BBK 10: ಬಿಗ್ ಬಾಸ್ ಮನೆಯ ನಕಲಿಯಾಗಿ ಕಂಡ್ರು ತುಕಾಲಿ..!
ಬಿಗ್ ಬಾಸ್ ಸೀಸನ್ 10 ದಿನ ಕಳೆದಂತೆ ಸಾಕಷ್ಟು ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಮೊದ ಮೊದಲಿಗೆ ಒಬ್ಬರ ಮೇಲಿದ್ದ ಅಭಿಪ್ರಾಯಗಳು ಈಗಾಗಲೇ ಬಹಳಷ್ಟು ಬದಲಾಗಿದೆ. ಅದು ಬದಲಾಗುತ್ತಲೆ ಇರುತ್ತದೆ. ಆ ಬದಲಾವಣೆ ಗೊತ್ತಾಗುವುದೇ ಕೆಲವೊಂದು ಟಾಸ್ಕ್‌ಗಳನ್ನು ಕೊಟ್ಟಾಗ.
ಈ ವಾರ ಬಿಗ್ ಬಾಸ್‌ನಲ್ಲಿ ಎರಡು ಎಲಿಮಿನೇಷನ್ ಇದೆ. ಯಾಕಂದ್ರೆ, ಕಳೆದ ವಾರ ವರ್ತೂರು ಸಂತೋಷ್‌ನಿಂದಾಗಿ ಒಂದು ಎಲಿಮಿನೇಷನ್ ಸೇವ್ ಆಗಿತ್ತು. ಈಗಾಗಲೇ ಶನಿವಾರವೇ ಇಂದು ಎಲಿಮಿನೇಷನ್ ಮುಕ್ತಾಯವಾಗಿದೆ. ಇಂದಿನ ಪಂಚಾಯ್ತಿಯಲ್ಲಿ ಯಾರು ಹೊರ ಹೋಗಬಹುದು ಎಂಬ ಕುತೂಹಲವೂ ಇದೆ. ಕಿಚ್ಚ ಒಂದಿಷ್ಟು ಮಾತುಕತೆ ನಡೆಸಿ, ಎಲಿಮಿನೇಷನ್ ಘೋಷಿಸಲಿದ್ದಾರೆ. ಆಟದ ನಡುವೆ, ರಿಯಲ್ ಅಂಡ್ ಫೇಕ್ ಆಟ ನಡೆದಿದೆ.

ಬಿಗ್ ಬಾಸ್ ಮನೆಯ ರಿಯಲ್.. ಫೇಕ್ ಯಾರು..?
ಬಿಗ್ ಬಾಸ್ ಮನೆಯಲ್ಲಿ ಆಗಾಗ ಒಂದೊಂದು ಟಾಸ್ಕ್ ಗಳನ್ನು ನೀಡುತ್ತಾರೆ. ಆ ಟಾಸ್ಕ್‌ಗಳಿಂದಾನೇ ಮನೆಯವರ ಬಗ್ಗೆ ಇರುವ ಅಭಿಪ್ರಾಯ ಮನದಟ್ಟಾಗುವುದು. ಮನೆ ಎಂದ ಮೇಲೆ ಜಗಳಗಳು ಸಹಜ, ಗಾಸಿಪ್‌ಗಳು ಸಹಜ. ಆದರೆ, ಅದು ಮನೆಯನ್ನು ಒಡೆಯುವ ಕೆಲಸವಾಗಬಾರದು. ಇನ್ನು ಕೆಲವೊಮ್ಮೆ ಅಂದುಕೊಂಡಿದ್ದೆ ಒಂದು, ಆದರೆ, ಅಲ್ಲಿ ಆಗಿದ್ದೆ ಇನ್ನೊಂದು ಆಗಿರುತ್ತದೆ. ತಪ್ಪಾಗಿ ತಿಳಿದಿದ್ದನ್ನೇ ಅಸ್ತ್ರವಾಗಿಟ್ಟುಕೊಂಡು ಅವಾರ್ಡ್‌ಗಳನ್ನು ಕೊಟ್ಟು ಬಿಡುತ್ತಾರೆ. ವಾರದ ಪಂಚಾಯ್ತಿಯಲ್ಲಿ ಕಿಚ್ಚ ಅದನ್ನೆಲ್ಲ ಸರಿ ಮಾಡಿದ್ದಾರೆ. ಕಳಪೆ ಪಟ್ಟದ ವಿಚಾರದಲ್ಲಿ ಹಾಗಾಗಿದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಫೇಕ್ ಆರ್ ರಿಯಲ್ ಟಾಸ್ಕ್ ನಡೆದಿದೆ.
