BBK10: ಸಂಗೀತಾಗೆ ಮಾನವೀಯತೆಯ ಪಾಠ ಮಾಡಿದ ಬಿಗ್ ಬಾಸ್ : ಕೊನೆಗೂ ಗೆದ್ದ 'ಸಂಪತ್ತಿಗೆ ಸವಾಲ್ ಟೀಂ'
ಬಿಗ್ ಬಾಸ್ ಮನೆಯಲ್ಲಿ ಗೆಲುವು ಎಂಬುದು ಅಷ್ಟು ಸುಲಭವಲ್ಲ. ಗೆಲ್ಲಬೇಕು ಎಂದರೆ ಬಿಗ್ ಬಾಸ್ ಮನೆಯಲ್ಲಿ ರಿಸ್ಕ್ ತೆಗೆದುಕೊಳ್ಳುವುದಷ್ಟೇ ಅಲ್ಲ, ಕರ್ನಾಟಕದ ಜನರ ಮನಸ್ಸನ್ನು ಗೆಲ್ಲಬೇಕಾಗುತ್ತದೆ. ಒಂದಿಡಿ ಮನೆಯನ್ನು ಎಲ್ಲಾ ತರದಲ್ಲೂ ನಿಭಾಯಿಸುವ ಶಕ್ತಿ ಇರಬೇಕು.
ಮಾನವೀಯತೆ, ಮನುಷ್ಯತ್ವ, ಮನೆಯ ಜವಾಬ್ದಾರಿ, ಮನೆಯಲ್ಲಿ ಏನು ಇಲ್ಲದೆ ಇದ್ದಾಗ ಟಾಸ್ಕ್ ಆಡಿ ಎಲ್ಲವನ್ನು ಪಡೆದುಕೊಳ್ಳುವ ಶಕ್ತಿಯೂ ಇರಬೇಕು. ಹೀಗಿದ್ದಾಗ ಕೊನೆಯ ದಿನ ಸುದೀಪ್ ಅವರ ಎಡಗಡೆ ಮತ್ತು ಬಲಗಡೆ ನಿಲ್ಲುತ್ತಾರೆ. ಆದರೆ, ಇವತ್ತಿನ ಟಾಸ್ಕ್‌ನಲ್ಲಿ ಮರೆತ ಮನುಷ್ಯತ್ವವನ್ನು ಬಿಗ್ ಬಾಸ್ ನೆನಪಿಸಿದೆ.

ಉಗ್ರಂ ವೀರಂ ಟಾಸ್ಕ್ ನೀಡಿದ ಬಿಗ್ ಬಾಸ್
ಬಿಗ್ ಬಾಸ್ ಆಗಾಗ ಮನೆ ಮಂದಿಯನ್ನು ಆಕ್ಟೀವ್ ಮಾಡುತ್ತದೆ. ಮನೆ ಮಂದಿಗೆ ಟಾಸ್ಕ್ ರೂಪದಲ್ಲಿ ಹೊಸ ಹುಮ್ಮಸ್ಸು ನೀಡುತ್ತದೆ. ಅದನ್ನು ಸ್ವೀಕರಿಸಿದವರು ಗೆಲ್ಲುತ್ತಾರೆ. ಬಿಟ್ಟವರು ಸೋಲುತ್ತಾರೆ. ಇವತ್ತು ಬಿಗ್ ಬಾಸ್ ಅಂಥದ್ದೇ ಟಾಸ್ಕ್ ನೀಡಿದೆ. ಉಗ್ರಂ ವೀರಂ ಎಂಬ ಹೆಸರಿನ ಟಾಸ್ಕ್ ನೀಡಿ, ಸವಾಲುಗಳನ್ನು ಎದುರಿಸುತ್ತಾರಾ? ಇಲ್ಲವಾ ?ಎಂಬುದನ್ನು ಪರೀಕ್ಷೆ ಮಾಡಿದ್ದಾರೆ. ಅದರಲ್ಲೂ ಅಂತಿಂಥ ಟಾಸ್ಕ್ ಅಲ್ಲ, ನೋಡುಗರೇ ಶಾಕ್ ಎನಿಸುವಂತ ಟಾಸ್ಕ್ ಅದು.
