BBK 10: ಬೆಸ್ಟ್ ಫ್ರೆಂಡ್ ಅಂದುಕೊಂಡಿದ್ದ ಸಂಗೀತಾ ಕೂಡ ತನಿಷಾಗೆ ಕಳಪೆ ಟೈಟಲ್ ಕೊಟ್ರಾ?

By ಎಸ್ ಸುಮಂತ್

ವಾರವಿಡೀ ಟಾಸ್ಕ್ ಆಡುವ ಸದಸ್ಯರಿಗೆ ವಾರದ ಕೊನೆಯಲ್ಲಿ ಎರಡು ಟಾಸ್ಕ್ ತುಂಬಾ ಮುಖ್ಯವಾಗಿ ಬೇಕಾಗುತ್ತದೆ. ಅದುವೇ ಕಳಪೆ ಹಾಗೂ ಉತ್ತಮ ಕೊಡುವಂತ ಟಾಸ್ಕ್. ಒಂದು ವಾರ ಉತ್ತಮ ಪಡೆದವರು ಇನ್ನೊಂದು ವಾರ ಕಳಪೆಯನ್ನು ಪಡೆಯಬಹುದು. ಅದರಲ್ಲೂ ಈ ಸೀಸನ್‌ನಲ್ಲಿ ಸಣ್ಣ ಸಣ್ಣ ಕಾರಣಗಳಿಗೇನೆ ಕಳಪೆ‌ ಪಟ್ಟ ಸಿಗುತ್ತಿದೆ‌. ಒಮ್ಮೆ ಮನೆಯವರ ಮನಸ್ಸಲ್ಲೂ ಒಂದು ಸ್ಥಾನ ಪಡೆದಿದ್ದರೆ ತಕ್ಷಣ ಅದು ಬದಲಾವಣೆಯ ಪರ್ವವನ್ನೇ ಸೃಷ್ಟಿಸುತ್ತಿದೆ.

ಬಿಗ್ ಬಾಸ್ ಮನೆಯ ಸೀಸನ್ 10ರಲ್ಲಿ ತನಿಷಾ, ಸಂಗೀತಾ ಹಾಗೂ ಕಾರ್ತಿಕ್ ಬೆಸ್ಟ್ ಫ್ರೆಂಡ್ಸ್ ಇದ್ದ ಹಾಗೆಯೇ ಇದ್ದಾರೆ. ಕೋಪ ಬಂದರೂ, ಮನಸ್ತಾಪ ಬಂದರು ಅದನ್ನು ಸರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದಾರೆ. ಆದರೆ ಮೊನ್ನೆ ನಡೆದ ಜಗಳದಿಂದಾನೇ ಇನ್ನು ಹೊರ ಬಂದಿರದ ತನಿಷಾಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ.

bigg-boss-kannada-tanisha-kalape

ರಾಣಿಯಾಗಿ ಮೆರೆದಿದ್ದ ತನಿಷಾ

ಬಿಗ್ ಬಾಸ್ ಆಗಾಗ ಡಿಫ್ರೆಂಟ್ ಎನಿಸುವಂತ, ಕುತೂಹಲಭರಿತವಾಗದಂತ ಟಾಸ್ಕ್‌ಗಳನ್ನೇ ನೀಡುತ್ತಾ ಇರುತ್ತದೆ. ಅದರಲ್ಲಿ ಇದೇ ವಾರದಲ್ಲಿಯೇ ರಾಜ, ರಾಣಿ, ಯಕ್ಕಾ ಟಾಸ್ಕ್ ಒಂದನ್ನು ನೀಡಿತ್ತು. ಅದರಲ್ಲಿ ಮನೆಯೆಲ್ಲಾ ತನಿಷಾ ಅವರನ್ನೇ ರಾಣಿಯಾಗಿ ಹೊತ್ತು ಮೆರೆಸಿದ್ದರು. ಇಡೀ ಮನೆಯನ್ನು ಅದ್ಭುತವಾಗಿ ನಿಭಾಯಿಸಿದ್ದಕ್ಕೆ, ಮನೆಯಲ್ಲಿ ರಾಣಿಯಂತೆಯೇ ಕಾಣುತ್ತೀರಿ ಎಂಬಂತ ಮಾತುಗಳನ್ನು ಸಾಕಷ್ಟು ಸದಸ್ಯರು ಹೇಳಿದ್ದರು. ಬಹುಮತ ಬಿದ್ದ ಕಾರಣ ತನಿಷಾಗೆ ಮನೆಯ ರಾಣಿಯ ಪಟ್ಟ ಸಿಕ್ಕಿತ್ತು. ರಾಣಿಯ ಪಟ್ಟ ಸಿಕ್ಕ ಕೆಲವೇ ದಿನಗಳಲ್ಲಿ ಕಳಪೆ ಪಟ್ಟವೂ ಅಷ್ಟೇ ಸುಲಭವಾಗಿ ಸಿಕ್ಕಿದೆ. ಈ ದೃಶ್ಯಗಳು ಜಿಯೋದಲ್ಲಿ ಪ್ರಸಾರವಾದ ಪ್ರೋಮೊದಲ್ಲಿ ರಿವೀಲ್ ಆಗಿದೆ.

