Bigg Boss 10: ಬಿಗ್ ಬಾಸ್ ಜರ್ನಿ ಮುಗಿಸಿದ ನಮ್ರತಾ; ವಿನಯ್ ಬಳಗದಿಂದ ಮತ್ತೊಬ್ಬರು ಔಟ್
ಬಿಗ್ ಬಾಸ್ ಸೀಸನ್ 10 ಸಾಕಷ್ಟು ಕುತೂಹಲದ ಘಟ್ಟ ತಲುಪಿದೆ. ಇನ್ನೊಂದು ವಾರ ಕಳೆದರೆ ಫಿನಾಲೆ ದಿನ ಬಂದೇ ಬಿಡುತ್ತದೆ. ಆದರೆ, ಈ ದಿನಕ್ಕಾಗಿ ಇಡೀ ಮನೆ ಕುತೂಹಲದಿಂದ ಕಾಯುತ್ತಿದೆ. ಸೇಫ್ ಆದವರಿಗೆ ಟೆನ್ಶನ್ ಇಲ್ಲ. ಆದರೆ ನಾನಾ.. ನೀನಾ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಆ ಸ್ಥಾನದಲ್ಲಿ ಕುಳಿತವರಿಗೆ ಟೆನ್ಶನ್ ಜಾಸ್ತಿಯಾವುವುದು ಸಹಜ. ಇಂದು ಅಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು ಕಾರ್ತಿಕ್ ಹಾಗೂ ನಮ್ರತಾ.
ನಮ್ರತಾಗೆ ಫಿನಾಲೆಗೆ ಹೋಗಲೇಬೇಕೆಂಬ ಬಯಕೆ ಇತ್ತು. ಹೋಗುತ್ತೀನಿ ಎಂಬ ನಂಬಿಕೆ ಕೂಡ ಇತ್ತು. ಆದರೆ, ಫಿನಾಲೆ ಘಟ್ಟಕ್ಕೆ ಬಂದು ಈ ಪರಿಸ್ಥಿತಿ ತಲುಪುವುದು ಕಷ್ಟ. ಆ ಪರಿಸ್ಥಿತಿ ಅರ್ಥವಾಗುತ್ತೆ ಎಂದು ನಮ್ರತಾಗೆ ಒಂದಷ್ಟು ಹುಮ್ಮಸ್ಸು ತುಂಬಿದರು. ಉಳಿದಂತೆ ಎಲ್ಲರಿಗೂ ಆಲ್ ದಿ ಬೆಸ್ಟ್ ಹೇಳಿದರು ಸುದೀಪ್.

ವೇದಿಕೆ ಮೇಲೆ ರೇಗಿಸಿದ ಕಿಚ್ಚ
ಆರಂಭದಿಂದ ವಿನಯ್ ಟೀಂ ಒಬ್ಬೊಬ್ಬರೇ ಮನೆಗೆ ಹೋಗಿದ್ದಾರೆ. ಇಂದು ಸುದೀಪ್ ಕೂಡ ವೇದಿಕೆ ಮೇಲೆ ಅದನ್ನೇ ಚರ್ಚೆಗೆ ತಂದಿದ್ದರು. ಇನ್ನೊಬ್ಬರು ಉಳಿದಿದ್ದಾರೆ. ನೀವೊಬ್ಬರೆ ಸ್ಟ್ರಾಂಗ್ ಎಂದಿದ್ದರು. ತುಕಾಲಿ ಸಂತೋಷ್ ಅವರನ್ನು ಕೇಳಿದಾಗ ಈಗ ಇರುವ ಒಬ್ಬರು ಹೋಗಬಹುದು ಎಂದೇ ಹೇಳಿದರು. ಆ ಮಾತಿನಂತೆ ಇಂದು ವಿನಯ್ ಬಳಗದಲ್ಲಿ ಉಳಿದ ನಮ್ರತಾ ಕೂಡ ಮನೆಗೆ ಹೋಗಿದ್ದಾರೆ. ನಮ್ರತಾ ಔಟ್ ಆದ ಮೇಲೆ ಕಿಚ್ಚ ಸುದೀಪ್, ನಿಮ್ಮ ಬಳಗ ಇನ್ನು ಚಿಕ್ಕದಾಗಿ ಹೋಯ್ತು ಎಂದಿದ್ದಾರೆ.
ಗೆಲ್ಲುತ್ತೀನಿ ಎಂದುಕೊಂಡಿದ್ದ ನಮ್ರತಾ ಕಣ್ಣೀರು
ನಮ್ರತಾ ಸಾಕಷ್ಟು ಹೋಪ್ ಇಟ್ಟುಕೊಂಡಿದ್ದರು. ಆದರೆ, ಈ ವಾರ ನಿರೀಕ್ಷೆಯೇ ಮಾಡದಂತೆ ನಮ್ರತಾ ಔಟ್ ಆಗಿದ್ದಾರೆ. ವಿನಯ್‌ಗೆ ಇದು ಸಾಕಷ್ಟು ಬೇಸರ ಆಗಿದೆ. ಎಲ್ಲರನ್ನು ಹಗ್ ಮಾಡಿ, ಆಲ್ ದಿ ಬೆಸ್ಟ್ ಹೇಳಿದ ನಮ್ರತಾ, ವಿನಯ್ ಹಗ್ ಮಾಡಿದಾಗ ನೋವನ್ನು ಹೊರಗೆ ಹಾಕಿದ್ದಾರೆ. ಬಳಿಕ "ನನಗೆ ಖುಷಿ ಇದೆ. ನೀವೆಲ್ಲಾ ತುಂಬಾ ಕಷ್ಟ ಪಟ್ಟಿದ್ದೀರಾ. ಫಿನಾಲೆಗೆ ಬಂದಿಲ್ಲ ಅಂತ ಅಲ್ಲ, ಆದರೆ ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತೀನಿ. ಹೊರಗೆ ಬಂದ ಮೇಲೆ ಭೇಟಿ ಮಾಡೋಣಾ" ಎಂದು ಹೇಳಿ ಹೊರಟಿದ್ದಾರೆ.

