BBK10: ಟಾಸ್ಕ್‌ನಲ್ಲಿ ಸಂಗೀತಾ ಮತ್ತು ನಮ್ರತಾ: ಅಕ್ಷರಶಃ ಭಾವನೆಗಳಲ್ಲಿ ಮುಳುಗಿದ ಸ್ನೇಹಿತ್..!
ಬಿಗ್ ಬಾಸ್ ಮನೆಯಲ್ಲಿ ತುಂಬಾ ಕಡಿಮೆ ಸಮಯದಲ್ಲಿ ಟಾಸ್ಕ್‌ಗಳು ರಿಪೀಟ್ ಆಗುವುದು. ಅದಿಲ್ಲವಾದರೆ ಹೊಸ ಹೊಸ ಟಾಸ್ಕ್‌ಗಳನ್ನೇ ನೀಡುತ್ತಾರೆ. ನೋಡಿದ ಕೂಡಲೇ ಇಷ್ಟೆನಾ ಟಾಸ್ಕ್ ಎನಿಸಬೇಕು. ಆದರೆ ಆಡುವಾಗಲೇ ಅದರ ರಿಯಾಲಿಟಿ ಗೊತ್ತಾಗುವುದು. ಇವತ್ತು ಮನರಂಜನೆಯ ಟಾಸ್ಕ್‌ಗಳನ್ನೇ ಬಿಗ್ ಬಾಸ್ ನೀಡಿದ್ದಾರೆ.
ಮನೆಗೆ ಬೇಕಾದ ದಿನಸಿಗಳನ್ನು ನೀಡುವುದಕ್ಕೆ ಪ್ರತಿ ವಾರವೂ ಒಂದೊಂದು ಟಾಸ್ಕ್ ನೀಡಲಾಗುತ್ತದೆ. ಅದರಲ್ಲಿ ಫಿಸಿಕಲ್ ಟಾಸ್ಕ್ ಕೂಡ ಇರುತ್ತದೆ. ಆದರೆ ಈ ವಾರ ಸಂಪೂರ್ಣವಾಗಿ ಮನರಂಜನೆಯನ್ನು ನೀಡುವ ಮೂಲಕ ದಿನಸಿಯನ್ನು ನೀಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ನಟನೆ ಮಾಡಲು ಹೇಳುವ ಮೂಲಕ ಈ ವಾರದ ದಿನಸಿ ಕೊಡಲು ಬಿಗ್ ಬಾಸ್ ನಿರ್ಧರಿಸಿತ್ತು. ಈ ಮೂಲಕ ಹೊಸ ರೀತಿಯ ಟಾಸ್ಕ್ ನೀಡಿದೆ.

ಸ್ನೇಹಿತ್‌ನನ್ನು ರೇಗಿಸಿದ ಬಿಗ್ ಬಾಸ್
ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಹಾಗೂ ಸ್ನೇಹಿತ್ ನಡುವೆ ಆಗಾಗ ಫನ್ ನಡೆಯುತ್ತಲೆ ಇರುತ್ತದೆ. ಸ್ನೇಹಿತ್‌ಗೆ ನಿಜವಾಗಿಯೂ ಲವ್ ಆಗಿದೆ ಎಂದೇ ಎಲ್ಲರೂ ನಂಬುವಂತೆ ಅವರು ನಡೆದುಕೊಳ್ಳುತ್ತಾರೆ. ಆದರೆ ನಮ್ರತಾ ಮಾತ್ರ ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ಬೇಕಾದರೆ ರಾಕಿ ಕಟ್ಟಿ ಬಿಡುತ್ತೇನೆ ಎನ್ನುತ್ತಾರೆ. ಸಿಕ್ಕಾಪಟ್ಟೆ ತಲೆ ತಿಂದಿದ್ದಾಗ, ನನಗೂ ಸ್ವಲ್ಪ ಸಮಯ ಬೇಕು ಅಲ್ವಾ ಎಂದಿದ್ದರು. ಇದೀಗ ಬಿಗ್ ಬಾಸ್ ಈ ಇಬ್ಬರ ಹೆಸರನ್ನೇ ತೆಗೆದುಕೊಂಡು ಟಾಸ್ಕ್ ನೀಡಿದೆ.
ಸ್ನೇಹಿತ್ ಜಾಗಕ್ಕೆ ರಿಪ್ಲೇಸ್ ಆದ ಸಂಗೀತಾ
ನಮ್ರತಾ, ಸ್ನೇಹಿತ್ ರೀತಿಯಲ್ಲಿ ನಟನೆ ಮಾಡಬೇಕು ಎಂದು ಬಿಗ್ ಬಾಸ್ ಟಾಸ್ಕ್ ನೀಡಿತ್ತು. ಮೊದಲಿಗೆ ಇಬ್ಬರ ಪಾತ್ರಗಳು ಉಲ್ಟಾ ಪಲ್ಟಾ ಆಗಿತ್ತು. ಸ್ನೇಹಿತ್, ನಮ್ರತಾ ಆಗಿ ಬದಲಾದರೆ, ನಮ್ರತಾ, ಸ್ನೇಹಿತ್ ಆಗಿ ಬದಲಾದರು. ಆದರೆ ಸ್ನೇಹಿತ್ ನಾಟಕದಲ್ಲಿ ಅಷ್ಟೊಂದು ಎಫರ್ಟ್ ಹಾಕುತ್ತಾ ಇರಲಿಲ್ಲ. ನಮ್ರತಾ, ಸ್ನೇಹಿತ್ ಆಗಿ ಏನನ್ನೇ ಹೇಳಿಕೊಂಡರು. ಅದು ಸಕ್ಸಸ್ ಆಗುವಂತೆ ಕಾಣಿಸುತ್ತಾ ಇರಲಿಲ್ಲ. ಇದನ್ನು ನೋಡುತ್ತಿದ್ದ ಸಂಗೀತಾಗೆ ಕೋಪ ಬಂದಿತ್ತು. ಸ್ನೇಹಿತ್ ಅವರನ್ನು ಕೂರಿಸಿ, ತಾವೇ ಆ ಸ್ಥಾನಕ್ಕೆ ಹೋಗಿದ್ದಾರೆ.

