ಸೆಮಿಫೈನಲ್‌ಗೆ ಇನ್ನೊಂದೆ ಮೆಟ್ಟಿಲು: ಕಿಚ್ಚನ ಕೊನೆಯ ಪಂಚಾಯಿತಿಯಲ್ಲಿ ಯಾರಿಗೆ ಗೇಟ್ ಪಾಸ್?
ಬಿಗ್ ಬಾಸ್ ಸೀಸನ್ 10 ಹಲವು ವಿಷಯಗಳಿಂದ ನೋಡುಗರ ಮನ ಸೆಳೆದಿತ್ತು. ಹುಲಿ ಉಗುರು ಪ್ರಕರಣದಲ್ಲಿ ಮೊದಲಿಗೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದರು. ನಂತರ ಸ್ಪರ್ಧಿಗಳು ವರ್ತೂರು ವಿರುದ್ಧ ನಿಂತುಕೊಂಡು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಬೇಕು ಎಂದರು. ಆದರೆ ಅವರ ಅಭಿಮಾನಿಗಳು, ಅವರ ತಾಯಿ ಸೇರಿಕೊಂಡು ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡಿದ್ದಾರೆ..
ಇನ್ನು ವಿನಯ್ ತಮ್ಮ ಅಗ್ರೆಸ್ಸಿವ್ ಆಟವಾಡಿಕೊಂಡು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಆದರೆ ಅವರ ಮೇಲೆ ಕೆಲವು ವೀಕ್ಷಕರಿಗೆ ಒಳ್ಳೆಯ ಅಭಿಪ್ರಾಯವಿದ್ದರೆ ಇನ್ನೂ ಕೆಲವರಿಗೆ ಕೆಟ್ಟ ಅಭಿಪ್ರಾಯವಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಆದವರಲ್ಲಿ ವಿನಯ್ ಕೂಡ ಒಬ್ಬರು ಅದ್ಯಾಕೋ ಕಾಣೆ ವಿನಯ್ ನಸೀಬೆ ಸರಿ ಇಲ್ಲ ಎಂದು ಕಾಣಿಸುತ್ತದೆ. ಪ್ರತಿ ವಾರವು ಕೂಡ ವಿನಯ್ ನ್ಯಾಮಿನೇಷನ್ ಲಿಸ್ಟ್‌ನಲ್ಲಿ ಇರುತ್ತಾರೆ. ಸದ್ಯಕ್ಕೆ ಸೆಮಿಫೈನಲ್ ಗೆ ಹತ್ತಿರದಲ್ಲಿದ್ದು ವಿನಯ್‌ಗೆ ತಾನು ಟಾಪ್ ಫೈವ್ ಕಂಟೆಸ್ಟೆಂಟ್ಗಳಲ್ಲಿ ಒಬ್ಬರಾಗಿ ಇರುತ್ತೇನೆ ಎಂಬ ಆತ್ಮವಿಶ್ವಾಸ ಇದೆ.

ಸೆಮಿ ಫೈನಲ್‌ಗೆ ಇನ್ನೊಂದು ಮೆಟ್ಟಿಲು ಹತ್ತಿರದಲ್ಲಿದ್ದು ಇದು ಕಿಚ್ಚನ ಕೊನೆಯ ಪಂಚಾಯಿತಿಯಾಗಿದೆ. ಈ ಪಂಚಾಯಿತಿಯಲ್ಲಿ ಯಾರಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗಲಿದೆ ಎಂಬುದೇ ಕುತೂಹಲ. ಯಾಕೆಂದರೆ ತನಿಷಾಗಿಂತ ಮೊದಲು ನಮ್ರತಾ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಬರುತ್ತಾರೆ ಎಂಬವುದು ಕೆಲವರ ಅಭಿಪ್ರಾಯವಾಗಿತ್ತು. ಆದರೆ ಯಾರೂ ಊಹಿಸಿರದ ರೀತಿಯಲ್ಲಿ ತನಿಶಾ ಅವರು ವಾರದ ಮಧ್ಯದಲ್ಲಿಯೇ ಎಲಿಮಿನೇಟ್ ಆಗಿ ದೊಡ್ಮನೆಯಿಂದ ಹೊರಗೆ ಬಂದಿದ್ದಾರೆ. ಈ ವಾರ ಯಾರಪ್ಪ ಮನೆಯಿಂದ ಹೊರಗೆ ಬರ್ತಾರೆ ಎಂಬ ಕುತೂಹಲ ಸಾಕಾಷ್ಟು ಕೆರಳಿಸಿದೆ.
ಏಳು ಮಂದಿಯಲ್ಲಿ ಐದು ಮಂದಿಗೆ ಟೆನ್ಶನ್, ಕಿಚ್ಚನ ಪಂಚಾಯಿತಿಯಲ್ಲಿ ಯಾರಿಗೆ ಕ್ಲಾಸ್?
ಬಿಗ್ ಬಾಸ್ ಮನೆಯಲ್ಲಿ ಈಗ ಏಳು ಮಂದಿ ಸದಸ್ಯರು ಇದ್ದು ಎಲ್ಲರಿಗೂ ಜೋಡಿಯಿದೆ. ಆದರೆ ಕಾರ್ತಿಕ್ ಬಿಗ್ ಬಾಸ್ ಮನೆಯಲ್ಲಿ ಒಬ್ಬಂಟಿ ಅನಿಸುತ್ತದೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ಏಳು ಮಂದಿ ಸದಸ್ಯರಲ್ಲಿ ಐದು ಮಂದಿ ತಲೆಯ ಮೇಲೆ ನಾಮಿನೇಷನ್ ತೂಗು ಕತ್ತಿ ತೂಗುತ್ತಿದೆ. ವಿನಯ್, ಕಾರ್ತಿಕ್, ನಮ್ರತಾ, ವರ್ತೂರು ಸಂತೋಷ್, ಪ್ರತಾಪ್ ನಾಮಿನೇಟ್ ಆಗಿದ್ದಾರೆ. ತುಕಾಲಿ ಸಂತೋಷ್ ಹಾಗೂ ಸಂಗೀರಾ ಇಬ್ಬರೂ ಸೇಫ್ ಆಗಿದ್ದಾರೆ. ಸದ್ಯಕ್ಕೆ ಟಾಪ್ ಫೈವ್‌ನಲ್ಲಿ ಯಾರು ಬರಲಿದ್ದಾರೆ ಎಂಬುದೇ ಈಗ ಉಳಿದಿರುವ ಯಕ್ಷಪ್ರಶ್ನೆಯಾಗಿದೆ.

