Super Sunday with ಸುದೀಪ: ಬಿಗ್ ಬಾಸ್ ಮನೆಯಲ್ಲಿ ಇನ್ನೂ ಆಟ ಶುರು ಮಾಡದವರು ಯಾರು? ಸಂಡೇ ಸಿಗಲಿದೆ ಉತ್ತರ..!
ಬಿಗ್ ಬಾಸ್ 7ನೇ ವಾರಕ್ಕೂ ಕಾಲಿಟ್ಟಿದೆ ಇಂದು 7ನೇ ವಾರ ಕಳೆದು ನಾಳೆ ಎಂಟನೇ ವಾರಕ್ಕೆ ಕಾಲಿಡಲಿದೆ. ಇಷ್ಟು ದಿನ ಮನೆಯಲ್ಲಿ ಆಟಗಳದ್ದೇ ಕಾರುಬಾರು ಆಟಗಳ ಜೊತೆಯಲ್ಲಿ ಮಾನವೀಯ ಮೌಲ್ಯವನ್ನು ಉಳಿಸಿಕೊಳ್ಳಬೇಕೆಂದು ಬಿಗ್ ಬಾಸ್ ಎಲ್ಲರಿಗೂ ತಿಳಿಸಿದ್ದರು. ಆದರೆ ಆಟವಾಡುವ ಜಂಜಾಟದಲ್ಲಿ ಸ್ನೇಹವನ್ನೇ ಮರೆಯುವ ಕೆಲಸ ಬಿಗ್ ಬಾಸ್ ಮನೆಯಲ್ಲಿ ಆಗುತ್ತಿದೆ. ಇಂದು ಶತ್ರುಗಳಂತಿದ್ದವರು ಮಿತ್ರರಾಗಿದ್ದಾರೆ. ಮಿತ್ರರಾಗಿದ್ದವರು ಶತ್ರುಗಳಾಗಿದ್ದಾರೆ. ಸ್ನೇಹಿತರು ಎಂದುಕೊಂಡವರು ದೂರಾಗಿದ್ದಾರೆ ಇದೆಲ್ಲಕ್ಕೂ ಮುಖ್ಯ ಕಾರಣ ಗೆಲ್ಲಲೇ ಬೇಕು ಎಂಬ ಒಂದು ಸ್ವಾರ್ಥ.
ಈ ಸ್ವಾರ್ಥವನ್ನು ಮೀರಿದರೆ ಇಲ್ಲಿ ಮಾನವೀಯತೆಗೂ ಬೆಲೆ ಇದೆ ಆದರೆ ಇಲ್ಲಿ ಬರೀ ಟಾಸ್ಕ್ ಮಾತ್ರ ಗೆಲ್ಲಬೇಕು ಎಂಬುವುದು ಮಾತ್ರ ಎಲ್ಲರ ಕಣ್ಮುಂದೆ ಇದೆ. ಈಗಾಗಲೇ ಎರಡು ಗುಂಪುಗಳಿದ್ದು ಎದುರಾಳಿ ಗುಂಪಿನಲ್ಲಿ ಇರುವವರನ್ನ ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಯಾರಿಗೆ ಯಾರ ಮೇಲೆ ಒಲವಿದೆ ಯಾರಿಗೆ ಯಾರ ಮೇಲೆ ಒಲವಿಲ್ಲ ಎಂಬ ಆಟವನ್ನು ಪ್ರತಿ ವಾರವು ಆಡಿಸುತ್ತಲೇ ಇರುತ್ತಾರೆ. ಕಳೆದ ವಾರ ಇದ್ದಂತಹ ಓಪಿನಿಯನ್ ಈ ವಾರ ಚೇಂಜ್ ಆಗಬಹುದು ಅಥವಾ ಇನ್ನೂ ಅದನ್ನು ಮುಂದುವರಿಸಿಕೊಂಡು ಬರಬಹುದು. ಇವತ್ತಿನ ಆಟ ವೀಕ್ಷಕರಿಗೆ ಸಕ್ಕತ್ ಕಿಕ್ ಕೊಡಲಿದೆ.

