ಸ್ನೇಹಿತ್ ಕಪ್‌ನಲ್ಲೇ ಟೀ ಕುಡಿತಿರೋ ನಮ್ರತಾ.. ಟೈಂ ಪಾಸ್ ಮಾಡ್ತಿದ್ದಾರಾ ತನಿಷಾ-ವರ್ತೂರು:ಕಿಚ್ಚನ ಪಂಚಾಯ್ತಿಯಲ್ಲಿ ಆಗಿದ್ದೇನು..?
ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿ ಬಗ್ಗೆ ಒಂದಷ್ಟು ನಿರೀಕ್ಷೆಗಳು ಖಂಡಿತ ಇರುತ್ತದೆ. ವಾರಪೂರ್ತಿ ನಡೆಯುವ ಘಟನೆಗಳ ಮೇಲೆ ಸುದೀಪ್ ಕಣ್ಣು ಹಾಯಿಸುತ್ತಾರೆ. ತಪ್ಪುಗಳನ್ನು ತಿದ್ದುತ್ತಾರೆ. ಮನೆಯವರನ್ನು ನಕ್ಕಿ ನಗಿಸುತ್ತಾರೆ. ವಾರವಿಡಿ ತಮಗೆ ಬೇಕಾದಂತೆ ಜೀವಿಸಿ, ಬಿಗ್ ಬಾಸ್ ನೀಡಿದ ಟಾಸ್ಕ್‌ಗಳನ್ನು ಆಡಿ, ಕಿಚ್ಚನಿಗಾಗಿ ಸದಸ್ಯರು ಕೂಡ ಕಾಯುತ್ತಾ ಇರುತ್ತಾರೆ.
ಸುದೀಪ್ ಅವರಿಂದ ನ್ಯಾಯ ಸಿಗುತ್ತೆ ಎಂಬುದು ಮನೆಯವರ ನಂಬಿಕೆ. ಎಷ್ಟೇ ಮನಸ್ತಾಪಗಳು, ಭಿನ್ನಾಭಿಪ್ರಾಯಗಳು ಮೂಡಿದರು ಅದನ್ನು ಸುದೀಪ್ ಅವರಿಗೆ ತಿಳಿಸಬೇಕು ಎಂಬ ಕುತೂಹಲದಿಂದ ಕಾಯುತ್ತಾ ಇರುತ್ತಾರೆ. ಅದರಲ್ಲೂ ವಾರವಿಡಿ ಆಡಿದ ಆಟದಲ್ಲಿ ಒಂದಷ್ಟು ಪ್ರಶ್ನೆಗಳು ಹುಟ್ಟುತ್ತವೆ. ಆ ಪ್ರಶ್ನೆಗಳಿಗೆಲ್ಲಾ ಕಿಚ್ಚನ ಪಂಚಾಯ್ತಿಯಲ್ಲಿ Yes/No ಮೂಲಕ ಉತ್ತರ ಸಿಗಲಿದೆ.

