BBK10: ನಮ್ರತಾಗೆ ಶೋ ಪೀಸ್ ಅಂದಿದ್ದು ಯಾರು..? ಮನೆಯಲ್ಲೆಲ್ಲಾ ಮಂದಿಯೆಲ್ಲ ಹುಡುಕಾಡಿದ ನಟಿಗೆ ಸಿಕ್ಕಿದ್ರಾ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ 43 ದಿನ ಕಳೆದಿದ್ದಾರೆ. ನೂರು ದಿನಗಳ ತನಕ ಉಳಿಯುವುದು ಯಾರೋ, ಹೋಗುವವರು ಯಾರೋ ಗೊತ್ತಿಲ್ಲ. ಆದರೆ, ಇರುವಷ್ಟು ದಿನ ಅವರವರು ಅಲ್ಲಲ್ಲಿಯೇ ಜೀವಿಸಬೇಕು. ಜೊತೆಯಲ್ಲಿಯೇ ಇರಬೇಕು. ಒಬ್ಬರ ಮುಖವನ್ನೇ ಒಬ್ಬರು ನೋಡಬೇಕು. ಆದರೆ, ಕೆಲವೊಮ್ಮೆ ತಪ್ಪಾದರೂ ಆ ತಪ್ಪುಗಳನ್ನು ಹೇಳುವುದೇ ಇಲ್ಲ. ಯಾವುದೋ ಒಂದು ಸಂದರ್ಭದಲ್ಲಿ ನಿರೀಕ್ಷೆಯನ್ನೇ ಮಾಡದಂತ ಪ್ರತಿಕ್ರಿಯೆಗಳು ಬರುತ್ತವೆ.

ಅದರಲ್ಲೂ ಕಿಚ್ಚನ ಪಂಚಾಯ್ತಿ ಸಮಯದಲ್ಲಿ ನಿರೀಕ್ಷೆ ಮಾಡದಂತ ಉತ್ತರಗಳೇ ಬರುತ್ತವೆ. ಅದರಲ್ಲಿ ಶೋಕೇಸ್ ಗೊಂಬೆ ಎಂಬ ಅಭಿಪ್ರಾಯ ಬಂದಿತ್ತು. ಪ್ರಶ್ನೆಗಳ ಸರದಿ ಬಂದಾಗ ನಮ್ರತಾ ಶೋಕೇಸ್ ಗೊಂಬೆ ಹೌದಾ ಎಂದಾಗ, ಸಾಕಷ್ಟು ಜನ ಎಸ್ ಎಂದಿದ್ದರು. ಇವತ್ತಿನ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಇದೆ.

Bigg Boss Kannada season 10 November 20th episode Namratha mentioned as show piece

ಬೆಳ್ ಬೆಳಗ್ಗೆನೇ ನಮ್ರತಾ ಬೇಸರ

ನಿನ್ನೆ ತಾನೇ ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿ ಮುಗಿದಿದೆ. ಈ ಪಂಚಾಯ್ತಿಯಲ್ಲಿ ನಮ್ರತಾ ಬಗ್ಗೆ ಬಂದ ಪ್ರಶ್ನೆಗೆ ಹಲವರು ಹೌದು ಎಂದಿದ್ದಾರೆ. ಇಂದು ಬೆಳಗ್ಗೆ ಸೀರೆಯುಟ್ಟು ಸುಂದರವಾಗಿ ರೆಡಿಯಾದ ನಮ್ರತಾಗೆ ನೆಮ್ಮದಿಯೇ ಇಲ್ಲ. ಯಾರು ಆ ಅಭಿಪ್ರಾಯವನ್ನು ಹೇಳಿದ್ದಾರೆ ಎಂಬ ಚಿಂತೆ ಶುರುವಾಗಿದೆ. ಶೋ ಪೀಸ್ ಎಂದುಕೊಂಡಿದ್ದವರು ಮೊದಲೇ ಹೇಳಬಹುದಿತ್ತಲ್ವಾ ಎಂದೇ ಬೇಸರ ಮಾಡಿಕೊಂಡಿದ್ದಾರೆ.

ಶೋ ಪೀಸ್ ಎಂದಿದ್ದು ಯಾರು ಎಂಬ ಚಿಂತೆ?

