Bigg Boss: ವರ್ತೂರು ಅಲ್ಲ.. ತುಕಾಲಿನೂ ಅಲ್ಲ.. ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ತನಿಷಾ ಔಟ್
ಬಿಗ್ ಬಾಸ್ ಫಿನಾಲೆ ಹತ್ತಿರವಿದೆ. ಆದರೂ ಕಳೆದ ವಾರ ಎಲಿಮಿನೇಷನ್ ಆಗಲೇ ಇಲ್ಲ. ಮನೆಯಲ್ಲಿ ಎಂಟು ಮಂದಿ ಇದ್ದಾರೆ. ಫಿನಾಲೆ ತಲುಪಬೇಕಾದವರೂ ಐದು ಜನ ಮಾತ್ರ. ಇದೇಗೆ ಎಂಬ ಕುತೂಹಲ ನೋಡುಗರಿಗೆ ಸಹಜವಾಗಿಯೇ ಇತ್ತು. ಜೊತೆಗೆ ಮಿಡ್ ವೀಕ್ ಎಲಿಮಿನೇಷನ್ ಇದ್ದೆ ಇರುತ್ತೆ ಎಂಬ ಊಹೆಯೂ ಇದ್ದಿದ್ದರಿಂದ ಸುಮ್ಮನೆ ಆಗಿದ್ದರು.
ಭಾನುವಾರ ಕಳೆದು ಮೂರು ದಿನಗಳಾದರೂ ಇನ್ನು ಎಲಿಮಿನೇಷನ್ ಆಗಿಲ್ಲವಲ್ಲ ಎಂಬ ಪ್ರಶ್ನೆ ಇತ್ತು. ಜೊತೆಗೆ ಈ ಬಾರಿ ಯಾರು ಹೊರಗೆ ಹೋಗಬಹುದು ಎಂಬ ಕುತೂಹಲ ಕೂಡ ಉಳಿದಿದೆ. ಪ್ರತಿ ಸಲ ಎಲಿಮಿನೇಟ್ ಆಗುವವರನ್ನು ಊಹೆ ಮಾಡಬಹುದಿತ್ತು. ಆದರೆ ಈ ಸೀಸನ್ ನ ಕಡೆ ಕಡೆಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಅಲ್ಲದೆ ಸ್ವತ: ಕಿಚ್ಚ ಸುದೀಪ್ ಮಿಡ್ ವೀಕ್ ಎಲಿಮಿನೇಷನ್ ಇರುತ್ತೆ ಎಂಬ ಸುಳಿವು ನೀಡಿದ್ದರು. ಈಗ ಆ ಎಲಿಮಿನೇಷನ್‌ನಲ್ಲಿ ತನಿಷಾ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ನಾಮಿನೇಟ್ ಆಗಿದ್ರು ತನಿಷಾ
ಈ ಬಾರಿಯ ಸೀಸನ್‌ನಲ್ಲಿ ಹೆಚ್ಚಿನ ದಿನಗಳನ್ನು ನೀಡಲಾಗಿದೆ. ನೂರು ದಿನಗಳ ಆಟವೇ ಆಗಿದ್ದರೆ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಆದರೆ, ಇನ್ನು ಒಂದು ವಾರ ಸ್ಪರ್ಧಿಗಳಿಗೆ ಅವಕಾಶ ನೀಡಲಾಗಿದೆ. ಫಿನಾಲೆ ತಲುಪದೆ ಮನೆಯಿಂದ ಹೊರ ಹೋಗಲು ಸಿದ್ದವಾದವರಲ್ಲಿ ತನಿಷಾ, ಕಾರ್ತಿಕ್, ಪ್ರತಾಪ್, ವಿನಯ್, ನಮ್ರತಾ, ತುಕಾಲಿ ಸಂತೋಷ್, ವರ್ತೂರು ಸಂತೋಷ್ ನಾಮಿನೇಟ್ ಆಗಿದ್ದರು. ಎಲ್ಲರಲ್ಲೂ ಆತಂಕ ಇದ್ದೆ ಇತ್ತು. ಮನೆಯಿಂದ ಹೊರ ಹೋಗುವುದು ನಾನೇ ಆಗಿರಬಹುದಾ ಎಂಬ ಸಣ್ಣ ಭಯವೂ ಮನೆಯವರಲ್ಲಿ ಇದೆ.
