿದ್ದರು. ಈಗ ಸಂಗೀತಾಗೆ ಎಲ್ಲೋ ಒಂದು ಕಡೆ ಕೋಪ ಬಂದಂತೆ ಕಾಣುತ್ತಿದೆ.

More from Filmibeat

English summary
BBK 10: Kirik Keerthi and Jhanvi questions bigg boss finale contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X