ಕನ್ನಡ ಮೇಷ್ಟ್ರಾಗಿ ಬಿಗ್ ಬಾಸ್ ಶಾಲೆಗೆ ಎಂಟ್ರಿ ಕೊಟ್ಟ ಮೈಕಲ್..! ವಾರೆವ್ಹಾ ಎಂದ ಕನ್ನಡಿಗರು

By Shruthi Harishgowda

ಬಿಗ್ ಬಾಸ್ ಸೀಸನ್ 10 ಹತ್ತನೇ ವಾರಕ್ಕೆ ಕಾಲಿಟ್ಟಿದೆ ಇನ್ನು ನಾಮಿನೇಷನ್ ಕೂಡ ಮುಗಿದಿದ್ದು ಈಗ ಏನಿದ್ದರೂ ಟಾಸ್ಕಗಳದ್ದೆ ದರ್ಬಾರ್. ಸದ್ಯಕ್ಕೆ ಬಿಗ್ ಬಾಸ್ ಮನೆ ಬಿಗ್ ಬಾಸ್ ಪ್ರಾಥಮಿಕ ಪಾಠಶಾಲೆಯಾಗಿ ಬದಲಾಗಿದೆ. ಇಲ್ಲಿ ಸ್ಪರ್ಧಿಗಳೇ ವಿದ್ಯಾರ್ಥಿಗಳಾಗಿದ್ದು ಎಂಜಾಯ್ ಮಾಡುತ್ತಿದ್ದಾರೆ. ತನಿಶಾ ಹಾಗೂ ಮೈಕಲ್ ಇಬ್ಬರೂ ಟೀಚರ್ ಆಗಿದ್ದಾರೆ. ಈಗ ಮೈಕಲ್ ಕನ್ನಡದ ಪಂಡಿತರಾಗಿ ಮಕ್ಕಳಿಗೆ ಪಾಠ ಮಾಡುತ್ತಾ ಇದ್ದಾರೆ. ಮೈಕಲ್ ಏನು ಮೂಲತಃ ಕನ್ನಡಿಗರಲ್ಲ ಆದರೂ ಕೂಡ ಕನ್ನಡವನ್ನು ಕಲಿಯಬೇಕು ಎಂಬ ಆಟ ಅವರು ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಶುರುವಾಗಿದೆ .ಇನ್ನು ಬಿಗ್ ಬಾಸ್ ಕನ್ನಡದಲ್ಲಿ ಎಲ್ಲರೂ ಮಾತನಾಡಬೇಕು ಎಂದು ಆಜ್ಞೆಯನ್ನು ಹೊರಡಿಸಿದ್ದಾರೆ‌. ಇದಕ್ಕಾಗಿ ಮೈಕಲ್ ಕನ್ನಡ ಮಾತನಾಡುವವರಿಗಿಂತಲೂ ಚೆನ್ನಾಗಿ ಬಿಗ್ ಬಾಸ್ ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದಾರೆ.

ಮೈಕಲ್ ಅವರು ಕನ್ನಡದ ಮೇಲೆ ಪ್ರೀತಿ ಅಭಿಮಾನ ಇಟ್ಟಿರುವುದಕ್ಕೆ ಕಿಚ್ಚ ಸುದೀಪ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಮನೆಯಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಆದರೆ ಕೆಲವೊಂದು ಸಲ ಹೆಚ್ಚಾಗಿ ಇಂಗ್ಲಿಷ್ ನಲ್ಲೆ ಮಾತನಾಡುತ್ತಾರೆ ನೀವು ಕನ್ನಡವನ್ನು ಕಲಿಯಬೇಕು ಕನ್ನಡದಲ್ಲಿ ಮಾತನಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುವುದಕ್ಕೆ ನಾನು ಮೆಚ್ಚುಗೆಯನ್ನ ಸೂಚಿಸುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಕಿಚ್ಚನ ಮೆಚ್ಚುಗೆ ಸಿಕ್ಕಿದ ಮೇಲಂತೂ ಮೈಕಲ್ ಮತ್ತಷ್ಟು ಚೆನ್ನಾಗಿ ಕನ್ನಡವನ್ನು ಕಲಿಯಲು ಶುರು ಮಾಡಿದ್ದರು. ಅದರಂತೆ ಟಾಸ್ಕ್‌ನಲ್ಲಿ ತಿನ್ನುವ ಸ್ಪರ್ಧೆ ಬಂದು ಕನ್ನಡವನ್ನು ತುಂಬಾ ಚೆನ್ನಾಗಿ ಓದುವ ಮೂಲಕ ವಾವ್ ಇಷ್ಟು ಚನ್ನಾಗಿ ಕನ್ನಡ ಮಾತನಾಡುತ್ತಾರೆ ಎಂದು ಅನಿಸಿಕೊಂಡಿದ್ದರು.

