Bigg Boss: ಮೈಕಲ್ ಕನ್ನಡ ಓದುವುದನ್ನು ನೋಡಿ ಬೆಚ್ಚಿಬಿದ್ದ ಮನೆಯ ಸದಸ್ಯರು.. ಭೇಷ್ ಎಂದ ಕನ್ನಡಿಗರು!
ಬಿಗ್ ಬಾಸ್ ಮನೆಯಲ್ಲಿ ಆಟಗಳೇ ಆಗಲಿ ಮಾತುಗಳೇ ಆಗಲಿ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಂಡು ಸಾಗುತ್ತಾ ಇದೆ. ಇದರ ಜೊತೆಗೆ ನೈಜಿರಿಯಾ ಮೂಲದ ಮೈಕಲ್ ಕನ್ನಡಿಗರ ಹೃದಯವನ್ನೇ ಕದ್ದುಬಿಟ್ಟಿದ್ದಾರೆ. ಕನ್ನಡ ಮಾತಾಡೋದು ಅಷ್ಟೇ ಅಲ್ಲ. ಓದುವುದನ್ನು ಕಲಿತುಕೊಂಡಿದ್ದು ಕನ್ನಡಿಗರಿಗೆಲ್ಲರಿಗೂ ಸಹ ಬಹಳಷ್ಟು ಖುಷಿಯಾಗಿದೆ.
ಮೈಕಲ್ ಅಜಯ್ 'ನಾನ್ ಕನ್ನಡಿಗ' ಆಗಿದ್ದು ಅವರಿಗೆ ಕನ್ನಡ ಬರುತ್ತಲೇ ಇರಲಿಲ್ಲ. ಆದರೆ, ಬಿಗ್ ಬಾಸ್ ಮನೆಯಲ್ಲಿ ಇರುವವರು ಕನ್ನಡವನ್ನೇ ಉಪಯೋಗಿಸಬೇಕು ಎಂಬ ನಿಯಮವನ್ನು ಬಿಗ್ ಬಾಸ್ ಹೇಳಿದ್ದರು. ಎಲ್ಲರ ಜೊತೆ ಸೇರಿಕೊಂಡು ಚೆನ್ನಾಗಿ ಕನ್ನಡವನ್ನು ಮಾತನಾಡಲು ಈಗ ಮೈಕಲ್ ಕಲಿತುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವ ಕನ್ನಡಿಗರೇ ಸರಿಯಾದ ರೀತಿಯಲ್ಲಿ ಕನ್ನಡವನ್ನು ಬಳಸುತ್ತಿಲ್ಲ ಎಂಬುದಕ್ಕೆ ಬಿಗ್ ಬಾಸ್ ಬೇಸರ ವ್ಯಕ್ತಪಡಿಸಿದ್ದರು. ಅದರ ಜೊತೆಗೆ ದುಬಾರಿ ಬಜೆಟ್‌ನಲ್ಲಿ ನೀಡಿದಂತಹ ತರಕಾರಿಯನ್ನು ಸಹ ವಾಪಸ್ ಕಿತ್ತುಕೊಂಡಿದ್ದರು. ಆದರೆ, ಮೈಕಲ್ ಮಾತ್ರ ಕನ್ನಡದಲ್ಲಿ ಹೆಚ್ಚು ಮಾತನಾಡುತ್ತಿದ್ದು, ಬಿಗ್ ಬಾಸ್ ಪ್ರೀತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಕನ್ನಡಿಗರ ಮನಸ್ಸಿನಲ್ಲೂ ಸಹ ವಿಶೇಷ ಜಾಗವನ್ನು ಪಡೆದುಕೊಂಡಿದ್ದಾರೆ. ಇನ್ನು 'ವಾರದ ಕಥೆ ಕಿಚ್ಚನ' ಜೊತೆ ಕಾರ್ಯಕ್ರಮದಲ್ಲೂ ಕೂಡ ಈ ವಾರ ಚಪ್ಪಾಳೆಯನ್ನು ಮೈಕಲ್‌ಗೆ ಕೊಡಲಾಗಿತ್ತು. ಮೈಕಲ್ ಚೆನ್ನಾಗಿಯೇ ಕನ್ನಡವನ್ನು ಮಾತನಾಡಲು ಕಲಿತಿದ್ದಾರೆ ಎಂದು ಸುದೀಪ್ ಪ್ರಶಂಸೆ ವ್ಯಕ್ತಪಡಿಸಿ ಚಪ್ಪಾಳೆ ತಟ್ಟಿದರು.
ಮೈಕಲ್ ನನಗೆ ಕನ್ನಡ ಬರೋದಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಬಹುದಾಗಿತ್ತು. ಆದರೆ ಅವರು ಆ ರೀತಿ ಮಾಡಲಿಲ್ಲ. ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ಆದಷ್ಟು ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಟಾಸ್ಕ್‌ಗಳ ವಿಚಾರದಲ್ಲೂ ಅಷ್ಟೇ ಉತ್ತಮ ಪ್ರದರ್ಶನವನ್ನು ನೀಡುತ್ತಾ ಇದ್ದಾರೆ. ಒಮ್ಮೆ ಕಾರ್ತಿಕ್ ವಿಚಾರದಲ್ಲಿ ಇಶಾನಿ ನಡೆದುಕೊಂಡಿದ್ದು ತಪ್ಪು ಎಂದು ತಮ್ಮ ಗರ್ಲ್ ಫ್ರೆಂಡ್ ವಿರೋಧವನ್ನು ಕಟ್ಟಿಕೊಂಡಿದ್ದವರು. ಆಗಲು ಸಹ ಮೈಕಲ್ ವಿಚಾರದಲ್ಲಿ ಕನ್ನಡಿಗರು ಉದಾರತೆಯನ್ನ ತೋರಿ ಎಲಿಮಿನೇಷನ್ ಪ್ರಕ್ರಿಯೆಯಿಂದ ಪಾರು ಮಾಡಿ ಬಿಗ್ ಬಾಸ್ ಮನೆಯಲ್ಲಿ ಉಳಿಸಿಕೊಂಡರು.
