ಬಿಗ್ ಬಾಸ್ ಮನೆಯೊಳಗೆ ಓಪನ್ ಆಯ್ತು ನೊಂದವರ ಸಂಘ: ಕಾರ್ತಿಕ್ ಅಧ್ಯಕ್ಷ... ಡ್ರೋನ್ ಪ್ರತಾಪ್‌ಗೂ ಇದೆ ಸ್ಥಾನ!

By Shruthi Harishgowda

ಬಿಗ್ ಬಾಸ್ ಸೀಸನ್ 10 ಶುರುವಾಗಿನಿಂದಲೂ ಒಂದಲ್ಲ ಒಂದು ತಕರಾರು ಬಿಗ್ ಬಾಸ್ ಮನೆಯೊಳಗೆ ಇದ್ದಿದ್ದೆ. ಈ ಗುಂಪಿನಲ್ಲಿ ಇದ್ದವರು ಆ ಗುಂಪು ಸೇರಿಕೊಂಡರೆ, ಆ ಗುಂಪಿನಲ್ಲಿ ಇದ್ದವರು ಈ ಗುಂಪು ಸೇರಿಕೊಂಡರು. ಕಳೆದ ವಾರ ಶತ್ರುಗಳಾಗಿದ್ದರು ಈ ವಾರ ಮಿತ್ರರಾದರು. ಮಿತ್ರರು ಶತ್ರುಗಳಾದರೂ ಫ್ರೆಂಡ್ಶಿಪ್ ಹೆಸರಿನಲ್ಲೇ ಕೆಲವೊಬ್ಬರಂತು ಗೆದ್ದವನ್ನೇ ತೋಡಿ ಅವರನ್ನೇ ಮಣ್ಣು ಹಾಕಿ ಮುಚ್ಚುವ ಮಟ್ಟಕ್ಕೂ ಹೋದರು ಈಗ ಎಲ್ಲವೂ ಸಹ ವಾರದ ಕಥೆ ಕಿಚ್ಚನ ಜೊತೆಗೆ ಕಾರ್ಯಕ್ರಮದಲ್ಲಿ‌ ಸುದೀಪ್ ಎಲ್ಲದ್ದಕ್ಕೂ ಸಹ ಕ್ಲಾರಿಟಿ ಸಿಗುತ್ತಿದೆ. ಕಳೆದ ವಾರ ಫೇಕ್ ಎಂದು ಗೀಟು ಹಾಕಿದವರೇ ಈ ವಾರ ಅವರಿಗೆ ಮೆಚ್ಯೂರಿಟಿ ಇದೆ ಎಂಬ ಮಾತುಗಳೆಲ್ಲಾ ಆಡಿದ್ದಾರೆ. ಈ ಮಾತುಗಳು ವಿರೋಧ ಪಾಳಯಕ್ಕೆ ಬೇಸರ ತಂದಿದೆ.

ಕಿಚ್ಚನ ಪಂಚಾಯಿತಿಯಲ್ಲಿ ಸ್ನಾನ ಮಾಡಲು ಆದ ಜಗಳದಿಂದ ಹಿಡಿದು ಸಂಗೀತ ಆಡುತ್ತಿರುವ ಡಬಲ್ ಸ್ಟ್ಯಾಂಡರ್ಡ್ ಆಟದವರೆಗೂ ಎಲ್ಲವೂ ಸಹ ಚರ್ಚೆಯಾಗಿದೆ. ಇದೆ ವೇಳೆ ಕಿಚ್ಚ ಸುದೀಪ್ ಸರಿಯಾದ ರೀತಿಯಲ್ಲಿ ಗುಂಪು ಕಟ್ಟಿಕೊಂಡು ಆಡುತ್ತಿರುವವರಿಗೆ ಒಂದು ದೊಡ್ಡ ಎಚ್ಚರಿಕೆಯನ್ನು ನೀಡಿದ್ದಾರೆ. ಮನೆಯಲ್ಲಿ ಎಲ್ಲರೂ ಸಮಾನರು ಎಂಬ ಮಾತನ್ನು ಹೇಳಿದ್ದಾರೆ. ಇನ್ನು ಪ್ರತಾಪ್ ಸ್ನಾನಕ್ಕೆ ಹೋದಾಗ ಸ್ನೇಹಿತ್ ಹಾಗೂ ವಿನಯ್ ನಡೆದುಕೊಂಡ ರೀತಿಯ ಬಗ್ಗೆ ಚರ್ಚೆ ಮಾಡಲಾಗಿದೆ‌. ಕಿಚ್ಚ ಸುದೀಪ್ ನೀವೇನಾದರೂ ವಿನಯ್ ಗೆ ಸ್ನಾನ ಮಾಡಿಸುತ್ತಾ ಇದ್ರಾ ಎಂದು ಸ್ನೇಹಿತ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದು ಯಾವುದು ಸರಿ ಬರುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಯಾವಾಗಲೂ ಕಾರ್ತಿಕ್ ಟೀಮ್ ಮೇಲೆ ವಿನಯ್ ಟೀಮ್ ಮುಗಿ ಬೀಳಲು ನೋಡುತ್ತಾ ಇರುತ್ತಾರೆ. ಇದಕ್ಕೂ ಸಹ ಕಿಚ್ಚ ಸುದೀಪ್ ಕ್ಲಾಸ್ ತಗೆದುಕೊಂಡಿದ್ದಾರೆ.

