ಇಷ್ಟು ದಿನ ಜೊತೆಗಿದ್ದ ವಿನಯ್‌ರನ್ನೇ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟ ನಮ್ರತಾ ಗೌಡ: ಶಾಕ್ ಆಯ್ತು ಆನೆ...!
ವಿನಯ್ ಗೌಡ ಬಿಗ್ ಬಾಸ್ ಮನೆಗೆ ಬಂದ ಕೆಲವೇ ವಾರಗಳಲ್ಲಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದರು. ಇನ್ನು ಎಲ್ಲರಿಗೂ ಸಹ ಬಿಗ್ ಬಾಸ್ ಮನೆಗೆ ಬಂದ ಮೇಲೆ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಪ್ರತಾಪ್ ತಂಡ ಕ್ಯಾಪ್ಟನ್ಸಿ ಟಾಸ್ಕ್ ಆಡದಂತೆ ಹೊರಗೆ ಉಳಿದುಕೊಂಡಿತು. ಪ್ರತಾಪ್ ಮಾಡಿದ ಸ್ಟ್ಯಾಟರ್ಜಿ ಯಾಕೋ ಉಲ್ಟಾ ಹೊಡೆಯಿತು. ಇದರಿಂದಾಗಿ ಪ್ರತಾಪ್ ಸಹ ಬೇಸರವಾಗಿದೆ. ಕಾರ್ತಿಕ್ ಅನ್ನು ಟೀಮ್ ಗೆ ಕರೆದುಕೊಂಡರೆ ಜೋರಾಗಿ ಕಿರುಚಾಟ ಮಾಡುತ್ತಾರೆ ಅದಕ್ಕೆ ನಾನು ಅವರನ್ನ ಟೀಮ್ ನಿಂದ ಹೊರಗೆ ಇಡುತ್ತೇನೆ ಎಂದು ಮಾತು ಹೇಳುವ ಮೂಲಕ ಇಡೀ ತಂಡದ ಸೋಲಿಗೆ ಪ್ರತಾಪ್ ಕಾರಣರಾದರು. ಇದಕ್ಕಾಗಿ ತುಕಾಲಿ ಸಂತೋಷ್ ಕೂಡ ಪ್ರತಾಪ್ ಮೇಲೆ ಬೇಸರ ವ್ಯಕ್ತಪಡಿಸಿದರು. ಆದರೆ ಈಗ ಇದೇ ಕ್ಯಾಪ್ಟನ್ ವಿಚಾರಕ್ಕೆ ಚೆನ್ನಾಗಿ ಇದ್ದವರ ಮಧ್ಯೆ ಬಿರುಕು ಮೂಡಿದೆ.
ನಮ್ರತಾ, ವಿನಯ್, ಸ್ನೇಹಿತ್ ಈ ಮೂವರದ್ದು ಕೂಡ ಒಂದು ತಂಡ ಒಬ್ಬರನ್ನ ಬಿಟ್ಟು ಒಬ್ಬರು ಇರುತ್ತಾ ಇರಲಿಲ್ಲ. ಒಬ್ಬರ ಮೇಲೆ ಯಾರಾದರೂ ಜಗಳಕ್ಕೆ ಬಂದರೆ ಈ ಮೂವರು ಸಹ ಒಟ್ಟಿಗೆ ನಿಂತುಕೊಂಡು ಎದುರಿಸುತ್ತಾ ಇದ್ದರು. ಯಾರೇ ಏನೇ ಮಾಡಿದರು ನಾವು ಮೂವರು ಒಂದೇ ಎಂದು ಗುಂಪು ಮಾಡಿಕೊಂಡು ತಮ್ಮ ತಮ್ಮಲ್ಲಿ ಆಟವನ್ನು ಆಡುತ್ತಾ ಇದ್ದರು. ಈಗ ನಮ್ರತಾ ಪ್ರತಾಪ್ ತಂಡಕ್ಕೆ ಬಂದ ಮೇಲೆ ಸ್ವಲ್ಪ ಬುದ್ಧಿ ಕಲಿತಂತೆ ಕಾಣುತ್ತದೆ. ಇಲ್ಲಿ ಯಾರು ನಮ್ಮವರಲ್ಲ ಎಂಬುದು ನಮ್ರತಾಗೆ ಅರ್ಥವಾಗಿರಬೇಕು. ಇದಕ್ಕಾಗಿ ವಿನಯ್ ಕ್ಯಾಪ್ಟೆನ್ಸಿ ಟಾಸ್ಕ್ ಆಡಬಾರದು ಎಂದು ಹೇಳಿಬಿಟ್ಟಿದ್ದಾರೆ. ಆದರೆ ನಮ್ರತಾ ತೆಗೆದುಕೊಂಡ ನಿರ್ಧಾರ ಮಾತ್ರ ತಪ್ಪಾಗಿದ್ಯಾ ಅಥವಾ ಸರಿಯಾಗಿದೆಯಾ ಎಂಬುದೇ ಈಗ ಚರ್ಚೆ ಆಗುತ್ತಿದೆ.