ಕನ್ನಡ ಓದಿದ ಮೈಕಲ್
ಕರ್ನಾಟಕದಲ್ಲಿ ಇದ್ದುಕೊಂಡೆ ಕನ್ನಡ್ ಗೊತ್ತಿಲ್ಲ ಎಂದು ಹೇಳುವವರ ಮಧ್ಯೆ ಮೈಕಲ್ ಬಿಗ್ ಬಾಸ್ ಮನೆಗೆ ಬಂದು ಕನ್ನಡದಲ್ಲಿ ಮಾತನಾಡಿ, ಜೊತೆಗೆ ಕನ್ನಡವನ್ನು ಓದುವ ಮೂಲಕ ಕನ್ನಡಿಗರ ಹೃದಯದಲ್ಲಿ ಜಾಗವನ್ನು ಪಡೆದಿದ್ದಾರೆ. "ಬಿಗ್ ಬಾಸ್ ಹೊಸ ಟಾಸ್ಕ್ ನೀಡಿತ್ತು. ಪ್ಲೇಟ್‌ನಲ್ಲಿದ್ದ ತಿಂಡಿಯನ್ನು ಪೂರ್ತಿ ತಿನ್ನಬೇಕು. ಮೊದಲು ಎಲ್ಲಾ ಪ್ಲೇಟ್‌ನಲ್ಲಿರುವ ತಿಂಡಿ ಖಾಲಿ ಮಾಡಿದ ನಂತರ ತಲೆಗೆ ಕಟ್ಟಿಕೊಂಡಿದ್ದ ಬೆಲ್ ಹೊಡೆದು ಶಬ್ದ ಮಾಡಬೇಕು. ಅವರು ಗೆಲುವು ಪಡೆಯುತ್ತಾರೆ" ಎಂದು ಆಟವನ್ನು ಆಡಿಸಿದರು. ಈ ವೇಳೆ ಮೈಕಲ್ ಟಾಸ್ಕ್ ಗೆದ್ದು ಕನ್ನಡದಲ್ಲಿಯೇ ಪ್ರಶ್ನೆಗಳನ್ನು ಕೇಳಿದ್ದಾರೆ ಇದಕ್ಕೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿದೆ.
ಮೈಕಲ್ ಕನ್ನಡವನ್ನು ಓದಿರುವುದಕ್ಕೆ ಮನೆಯಲ್ಲಿರುವ ಇತರ ಸ್ಪರ್ಧಿಗಳೇ ಶಾಕ್ ಆಗಿದ್ದಾರೆ. ಯಾವುದೇ ತಪ್ಪುಗಳು ಇಲ್ಲದಂತೆ ತೊದಲುತ್ತಲೇ ಕನ್ನಡದಲ್ಲಿ ಪ್ರಶ್ನೆಯನ್ನು ಕೇಳಿದ್ದಾರೆ. ಇದಂತೂ ಎಲ್ಲರಿಗೂ ಸಹ ಖುಷಿ ನೀಡಿದೆ. ಮೈಕಲ್ ಕನ್ನಡ ಓದುವಾಗ ವಿನಯ್ ಏನೋ ಮಚ್ಚಾ ಕನ್ನಡವನ್ನು ಇಷ್ಟು ಚೆನ್ನಾಗಿ ಓದುತ್ತಾ ಇದ್ದೀಯ ಎಂದು ಹೇಳಿದ್ದಾರೆ. ಇದಕ್ಕೆ ಮೈಕಲ್ ನಾನು ಮಣ್ಣಿನ ಮಗ ಎಂಬ ಉತ್ತರವನ್ನು ಕೊಟ್ಟಿದ್ದಾರೆ.
ಕನ್ನಡ ಪ್ರೇಮಕ್ಕೆ ಸಲಾಂ ಎಂದ ಜನತೆ
ಮೈಕಲ್ ಅವರೇ ಇದೇ ರೀತಿ ಕನ್ನಡದಲ್ಲಿ ಮಾತನಾಡಿ ಎಂದು ಕನ್ನಡಿಗರು ಮನವಿ ಮಾಡಿದ್ದಾರೆ. ಕನ್ನಡ ಬಂದರು ಕನ್ನಡ ಮಾತನಾಡದ ಜನಗಳ ಮಧ್ಯೆ ನೀವು ಎತ್ತರದ ಸ್ಥಾನದಲ್ಲಿದ್ದೀರಾ ಎಂದು ಹೊಗಳಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಸರಿಯಾದ ರೀತಿಯಲ್ಲಿ ಕನ್ನಡ ಮಾತನಾಡುತ್ತಿಲ್ಲ. ಆದರೆ, ನೀವು ಕನ್ನಡವನ್ನು ಮಾತನಾಡಲು ಇಷ್ಟಾದರೂ ಪ್ರಯತ್ನ ಪಡುತ್ತಿದ್ದೀರಾ ಎಂದಿದ್ದಾರೆ. ನಿಮ್ಮ ಕನ್ನಡ ಪ್ರೇಮ ಹೀಗೆಯೇ ಸಾಗುತ್ತಾ ಇರಲಿ ಎಂದು ಹೇಳಿದ್ದಾರೆ.


Click it and Unblock the Notifications











