BBK10: ಟೀಮ್ ಬದಲಾಯಿಸಿದ 777 ಚಾರ್ಲಿ ಬೆಡಗಿ ? ಕಾರ್ತಿಕ್-ತನಿಷಾ ಜೊತೆಗೆ ಅಂತರ ಕಾಯ್ದುಕೊಂಡ ಸಂಗೀತಾ !
ಬಿಗ್ ಬಾಸ್ ಸೀಸನ್ ನಲ್ಲಿ ದಿನ ಉರುಳುತ್ತಿವೆ. ಆಟ ಕಷ್ಟವಾಗುತ್ತಿದೆ. ಗೆಲ್ಲುವ ತವಕ ಮನೆ ಮಂದಿಯಲ್ಲೂ ಹೆಚ್ಚಾಗುತ್ತಿದೆ. ಆದರೆ, ಹೊರಗಿನ ಜನಕ್ಕೂ ಬೇಸರವಾಗುವ ವಿಚಾರ ಅಂದರೆ ಮನೆಯೊಳಗಿನ ಕೆಲವರು ಬಾಂಧವ್ಯವನ್ನೇ ಕಳೆಯುವ ಕೆಲಸ ಮಾಡುತ್ತಿದ್ದಾರೆ. ಒಬ್ಬರ ಬಗ್ಗೆ ಇನ್ನೊಬ್ಬರ ಮನಸ್ಸಲ್ಲಿ ದ್ವೇಷ ತಂದಿಡುವ ಕೆಲಸ ಮಾಡುತ್ತಿದ್ದಾರೆ.
ಮೊದಲಿನಿಂದಾನೂ ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್, ಸಂಗೀತಾ, ತನಿಷಾ ತುಂಬಾ ಆತ್ಮೀಯವಾಗಿರುವ ಸ್ನೇಹಿತರು. ಅಸಮರ್ಥರಾಗಿ ಬಂದಾಗಿನಿಂದಲೂ ಒಬ್ಬರಿಗೊಬ್ಬರು ಬಿಟ್ಟುಕೊಡುವ ಮಾತೇ ಇಲ್ಲ. ಆದರೆ, ಅದ್ಯಾಕೋ ಈಗ ಸಂಗೀತಾ ಬೇರೆ ಟೀಂ ಸೇರಿದ್ದಾರೆ.

ಗೂರೂಜಿಯಿಂದ ಮನೆಯವರಿಗೆಲ್ಲಾ ಟಾರ್ಚರ್
ಬಿಗ್ ಬಾಸ್ ಮನೆಗೆ ಆಗಾಗ ಗೆಸ್ಟ್‌ಗಳ ಆಗಮನವಾಗುತ್ತಲೆ ಇರುತ್ತದೆ. ಈ ವಾರ ಮೊದಲ ದಿನವೇ ಬ್ರಹ್ಮಾಂಡ ಗುರೂಜಿ ಬಂದಿದ್ದಾರೆ. ಗುರೂಜಿ ಸೀಸನ್ ಮೊದಲ ಸ್ಪರ್ಧಿಯಾಗಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಗುರೂಜಿ ಎಂಟ್ರಿ, ಮನೆ ಮಂದಿಗೆಲ್ಲ ಸಂಕಟ ತಂದಿಟ್ಟಿದೆ. ಗುರೂಜಿ ಏನೇ ತೊಂದರೆ ಕೊಟ್ಟರು ಅದನ್ನೆಲ್ಲ ಮನೆ ಮಂದಿ ಸಹಿಸಿಕೊಳ್ಳಲೇಬೇಕು. ಇದನ್ನು ಬಿಗ್ ಬಾಸ್ ಸೂಚನೆ ನೀಡಿದ್ದೆ ತಡ, ಬ್ರಹ್ಮಾಂಡ ಗುರೂಜಿ ಎಲ್ಲರಿಗೂ ತೊಂದರೆ ಕೊಟ್ಟಿದ್ದಾರೆ.
ಮನೆಯವರೆಲ್ಲಾ ನಾಮಿನೇಷನ್ ಆದ್ರೂ
ವಾರದ ಆರಂಭದಲ್ಲಿಯೇ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ನಾಮಿನೇಷನ್, ಕ್ಯಾಪ್ಟನ್ ಟಾಸ್ಕ್ ಎಲ್ಲದಕ್ಕೂ ವಿಭಿನ್ನವಾದ ಟಾಸ್ಕ್‌ಗಳನ್ನೇ ನೀಡುತ್ತಾರೆ. ಅದರಂತೆ ಇಂದು ಗುರೂಜಿ ಕಡೆಯಿಂದ ಮನೆಯಲ್ಲಿ ನಾಮಿನೇಷನ್ ಟಾಸ್ಕ್ ನೀಡಲಾಗಿದೆ. ಮಡಕೆಯನ್ನು ಒಡೆಯುವ ಮೂಲಕ ನಾಮಿನೇಷನ್ ಮಾಡಬೇಕು. ಒಬ್ಬೊಬ್ಬರು ಆಕ್ರೋಶದ ಧ್ವನಿಯಿಂದಾನೇ ಇವತ್ತು ನಾಮಿನೇಷನ್ ಮಾಡಿದ್ದಾರೆ. ಅದರಲ್ಲಿ ಕ್ಯಾಪ್ಟನ್ ಆದ ಕಾರ್ತಿಕ್ ಹಾಗೂ ನೇರವಾಗಿ ನಾಮಿನೇಟ್ ಆದಂತಹ ನೀತೂ ಬಿಟ್ಟು ಮನೆಯವರಿಂದ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಇಬ್ಬರನ್ನು ಮೊದಲೇ ಸೇವ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದ್ದಾರೆ.
