BBK10: ವಿನಯ್‌ಗೆ ಚಪ್ಪಲಿಯಲ್ಲಿ ಹೊಡೆದ್ರಾ ಕಾರ್ತಿಕ್? ನಮ್ರತಾ ಮಾಡಿದ ಆರೋಪವೇನು?
ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಬೀಪ್ ಸೌಂಡ್ ಜಾಸ್ತಿಯಾಗುತ್ತಿದೆ. ಚಪ್ಪಲಿಯಲ್ಲಿ ಹೊಡೆದರು, ಬೀಪ್ ಬೈಗುಳಗಳು ಹೇಳಿದರು ಅಂತೆಲ್ಲಾ ಏನೇನೋ ಆರೋಪಗಳು ಕೇಳಿ ಬರುತ್ತಿವೆ. ಆಟ ಆಡಿ ಅಂತ ಬಿಗ್ ಬಾಸ್ ಹೇಳಿದರೆ, ಬರೀ ಜಗಳಗಳನ್ನೇ ಆಡುತ್ತಿದ್ದಾರೆ.
ಈ ವಾರ ಬೇರೆ ರೀತಿಯದ್ದೇ ಟಾಸ್ಕ್‌ಗಳನ್ನು ನೀಡಲು ಬಿಗ್ ಬಾಸ್ ನಿರ್ಧಾರ ಮಾಡಿತ್ತು ಎನಿಸುತ್ತದೆ. ಅದಕ್ಕಾಗಿಯೇ ಈ ವಾರ ಕ್ಯಾಪ್ಟನ್ ಆಗುವಂತಹ ಸದಸ್ಯನಿಗೆ ವಿಶೇಷ ಅಧಿಕಾರ ನೀಡಿದ್ದರು. ಆ ಅಧಿಕಾರದ ಜೊತೆಗೆ ಟಾಸ್ಕ್ ಆಡುವಾಗ ಯಾವುದೇ ರೀತಿಯಾಗಿ ದೇಹಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು. ಇದರಲ್ಲಿ ಸ್ನೇಹಿತ್ ಕೂಡ ಸೋತಿದ್ದಾರೆ.

ವಿನಯ್‌ಗೆ ಚಪ್ಪಲಿಯಲ್ಲಿ ಹೊಡೆದರಾ ಕಾರ್ತಿಕ್?
ಆಟದ ನಡುವೆಯೇ ವಿನಯ್ ಹಾಗೂ ಕಾರ್ತಿಕ್ ನಡುವೆ ಜೋರು ಜಗಳ ಎದ್ದಿದೆ. ವಿನಯ್‌ಗೆ ಕಾರ್ತಿಕ್ ಚಪ್ಪಲಿಯಲ್ಲಿ ಎಸೆದರಂತೆ. "ಚಪ್ಪಲಿಯಲ್ಲಿ ಹೊಡೆದರೆ ನಾನು ಸುಮ್ಮನೆ ಇರಬೇಕಾ..? ಹೋಯ್ ಚಪ್ಪಲಿಯಲ್ಲಿ ಹೇಗೆ ಹೊಡೆದೆ. ಇಂಥ ಕಿತ್ತೋದ್ ನನ್ನ ಮಕ್ಕಳಿಂದ ಚಪ್ಪಲಿಯಲ್ಲಿ ಹೊಡೆಸಿಕೊಳ್ಳಬೇಕಾ? ಬಿಗ್ ಬಾಸ್ ನಾನು ಇಲ್ಲಿ ಇರುವುದಕ್ಕೆ ಇಷ್ಟವಿಲ್ಲ. ರೀ ಬೌಂಡ್‌ನಲ್ಲಿ ಹೊಡೆಯಲಾ ನಿನಗೆ. ನನಗೆ ಇದಕ್ಕೆ ಆನ್ಸರ್ ಬೇಕು. ಇವತ್ತು ಚಪ್ಪಲಿಯಲ್ಲಿ ಹೊಡೆದ, ನಿನ್ನೆ ಅ*ನ್ ಅಂದ. ಇದಕ್ಕೆ ಉತ್ತರ ಬೇಕು. ಏನು ಅಂದುಕೊಂಡಿದ್ದಾನೆ ಅವನು. ಬಾರೋ ಇಲ್ಲಿ. ನಿನ್ನ ಬಿಡ್ತೀನಿ ಅಂದುಕೊಂಡಿದ್ದೀಯಾ" ಎಂದು ವಿನಯ್ ಜಗಳವಾಡಿದ್ದಾರೆ.
ಗೆಲುವಿಗಾಗಿ ಕಣ್ಣೀರು ಹಾಕಿದ ಸಂಗೀತಾ
ಚಪ್ಪಲಿಯ ವಿಚಾರಕ್ಕೆ ಜಗಳವಾಗುತ್ತಿದ್ದಂತೆ ಸಂಗೀತಾ ತಮ್ಮ ತಂಡದವರೊಂದಿಗೆ ಮನವಿ ಮಾಡಿದ್ದಾರೆ. "ಗಂಧರ್ವರೆಲ್ಲಾ ಜೊತೆಯಾಗಿ ಇರೋಣಾ. ಪ್ಲೀಸ್ ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೀನಿ. ನಾವೆಲ್ಲಾ ಗೆಲ್ಲಬೇಕು. ನಾನು ಹೇಳಿದ ಮಾತನ್ನು ಕೇಳಿ. ಕೆಟ್ಟದಾಗಿ ಮಾಡುತ್ತಿರುವುದು ಅವರ ಕ್ಯಾರೆಕ್ಟರ್. ಹೊರಗಡೆ ಹೋಗಬೇಡಿ. ಒಳಗಡೆ ಒಂದು ಕೆಲಸ ತೆಗೆದುಕೊಳ್ಳಿ. ಇಲ್ಲಿ ಪ್ರವೋಕ್ ಆಗಬೇಕು. ನಾವೂ ಅದನ್ನೆ ಮಾಡಬೇಕು" ಎಂದಿದ್ದಾರೆ.