ಇಂದು ಯಾರೂ ಎಲಿಮಿನೇಟ್ ಆಗ್ತಾರೆ ಎಂಬುದಕ್ಕೆ ಸುದೀಪ್ ಅವರೇ ಉತ್ತರ ಹೇಳುತ್ತಾರೆ. ಸ್ನೇಹಿತ್, ನಮ್ರತಾ, ಸಿರಿ, ನೀತು, ತುಕಾಲಿ ಈ ಐವರಲ್ಲಿ ಯಾರೂ ಮನೆಗೆ ಇಂದು ಹೋಗ್ತಾರೆ ಎಂಬುದೇ ಕುತೂಹಲವಾಗಿದೆ. ಕಳೆದ ವಾರ ಭಾಗ್ಯಶ್ರೀ ಹಾಗೂ ಈಶಾನೀಯಿಂದ ಹೊರಗೆ ಹೋಗಿದ್ದರು ಈ ವಾರ ಯಾರು ಹೋಗ್ತಾರೆ ಎಂಬಂತಹ ಪ್ರಶ್ನೆಗೆ ಸಂಜೆ ಉತ್ತರ ಸಿಗಲಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಆದರೆ ಅದು ಕೆಲವೊಬ್ಬರಿಗೆ ಮಾತ್ರ ಗೊತ್ತಿಲ್ಲ ಇಂದು ಬಿಗ್ ಬಾಸ್ ಮನೆಯಲ್ಲಿ ಯಾರು ಸಕ್ಸಸ್ ಪುಲ್ ಆಗಿ ಓಡುತ್ತಿದ್ದಾರೆ. ಇನ್ನೂ ಯಾರನ್ನ ರಿಪೇರಿ ಮಾಡಬೇಕು ಎಂಬುದರ ಬಗ್ಗೆ ಕಿಚ್ಚ ಸುದೀಪ್ ಒಂದು ಪ್ರಶ್ನೆಯನ್ನು ಎಸೆದಿದ್ದಾರೆ. ಇಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ಒಳಗೆ ಇದ್ದಂತಹ ಕೋಪವನ್ನ ಹೊರಗಡೆ ಹಾಕಿದ್ದಾರೆ.
ಆಟ ಶುರು ಮಾಡದೆ ಇರುವವರು ಯಾರು..?
ಸ್ನೇಹಿತ್‌ಗೆ ಮೇಲೆ ತುಕಾಲಿ, ವರ್ತೂರು ಕೆಂಡ..!
ಈ ಒಂದು ಆಟವೇ ಸಾಕು ಯಾರಿಗೆ ಯಾರ ಮೇಲೆ ಎಂತಹ ಅಭಿಪ್ರಾಯವಿದೆ ಎಂಬುದನ್ನು ತಿಳಿದುಕೊಳ್ಳಲು. ಇದಕ್ಕಾಗಿಯೇ ಪ್ರತಿ ವಾರವು ಒಂದೊಂದು ನೂತನ ಟಾಸ್ಕ್‌ಗಳ ಮೂಲಕ ಕಿಚ್ಚ ಸುದೀಪ್ ಸೂಪರ್ ಸಂಡೇ ವಿಥ್ ಸುದೀಪ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇಂದು ಒಂದು ಬೋರ್ಡ್ ಮತ್ತು ಇಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಫೋಟೋಗಳನ್ನ ಇಡಲಾಗಿದೆ ಯಾರು ಆಟ ಶುರು ಮಾಡಿದ್ದಾರೆ ಹಾಗೂ ಯಾರನ್ನಾ ರಿಪೇರ್ ಮಾಡಬೇಕು ಇನ್ನು ಆಟ ಶುರು ಮಾಡದೆ ಇರುವವರು ಯಾರು ಎಂಬ ಪ್ರಶ್ನೆಯನ್ನ ಸುದೀಪ್ ಕೇಳಿದ್ದಾರೆ.