Bigg Boss Kannada Season 10: New Association in Bigg Boss House!

ಇಷ್ಟೆಲ್ಲಾ ಪಂಚಾಯಿತಿ ಮುಗಿಸಿದ ಕಿಚ್ಚನ ಗಮನಕ್ಕೆ ನೊಂದವರು ಎಂದು ಹಣೆಪಟ್ಟಿ ಕಟ್ಟಿಕೊಂಡು ಓಡಾಡುತ್ತಿದ್ದ ತುಕಾಲಿ ಸಂತೋಷ್ ಕಾಣಿಸಿದ್ದಾರೆ. ಇದನ್ನೇ ಒಂದು ಹಾಸ್ಯವಾಗಿ ತೆಗೆದುಕೊಂಡ ಕಿಚ್ಚ ಸುದೀಪ್ ಇಂದು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ತುಕಾಲಿ ಅವರನ್ನು ಕಿಚಾಯಿಸಿದ್ದಾರೆ. ನೊಂದವರ ಗುಂಪಿನ ಸಂಘದಲ್ಲಿ ಯಾರ್ಯಾರಿಗೆ ಯಾವ ಸ್ಥಾನವನ್ನ ನೀಡುತ್ತೀರಾ ಎಂದು ತುಕಾಲಿ ಸಂತೋಷ್ ರವರನ್ನು ಕಿಚ್ಚ ಸುದೀಪ್ ಕೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಕಾರ್ತಿಕ್ ಹಾಗೂ ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್ ಅವರ ಹೆಸರನ್ನ ತೆಗೆದುಕೊಂಡಿದ್ದಾರೆ. ಅವರಿಗೆ ಇಂತಹ ಸ್ಥಾನವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮನೆಯ ಸದಸ್ಯರಿಗೆ ಬ್ಯಾಡ್ಜ್ ಕೂಡ ಬಂದಿದೆ ಅದನ್ನು ತುಕಾಲಿಯವರಿಗೆ ಹಾಕಲು ಸುದೀಪ್ ಹೇಳಿದ್ದಾರೆ.

ದೊಡ್ಮನೆಯಲ್ಲಿ ಉದ್ಘಾಟನೆಯಾದ ನೊಂದವರ ಸಂಘ

ಸಂಘದ ಗೌರವಾಧ್ಯಕ್ಷ ತುಕಾಲಿ ,ಅಧ್ಯಕ್ಷ ಕಾರ್ತಿಕ್

ದೊಡ್ಮನೆಯಲ್ಲಿ ನೊಂದವರ ಸಂಘವನ್ನು ಕಿಚ್ಚ ಸುದೀಪ್ ಉದ್ಘಾಟನೆ ಮಾಡಿದ್ದಾರೆ. ತುಕಾಲಿ ಸಂತೋಷ್ ನೊಂದವರ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ಯಾವಾಗಲೂ ತುಕಾಲಿ ಸಂತೋಷ್ ವಿನಯ್ ಏನಾದರೂ ಮಾತನಾಡಿದರೆ ನಾವು ನೊಂದವರು ನಮ್ಮ ಕಷ್ಟವನ್ನು ಕೇಳಲು ಯಾರು ಇಲ್ಲ ಎಂಬ ಮಾತನ್ನು ಬಳಕೆ ಮಾಡುತ್ತಿದ್ದರು. ಅದಕ್ಕೆ ಇಂದು ನೊಂದವರ ಸಂಘ ಎಂದು ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ. ಇನ್ನು ತುಕಾಲಿ ಸಂತೋಷ ತಮ್ಮ ಸಂಘದ ಬಗ್ಗೆ ಮಾತನಾಡಿದ್ದು ಸಂಘಕ್ಕೆ ಅಧ್ಯಕ್ಷರನ್ನಾಗಿ ಕಾರ್ತಿಕ್ ಅವರನ್ನ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.