ಕಳೆದ ವಾರ ಬಚಾವ್ ಆಗಿದ್ದ ತುಕಾಲಿ
ಕಳೆದ ವಾರ ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿಯಲ್ಲಿ ಎಲಿಮಿನೇಷನ್ ರೌಂಡ್ ಕ್ಯಾನ್ಸಲ್ ಆಗಿತ್ತು. ತುಕಾಲಿ ಹಾಗೂ ವರ್ತೂರು ನಡುವೆ ಯಾರು ಮನೆಯಿಂದ ಹೊರಗೆ ಹೋಗಬೇಕು ಎಂಬ ವಿಚಾರದಲ್ಲಿ ಸ್ನೇಹಿತರನ್ನು ಉಳಿಸುವ ಕೆಲಸವಾಗಿತ್ತು. ಇಬ್ಬರು ಕಣ್ಣೀರು ಹಾಕಿದ್ದರು. ಆ ಕಣ್ಣೀರಿಗೆ ಬಿಗ್ ಬಾಸ್ ಹಾಗೂ ಕಿಚ್ಚ ಸುದೀಪ್ ಇಬ್ಬರು ಕರಗಿ ಮತ್ತೊಂದು ಅವಕಾಶ ನೀಡಿದ್ದರು. ತುಕಾಲಿ ಸಂತೋಷ್ ಕಳೆದ ವಾರವೇ ಎಲಿಮಿನೇಷನ್ ಆಗುವುದರಲ್ಲಿ ಬಚಾವ್ ಆಗಿದ್ದರು. ಈ ವಾರ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಮೊದಲು ಹೋಗುವವರು ತುಕಾಲಿ ಸಂತೋಷ್ ಎಂದೇ ಹೇಳಲಾಗುತ್ತಿತ್ತು.

ತನಿಷಾ ಫಿನಾಲೆ ತಲುಪಲಿಲ್ಲ
ಫಿನಾಲೆಯಲ್ಲಿ ಐದು ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆ ಐದು ಜನರ ಹೆಸರೇಳಿ ಎಂದು ಬಿಗ್ ಬಾಸ್ ಮನೆಯಿಂದ ಹೊರ ಬಂದವರನ್ನು ಕೇಳಿದಾಗ ಸಂಗೀತಾ, ವಿನಯ್, ಪ್ರತಾಪ್, ಕಾರ್ತಿಕ್ ಹೆಸರೇಳಿ ವರ್ತೂರು ಸಂತೋಷ್ ಅಥವಾ ತನಿಷಾ ಎಂದೇ ಹೇಳುತ್ತಿದ್ದರು. ಜೋರು ಧ್ವನಿ ಎಂಬುದರ ಹೊರತು ಪಡಿಸಿ, ತನಿಷಾ ಮತ್ತು ವರ್ತೂರು ಸಂತೋಷ್ ನಡುವೆ ಸ್ಪರ್ಧೆ ಇತ್ತು. ಆದರೆ ಈಗ ತನಿಷಾ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಮಿಡ್ ವೀಕ್‌ನಲ್ಲಿ ತನಿಷಾ ಔಟ್
ಈಗ ಯಾರೆಲ್ಲಾ ಫಿನಾಲೆ ತಲುಪಬಹುದು ಎಂದು ಊಹೆ ಮಾಡಬಹುದು. ಆದರೂ ಊಹೆ ಒಮ್ಮೊಮ್ಮೆ ಉಲ್ಟಾ ಹೊಡೆಯುತ್ತಿದೆ. ತನಿಷಾ ಆಟ, ರಗಡ್ ಧ್ವನಿ, ಎಲ್ಲರಿಗೂ ಅಡುಗೆ ಮಾಡಿಕೊಡುತ್ತಿದ್ದದ್ದು ಈ ಎಲ್ಲಾ ಕಾರಣಕ್ಕೆ ತನಿಷಾ ಫಿನಾಲೆ ವೇದಿಕೆಯಲ್ಲಿ ಇರಬಹುದು ಎಂಬ ಊಹೆ ಮಾಡಲಾಗಿತ್ತು. ಈಗ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿಯೇ ಹೊರ ಬಂದಿದ್ದಾರೆ. ಮನೆ ಮಂದಿಗೂ ಇದು ನಿಜಕ್ಕೂ ಶಾಕ್ ಎನಿಸಿದೆ.


Click it and Unblock the Notifications