ಸಂಗೀತಾ ಪ್ರತಾಪ್ ಇನ್ನೂ ರಿಪೇರಿ ಆಗಬೇಕು ಎಂದು ಉತ್ತರವನ್ನ ನೀಡಿದ್ದಾರೆ. ಸ್ನೇಹಿತ್ ಮಾತ್ರ ವರ್ತೂರು ಸಂತೋಷ್ ಅವರನ್ನ ಟಾರ್ಗೆಟ್ ಮಾಡಿದಂತಿದೆ ಅವರು ಈಗ ಗೇಮ್ ಸ್ಟಾರ್ಟ್ ಎಂದು ಹೇಳಿದ್ದರು. ಆದರೆ ಇನ್ನೂ ಕೂಡ ಗೇಮ್ ಸ್ಟಾರ್ಟ್ ಮಾಡಿಲ್ಲ ಎಂದು ವರ್ತೂರಿಗೆ ಗೇಮ್ ಸ್ಟಾರ್ಟ್ ಮಾಡಿ ಎಂಬ ಫೋಟೋವನ್ನ ಅಂಟಿಸಿದ್ದಾರೆ. ತದನಂತರ ಬಂದ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಹಾಗೂ ಕಾರ್ತಿಕ್, ಪ್ರತಾಪ್ ಸ್ನೇಹಿತ್ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಸಹ ಆಟವನ್ನು ಶುರು ಮಾಡೇ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆಟವನ್ನು ಆಡಿ ತೋರಿಸಲಿ ಗುಂಪಿನಲ್ಲಿ ಆಡುವುದಲ್ಲ ಎಂಬ ಮಾತನ್ನು ತುಕಾಲಿ ಸಂತೋಷ್ ಹೇಳಿದ್ದಾರೆ.

50 ದಿನ ಪೂರೈಸಿದ ಬಿಗ್ ಬಾಸ್
ಬಿಗ್ ಬಾಸ್ 50 ನೇ ದಿನವನ್ನು ಪೂರೈಸಿದೆ. ಇದಕ್ಕೋಸ್ಕರ ಬಿಬಿ 50 ರನ್ನಿಂಗ್ ಸಕ್ಸಸ್‌ಫುಲಿ ಎಂಬ ರಿಪೋರ್ಟ್ ಬೋರ್ಡ್ ನಲ್ಲಿ ತಮಗೆ ಇಷ್ಟ ಬಂದವರನ್ನು ರಿಪೇರ್ ಮಾಡಬೇಕು, ಸ್ಟಾರ್ಟಿಂಗ್ ಟ್ರಬಲ್ ಇದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ತಮಗೆ ಇಷ್ಟ ಬಂದದ್ದನ್ನು ಬಿಗ್ ಬಾಸ್ ಮುಂದೆ ಸ್ಪರ್ಧಿಗಳು ಹೇಳಿದ್ದಾರೆ. ಮುಂದೆ ಇದೇ ದ್ವೇಷಕ್ಕೂ ತಿರುಗಬಹುದು, ಇದೇ ದ್ವೇಷ ಮುಂದುವರೆದು ಅದು ಆಟಗಳಲ್ಲೂ ಸಹ ಕಾಣ ಸಿಗಬಹುದು.
ಮುಂದೆ ಇದು ನಾಮಿನೇಷನ್ ಪ್ರಕ್ರಿಯೆ ಬಂದಾಗಲೂ ಕೂಡ ನಮಗೆ ಅಲ್ಲಿ ಆ ರೀತಿ ಹೇಳಿದ್ದಾರೆ. ನಾವು ಇವರನ್ನು ನ್ಯಾಮಿನೇಟ್ ಮಾಡೋಣ ಎಂಬುದರ ಯೋಚನೆಯು ಬರಬಹುದು.ಇಂದಿನ ಎಪಿಸೋಡ್ ಸಕತ್ ಇಂಟರೆಸ್ಟಿಂಗ್ ಆಗಿದ್ದು ವೀಕ್ಷಕರು ಪೂರ್ತಿ ಎಪಿಸೋಡ್ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











