BBK 10: ತನಿಶಾ ಕಣ್ಣೀರಿನ ಕೋಡಿ ಹರಿಸಿದ ಬಳಿಕ ಉರಿಸೋದಕ್ಕೆ ಶುರುವಿಟ್ಕೊಂಡ ಸಂಗೀತಾ-ಕಾರ್ತಿಕ್!
ಬಿಗ್ ಬಾಸ್ ಮನೆ ನಿಜಕ್ಕೂ ಕಣ್ಣೀರಿನ ಕೋಡಿಯಾಗಿ ಹೋಗಿತ್ತು. ಮನೆಗೆ ಅಸಮರ್ಥರಾಗಿ ಬಂದ ಮೇಲೆ ಆ ತಂಡದಲ್ಲಿ ಒಂದೊಳ್ಳೆ ಬಾಂಧವ್ಯ ಬೆಳೆದಿತ್ತು. ಯಾವುದರಲ್ಲೂ ಯಾರನ್ನು ಬಿಟ್ಟುಕೊಡದಷ್ಟು. ಅದರಲ್ಲೂ ಕಾರ್ತೀಕ್, ಸಂಗೀತಾ, ತನಿಷಾ ಮೂವರೂ ಒಬ್ಬರನ್ಮೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಆದರೆ, ಇವತ್ತು ಮೂವರ ಮುಖದಲ್ಲೂ ಕಣ್ಣೀರಿನ ಕೋಡಿಯೇ ಹರಿದಿದೆ.
ಸಂಗೀತಾ ಸ್ವಲ್ಪ ಪೊಸೆಸಿವ್ ರೀತಿಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಆಟದಲ್ಲಿ ಸೇವ್ ಮಾಡಲಿಲ್ಲ, ತನ್ನ ಪರವಾಗಿ ಮಾತನಾಡಲಿಲ್ಲ ಎಂದಾಗಲೂ ಜಗಳವನ್ನು ಆಡುತ್ತಾರೆ. ಈಗಂತೂ ಬರೀ ಕಾರ್ತಿಕ್ ಜೊತೆಗೆ ಮಾತ್ರವಲ್ಲ, ತನಿಷಾ ಜೊತೆಗೂ ಜಗಳವಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದೇ ಒಂದು ಸ್ವಾರ್ಥ ಎಲ್ಲರನ್ನೂ ಕಣ್ಣೀರಾಗಿಸಿದೆ.

ಸಿರಿ ಜೊತೆ ಕೂತು ಕಣ್ಣೀರಾಕಿದ ಕಾರ್ತಿಕ್
ಸಂಗೀತಾ ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್‌ಶಿಪ್ ಅಂದ್ರೆ ತನಗಾಗಿಯೇ ಇರುವುದು ಎಂಬುದರ ರೀತಿಯೇ ನಡೆದುಕೊಳ್ಳುತ್ತಾರೆ. ಸಂಗೀತಾ ವರ್ತನೆ ಬಗ್ಗೆ ಕಾರ್ತಿಕ್ ಬೇಸರ ಮಾಡಿಕೊಂಡಿದ್ದಾರೆ. ಆ ಬಗ್ಗೆ ಸಿರಿ ಬಳಿ ಬಂದು ಹೇಳಿಕೊಂಡಿದ್ದಾರೆ. "ಬರೀ ನಾಮಿನೇಷನ್‌ನಿಂದ ಸೇವ್ ಮಾಡಲಿಲ್ಲ ಎಂಬ ಕಾರಣಕ್ಕೆ ಈ ರೀತಿ ನಡೆದುಕೊಂಡರೆ ಹೇಗೆ?ಫ್ರೆಂಡ್ ಎಂಬ ಒಂದೇ ಒಂದು ಕಾರಣಕ್ಕೆ ಫೈನಲ್ ತನಕ ತೆಗೆದುಕೊಂಡು ಹೋಗಿ ನಿಲ್ಲಿಸಬೇಕಾ? ಇವಳ ಮುಂದೆ ಸ್ಟ್ರಾಂಗ್ ಕಂಟೆಸ್ಟೆಂಟ್ ನಿಂತಿದ್ದರು ಸಹ, ಇವಳನ್ನೇ ಉಳಿಸಬೇಕು ಎಂದರೆ ಹೇಗೆ?" ಎಂದು ಸಿರಿ ಮುಂದೆ ಕಣ್ಣೀರು ಹಾಕಿದ್ದಾರೆ.
