Bigg Boss: ಬಿಗ್ ಬಾಸ್ ಮನೆಗೆ ಕಿರಿಕ್ ಕೀರ್ತಿ, ಜಾಹ್ನವಿ ಎಂಟ್ರಿ; ಗೆಲ್ಲಿಸೋದಕ್ಕೋ ಎಲಿಮಿನೇಷನ್‌ಗೋ?

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 10 ಫಿನಾಲೆಗೆ ಆರು ಜನ ಉಳಿದಿದ್ದಾರೆ. ಈ ಸೀಸನ್‌ನಲ್ಲಿ ಯಾರೂ ಹೊರಗೆ ಹೋಗಬಹುದು ಎಂದುಕೊಳ್ಳುತ್ತಾರೋ ಅವರು ಸಲೀಸಾಗಿ ಸೇವ್ ಆಗುತ್ತಾರೆ. ಫಿನಾಲೆಗೆ ನೇರವಾಗಿ ಹೋಗುತ್ತಾರೆ. ಆದರೆ ಫಿನಾಲೆಗೆ ಇವರು ಇರಬಹುದು ಎಂದುಕೊಂಡರೆ ಅವರು ಔಟ್ ಆಗಿರುವ ಉದಾಹರಣೆಗಳಿವೆ.

ಆರಂಭದಿಂದ ತನಿಷಾ ಆಡಿದ ಆಟವನ್ನು ನೋಡಿದ್ದ ಜನ,‌ ಫಿನಾಲೆ ತನಕ ಬರಲಿದ್ದಾರೆ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಮ್ರತಾ ಅಥವಾ ತುಕಾಲಿ ಹೊರ ಬರಬಹುದು ಎಂಬ ಊಹೆಯ ವಾರ, ತನಿಷಾ ಹೊರಗೆ ಬಂದಿದ್ದರು. ಈಗ ತುಕಾಲಿ ನೇರವಾಗಿ ಫಿನಾಲೆಗೆ ಹೊರಟಿರುವುದು ಕೂಡ ಶಾಕ್ ಆಗಿದೆ. ಈ ರೀತಿ ಹೊಸ ಹೊಸ ಕುತೂಹಲಗಳನ್ನು ನೀಡುವ ಬಿಗ್ ಬಾಸ್, ಈಗ ಮನೆಗೆ ಹೊಸ ಅತಿಥಿಯನ್ನು ಕರೆಸಿದೆ. ಅವರೇ ಕಿರಿಕ್ ಕೀರ್ತಿ ಹಾಗೂ ಜಾಹ್ನವಿ.

Bigg Boss Kannada season 10 Kirik Keerthi Jhanvi entry on Bigg Boss

ಸೀಸನ್ 4 ಸ್ಪರ್ಧಿಯಾಗಿದ್ದ ಕಿರಿಕ್

ಬಿಗ್ ಬಾಸ್ ಸೀಸನ್ 10 ಈಗ ನಡೆಯುತ್ತಿರುವುದು. ಆದರೆ ಈ ಹಳೆ ಸೀಸನ್‌ಗಳು ನಡೆದ ರೀತಿ ನೀತಿಯೇ ಬೇರೆ. ಯಾವ ಸೀಸನ್‌ಗಳಲ್ಲೂ ಆಗದ ಅದ್ಭುತಗಳು ಈ ಸೀಸನ್‌ನಲ್ಲಿ ನಡೆದಿವೆ. ಕಡೆ ವಾರ ಇರುವಾಗ ಕಿರಿಕ್ ಕೀರ್ತಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರಿಕ್ ಕೀರ್ತಿ ಸೀಸನ್ 4ರಲ್ಲಿ ಸ್ಪರ್ಧಿಯಾಗಿದ್ದರು. ಅವರ ಸೀಸನ್‌ನಲ್ಲೂ ಗಲಾಟೆಗಳಿದ್ದರೂ ಆರೋಗ್ಯಕರವಾಗಿತ್ತು. ಆಸಕ್ತಿದಾಯಕವಾಗಿತ್ತು.

ಕಿರಿಕ್ ಕೀರ್ತಿಯಿಂದ ಮನೆ ಮಂದಿ ಶಾಕ್

ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಕಡೆಯ ಪಂಚಾಯ್ತಿ ಮುಗಿದು, ಫಿನಾಲೆ ವೇದಿಕೆಯಲ್ಲಿ ಭೇಟಿ ಮಾಡೋಣಾ ಎಂದು ಹೇಳಿ ನಡೆದಿದ್ದಾರೆ. ಒಂದು ವಾರ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಏನು ಮಾಡುತ್ತಾರೆ ಎಂಬ ಕುತೂಹಲವಿದೆ. ಟಾಸ್ಕ್ ಕೊಡುತ್ತಾರಾ, ಇಲ್ಲ ಬಿಗ್ ಬಾಸ್ ದಿನಗಳನ್ನು ಮೆಲುಕು ಹಾಕುವುದಕ್ಕೆ ಬಿಡುತ್ತಾರಾ ಎಂಬ ಪ್ರಶ್ನೆ ಇದೆ. ಆದರೆ, ಇದರ ನಡುವೆ ಕಿರಿಕ್ ಕೀರ್ತಿ ಹಾಗೂ ಜಾಹ್ನವಿ ಎಂಟ್ರಿಯಾಗಿದೆ. ಇದರಿಂದ ಮನೆಯಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎಂಬ ಕುತೂಹಲವಿದೆ.

