Bigg Boss: ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರ ಬಂದಿದ್ದಕ್ಕೆ ನಮ್ರತಾ ಕಣ್ಣೀರು.. ನಂಬಿಕೆ ದ್ರೋಹ ಮಾಡಿದ್ರಾ ಪ್ರತಾಪ್?
ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ಕೂಲ್ ಆಗಿ ಆಟವನ್ನು ಆಡುತ್ತಾ ಇದ್ದಾರೆ. ತನಗೆ ಯಾರು ಶತ್ರುವೂ ಇಲ್ಲ ಮಿತ್ರರು ಇಲ್ಲ ಎಂಬಂತೆ ವೈಯಕ್ತಿಕವಾಗಿ ಆಟವಾಡಲು ಸಿದ್ದರಾಗಿದ್ದಾರೆ. ಈ ಬಗ್ಗೆ ವಿನಯ್ ಸಾಕಷ್ಟು ಬಾರಿ ಪ್ರತಾಪ್‌ರನ್ನು ನಾಮಿನೇಟ್ ಮಾಡಿದಾಗಲೂ ಸಹ ಇದೆ ಮಾತನ್ನ ಹೇಳಿದ್ದರು. ಪ್ರತಾಪ್ ಉಸ್ತುವಾರಿ ನೋಡಿಕೊಂಡು ಬೇರೆಯವರ ಜೊತೆ ಹೊಂದಾಣಿಕೆ ಮಾಡಿಕೊಂಡೆ ಮನೆಯಲ್ಲಿ ಇದ್ದಾರೆ. ಅವರು ಯಾವ ರೀತಿಯ ಆಟವನ್ನು ಆಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಅದರಂತೆ ಈಗ ಪ್ರತಾಪ್ ನಡೆದುಕೊಂಡಿದ್ದು, ನಮ್ರತಾ ವಿಷಯದಲ್ಲಿ ನಂಬಿಕೆ ದ್ರೋಹ ಮಾಡಿದ್ರಾ ಎಂಬ ಮಾತುಗಳು ಕೇಳಿ ಬರ್ತಿವೆ.
ಬಿಗ್ ಬಾಸ್ ಮನೆಯಲ್ಲಿ ಈಗ ಎಂಟನೇ ವಾರದ ಟಾಸ್ಕ್‌ಗಳು ಹಾಗೂ ಕ್ಯಾಪ್ಟೆನ್ಸಿ ಆಯ್ಕೆಯ ಪ್ರಕ್ರಿಯೆ, ನಾಮಿನೇಷನ್ ಪ್ರಕ್ರಿಯೆ ಎಲ್ಲವೂ ಸಹ ಶುರುವಾಗಿದೆ. ನಿನ್ನೆ ನಾಮಿನೇಷನ್ ಮುಗಿದಿದ್ದು, ಇಂದು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಯಾರನ್ನು ಹೊರಗಡೆ ಇಡಬೇಕು ಎಂದು ಪ್ರತಾಪ್‌ರನ್ನು ಬಿಗ್ ಬಾಸ್ ಕೇಳಿದೆ. ಇದಕ್ಕೆ ಪ್ರತಾಪ್, ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ಆದರೆ, ಪ್ರತಾಪ್ ತಮ್ಮ ಹೆಸರನ್ನು ಹೇಳೋದಿಲ್ಲ ಎಂದು ನಮ್ರತಾ ನಿರೀಕ್ಷೆ ಮಾಡಿದ್ದರು. ಅನಿರೀಕ್ಷಿತವಾಗಿ ಪ್ರತಾಪ್, ನಮ್ರತಾ ಹೆಸರು ಹೇಳಿದ್ದು ಅವರಿಗೆ ಬೇಸರವನ್ನು ತರಿಸಿದೆ. ಪ್ರತಾಪ್ ತಗೆದುಕೊಂಡ ನಿರ್ಧಾರ ನಮ್ರತಾ ಕಣ್ಣಲ್ಲಿ ನೀರು ತರಿಸಿದೆ.

ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳಿಗೆ ನಾನು ಸಹ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇರುತ್ತದೆ. ಕ್ಯಾಪ್ಟನ್ ಆದರೆ ಮುಂದಿನ ವಾರದ ಒಂದು ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಬಹುದು ಎಂಬ ಸಣ್ಣ ಆಸೆ ಇರುತ್ತದೆ. ಅದಕ್ಕಾಗಿ ನಮ್ರತಾ ನಾನು ಸಹ ಕ್ಯಾಪ್ಟನ್ಸಿ ಟಾಸ್ಕ್ ಆಡುತ್ತೇನೆ. ನಾನು ತಂಡವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ, ಪ್ರತಾಪ್ ಅನಿರೀಕ್ಷಿತವಾಗಿ ನಮ್ರತಾ ಕ್ಯಾಪ್ಟನ್ಸಿ ಟಾಸ್ಕ್ ಆಡಬಾರದು ಎಂದು ಅವರಿರುವ ಫೋಟೋಗೆ ವೋಟ್ ಮಾಡಿದ್ದಾರೆ. ನಮ್ರತಾ ಪ್ರತಾಪ್‌ರನ್ನು ತುಂಬಾ ನಂಬಿದ್ದರು. ಹೇಗಿದ್ದರೂ ಪ್ರತಾಪ್ ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್ ಆಡಲು ಆಯ್ಕೆ ಮಾಡುತ್ತಾರೆ ಎಂದುಕೊಂಡಿದ್ದರು. ನಮ್ರತಾ ಲೆಕ್ಕಾಚಾರ ಈಗ ತಲೆ ಕೆಳಗಾಗಿದೆ.
ನಮ್ರತಾ ಕಣ್ಣಲ್ಲಿ ನೀರು ತರಿಸಿದ ಪ್ರತಾಪ್
ಬಿಗ್ ಬಾಸ್ ಮನೆಯಲ್ಲಿ ಈಗ ನಮ್ರತಾ ಕಣ್ಣೀರನ್ನು ಹಾಕುತ್ತಾ ಇದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆಯ ವೇಳೆ ನಾನು ಪ್ರತಾಪ್ ತಂಡವನ್ನು ಸೇರಿಕೊಳ್ಳುತ್ತೇನೆ ಎಂದು ನಗುನಗುತ್ತಲೇ ನಮ್ರತಾ ಹೇಳಿದ್ದರು. ಈ ವೇಳೆಯಾದರೂ ಪ್ರತಾಪ್ ಹೇಳಬಹುದಾಗಿತ್ತು. ನನ್ನ ತಂಡವನ್ನು ಸೇರಿಸಿಕೊಳ್ಳಲು ನನಗೆ ಇಷ್ಟವಿಲ್ಲವೆಂದು. ಆಗ ಏನು ಮಾತನಾಡದ ಪ್ರತಾಪ್ ಬಿಗ್ ಬಾಸ್ ನೀವು ಯಾರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಡೆ ಇಡಲು ಇಚ್ಚಿಸುತ್ತೀರಾ ಎಂದು ಕೇಳಿದಾಗ. ನಾನು ನಮ್ರತಾ ಅವರನ್ನು ಹೊರಗಡೆ ಇಡಲು ಇಚ್ಚಿಸುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ. ಆದರೆ, ಇದು ನಮ್ರತಾಗೆ ಇಷ್ಟವಾಗಲಿಲ್ಲ.

ಇದಕ್ಕೂ ಮೊದಲು ಪ್ರತಾಪ್, ನಮ್ರತಾರಲ್ಲಿ ನಿಮ್ಮೊಳಗೆ ಬೇರೆಯೊಬ್ಬ ನಮ್ರತಾ ಇದ್ದಾರೆ. ಅವರ ಶಕ್ತಿಯನ್ನು ಹೊರಗೆ ತಂದೆ ತರುತ್ತೇನೆ ಎಂಬ ಮಾತನ್ನು ಆಡಿದ್ದರು. ಇದೇ ಮಾತುಗಳು ನಮ್ರತಾಗೆ ನೋವನ್ನು ಮಾಡಿದೆ. ಪ್ರತಾಪ್ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಎಂಬ ಮಾತನ್ನು ನಮ್ರತಾ ಆಡಿದ್ದಾರೆ.
ನಂಬಿಕೆ ದ್ರೋಹ ಮಾಡಿದ್ರಾ ಪ್ರತಾಪ್?
ನಮ್ರತಾ ಜೋರಾಗಿ ಅತ್ತುಕೊಂಡು ನಾನು ಕ್ಯಾಪ್ಟನ್ಸಿ ಟಾಸ್ಕ್ ಆಡಲೇಬೇಕು ಎಂದು ಅಂದಿದ್ದಾರೆ. ಇನ್ನು ಅಳುವಾಗ ಅಲ್ಲಿಗೆ ಬಂದ ಪ್ರತಾಪ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. "ನನ್ನೊಳಗೆ ಬೇರೆ ನಮ್ರತಾ ಇದ್ದಾಳೆ. ಅದರ ಶಕ್ತಿಯನ್ನು ಹೊರಗೆ ತರುತ್ತೇನೆ. ಕಿಚ್ಚನ ಚಪ್ಪಾಳೆಯನ್ನು ತರಿಸಿಕೊಡುತ್ತೇನೆ ಎಂದು ಮಾತನಾಡಿದ್ದು ನೀನೇ ತಾನೆ. ಈ ರೀತಿ ಮೋಸ ಮಾಡುತ್ತೀಯಾ ಎಂದುಕೊಂಡಿರಲಿಲ್ಲ" ಎಂದು ನಮ್ರತಾ ಹೇಳಿದ್ದಾರೆ. ನನ್ನ ಬಳಿ ಏನೇನು ಹೇಳಿ ಪ್ರಾಮಿಸ್ ಮಾಡಿ ಈ ರೀತಿ ನಂಬಿಕೆ ದ್ರೋಹ ಮಾಡಲು ಮನಸ್ಸಾದರೂ ಹೇಗೆ ಬಂತು ಎಂದು ಕೋಪದಿಂದ ಪ್ರತಾಪ ಬಳಿ ಕೇಳಿದಾಗ, ಪ್ರತಾಪ್ ರೂಮ್ ಬಿಟ್ಟು ಹೊರಗಡೆ ಬಂದಿದ್ದಾರೆ.


Click it and Unblock the Notifications