ಕಾರ್ತಿಕ್ ನಮ್ಮ ಸಂಘದಲ್ಲಿ ತುಂಬಾ ನೊಂದಿದ್ದಾರೆ ಅದಕ್ಕೆ ಅವರನ್ನೇ ಸಂಘದ ಅಧ್ಯಕ್ಷರನ್ನಾಗಿ ಮಾಡುತ್ತಾ ಇದ್ದೇನೆ ಎಂದು ತುಕಾಲಿ ಸಂತೋಷ್ ಹೇಳಿದ್ದೆ ತಡ ಸಂಗೀತಾ ಮುಖಭಾವವೇ ಚೇಂಜ್ ಆಗಿ ಹೋಗಿದೆ. ಇನ್ನು ಉಪಾಧ್ಯಕ್ಷರನ್ನಾಗಿ ವರ್ತೂರು ಸಂತೋಷ್ ರವರನ್ನ ಮಾಡಲಾಗಿದೆ. ಇದಕ್ಕೆ ತುಕಾಲಿ ಕೊಟ್ಟ ರೀಸನ್ ಮಾತ್ರ ಎಲ್ಲರ ಮುಖದಲ್ಲೂ ನಗು ತರಿಸಿದೆ. ವರ್ತೂರು ಸಂತೋಷ್ ಮಾತನಾಡುತ್ತಾ ಇದ್ದರು ಅದು ಅಳುವ ರೀತಿ ಕಾಣಿಸುತ್ತದೆ ಎಂದು ಹೇಳಿದ್ದಾರೆ. ತುಕಾಲಿ ಸಂತೋಷ್ ಮಾತಿಗೆ ನೊಂದವರ ಸಂಘದವರು ಬಿದ್ದು ಬಿದ್ದು ನಕ್ಕರೆ ವಿರೋಧಿ ಗುಂಪಿನವರು ಮಾತ್ರ ಏನು ರಿಯಾಕ್ಟ್ ಮಾಡದೆ ಸುಮ್ಮನೆ ಕುಳಿತುಕೊಂಡಿದ್ದಾರೆ.

Bigg Boss Kannada Season 10: New Association in Bigg Boss House!

ನೊಂದವರ ಗುಂಪಿನಲ್ಲಿ 6 ಮಂದಿ, ಪ್ರತಾಪ್‌ಗೂ ಸಿಕ್ತು ಸ್ಥಾನ

ಇನ್ನು ನೊಂದವರ ಗುಂಪಿನ ಕಾರ್ಯದರ್ಶಿಯಾಗಿ ಡ್ರೋನ್ ಪ್ರತಾಪ್ ಆಯ್ಕೆಯಾಗಿದ್ದಾರೆ. ನಾನು ಯಾವ ಗುಂಪಿಗೂ ಸೇರಲ್ಲ ಎಂದು ಡ್ರೋನ್ ಪ್ರತಾಪ್ ಹೋಗಿದ್ದವರು. ಆದರೆ ಈಗ ವಿನಯ್ ಟೀಮ್ ಗೆ ಸೇರಿ ಅಲ್ಲಿಂದಲೂ ಸಹ ಸಾಕಷ್ಟು ನೋವನ್ನು ಅನುಭವಿಸಿ ಬಂದಿದ್ದಾರೆ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ.

ಈ ವೇಳೆ ಎದುರು ತಂಡದವರು ತುಕಾಲಿ ಮಾತು ಕೇಳಿ ಶಾಕ್ ಆಗಿದ್ದಾರೆ. ನಂತರ ನೊಂದವರ ಗುಂಪಿನಲ್ಲಿ 6 ಮಂದಿ ಇದ್ದಾರೆ ಎಂದು ತುಕಾಲಿ ಸಂತೋಷ್‌ಗೆ ಗೊತ್ತಾಗಿದೆ. ಇದನ್ನು ನೋಡಿದ್ದೇ ತಡ ನೊಂದವರ ಗುಂಪಿನಲ್ಲೂ ಸಾಕಷ್ಟು ಜನ ಇದ್ದಾರೆ ಎಂದು ತುಕಾಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ತನಿಷಾ, ನೀತು, ತುಕಾಲಿ ಸಂತೋಷ್, ವರ್ತೂರು ಸಂತೋಷ್ ,ಕಾರ್ತಿಕ್ ಹಾಗೂ ಪ್ರತಾಪ್ ನೊಂದವರ ಸಂಘದಲ್ಲಿ ಇದ್ದಾರೆ.

More from Filmibeat

English summary
Bigg Boss Kannada 10: Sunday with sudeepa new promo update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X