ನಮ್ರತಾಗೆ ಬೇಸರ ಇರುವುದು ನೇರವಾಗಿಯೇ ಅದನ್ನು ಹೇಳಬಹುದು. ಆದರೆ ಪಂಚಾಯ್ತಿಯಲ್ಲಿ ಆ ವಿಚಾರ ಬಂದಿದೆ ಎಂದರೆ, ನಾಮಿನೇಷನ್ ನಲ್ಲೇನಾದರೂ ಈ ಮಾತನ್ನು ಹೇಳಿದ್ದಾರಾ ಎಂಬ ಬೇಸರ. ಸ್ನೇಹಿತ್ ಕೂಡ ಎಷ್ಟೇ ಸಮಾಧಾನ ಮಾಡಿದರೂ ನಮ್ರತಾ ಸಮಾಧಾನವಾಗಲಿಲ್ಲ. ಬಳಿಕ ತಮ್ಮದೇ ಟೀಂ ಎನಿಸಿಕೊಂಡ ಟೀಂ ಜೊತೆಗೆ ಮಾತನಾಡಿ, ಅದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ನಮ್ರತಾರನ್ನು ಸಮಾಧಾನ ಮಾಡಿದ ಟೀಂ

ನಮ್ರತಾ ಕಣ್ಣೀರು ಹಾಕುತ್ತಿದ್ದನ್ನು ಕಂಡ ಸಿರಿ, ನೀತೂ ಅಲ್ಲಿಗೆ ಬಂದಿದ್ದಾರೆ. ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಬಳಿಕ ಸ್ನೇಹಿತ್ ಕೂಡ ಬಂದಿದ್ದು, ಯಾರೂ ಆ ಮಾತನ್ನು ಹೇಳಿರಬಹುದು ಎಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ. "ಮೈಕೆಲ್ ಫ್ರೆಂಡ್‌ಶಿಪ್ ಆಗುವುದಕ್ಕೂ ಮುನ್ನ, ಶೋ ಪೀಸ್ ಎಂಬುವ ಮಾತನ್ನು ಹೇಳಿಲ್ಲ. ಎಲ್ಲಾ ನಿಮ್ಮ ಮೂಗಿನ ನೇರಕ್ಕೆ ಮಾತನಾಡಬೇಡಿ. ಸ್ವಲ್ಪ ಯೋಚನೆ ಮಾಡಿ" ಎಂದಿದ್ದಾರೆ.

Bigg Boss Kannada season 10 November 20th episode Namratha mentioned as show piece

ಸ್ನೇಹಿತ್ ಬಗ್ಗೆ ನಮ್ರತಾ ಬೇಸರವೇಕೆ..?

ಸ್ನೇಹಿತ್ ಇತ್ತೀಚೆಗಂತೂ ನಮ್ರತಾ ಅವರ ಜೊತೆಗೆ ಹೆಚ್ಚಿನ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದಾರೆ. ಅದೇ ತನಗೆ ಮುಳುವಾಗುತ್ತಿದೆ ಎಂದು ನಮ್ರತಾ ಭಾವಿಸಿದ್ದಾರೆ. ಸ್ನೇಹಿತ್ ಸಮಾಧಾನ ಮಾಡಲು ಬಂದಾಗಲೂ ಅದನ್ನೇ ಹೇಳಿದ್ದಾರೆ. "ಎಲ್ಲರಿಗೂ ಸಮಸ್ಯೆ ಆಗಿರುವುದು ನಿಮ್ಮ ಕಂಫರ್ಟ್ ಝೋನ್‌ನಲ್ಲಿ ಇರುವುದಕ್ಕೆ. ನಂಗೋಸ್ಕರ ಒಬ್ಬರು ಗೇಮ್ ಬಿಟ್ಟು ಆಚೆ ಹೋಗುತ್ತಾರಲ್ಲ ಅದು ವರ್ಸ್ಟ್" ಎಂದು ಹೇಳಿದ್ದಾರೆ. ಸ್ನೇಹಿತ್‌ಗೆ ಕ್ರಶ್ ಆಗಿರುವುದನ್ನು ತಮಾಷೆಯಾಗಿ ತೆಗೆದುಕೊಳ್ಳಬಹುದು ಎಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ, ನಮ್ರತಾ ಸ್ವಲ್ಪ ನೋವಲ್ಲಿ ಇದ್ದರು ಅದನ್ನು ಸರಿ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾರೆ. ನಮ್ರತಾಗೆ ಯಾರಿಂದ ನೋವಾಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೂ ಪ್ರಯತ್ನ ಪಡುವ ಸ್ನೇಹಿತ್ ಮನದಲ್ಲಿ ನಿಜಕ್ಕೂ ಪ್ರೀತಿ ಹುಟ್ಟಿದೆಯಾ ಅನ್ನೋ ಅನುಮಾನವಿದೆ.

More from Filmibeat

English summary
Bigg Boss Kannada season 10 November 20th episode Namratha mentioned as show piece:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X