ತುಕಾಲಿಗೆ ಫೇಕ್ ಕೊಡಲು ಕಾರಣವೇನು..?
ಫೇಕ್ ಎಂದಾಗ ರೆಡ್ ಮಾರ್ಕ್, ರಿಯಲ್ ಎಂದಾಗ ಗ್ರೀನ್ ಮಾರ್ಕ್‌ನಲ್ಲಿ ಹಣೆ ಮೇಲೆ ಮಾರ್ಕ್ ಮಾಡಬೇಕು. ಅದರಂತೆ ಮನೆಯಲ್ಲಿ ಸಾಕಷ್ಟು ಮಂದಿ ತುಕಾಲಿ ಸಂತೂ ಅವರನ್ನೇ ಫೇಕ್ ಎಂದು ಹೇಳಿದ್ದಾರೆ. ನಮ್ಮ ಬಳಿಯೇ ಚೆನ್ನಾಗಿ ಇದ್ದು, ನಮಗೆ ಇಟ್ಟು ಬಿಡುತ್ತಾರೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ತುಕಾಲಿ ಫೇಕ್ ಎಂಬ ಮಾತಿಗೆ ಹಲವರು ಎಸ್ ಅಂದಿದ್ದಾರೆ.
ವಿನಯ್ ಮಾತಿಗೆ ತುಕಾಲಿ ಗರಂ
"ಯಾವುದೇ ತಂಡದಲ್ಲಿ ಇದ್ದರು ಅವರಿಗೆ ಲಾಯಲ್ ಆಗಿ ಇರುತ್ತೀನಿ ಅಂತ ಫೇಕ್ ಮಾಡುತ್ತಾರೆ. ಒಬ್ಬರ ಹತ್ತಿರ ಇರುತ್ತಾನೆ. ಅವರ ಬಗ್ಗೆನೆ ಬಂದು ಇನ್ನೊಬ್ಬರ ಬಳಿ ಮಾತನಾಡುತ್ತಾನೆ" ಎಂದು ನಾನಾ ರೀತಿಯ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ಇದಕ್ಕೆ ತುಕಾಲಿ ಸಂತೂ ಕೂಡ ಪ್ರತಿಕ್ರಿಯೆ ನೀಡಿದ್ದು, "ಒಬ್ಬ ವ್ಯಕ್ತಿನ ಕೆಟ್ಟವನು ಅಂತ ಪ್ಲ್ಯಾನ್ ಮಾಡಿ ಹೇಳುವುದರಲ್ಲಿ ಎಕ್ಸ್ ಪರ್ಟ್. ನಾನು ಮಾಡುತ್ತಿರುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂಬ ಸತ್ಯ ಎಲ್ಲರಿಗೂ ಗೊತ್ತಾಗುವಂತ ಸಮಯ ಬಂದೇ ಬರುತ್ತದೆ. ಆಗ ಎರಡು ಮುಖಗಳು ಹೇಗಿರುತ್ತೆ ಅಂತ ಗೊತ್ತಾಗುತ್ತೆ ಅಣ್ಣ" ಎಂದಿದ್ದಾರೆ.
ಜನರ ಅಭಿಪ್ರಾಯವೇನು?
ಇನ್ನು ಈ ಪ್ರೋಮೋಗೆ ಸಾಕಷ್ಟು ಕಮೆಂಟ್ಸ್ ಬಂದಿದೆ. ತುಕಾಲಿ ಸಂತೂ ಸುಲಭವಾಗಿಯೇ ಅವರ ಬಗ್ಗೆ ಗೊತ್ತು ಮಾಡಿದ್ದಾರೆ. ಒಬ್ಬರ ಬಳಿ ಹೋಗಿ, ಇನ್ನೊಬ್ಬರ ಬಗ್ಗೆ ಹೇಳುವುದು ಹೆಚ್ಚಾಗಿಯೇ ಮಾಡುತ್ತಾರೆ. ಇದು ಜನಗಳಿಗೂ ಇಷ್ಟವಾಗಿಲ್ಲ. ಹೀಗಾಗಿಯೇ ಕಮೆಂಟ್ ಬಾಕ್ಸ್‌ನಲ್ಲೂ ತುಕಾಲಿಯೇ ಫೇಕ್ ಎಂದೇ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











