BBK 10: ನಮ್ರತಾ ಕಣ್ಣೀರಿಗೆ ಬಿಗ್ ಬಾಸ್ ಕಾರಣನಾ.? ಹಳೆ ನೋವು ನೆನೆದ ನಮ್ರತಾ ಹೇಳಿದ್ದೇನು?
ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ನಮ್ರತಾ ಗೌಡ ಎಂಟ್ರಿಯಾಗಿದ್ದಾರೆ. ಹೊಸ ಮನೆಗೆ ಹೆಣ್ಣು ಮಕ್ಕಳು ಹೋದರೆ ಲಕ್ಷ್ಮೀಯಂತೆಯೇ ಸರಿ ಹೀಗಾಗಿ ನಮ್ರತಾ ಗೌಡಗೆ ಹಾಲಿನ ಕ್ಯಾನ್ ಕೊಟ್ಟು, ಬಲಗಾಲಿಟ್ಟು, ಮನೆಗೆ ಹೋಗಿ, ಹಾಲುಕ್ಕಿಸುವುದಕ್ಕೆ ಹೇಳಿದ್ದರು. ಅದರಂತೆ ನಮ್ರತಾ ಮನೆಗೆ ಮಹಾಲಕ್ಷ್ಮಿಯಂತೆಯೇ ಎಂಟ್ರಿ ಕೊಟ್ಟಿದ್ದರು.
ನಮ್ರತಾ ಬಳಿಕ ಸ್ನೇಹಿತ್, ಇಶಾನಿ ಹೀಗೆ ಒಬ್ಬರ ಹಿಂದೆ ಒಬ್ಬರು ಒಟ್ಟು ಹದಿನೇಳು ಮಂದಿ ಬಿಗ್ ಬಾಸ್ ಮನೆಗೆ ಎಂಟ್ರಿ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಶುರುವಾಗಿ ಐದು ದಿನವಾಗಿದೆ. ಒಂಥರ ಎಲ್ಲರ ಕ್ಯಾರೆಕ್ಟರ್‌ಗಳು ಈಗ ತೆರೆದುಕೊಳ್ಳುತ್ತಿವೆ.

ನಮ್ರತಾ - ಇಶಾನಿ ಫ್ರೆಂಡ್ಸ್
ಬಿಗ್ ಬಾಸ್ ಮನೆಯಲ್ಲಿ ಹದಿನೇಳು ಜನರಿದ್ದರು, ಎಲ್ಲರಿಗೂ ಎಲ್ಲರಿಗೂ ಹೊಂದಾಣಿಕೆಯಾಗುತ್ತಾರೆ ಎಂದು ಹೇಳುವುದಕ್ಕೆ ಆಗಲ್ಲ. ಯಾಕಂದ್ರೆ ಅಲ್ಲಿರುವವರೆಲ್ಲ ಹೊಸಬರೇ ಆಗಿರುತ್ತಾರೆ. ಹೀಗಾಗಿ ಮನಸ್ಥಿತಿಯೂ ಅಡ್ಜೆಸ್ಟ್ ಆಗಬೇಕಾಗಿರುತ್ತದೆ. ಆರಂಭದಲ್ಲಿ ಹಾಯ್, ಬೈ ಎಂದು ಹೇಳಿಕೊಳ್ಳುವವರು, ಟಾಸ್ಕ್‌ಗಳು ಶುರುವಾದಾಗ ದುಷ್ಮನಿಗಳಾಗಿರುತ್ತಾರೆ. ತೀರಾ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವಷ್ಟು, ಎದುರಿಗಿರುವವರಿಗೆ ಸಲಹೆ ಕೊಡುವಷ್ಟು ಆತ್ಮೀಯತೆ ಎಲ್ಲರಲ್ಲೂ ಬೆಳೆಯುವುದಿಲ್ಲ. ಅದು ಕೆಲವೊಂದಿಷ್ಟು ಜನರಿಗೆ ಮಾತ್ರ ಬೆಳೆಯುವುದು. ಈ ಬಾರಿಯ ಬಿಗ್ ಬಾಸ್‌ನಲ್ಲಿ ನಮ್ರತಾ ಹಾಗೂ ಇಶಾನಿ ನಡುವೆ ಆ ಬಾಂಧವ್ಯ ಬೆಳೆದಿದೆ.
ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಕಣ್ಣೀರು
ನಮ್ರತಾ ಧಾರಾವಾಹಿಗಳಲ್ಲಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಆಕ್ಟೀವ್ ಗರ್ಲ್. ಇತ್ತೀಚೆಗಷ್ಟೇ ಸ್ವಂತ ಮನೆಯನ್ನು ತೆಗೆದುಕೊಂಡು, ಗೃಹ ಪ್ರವೇಶ ಕೂಡ ಮುಗಿಸಿದ್ದಾರೆ. ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡು, ನಾನು ಸಾಧನೆ ಮಾಡಲೇಬೇಕೆಂದುಕೊಂಡು ನಮ್ರತಾ ಲೈಫ್‌ನಲ್ಲಿ ರಿಸ್ಕ್ ತೆಗೆದುಕೊಂಡಿರುವುದು ಸಂಬಂಧಿಕರ ಹಂಗಿಸುವ ಮಾತುಗಳಿಂದ. ಆ ನೋವಿನ ಮಾತುಗಳನ್ನು ಇವತ್ತು ಇಶಾನಿ ಬಳಿ ಹೇಳಿಕೊಂಡಿದ್ದಾರೆ.
ಅಪ್ಪ ಅಮ್ಮನನ್ನು ನೆನೆದು ಕಣ್ಣೀರು
ಬಿಗ್ ಬಾ್ ಮನೆಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಮೊದಲಿಗೆ ನಮ್ರತಾ ಅವರನ್ನು ಮನೆಗೆ ಕಳುಹಿಸಲಾಗಿದೆ. ಹೆಣ್ಣು ಮಕ್ಕಳನ್ನು ಲಕ್ಷ್ಮೀ ಎನ್ನುತ್ತಾರೆ ಅದಕ್ಕೆ. ಆದರೆ ನಮ್ರತಾ ಲೈಫ್‌ನಲ್ಲಿ ಹೆಣ್ಣು ಮಗು ಎಂಬ ಕಾರಣಕ್ಕೇನೆ ಸಂಬಂಧಿಕರು ತುಂಬಾ ಕೆಟ್ಟದಾಗಿ ನೋಡಿದ್ದರಂತೆ. ಊಟ ಕೂಡ ಕೊಡದಂತೆ ಎತ್ತಿ ಇಡುತ್ತಾ ಇದ್ದರಂತೆ. ನಮ್ರತಾ ಹುಟ್ಟಿದ್ದಕ್ಕೆ ಅಪ್ಪ ಅಮ್ಮನಿಗೂ ಕಷ್ಟ ಆಯ್ತು ಎಂಬುದು ನಟಿಯ ಅಳಲು. ಕಣ್ಣೀರು ಹಾಕಿದ ನಮ್ರತಾರನ್ನು ಇಶಾನಿ ಸಮಾಧಾನ ಮಾಡಿದ್ದಾರೆ.