ಮೆಣಸಿನಕಾಯಿ ತಿನ್ನುವ ಟಾಸ್ಕ್ ಕೊಟ್ಟ ಸಂಗೀತಾ
ಎರಡು ಟೀಂ ನವರು ಒಂದೊಂದು ಟಾಸ್ಕ್ ನೀಡಬೇಕು. ಎದುರುಗಡೆಯವರು ಯಾವ ರೀತಿಯ ಟಾಸ್ಕ್ ನೀಡುತ್ತಾರೋ ಅದರ ಮೇಲೆ ಮತ್ತೊಂದು ಟೀಂ ಟಾಸ್ಕ್ ನೀಡುತ್ತದೆ. ಸಂಗೀತಾ ನೀಡಿದ ಎರಡನೇ ಟಾಸ್ಕ್‌ನಲ್ಲಿ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಲಾಗಿತ್ತು. ಅದರಲ್ಲೂ ಒಂದು ಬೌಲ್‌ನಲ್ಲಿ ಇರುವ ಅಷ್ಟು ಮೆಣಸಿನಕಾಯಿ ತಿನ್ನಬೇಕು. ತನಿಷಾ ಹಾಗೂ ವರ್ತೂರು ಸಂತೋಷ್‌ಗಾಗಿ ಈ ಟಾಸ್ಕ್. ಆದರೆ, ಈ ಟಾಸ್ಕ್ ಕೊಟ್ಟ ಕೂಡಲೇ ಅಷ್ಟು ಮೆಣಸಿನಕಾಯಿ ತಿಂದು ಬದುಕಬಹುದಾ ಎಂದು ವರ್ತೂರು ಸಂತೋಷ್ ಪ್ರಶ್ನೆ ಮಾಡಿದ್ದಾರೆ.
ಸಂಗೀತಾಗೆ ಬುದ್ದಿ ಹೇಳಿದ ಬಿಗ್ ಬಾಸ್
ಸಂಗೀತಾ ಅವರನ್ನು ಗಮನಿಸಿದವರಿಗೆ ಅವರ ನಡವಳಿಕೆ ತಿಳಿದಿರುತ್ತೆ. ಏನೇ ಕೇಳಿದರು ಹೌದು, ಏನಿವಾಗ? ಎಸ್ ಈ ರೀತಿಯ ಟ್ರಿಗರ್ ಆಗುವಂತಹ ರಿಯಾಕ್ಷನ್ ಅವರ ಕಡೆಯಿಂದ ಬರುತ್ತದೆ. ವರ್ತೂರು ಸಂತೋಷ್ ಕೇಳಿದ ಪ್ರಶ್ನೆಗೂ ಅದೇ ಉತ್ತರ ನೀಡಲಾಗಿತ್ತು. ಹೌದು, ತಿಂದು ಬದುಕಬಹುದು. ಅದರ ರೆಕಾರ್ಡ್ಸ್ ಇದೆ ಎಂದೇ ಉತ್ತರ ನೀಡಿದ್ದಾರೆ. ತಕ್ಷಣ ಎಚ್ಚರಗೊಂಡ ಬಿಗ್ ಬಾಸ್ ಸಂಗೀತಾಗೆ ಬುದ್ದಿ ಹೇಳಿದೆ.
ಸಂಪತ್ತಿಗೆ ಸವಾಲ್ ಟೀಂ ಗೆಲುವು
"ಮೊದಲು ಮಾನವೀಯತೆ ಇಟ್ಟುಕೊಳ್ಳಿ. ಟಾಸ್ಕ್ ವಿಚಾರದಲ್ಲಿ ಮನುಷ್ಯತ್ವ ಬಿಡುವುದು ಬೇಡ" ಎಂದು ಬಿಗ್ ಬಾಸ್ ತಿಳಿಸಿದೆ. ಗಜಪಡೆ ಟೀಂ ಸ್ವಿಮ್ಮಿಂಗ್ ಪೂಲ್ ಟಾಸ್ಕ್ ಒಂದನ್ನಷ್ಟೇ ರಿಸೀವ್ ಮಾಡಿಕೊಂಡಿದೆ. ಆದರೆ, ಸಂಪತ್ತಿಗೆ ಸವಾಲ್ ಟೀಂ ಎರಡು ಟಾಸ್ಕ್ ಬಿಟ್ಟರೆ ಇನ್ನುಳಿದ ಎಲ್ಲಾ ಟಾಸ್ಕ್‌ನಲ್ಲೂ ಭಾಗವಹಿಸಿದೆ. ಎಷ್ಟೇ ಕಷ್ಟವಾದರೂ ಆ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದೆ. ಕಡೆಗೆ 'ಸಂಪತ್ತಿಗೆ ಸವಾಲ್' ತಂಡವೇ ಹೆಚ್ಚಿನ ಅಂಕ ಪಡೆದುಕೊಂಡಿದೆ. ಈ ಮೂಲಕ ಅವರೇ ಗೆಲುವು ಸಾಧಿಸಲಿದ್ದಾರೆ.


Click it and Unblock the Notifications