ಕಾರ್ತಿಕ್ ಕೊಟ್ಟ ಕ್ಲಾರಿಟಿ ಏನು..?
ಉಸ್ತುವಾರಿ ವಹಿಸಿದ್ದ ಸ್ನೇಹಿತ್, ಕಾರ್ತಿಕ್ ಬಳಿ ಬಂದು ಚಪ್ಪಲಿಯ ವಿಚಾರದ ಬಗ್ಗೆ ಕ್ಲಾರಿಟಿ ತೆಗೆದುಕೊಂಡಿದ್ದಾರೆ. ಗಂಧರ್ವರಾಗಿ ನೀವೂ ಈ ರೀತಿ ನಡೆದುಕೊಳ್ಳಬಾರದು ಎಂದಿದ್ದಾರೆ. ಆಗ ಕಾರ್ತಿಕ್, ಚಪ್ಪಲಿಯನ್ನು ನಾನು ಅವನಿಗೆ ಹೊಡೆಯಲಿಲ್ಲ. ಕೆಳಗೆ ಎತ್ತಿ ಎಸೆದ ಬೌನ್ಸ್ ಆಗಿದೆ. ಅದು ನತಾದೃಷ್ಟವಶಾತ್ ಅವನಿಗೆ ಬಿದ್ದಿದೆ. ನಾನು ಏನಪ್ಪ ಮಾಡಲಿ" ಎಂದಿದ್ದಾರೆ. ಬಳಿಕ ರೊಚ್ಚಿಗೆದ್ದ ವಿನಯ್, ತುಳಿತೀನಿ ಮಗ ಎದೆ ಮೇಲೆ ಕಾಲಿಟ್ಟೇ ತುಳಿಯುವುದು. ಅಮ್ಮ ಅಂದಲ್ಲ, ಹೇಳು ಇವಾಗ ಎಂದು ಅವಾಜ್ ಹಾಕಿದ್ದಾರೆ.
ಕಾರ್ತಿಕ್ ಮೇಲೆ ನಮ್ರತಾ ಆರೋಪವೇನು?
ಸಂಗೀತಾ ವಿಚಾರಕ್ಕೆ ಮೊದಲು ಕೋಪಗೊಂಡ ನಮ್ರತಾ, "ಅವಳನ್ನ ಕಳುಹಿಸಿ. ಅವನು ಯಾವನು ಗುರು ಚಪ್ಪಲಿಯಲ್ಲಿ ಹೊಡೆಯುವುದಕ್ಕೆ. ಆ ರಾಣಿ ಹೇಳಿರುವುದಂತೆ. ನಾನು ಹೇಳಿದಂತೆ ಕೇಳಿ ಅಂತ. ಇದು ಗೇಮ್ ಸ್ಟ್ರಾಟರ್ಜಿ. ಪ್ಲೀಸ್ ಬ್ರೋ ಹೀಗೆಲ್ಲಾ ಕೋಪ ಮಾಡಿಕೊಳ್ಳಬೇಡಿ" ಎಂದು ಸಮಾಧಾನ ಮಾಡಿದ್ದಾರೆ. ಬಳಿಕ ಕಾರ್ತಿಕ್ ಜೊತೆಗೆ ಜಗಳಕ್ಕೆ ಬಿದ್ದ ನಮ್ರತಾ, "ನಾನು ಲೈವ್‌ನಲ್ಲಿ ನೋಡಿದ್ದೀನಿ. ನಿಮ್ಮ ಗ್ರೂಪ್ ಅಂತ ಹೇಳುವಾಗ ಅಮ್ಮ ಅಂದಿರುವುದನ್ನು ನೋಡಿದ್ದೀನಿ. ನನ್ನ ಇಮಿಟೇಟ್ ಮಾಡಿದರೆ ಸರಿ ಇರಲ್ಲ. ಮುಚ್ಕೊಂಡು ಹೋಗುತ್ತಾ ಇರು. ಎರಡು ವೀಕ್‌ನಲ್ಲಿ ಹೋಗುತ್ತೀಯಲ್ಲ ಅಂತಾನೆ. ನೀನು ಅವನೇ ಅಸಹ್ಯ" ಎಂದಿದ್ದಾರೆ.


Click it and Unblock the Notifications