ಬಿಕ್ಕಿ ಬಿಕ್ಕಿ ಅತ್ತ ತನಿಶಾ
ತನಿಷಾ ಹಾಗೂ ಸಂಗೀತಾ ನಡುವೆಯೂ ಸಾಕಷ್ಟು ಮಾತುಕತೆಗಳು ನಡೆದಿವೆ. ಅವತ್ತು ಯಾಕೆ ಸೇವ್ ಮಾಡಲಿಲ್ಲ ಎಂಬ ಮಾತಿಗೆ ಸಂಗೀತಾ ವರ್ತನೆ ಬೇರೆಯದ್ದೇ ಆಗಿತ್ತು. ಅದರಲ್ಲೂ ತನಿಷಾಗೆ ಜೋರು ಧ್ವನಿಯಲ್ಲಿ ಮಾತನಾಡಬೇಡಿ ಎಂದಿದ್ದಾರೆ. ಇದು ತನಿಷಾಗೆ ಸಾಕಷ್ಟು ನೋವು ಕೊಟ್ಟಿದೆ. ಯಾಕೆಂದರೆ ನನ್ನ ಧ್ವನಿ ಇರುವುದು ಹೀಗೆ ಎಂಬುದು ಸಂಗೀತಾಗೂ ಗೊತ್ತು ಎಂಬುದೇ ತನಿಷಾ ನೋವು. ಒಂದು ನಾಮಿನೇಷನ್ ಟಾಸ್ಕ್ ಮೂವರ ಸ್ನೇಹಕ್ಕೆ ಕುತ್ತು ತಂದಿದೆ. ಅದರಲ್ಲೂ ತನಿಷಾ ತನ್ನ ತಾಯಿಯ ಫೋಟೋ ಇಟ್ಟುಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
ನೋವು ಮರೆತು ರೇಗಿಸಿದ ಕಾರ್ತಿಕ್
ಕಾರ್ತಿಕ್ ಬೆರಳು ಸ್ವಲ್ಪ ಕಟ್ ಆಗಿತ್ತು. ಆದರೆ ರಕ್ತ ಬರುತ್ತಿರಲಿಲ್ಲ. ಎಲ್ಲರೂ ಕಾಳಜಿ ತೋರುತ್ತಿದ್ದಾಗ ಕಾರ್ತಿಕ್, ರಕ್ತ ಬರಲ್ಲ. ರಕ್ತ ಹೀರಿಕೊಳ್ಳುವವರು ಈಗಾಗಲೇ ಹೀರಿಕೊಂಡಿದ್ದಾರೆ ಎಂದು ಸಂಗೀತಾಗೆ ಪರೋಕ್ಷವಾಗಿ ಹೇಳಿದ್ದಾರೆ. ಅದರ ಜೊತೆಗೆ ಸಾರಿನ ಬಗ್ಗೆ ವಿನಯ್ ಕೇಳಿದಾಗ "ಇದು ಸಾರಲ್ಲ ಉರಿ ಪಲ್ಯ ಅಂತ. ಮನಸ್ಸಿಂದ ಮಾಡುತ್ತಿರುವ ಉರಿ ಪಲ್ಯ" ಎಂದು ಪಕ್ಕದಲ್ಲಿದ್ದ ಸಂಗೀತಾಗೆ ರೇಗಿಸಿದ್ದಾರೆ.
ಸಂಗೀತಾರನ್ನು ಡೇಟ್‌ಗೆ ಕರೆದ ವಿನಯ್
ಇದಕ್ಕೆ ತಕ್ಕ ಹಾಗೇ ಈಗ ವಿನಯ್ ಶುರು ಮಾಡಿಕೊಂಡಿದ್ದಾರೆ. ಕಾರ್ತಿಕ್ ಹಾಗೂ ಸಂಗೀತಾ ನಡುವೆ ಎಲ್ಲವೂ ಸರಿ ಇಲ್ಲ ಎನ್ನುತ್ತಿರುವಾಗ ವಿನಯ್, ಸಂಗೀತಾರನ್ನು ಕಾಡಿಸುತ್ತಿದ್ದಾರೆ. "ಡೇಟ್‌ಗೆ ಹೋಗೋಣಾ ಬಾ ಸಂಗೀತಾ. ನನ್ನ ಕೇಳಿದ್ದರೆ ನಾನೇ ತಿನ್ನಿಸುತ್ತಾ ಇದ್ದೆ" ಎಂದು ಕಾರ್ತಿಕ್ ಮುಂದೆ ಸಂಗೀತಾರನ್ನು ಕಾಡಿಸಿದ್ದಾರೆ. ಸಂಗೀತಾ ಕೂಡ ನ್ಯಾಚುರಲ್ ಆಗಿನೇ ರಿಯಾಕ್ಟ್ ಮಾಡಿದ್ದಾರೆ. ಖುಷಿ ಖುಷಿಯಾಗಿ ವಿನಯ್ ಜೊತೆಗೆ ಮಾತನಾಡಿದ್ದಾರೆ.


Click it and Unblock the Notifications