Bigg Boss Kannada season 10 Kirik Keerthi Jhanvi entry on Bigg Boss

ಕಿರಿಕ್ ಕೀರ್ತಿಯಿಂದ ಎಂಟ್ರಿ ಯಾಕೆ?

ಕಿರಿಕ್ ಕೀರ್ತಿಯ ಎಂಟ್ರಿ ಮನೆ ‌ಮಂದಿಯನ್ನು ಫಿನಾಲೆಗೆ ಹೋಗುವ ತನಕ ಒಂದಷ್ಟು ಬೂಸ್ಟ್ ನೀಡೋದಕ್ಕಾ ಅಥವಾ ಯಾರನ್ನಾದರೂ ಒಬ್ಬರನ್ನು ಉಳಿಸುವುದಕ್ಕಾ ಎಂಬ ಪ್ರಶ್ನೆಗಳು ಮೂಡಿರೋದಂತೂ ನಿಜ. ಕಿರಿಕ್ ಕೀರ್ತಿ ಹಾಗೂ ಜಾಹ್ನವಿ ಎಂಟ್ರಿ ಕೊಟ್ಟಿರುವ ಪ್ರೋಮೊವನ್ನು ಜಿಯೋ ಸಿನಿಮಾ ರಿಲೀಸ್ ಮಾಡಿದೆ. ಅದರಲ್ಲಿ ಕಿರಿಕ್ ಕೀರ್ತಿ ಹಾಗೂ ಜಾಹ್ನವಿ ಇಬ್ಬರೂ ಮನೆಯಲ್ಲಿರುವ ಸ್ಪರ್ಧಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ. ಹೀಗಾಗಿ ಅವರು ಯಾಕೆ ಬಂದ್ರು ಅನ್ನೋದೇ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಪ್ರತಾಪ್ ಹೊರ ತರಲು ಹೋದ್ರಾ ಕಿರಿಕ್?

ಪ್ರತಾಪ್ ವಿಚಾರವಾಗಿ ಈಗಲೂ ಹಲವರಲ್ಲಿ ಅನುಮಾನವಿದೆ, ಪ್ರಶ್ನೆಗಳಿವೆ, ಅವರನ್ನ ನಾಟಕ ಮಾಡುತ್ತಾ ಇದ್ದಾರೆ ಎಂದೇ ಬಿಂಬಿಸುತ್ತಿದ್ದಾರೆ. ಈ ಮೊದಲು ಪ್ರತಾಪ್ ಸಂದರ್ಶನಗಳನ್ನು ಮಾಡುವ ಮೂಲಕ ಅವರ ವಿಚಾರವನ್ನು ತಿಳಿಸಿದ್ದರು. ಕೆಲವೊಂದು ವಿಚಾರಗಳ ಸ್ಪಷ್ಟನೆಯನ್ನು ಕೊಡಿಸಿದ್ದರು. ಪ್ರತಾಪ್ ಜರ್ನಿಯನ್ನೊಮ್ಮೆ ನೋಡಿದರೆ, ಬಿಗ್ ಬಾಸ್ ಸಾಧ್ಯವಾದಷ್ಟು ಬೂಸ್ಟ್ ಮಾಡಿದ್ದಾರೆ. ಸುದೀಪ್ ಕೂಡ ಸಾಕಷ್ಟು ಸಲ ಸಪೋರ್ಟ್ ಮಾಡಿದ್ದರು. ಈ ವಾರ ಫಿನಾಲೆಗೂ ಮುನ್ನ ಒಬ್ಬರನ್ನ ಎಲಿಮಿನೇಟ್ ಆಗಬೇಕಿದೆ. ಹೀಗಾಗಿ ಕಿರಿಕ್ ಕೀರ್ತಿ ಆ ಸ್ಪರ್ಧಿಯನ್ನ ಕರೆದುಕೊಂಡು ಬರುವುದಕ್ಕೇನೆ ಎಂಟ್ರಿ ಕೊಟ್ಟಿದ್ದಾರಾ ಅಂತ. ಆ ಸ್ಪರ್ಧಿ ಪ್ರತಾಪ್ ಆಗಿದ್ದಾರಾ ಎಂಬ ಚರ್ಚೆಗಳು ಶುರುವಾಗಿದೆ. ಕಡೆಯ ದಿನಗಳಾಗಿರುವ ಕಾರಣ ಸುದೀಪ್ ಔಟ್ ಆದವರ ಜೊತೆಗೆ ಮಾತುಕತೆ ನಡೆಸಲ್ಲ. ಹೀಗಾಗಿ ಗೌರವ ಪೂರ್ವಕವಾಗಿ ಕರೆದುಕೊಂಡು ಬರುವುದಕ್ಕೆ ಕಿರಿಕ್ ಕೀರ್ತಿಯನ್ನು ಕಳುಹಿಸಿದ್ದಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ. ನಾಳೆ ಅದಕ್ಕೆ ಉತ್ತರ ಸಿಗಬಹುದು.

More from Filmibeat

English summary
Bigg Boss Kannada season 10; kirik Keerthi,Jahnvi entry-Filmibeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X