ಕಾರ್ತಿಕ್ -ಸಂಗೀತಾ ಜಗಳ ಮತ್ತೆ ಆರಂಭವಾಗುತ್ತಾ..?
ಕಾರ್ತಿಕ್, ಸಂಗೀತಾ ಹಾಗೂ ತನಿಷಾ ನಡುವೆ ಒಳ್ಳೆಯ ಬಾಂಧವ್ಯ ಇದೆ. ಎಷ್ಟೇ ಸಲ ಕಿತ್ತಾಡಿದರೂ ಮತ್ತೆ ಮತ್ತೆ ಒಂದಾಗಿದ್ದಾರೆ. ಕಾರ್ತಿಕ್ ಮತ್ತು ಸಂಗೀತಾ ನಡುವೆ ಎಷ್ಟೋ ಬಾರಿ ಜಗಳವಾಗಿದೆ. ಅದರಲ್ಲೂ ನಾಮಿನೇಷನ್ ವಿಚಾರದಲ್ಲಿ. ಈ ಬಾರಿ ಕಾರ್ತಿಕ್‌ಗೆ ಒಂದು ಅವಕಾಶ ನೀಡಲಾಗಿತ್ತು. ಅದರಲ್ಲಿ ಸಂಗೀತಾ ಸೇವ್ ಮಾಡಬಹುದಾ ಎಂಬ ಕಲ್ಪನೆ ಇತ್ತು. ಯಾಕಂದ್ರೆ, ನಾಮಿನೇಷನ್‌ನಿಂದ ಉಳಿಸದೆ ಇದ್ದ ಕಾರಣಕ್ಕೆ ಸಂಗೀತಾ ಜಗಳ ಆಡುತ್ತಾ ಇದ್ದರು. ಇದೀಗ ಕಾರ್ತಿಕ್ ಮತ್ತೆ ಸಿಕ್ಕ ಅವಕಾಶದಲ್ಲೂ ಸಂಗೀತಾರನ್ನು ಬಿಟ್ಟು ಮೈಕೆಲ್‌ನ ಸೇವ್ ಮಾಡಿದ್ದಾರೆ.
ವಿನಯ್ ಟೀಂ ಸೇರಿದ ಸಂಗೀತಾ
ಸಂಗೀತಾ ಇವತ್ತೆಲ್ಲಾ ವಿನಯ್ ತಂಡದಲ್ಲಿಯೇ ಕಾಣಿಸಿಕೊಂಡರು. ಅದರಲ್ಲೂ ನಮ್ರತಾ ಜೊತೆಗೆ ಹೆಚ್ಚು ಕ್ಲೋಸ್ ಆಗಿದ್ದರು. ನಮ್ರತಾ ಬೇರೆ ಆಗಾಗ ತನಿಷಾ ಬಗ್ಗೆ ನೆಗೆಟಿವ್ ಆಗಿ ಯೋಚನೆ ಬರುವಂತಹ ಮಾತುಗಳನ್ನೇ ಆಡುತ್ತಿದ್ದರು. ಇದು ಅವರಿಬ್ಬರ ನಡುವೆ ಬಿಟ್ಟಿರುವ ಬಿರುಕು ದೊಡ್ಡದಾಗುವುದಕ್ಕೆ ಕಾರಣವಾಯಿತು. ನಾಮಿನೇಷನ್ ಮಾಡುವಾಗಲೂ ಅಷ್ಟೇ ಸಂಗೀತಾ ಹೆಸರನ್ನು ತೆಗೆದುಕೊಂಡ ತನಿಷಾ, ಮನಸ್ಸಲ್ಲಿ ಆಕ್ರೋಶ ಜಾಸ್ತಿಯಾಗಿತ್ತು. ಆ ಕಡೆ ಅಡುಗೆ ಮನೆಯಲ್ಲೂ ಅಷ್ಟೇ ತನಿಷಾ ಹಾಗೂ ಕಾರ್ತಿಕ್ ಮಾತ್ರ ಜೊತೆಯಾಗಿಯೇ ಇದ್ದರು. ಸಂಗೀತಾ ಮಾತ್ರ ಈ ಕಡೆ ವಿನಯ್ ಟೀಂನಲ್ಲಿ ಹಾಯಾಗಿ ಇದ್ದಾರೆ.


Click it and Unblock the Notifications