ಪ್ರತಾಪ್ ಯಾವಾಗ ನಮ್ರತಾಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲವೋ ಅಂದಿನಿಂದಲೇ ನಮ್ರತಾ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ನಮಗೆ ಇಲ್ಲಿ ಯಾರು ಯಾರು ಆಗೋದಿಲ್ಲ ಎಂಬುವುದು ನಮ್ರತಾಗೆ ಅರಿವಾದಂತೆ ಕಾಣಿಸುತ್ತಿದೆ. ಅದಕ್ಕಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವಷ್ಟರಲ್ಲಿ ತಮ್ಮತನವನ್ನು ಬಿಟ್ಟು ಕೊಡಬಾರದು ಎಂದುಕೊಂಡು ಜೊತೆಗೆ ಇದ್ದ ಸ್ನೇಹಿತನನ್ನೇ ಕ್ಯಾಪ್ಟನ್ಸಿ ಟಾಸ್ಕ್ ಆಡಬಾರದು ಎಂದು ಹೇಳಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನು ಸಹ ಕೊಟ್ಟಿದ್ದಾರೆ. ಆದರೆ ನಮ್ರತಾ ಹೇಳಿದ ಕಾರಣ ಮಾತ್ರ ವಿನಯ್ ಕೋಪಕ್ಕೆ ಗುರಿಯಾಗಿದೆ. ಇಷ್ಟು ದಿನ ಇದ್ದುಕೊಂಡು ಈ ರೀತಿ ನಮ್ರತಾ ಮಾಡಿಬಿಟ್ಟರಲ್ಲ ಎಂಬ ನೋವು ವಿನಯ್‌ಯನ್ನು ಕಾಡುತ್ತಾ ಇದೆ.
ಕ್ಯಾಪ್ಟನ್ಸಿ ಟಾಸ್ಕ್ ಆಡಬಾರದಂತೆ ವಿನಯ್!
ನಮ್ರತಾ - ವಿನಯ್ ನಡುವೆ ಬಿರುಕು
ನಮ್ರತಾ ಹಾಗೂ ವಿನಯ್ ಇವರಿಬ್ಬರು ತುಂಬಾ ಕ್ಲೋಸ್ ಆಗಿಯೇ ಇದ್ದರು. ಇವರ ಗುಂಪು ಕೂಡ ಅಗ್ರೆಸ್ಸಿವ್‌ಆಗಿ ಆಟವನ್ನು ಆಡುತ್ತಿತ್ತು. ಜೋರಾಗಿ ಕಿರುಚಿಕೊಂಡು ಜಗಳವಾಡಿಕೊಂಡು ಟಾಸ್ಕ್‌ಗಳನ್ನು ಕಂಪ್ಲೀಟ್ ಮಾಡುತ್ತಿದ್ದರು. ಆದರೆ ಅದೇನು ಗೊತ್ತಿಲ್ಲ ವೈಯಕ್ತಿಕವಾಗಿ ಒಂದು ನಿರ್ಧಾರವನ್ನು ತೆಗೆದುಕೊಳ್ಳುವ ಒಳ್ಳೆ ಬಿಗ್ ಬಾಸ್ ಮನೆಯಲ್ಲಿ ಯಡವಟ್ಟುಗಳು ಆಗುತ್ತದೆ. ಅದೇ ರೀತಿ ಇಂದು ನಮ್ರತಾ ತೆಗೆದುಕೊಂಡ ನಿರ್ಧಾರ ಯಡವಟ್ಟಿಗೆ ಕಾರಣವಾಗಿದೆ. ಬಿಗ್ ಬಾಸ್ ನಮ್ರತಾಗೆ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಯಾರು ಅರ್ಹರಲ್ಲ ಎಂದು ಕೇಳಿದ ಪ್ರಶ್ನೆಗೆ ನಮ್ರತಾ ವಿನಯ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ.