ಕಣ್ಣೀರಿಗೆ ಬಿಗ್ ಬಾಸ್ ಕಾರಣವೆಂದ್ರಾ ನಮ್ರತಾ..?
ನಮ್ರತಾ ಯಾರೆಲ್ಲಾ ಟಾರ್ಚರ್ ಕೊಟ್ಟರೋ ಅವರನ್ನೆಲ್ಲ ದೂರ ಇಟ್ಟಿದ್ದಾರೆ. ಆದರೆ, ಅವರ ಮುಂದೆ ತುಂಬಾ ಚೆನ್ನಾಗಿಯೇ ಬದುಕಬೇಕು ಎಂಬ ಹಠ ತೊಟ್ಟಿದ್ದಾರೆ. "ಅದಕ್ಕಾಗಿಯೇ ಹಗಲು ರಾತ್ರಿ ದುಡಿಯುತ್ತಿದ್ದೀನಿ ಎಂದಿದ್ದಾರೆ. ಆದರೆ ಈ ಬಿಗ್ ಬಾಸ್ ಮನೆಯಲ್ಲಿ ಒಳಗೆ ಇದ್ದೀವಿ ಅಲ್ವಾ. ಅದಕ್ಕೆ ಎಲ್ಲಾ ನೆನಪಾಗುತ್ತಿದೆ. ಹೊರಗೆ ಇದ್ದರೆ ಯೋಚನೆ ಮಾಡುವುದಕ್ಕೂ ಸಮಯ ಇರಲ್ಲ. ಕೆಲಸದಲ್ಲಿಯೇ ಬ್ಯುಸಿ ಆಗಿ ಬಿಡುತ್ತೀವಿ" ಎಂದು ಕಣ್ಣೀರು ಹಾಕಿದ್ದಾರೆ. ಆದರೆ ಒಂದು ಕ್ಷಣ ಕಣ್ಣೀರು ಒರೆಸಿಕೊಂಡು ಈ ಟಾಪಿಕ್ ನಮ್ಮಿಬ್ಬರ ನಡುವೆ ಚರ್ಚೆಯಾಗುವುದೇ ಬೇಡ ಎಂದು ಅದನ್ನು ಅಲ್ಲಿಗೆ ಮುಗಿಸಿದ್ದಾರೆ.


Click it and Unblock the Notifications