ತುಕಾಲಿ ಹೊರಹೋಗುವ ಸಾಧ್ಯತೆ
ಈ ವಾರದ ಎಲಿಮಿನೇಷನ್ ಮುಗಿದಿದೆ. ನಮ್ರತಾ ಹೊರಗೆ ಬಂದು ಆಗಿದೆ. ಫಿನಾಲೆಗೆ ತಲುಪುವುದಕ್ಕೆ ಐದು ಜನರಿಗೆ ಮಾತ್ರ ಅವಕಾಶ. ಈಗ ಆರು ಜನ ಇದ್ದಾರೆ. ಅದರಲ್ಲಿ ಒಬ್ಬರು ಔಟ್ ಆಗಲಿದ್ದಾರೆ ಎಂದು ಸುದೀಪ್ ಅವರು ಕೂಡ ಸೇಫ್ ಆಗಿ ಉಳಿದಿರುವ ಮನೆ ಮಂದಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಎಲ್ಲಾ ರೀತಿಯಲ್ಲೂ ಅಂದಾಜು ಮಾಡಿದರೆ ತುಕಾಲಿ ಹೊರಗೆ ಬರಬಹುದು ಎನ್ನಲಾಗಿದೆ. ಕಳೆದ ವಾರ ನಾಮಿನೇಷನ್‌ನಿಂದ ಸೇಫ್ ಆಗಿ ತುಕಾಲಿ ಫಿನಾಲೆಗೆ ಬಂದಿದ್ದರು.
ನಮ್ರತಾ ಮನದಾಳದ ಮಾತೇನು..?
ನಮ್ರತಾಗೆ ಕಡೆ ಕಡೆಯಲ್ಲಿ ಕಾರ್ತಿಕ್ ವಿಚಾರ ಸಾಕಷ್ಟು ನೆಗೆಟಿವ್ ಆಗುವುದಕ್ಕೆ ಶುರುವಾಗಿತ್ತು. ಆರಂಭದಲ್ಲಿ ಸ್ನೇಹಿತ್ ಲವ್ ಮಾಡ್ತಾ ಇದ್ದೀನಿ ಎಂದಾಗಲೂ ಸೀರಿಯಸ್ ಆಗಿರಲಿಲ್ಲ. ಆದರೆ, ಕಡೆಯಲ್ಲಿ ಕಾರ್ತಿಕ್ ಜೊತೆಗೆ ಕ್ಲೋಸ್ ಆಗಿದ್ದರು. ಅದೆಲ್ಲವನ್ನು ಸುದೀಪ್ ಜೊತೆಗೆ ಮಾತನಾಡಿದ ನಮ್ರತಾ, ನಟಿ ಎಂದರೆ ಓ ಹೀಗೆ ಇರಬೇಕು ಎಂದುಕೊಂಡು ಬಿಟ್ಟಿದ್ದೆ. ಆದರೆ, ಬಿಗ್ ಬಾಸ್ ಮನೆಯೊಳಗೆ ನಾನು ರಿಯಲ್ ಆಗಿ ಬದುಕಿದ್ದು ಎಂದಿದ್ದಾರೆ.


Click it and Unblock the Notifications











