BBK 10: ಮನೆಯ ಜೋಕರ್ ಆದ್ರೂ ಭಾಗ್ಯಾ.. ಗುಲಾಮ ಸ್ಥಾನದಲ್ಲಿ ಇಶಾನಿ..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಭಿನ್ನವಿದ್ದರು, ಒಳಗಿದ್ದವರ ಮನಸ್ಥಿತಿ ತಿಳಿಯುವ ಮಾರ್ಗವೇ ಈ ಟಾಸ್ಕ್ ಗಳಾಗಿರುತ್ತವೆ. ಬಿಗ್ ಬಾಸ್ ಅನ್ನೋದು ನೂರು ದಿನಗಳ ಆಟ. ಆ ನೂರು ದಿನದಲ್ಲಿ ಒಂದೊಂದು ದಿನ ಒಬ್ಬೊಬ್ಬರ ಮನ:ಸ್ಥಿತಿ ಮತ್ತೊಂದು ಕಡೆಗೆ ಬದಲಾಗುತ್ತಲೆ ಇರುತ್ತದೆ. ಈ ವಾರ ಹೇಳಿದ ಅಭಿಪ್ರಾಯ ಮತ್ತೊಂದು ವಾರಕ್ಕೆ ಬದಲಾಗಿರುತ್ತದೆ.

ಆಟ, ತಮ್ಮ ಜೊತೆಗಿನ ಒಡನಾಟ ಎಲ್ಲವೂ ವಿಚಾರವೇ ಆಗಿರುತ್ತದೆ. ಇದೀಗ ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದೆ. ಅದುವೇ ಎಕ್ಕಾ, ರಾಜ, ರಾಣಿ, ಜೋಕರ್, ಗುಲಾಮನ ಆಟ ಆಡಿಸಿದೆ. ಅದರಲ್ಲಿ ಯಾರ್ಯಾರು ಅದಕ್ಕೆ ಮ್ಯಾಚ್ ಆಗುತ್ತಾರೆ ಎಂಬುದನ್ನು ಮನೆಯವರೇ ನಿರ್ಧಾರ ಮಾಡಿ, ಬೋರ್ಡ್ ನೇತಾಕಿದ್ದಾರೆ. ಯಾರು ಯಾರಿಗೆ ಯಾವ ಅವಾರ್ಡ್ ಸಿಕ್ಕಿದೆ ಎಂಬ ವಿವರ ಇಲ್ಲಿದೆ.

Bigg Boss Kannada Season 10 November 14th episode about Bhagya Eshani Varthur Santhosh

ಹೊಸ ಟಾಸ್ಕ್ ಕೊಟ್ಟ ಬಿಗ್ ಬಾಸ್

ಬಿಗ್ ಬಾಸ್ ಆಗಾಗ ಮನೆಯವರ ಮನ:ಸ್ಥಿತಿಯನ್ನು ಪರೀಕ್ಷೆ ಮಾಡುತ್ತಲೇ ಇರುತ್ತದೆ. ಅದರಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಕ್ಕಾ, ರಾಜ, ರಾಣಿ, ಜೋಕರ್, ಗುಲಾಮ ಯಾರು ಎಂಬುದನ್ನು ಹೇಳಬೇಕು. ಯಾರು ಯಾವ ಸ್ಥಾನದಲ್ಲಿದ್ದಾರೆ. ತಮ್ಮ ದೃಷ್ಟಿಯಲ್ಲಿ ಯಾರೆಂದು ತಿಳಿಸಬೇಕು. ಹೆಚ್ಚಿನ ವೋಟ್ ಬಂದವರಿಗೆ ಫಲಕ ತೊಡಿಸಬೇಕು. ಅದರಂತೆ ಮ‌ನೆಯ ಸದಸ್ಯರು ಒಬ್ಬೊಬ್ಬರಾಗಿ ಬಂದು, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಭಾಗ್ಯ ಜೋಕರ್

ಈ ಟಾಸ್ಕ್‌ನಲ್ಲಿ ಭಾಗ್ಯಶ್ರೀ ಜೋಕರ್, ಇಶಾನಿ-ಗುಲಾಮ, ತನಿಷಾ-ರಾಣಿ, ವಿನಯ್-ರಾಜ, ಪ್ರತಾಪ್-ಯಕ್ಕಾ ಫಲಕವನ್ನು ಪಡೆದಿದ್ದಾರೆ. ಈ ಫಲಕವನ್ನು ಯಾಕಾಗಿ ನೀಡುತ್ತಿದ್ದೀವಿ ಎಂಬ ವಿವರಣೆಯನ್ನು ನೀಡಿದ್ದಾರೆ. ತನಿಷಾ ಎಷ್ಟೇ ಕಿರುಚಾಡಿದರು ಮನೆ ಮಂದಿಗೆ ಮನೆಯ ರಾಣಿಯಂತೆ ಕಂಡಿದ್ದಾರೆ. ಆರಂಭದಲ್ಲಿ ರಾಜನಂತೆ ಅಬ್ಬರಿಸಿದ ವಿನಯ್‌ರನ್ನು ಮತ್ತೆ ರಾಜನಾಗಿಯೇ ಇರಲು ಮನೆ ಮಂದಿ ಬಯಸುತ್ತಿದ್ದಾರೆ.