Bigg boss kannada season 10: Michael Ajay Became Kannada Teacher

ಬಿಗ್ ಬಾಸ್ ಮನೆಯಲ್ಲಿ ಈಗ ನಾನು ಕನ್ನಡದ ಪಂಡಿತ ಕನ್ನಡದ ಶಿಕ್ಷಕ ಎಂದುಕೊಂಡು ಮೈಕಲ್ ತಮ್ಮ ಮಾತನ್ನು ಶುರು ಮಾಡಿದ್ದಾರೆ ಎಲ್ಲರಿಗೂ ಮೈಕಲ್ ಕನ್ನಡ ಪಾಠಕ್ಕೆ ಸುಸ್ವಾಗತ ಎಂದು ಹೇಳಿದ್ದಾರೆ ಇದಕ್ಕೆ ಇತರ ಸ್ಪರ್ಧಿಗಳು ಹೋ ಎಂದು ಉದ್ಗಾರ ತೆಗೆದು ಖುಷಿ ವ್ಯಕ್ತಪಡಿಸಿದ್ದಾರೆ. ನಾನು ಕನ್ನಡವನ್ನ ತುಂಬಾ ಇಷ್ಟಪಟ್ಟು ಕಲಿಯುತ್ತಾ ಇದ್ದೇನೆ ಎಂದು ಹೇಳುವ ಮೂಲಕ ಕನ್ನಡಿಗರ ಮನಸ್ಸನ್ನು ಮತ್ತೊಮ್ಮೆ ಮೈಕಲ್ ಗೆದ್ದುಬಿಟ್ಟಿದ್ದಾರೆ. ಇದಕ್ಕೋ ಏನೋ ಕಾಣೆ ಎಲಿಮಿನೇಷನ್ ನಿಂದ ಯಾವಾಗಲೂ ಮೈಕಲ್ ಪಾರಾಗುತ್ತಾ ಇದ್ದಾರೆ. ಈಗ ಮೈಕಲ್ ಕನ್ನಡವನ್ನು ಸ್ವಲ್ಪ ಸ್ವಲ್ಪ ಬರೆಯಲು ಕಲಿತಿದ್ದು ಬೋರ್ಡ್ ಮೇಲೆ ಮೈಕಲ್ ಕನ್ನಡ ಎಂದು ಬರೆದಿದ್ದಾರೆ.

ನಾನು ಕನ್ನಡ ಪಂಡಿತ ಆಗುತ್ತೇನೆ

ಸುಲಲಿತವಾಗಿ ಕನ್ನಡ ಮಾತಾಡಿದ ಮೈಕಲ್

ಕಲರ್ಸ್ ಕನ್ನಡ ಹೊಸದಾಗಿ ಬಿಟ್ಟಿರುವ ಪ್ರೋಮೋದಲ್ಲಿ ಮೈಕಲ್ ವೈಟ್ ಶರ್ಟ್ ಮೇಲೆ ಕೋಟ್ ಹಾಕಿಕೊಂಡು ಕಚ್ಚೆ ಕಟ್ಟಿಕೊಂಡು ಶಾಲೆಯ ಒಳಗೆ ಬಂದಿದ್ದಾರೆ. ಇದೇ ವೇಳೆ ಕನ್ನಡದ ಶಾಲೆಗೆ ಸುಸ್ವಾಗತ ಎಂದು ಹೇಳಿದ್ದಾರೆ. ಕನ್ನಡ ಭಾಷೆ ಮೇಲೆ ನನಗೆ ಪ್ರೀತಿ ಇದೆ ನಾನು ಬೇರೆ ಕಡೆಯಿಂದ ಬಂದು ಕನ್ನಡವನ್ನು ಇಷ್ಟಪಟ್ಟು ಕಲಿಯುತ್ತಾ ಇದ್ದೇನೆ ಎಂದಿದ್ದಾರೆ. ಕನ್ನಡ ಪಂಡಿತ ಆಗಲು ಪ್ರಯತ್ನ ಪಡುತ್ತಿದ್ದೇನೆ ಎಂದಿದ್ದಾರೆ. ಇದೆ ವೇಳೆ ಕಾರ್ತಿಕ್‌ಗೆ ಆಂಗ್ಲ ಪದವನ್ನು ಬಳಸಿದರೆ ಶಿಕ್ಷೆ ನೀಡುತ್ತೇನೆ ಎಂದು ಹೇಳಿದ್ದಾರೆ. ತುಕಾಲಿ ಸಂತೋಷ್ ನನಗೂ ತಿ‌ಂಡಿ ಕೊಡಿ ಎಂದು ಕೇಳಿ ಚನ್ನಾಗಿ ಮೈಕಲ್ ಕೈಲಿ ಹೊಡೆತ ತಿಂದಿದ್ದಾರೆ.

Bigg boss kannada season 10: Michael Ajay Became Kannada Teacher

ಎಂದೆಂದಿಗೂ ನೀ ಕನ್ನಡವಾಗಿರು ಎಂದ ಮೈಕಿ

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳಿರುವುದು ಹೇಳಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ. ನಂತರ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ಸೇರಿಕೊಂಡು ಮೈಕಲ್ ಜೊತೆಯಲ್ಲಿ ಕನ್ನಡ ರೋಮಾಂಚವಿ ಕನ್ನಡ ಎಂಬ ಹಾಡನ್ನು ಹಾಡಿದ್ದಾರೆ. ಬಿಗ್ ಬಾಸ್ ಮನೆ ಕನ್ನಡ ಮಾಯವಾಗಿದೆ ಮೈಕಲ್ ಅವರಿಂದಾಗಿ ಎಲ್ಲರೂ ಕೂಡ ಕನ್ನಡದ ಕಂದಮ್ಮಗಳಾಗಿದ್ದಾರೆ. ಪದೇ ಪದೇ ಮೈಕಲ್ ಕನ್ನಡಿಗರ ಹೃದಯವನ್ನ ಗೆಲ್ಲುತ್ತಿದ್ದಾರೆ. ಮೈಕಲ್ ಕನ್ನಡ ಮಾತನಾಡುತ್ತಿರುವುದಕ್ಕೆ ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸುತ್ತಾ ಇದ್ದಾರೆ ವೀಕ್ಷಕರು.

More from Filmibeat

English summary
Bigg boss kannada: Michael became kannada teacher
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X