ವರ್ತೂರು ಸಂತೋಷ್ ಹಾಗೂ ತನಿಷಾದು ಟೈಂ ಪಾಸ್ ಫ್ರೆಂಡ್ಶಿಪ್!
ವರ್ತೂರು ಅಂತರ ಕಾಯ್ದುಕೊಳ್ಳುತ್ತಿದ್ದಾರಾ..?
ಬಿಗ್ ಬಾಸ್ ಮನೆಯಲ್ಲಿ ತನಿಷಾ ಹಾಗೂ ವರ್ತೂರು ಸಂತೋಷ್ ಅವರ ನಡುವೆ ಹೊಸದೊಂದು ಸ್ನೇಹ ಅರಳಿತ್ತು. ಅದು ಮನೆಯವರಿಗೆಲ್ಲರಿಗೂ ತಿಳಿದಿತ್ತು. ಆದರೆ ಇತ್ತಿಚೆಗೆ ಅದು ಕಡಿಮೆಯಾಗಿದೆ. ಇದು ಸುದೀಪ್ ಗಮನಕ್ಕೂ ಬಂದಿದ್ದು, ಇವತ್ತಿನ ಪಂಚಾಯ್ತಿಯಲ್ಲಿ ಅದೇ ಪ್ರಶ್ನೆ ಕೇಳಿದ್ದಾರೆ. ತನಿಷಾ ಹಾಗೂ ವರ್ತೂರು ಸಂತೋಷ್ ಅವರದ್ದು ಟೈಂ ಪಾಸ್ ಫ್ರೆಂಡ್ಶಿಪ್ ಅಂತ. ಎಲ್ಲರು ಹೌದು ಎಂದರು. ತನಿಷಾ ಹಾಗೂ ವರ್ತೂರು ಅದನ್ನು ಒಪ್ಪಿಲ್ಲ. ಬದಲಿಗೆ ಲಾಂಗ್ ಟೈಂ ಬಂಧನ ಅಂತ, ನಾಚಿ ನೀರಾಗಿದ್ದಾರೆ.
ನಮ್ರತಾ ಸ್ನೇಹಿತ್‌ನ ಮಿಸ್ ಮಾಡಿಕೊಳ್ಳುತ್ತಿದ್ದಾರಾ..?
ಸ್ನೇಹಿತ್ ಲೋಟದಲ್ಲಿಯೇ ಕಾಫಿ ಕುಡಿಯುವ ನಮ್ರತಾ
ಬಿಗ್ ಬಾಸ್ ಮನೆಯ ಜರ್ನಿಯನ್ನು ಸ್ನೇಹಿತ್ ಕಳೆದ ವಾರ ಮುಗಿಸಿದ್ದಾರೆ. ಮನೆಯಲ್ಲಿ ಇದ್ದಾಗ ನಮ್ರತಾ ಅವರ ಹಿಂದೆ ಹಿಂದೆ ಬಿದ್ದು ಕಿರಿಕಿರಿ ಮಾಡುತ್ತಾ ಇದ್ದರು. ಆದರೆ ಈಗ ತುಂಬಾ ಮಿಸ್ ಮಾಡಿಕೊಳ್ಳುತ್ತಾ ಇದ್ದಾರೆ. ಈ ಬಗ್ಗೆ ಸುದೀಪ್ ಮನೆಯವರಿಗೆ ಪ್ರಶ್ನೆ ಕೇಳಿದಾಗ, ಎಲ್ಲರೂ ಹೌದು ಎಂದಿದ್ದಾರೆ. ಮಿಸ್ ಮಾಡಿಕೊಳ್ಳುತ್ತಾ ಇರುವುದಕ್ಕೇನೆ, ಸ್ನೇಹಿತ್ ಅವರು ಬಳಸುತ್ತಿದ್ದ ಗ್ಲಾಸ್ ಹಾಗೂ ಪ್ಲೇಟ್ ಬಳಸುತ್ತಿದ್ದಾರಂತೆ.
ಮೈಕಲ್ ಇತ್ತೀಚೆಗೆ ಹೀಗೆ ಆಡುತ್ತಿರೋದ್ಯಾಕೆ..?
ಮೈಕಲ್ ಇರುವುದೇ ಒಂಥರ ಸೋಂಬೇರಿಯ ರೀತಿ. ಆದರೆ ಇತ್ತಿಚೆಗೆ ಆಟಗಳಲ್ಲಿ ಗೆಲುವು, ಹೊಗಳಿಕೆ ಎಲ್ಲವೂ ಸೇರಿ ಅಹಂಕಾರ ಹೆಚ್ಚಾಗಿದೆ ಎಂಬುದು ಮನೆಯವರಿಗೂ ತಿಳಿದಂತೆ ಕಾಣುತ್ತಿದೆ. ಅದನ್ನೇ ಸುದೀಪ್ ಅವರು ಪ್ರಶ್ನಿಸಿದಾಗ, ನಾನು ಇರುವುದೇ ಹೀಗೆ ಸರ್. ಈಗಾಗಲೇ ಎಲ್ಲರಿಗೂ ನನ್ನ ಬಗ್ಗೆ ಗೊತ್ತು. ಹಾಗೇ ಇದ್ದೀನಿ ಎಂದಿದ್ದಾರೆ.

ಪ್ರತಾಪ್ ಹಾಗೂ ಸಂಗೀತಾ ಮಾತ್ರ ಅನ್ನಿಸಿದ್ದನ್ನ ಹೇಳುವ ಗಡ್ಸ್ ಇರೋದಾ?
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಸಂಗೀತಾ ಅದೇ ರೀತಿ ಇದ್ದಾರೆ. ತಮಗೆ ಅನ್ನಿಸಿದ ರೀತಿಯಲ್ಲಿಯೇ ಮಾತನಾಡುತ್ತಾರೆ, ನಡೆದುಕೊಳ್ಳುತ್ತಾರೆ. ಈಗಂತು ಪ್ರತಾಪ್ ಹಾಗೂ ಸಂಗೀತಾ ಅಕ್ಕ-ತಮ್ಮನ ಪಾತ್ರವನ್ನು ಸ್ಟ್ರಾಂಗ್ ಆಗಿ ಬೆಳೆಸಿಕೊಂಡಿದ್ದಾರೆ. ಇಬ್ಬರು ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.
ಕಾರ್ತಿಕ್, ವಿನಯ್ ಅವರಿಗೆ ಬಕೆಟ್ ಹಿಡೀತಾ ಇದಾರೆ ಎಂದ ಸಂಗೀತಾ
ಕಾರ್ತಿಕ್ ಇತ್ತಿಚೆಗೆ ಬೇರೆ ರೀತಿಯಲ್ಲಿಯೇ ಬದಲಾಗುತ್ತಿದ್ದಾರೆ. ಸಂಗೀತಾ ಜೊತೆಗೆ ಮತ್ತೆ ಜಗಳ ಮಾಡಿಕೊಂಡಿದ್ದಾರೆ. ವಿನಯ್ ಜೊತೆಗೆ ಇರುವುದನ್ನು ಕಂಡಾಗ ಬಕೆಟ್ ಹಿಡಿಯುತ್ತಿದ್ದಾರೆ ಎಂಬ ಮಾತನ್ನು ಸಂಗೀತಾ ಹೇಳಿದ್ದರು. ಅದನ್ನು ಸಂಗೀತಾ ಸಮರ್ಥಿಸಿಕೊಂಡರು, ಕಾರ್ತಿಕ್ ಒಪ್ಪಲಿಲ್ಲ.


Click it and Unblock the Notifications