ಮನೆಯವರಿಗೆ ಹಾರ್ಟ್ ನೀಡಿದ ತನಿಷಾ

ಮನೆಯವರು ಕೊಟ್ಟ ಫಲಕಗಳನ್ನು ಹಾಕಿಕೊಂಡು ಎಲ್ಲರೂ ಖುಷಿಯಲ್ಲಿದ್ದರು. ಇದೇ ವೇಳೆ ಬಿಗ್ ಬಾಸ್ ತಮ್ಮ ಅಭಿಪ್ರಾಯ ತಿಳಿಸಲು ಸೂಚನೆ ನೀಡಿದೆ. ಆಯ್ಕೆಯಾದವರು ತಮ್ಮ ಅಭಿಪ್ರಾಯ ಹೇಳಿ ಎಂದಾಗ, ಎಲ್ಲರು ತಮ್ಮ ಫಲಕದ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಮಾತನಾಡಿದ ಭಾಗ್ಯಶ್ರೀ, ಕೆಲವೊಂದು ವಿಚಾರಗಳಲ್ಲಿ ನಾನು ಜೋಕ್ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಎಂದಿದ್ದಾರೆ. ರಾಣಿಯಾದ ತನಿಷಾ, ನಾನು ಮಾಡುವ ಕೆಲಸವನ್ನು ಮೆಚ್ಚಿಕೊಂಡಿರುವುದು ಖುಷಿ ಕೊಟ್ಟಿದೆ. ಮನೆಯವರಿಗೆಲ್ಲಾ ಫಸ್ಟ್ ಟೈಮ್ ಎಲ್ಲರಿಗೂ ಹಾರ್ಟ್ ನೀಡುತ್ತಿದ್ದೇನೆ ಎಂದಿದ್ದಾರೆ. ರಾಜನಾದ ವೇಳೆ ವಿನಯ್, ರಾಜ ಎಂಬ ಪಟ್ಟ ಕೊಟ್ಟವರಿಗೆ ಥ್ಯಾಂಕ್ಯೂ.. ಇದನ್ನು ರಿಸೀವ್ ಮಾಡಿಕೊಳ್ಳುವುದಕ್ಕೆ ಭಯ. ಇಲ್ಲಿ ಇರುವ ಮತ್ತೊಬ್ಬರಿಗೂ ನಾನು ಯಾಕೆ ರಾಜ ಆಗಬಾರದು ಎನಿಸುತ್ತದೆ. ಚಾಲೆಂಜ್ ಇರಲಿ ಎಂದಿದ್ದಾರೆ.

ಡ್ರೋನ್ ಹಾರಿಸುತ್ತೇನೆ ಎಂದ ಪ್ರತಾಪ್

ಬಿಗ್ ಬಾಸ್ ಮನೆಗೆ ಡ್ರೋನ್ ಪ್ರತಾಪ್ ಬಂದಾಗಿನಿಂದ ತುಕಾಲಿ ಸಂತು ಅಂಡ್ ಟೀಂ ಡ್ರೋನ್ ಪ್ರತಾಪ್ ಅವೆನ್ನು ಸಾಕಷ್ಟು ಕಾಡಿದ್ದರು. ಎಷ್ಟರ ಮಟ್ಟಿಗೆ ಎಂದರೆ ಬರೀ ಡ್ರೋನ್ ವಿಚಾರಕ್ಕೇನೆ. ಇದೀಗ ಯಕ್ಕಾ ಫಲಕ ಪಡೆದಿರುವ ಡ್ರೋನ್ ಮನೆಯವರ ಮುಂದೆ ಸವಾಲು ಹಾಕಿದ್ದಾರೆ. ಇನ್ನು ಮುಂದೆ ಡ್ರೋನ್ ಪ್ರತಾಪ್ ಗಾಳಿ ಬೀಸುತ್ತೆ ಎಂದಿದ್ದಾರೆ. ಇದನ್ನು ಕೇಳಿದ ಮನೆ ಮಂದಿ ಓ ಎಂದು ಕಿರುಚಿದ್ದಾರೆ.

More from Filmibeat

English summary
BBK 10 November 14th episode about Bhagya Eshani Varthur Santhosh:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X