ಆದರೆ ವಿನಯ್ ನಮ್ರತಾ ತಮ್ಮ ಹೆಸರನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕೂಡ ನಿರೀಕ್ಷೆ ಮಾಡಿರಲಿಲ್ಲ. ಅನಿರೀಕ್ಷಿತವಾಗಿ ನಮ್ರತಾ ವಿನಯ್ ಹೆಸರು ತೆಗೆದುಕೊಂಡು ವಿನಯ್‌ಗೆ ಶಾಕ್ ಕೊಟ್ಟಿದ್ದಾರೆ. ಇನ್ನು ಇದೇ ವೇಳೆ ನಮ್ರತಾ ಹೇಳಿದ ಕಾರಣ ಮಾತ್ರ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರನ್ನ ಶಾಕ್ ಆಗುವಂತೆ ಮಾಡಿದೆ. ಸ್ಪಲ್ಪ ಕೋಪದಲ್ಲಿ ನಿರ್ಧಾರವನ್ನು ತಗೆದುಕೊಳ್ಳುತ್ತಾರೆ. ಮಾತನಾಡುವಾಗಲೂ ಅಷ್ಟೇ ಬೇರೆಯವರಿಗೆ ಹರ್ಟ್ ಆಗು ರೀತಿಯಲ್ಲಿ ಮಾತನಾಡುತ್ತಾರೆ ಎಂದಿದ್ದಾರೆ. ನಮ್ರತಾ ಈ ರೀತಿ ಮಾತನಾಡಿದ್ದು ವಿನಯ್ ಗೆ ಕೋಪದ ಜೊತೆ ಬೇಸರವನ್ನ ತರಿಸಿದೆ.
ಕೋಪ ಮಾಡಿಕೊಂಡ ವಿನಯ್
ಇನ್ನೂ ನಮ್ರತಾ ಈ ರೀತಿಯಾಗಿ ಹೇಳಿದ್ದಕ್ಕೆ ವಿನಯ್ ಕೋಪ ಮಾಡಿಕೊಂಡಿದ್ದಾರೆ. ಈ ಒಂದು ಜರ್ನಿಯಲ್ಲಿ ನನ್ನ ಜೊತೆ ಯಾರು ಬರುವುದಿಲ್ಲ ಎಂಬ ಸತ್ಯ ಮಾತ್ರ ನನಗೆ ಅರ್ಥವಾಯಿತು ಎಂದು ಕಠೋರವಾಗಿ ಹೇಳಿದ್ದಾರೆ. ಇನ್ನು ತಾವು ನಿಂತಿದ್ದ ಸ್ಥಳದಿಂದ ಬೇರೆ ಕಡೆಗೆ ತೆರಳಿದ್ದಾರೆ. ಒಬ್ಬರೇ ಏಕಾಂಗಿಯಾಗಿ ಇರಲು ನೋಡಿದ್ದಾರೆ. ಇನ್ನು ನಮ್ರತಾಗು ಕೂಡ ತಾನು ತೆಗೆದುಕೊಂಡ ನಿರ್ಧಾರ ತಪ್ಪಾಯಿತಾ ಎಂಬ ಬೇಸರದ ಛಾಯೆ ಮುಖದಲ್ಲಿ ಆವರಿಸಿದೆ. ಸ್ನೇಹಿತ್‌ಗೆ ನಮ್ರತಾ ಈ ರೀತಿಯಾಗಿ ಹೇಳಿದ್ದು ಕೂಡ ಬೇಸರವನ್ನ ತಂದಿದೆ. ಮುಖವನ್ನೆಲ್ಲ ಬಾಡಿಸಿಕೊಂಡು ವಿನಯ್ ಏಕಾಂಗಿಯಾಗಿ ಯೋಚನೆ ಮಾಡುತ್ತಾ ಒಂದು ಕಡೆ ಮಲಗಿ ಬಿಟ್ಟಿದ್ದಾರೆ.


Click it and Unblock the Notifications