ಈ ವಾರದ ಕಳಪೆ ತನಿಷಾ

ಶುಕ್ರವಾರ ಬಂತು ಎಂದರೆ ಮನೆಯಲ್ಲಿ ಉತ್ತಮ ಮತ್ತು ಕಳಪೆಯ ಟಾಸ್ಕ್ ಶುರುವಾಗುತ್ತೆ. ಈ ವಾರ ಕಳಪೆ ಬೋರ್ಡ್ ಅನ್ನು ತನಿಷಾಗೆ ನೀಡಿದ್ದಾರೆ. ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ವಿನಯ್, ನಮ್ರತಾ, ಪ್ರತಾಪ್ ಕಳಪೆ ಪಟ್ಟ ನೀಡಿದ್ದಾರೆ. ಟಾಸ್ಕ್‌ನಲ್ಲಿ ಸಾಕಷ್ಟು ಸಮಯ ತೆಗೆದುಕೊಂಡರು, ಪಾಸ್ ಮಾಡಿ ಪಾಸ್ ಮಾಡಿ ಎಂದಾಗಲೂ ನೀವೂ ಪಾಸ್ ಮಾಡಲಿಲ್ಲ. ಮೂರು ಪತ್ರಗಳನ್ನು ಕಳೆದುಕೊಂಡೆವು ಎಂಬ ಕಾರಣವನ್ನು ವಿನಯ್ ಹಾಗೂ ನಮ್ರತಾ ನೀಡಿದ್ದಾರೆ.

ಸಂಗೀತಾ ಕೊಟ್ಟಿರುವುದು ಅನುಮಾನವೇ ಸರಿ

ಸಂಗೀತಾ ಹಾಗೂ ಇದರಲ್ಲಿ ತನಿಷಾ ಬೆಸ್ಟ್ ಫ್ರೆಂಡ್ ಅನ್ನುವುದು ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಗೊತ್ತಾಗಿದೆ. ಫ್ರೆಂಡ್ ಎಂದಾದ ಮೇಲೆ ಎಲ್ಲದಕ್ಕೂ ಬೆಂಬಲವಾಗಿ ನಿಲ್ಲಬೇಕು ಎಂಬುದೇ ಸಂಗೀತಾ ಅವರ ಅಭಿಪ್ರಾಯ. ಹಾಗೇ ನಿಲ್ಲದೆ ಹೋದಾಗ ಜಗಳ ಕೂಡ ಆಡಿದ್ದಾರೆ. ಈಗ ಕಳಪೆಯಲ್ಲಿ ತನಿಷಾ ಹೆಸರು ತೆಗೆದುಕೊಂಡಿರುವುದು ಅನುಮಾನವಿದೆ. ಪ್ರೋಮೋದಲ್ಲಿ ಕಳಪೆ ಪಟ್ಟ ಎಂದಷ್ಟೇ ಹೇಳಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ಮನೆಯವರೆಲ್ಲಾ ಸೇರಿ ಒಬ್ಬರಿಗೆ ಕಳಪೆ ಕೊಟ್ಟಿರುವುದು ಎಂಬ ಮಾತನ್ನು ಸಂಗೀತಾ ಅವರೇ ಹೇಳಿದ್ದಾರೆ. ಹೀಗಾಗಿ ಸಂಗೀತಾ ಹಾಗೂ ಕಾರ್ತಿಕ್ ಕೂಡ ಕೊಟ್ಟರಾ ಎಂಬ ಪ್ರಶ್ನೆಗೆ ಎಪಿಸೋಡ್ ನಲ್ಲಿ ಉತ್ತರ ಸಿಗಲಿದೆ.

ಕಣ್ಣೀರಿಡುತ್ತಲೇ ಜೈಲು ಸೇರಿದ ತನಿಷಾ

ಇನ್ನು ಕಾರ್ತಿಕ್ ಕೂಡ ಬೇಸರ ಮಾಡಿಕೊಂಡಿದ್ದಾರೆ. ಮೊದಲ ವಾರದಲ್ಲಿಯೇ ಫ್ರೆಂಡ್‌ನ ಕಳಿಸಿಕೊಡುವುದು ಎಷ್ಟು ಕಷ್ಟ. ತನಿಷಾಗೆ ಜೈಲಿನ ಬಟ್ಟೆಯನ್ನು ನೀಡಿದ್ದಾರೆ. ಆ ಬಟ್ಟೆಯನ್ನು ತೊಟ್ಟು ಜೈಲು ಸೇರಿದ ತನಿಷಾ, ತೀರಾ ನೊಂದಿದ್ದಾರೆ. ಕಳಪೆ ಕೊಟ್ಟರು ಅಂತ ಕಣ್ಣೀರು ಹಾಕಲ್ಲ ಅಮ್ಮ ಅಂತಾನೇ ಕಣ್ಣೀರು ಹಾಕಿದ್ದಾರೆ.

More from Filmibeat

English summary
Bigg Boss Kannada season 10 November 17th episode did Sangeetha says Tanisha Kalape
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X