ವಿನಯ್ ಕಾರ್ತಿಕ್ ವರ್ತೂರು ಸಂತೋಷ್ ಈ ಮೂವರು ಕೂಡ ಪದೇ ಪದೇ ನಾಮಿನೇಷನ್ ಲಿಸ್ಟ್‌ನಲ್ಲಿ ಬಂದು ನಿಲ್ಲುತ್ತಿದ್ದು, ಅವರ ಅಭಿಮಾನಿಗಳು ಹಾಗೂ ವೀಕ್ಷಕ ವರ್ಗ ವೋಟ್ ಮಾಡುವ ಮೂಲಕ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡಿದ್ದಾರೆ. ಈ ವಾರ ನಮ್ರತಾ ಹಾಗೂ ಪ್ರತಾಪ್ ಇಬ್ಬರೂ ಕೂಡ ನಾಮಿನೇಟ್ ಆಗಿದ್ದು ಇವರಲ್ಲಿ ಯಾರು ಹೊರಗೆ ಹೋಗುತ್ತಾರೆ ಎಂದು ನೋಡಬೇಕಾಗಿದೆ. ನಮ್ರತಾ 5 ವಾರಗಳಿಂದ ನಾಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ನಾಮಿನೇಟ್ ಆಗಿದ್ದು ಅವರ ತಲೆಯ ತುಂಬಾ ಟೆನ್ಶನ್ ತುಂಬಿಕೊಂಡಿದೆ ನಾನೇನಾದರೂ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತೇನಾ ಎಂದು ಅವರೇ ಅಂದುಕೊಂಡಿದ್ದಾರೆ.
ವೀಕ್ಷಕರ ಊಹೆಯಂತೆ ನಮ್ರತಾಗೆ ಗೇಟ್ ಪಾಸ್ ಸಿಗುತ್ತಾ..?
ವೀಕ್ಷಕರು ನಮ್ರತಾಗೆ ಈ ವಾರ ಗೇಟ್ ಪಾಸ್ ಸಿಗುತ್ತದೆ ಎಂದುಕೊಂಡಿದ್ದಾರೆ. ನಮ್ರತಾ ಮನೆಯಿಂದ ಹೊರಗೆ ಹೋಗುತ್ತಾರೆ ಎಂದು ಅಂದುಕೊಂಡಿದ್ದರು. ಈಗ ನಾಮಿನೇಟ್ ಆಗಿರುವ ಎಲ್ಲಾ ಸ್ಪರ್ಧಿಗಳು ಕೂಡ ಬಹಳ ಸ್ಟ್ರಾಂಗ್ ಎಂದು ಅನಿಸುತ್ತಾರೆ. ಈಗಿರುವ ಸ್ಪರ್ಧಿಗಳಲ್ಲಿ ಯಾರು ಹೊರಗೆ ಹೋಗುತ್ತಾರೆ ಎಂಬುದು ಕಿಚ್ಚನ ಪಂಚಾಯಿತಿಯಲ್ಲಿ ತಿಳಿಯಲಿದೆ. ಮೊದಲಿಗೆ ಯಾರು ಸೇಫ್ ಆಗ್ತಾರೆ ಎಂಬುದಕ್ಕೂ ಕೂಡ ಉತ್ತರ ದೊರಕಲಿದೆ.


Click it and Unblock the Notifications