ನಮ್ರತಾ ಬಳಿ ಅಂಗಲಾಚಿದ ಸ್ನೇಹಿತ್
ನಮ್ರತಾ ಮದುವೆ ವಿಚಾರವನ್ನು ಹೇಳಿದಾಗ ಸ್ನೇಹಿತ್ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದೇ ಟಾಸ್ಕ್ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಬರೀ ಸ್ನೇಹಿತ್ ಜೊತೆಗೆ ಇರುವ ನಮ್ರತಾಗೆ ಅವರ ವರ್ತನೆ ಚೆನ್ನಾಗಿಯೇ ಅರಿತಿದ್ದಾರೆ ಎಂಬುದಾಗಿ ನಟನೆಯ ಮೂಲಕ ತೋರಿಸಿದ್ದಾರೆ. ಮದುವೆ ವಿಚಾರವನ್ನು ಒತ್ತಿ ಒತ್ತಿ ಹೇಳಿದ್ದಾರೆ.
ಬಿಗ್ ಬಾಸ್ ಕಡೆಯಿಂದ ಶಬ್ಬಾಶ್ ಗಿರಿ, ಟಾಸ್ಕ್ ಆದ ಮೇಲೆ ನಮ್ರತಾ ಖುಷಿ
ಸ್ನೇಹಿತ್ ಹೇಗೆಲ್ಲಾ ಆಡುತ್ತಾರೆ ಎಂಬುದನ್ನು ನಮ್ರತಾ ತೋರಿಸುವುದಕ್ಕೆ ಸಂಗೀತಾ ತುಂಬಾ ಬೆಂಬಲವಾಗಿ ನಿಂತಿದ್ದಾರೆ. ನಮ್ರತಾ ನನ್ನ ಮದುವೆಯಾಗಿ ಎಂದು ಹೇಳುತ್ತಿದ್ದರೆ ಸ್ನೇಹಿತ್ ಪ್ಲೀಸ್ ಬೇಡ ಬೇಡ ಎಂದು ಬೇಡಿಕೊಳ್ಳುತ್ತಾರೆ. ಇಡೀ ಬಿಗ್ ಬಾಸ್ ಮನೆಯಲ್ಲಿ ಹೇಗೆಲ್ಲಾ ನಡೆದುಕೊಳ್ಳುತ್ತಾರೆ ಎಂಬ ವಿಚಾರವನ್ನು ನಮ್ರತಾ ಸೂಪರ್ ಆಗಿಯೇ ಹೇಳಿದ್ದಾರೆ. ಈ ಆಕ್ಟಿಂಗ್ ಅನ್ನು ಎಲ್ಲರೂ ಮಜಾ ಮಾಡುತ್ತಿದ್ದರೆ, ಸ್ನೇಹಿತ್ ರಿಯಲ್ ಆಗಿ ಫೀಲ್ ಮಾಡಿದ್ದಾರೆ. ಅಯ್ಯೋ ನಮ್ರತಾ ಮದುವೆ ಆಗಿಬಿಟ್ಟರೆ ನನ್ನ ಸ್ಥಿತಿ ಹೀಗೆ ಇರುತ್ತದೆಯೇ ಎಂದು ಫೀಲ್ ಮಾಡುತ್ತಾ ಇದ್ದರು ಎಂಬಂತೆ ಕಾಣಿಸುತ್ತಾ ಇದ್ದರು. ಇದರ ನಡುವೆ ಬಿಗ್ ಬಾಸ್ ಈ ನಟನೆಗೆ ಶಬ್ಬಾಶ್ ಗಿರಿ ನೀಡಿದ್ದಾರೆ.


Click it and Unblock the Notifications











