BBK 10: ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಬರ್ತ್ ಡೇ ಸೆಲೆಬ್ರೇಷನ್.. ಡವ್ ರಾಣಿ ಹಾಡು ಹಾಕಿ ಹೇಳಿದ್ದೇನು..?

By ಎಸ್ ಸುಮಂತ್

ಬಿಗ್ ಬಾಸ್ ಮನೆಗೆ ಹೋದಾಗ ಎಲ್ಲರೂ ಅಲ್ಲಿಯೇ ಲಾಕ್ ಆಗುತ್ತಾರೆ. ನೂರು ದಿನಗಳ ಈ ಆಟದಲ್ಲಿ ಯಾರು ಕೊನೆಯ ತನಕ ನಿಲ್ಲುತ್ತಾರೋ ಅವರಿಗೆ ತಾರೀಖಿನ ಅರಿವು ಇರುವುದಿಲ್ಲ. ಬೆಳಗ್ಗೆ ಎದ್ದೇಳು, ತಿಂಡಿ ಮಾಡು, ಬಿಗ್ ಬಾಸ್ ಕೊಟ್ಟ ಟಾಸ್ಕ್ ಆಡು, ವೀಕೆಂಡ್ ನಲ್ಲಿ ಸುದೀಪ್ ಪಂಚಾಯತಿಯಲ್ಲಿ ನಿಲ್ಲು. ಹೀಗಾಗಿ ಅಷ್ಟಾಗಿ ದಿನಾಂಕಗಳು ನೆನಪುಳಿಯುವುದಿಲ್ಲ.

ಏನಾದರೂ ಸ್ಪೆಷಲ್ ಇದ್ದಾಗ ಬಿಗ್ ಬಾಸ್ ಕಡೆಯಿಂದಾನೇ ಸೂಚನೆ ಸಿಗುತ್ತದೆ. ಆದರೆ ಬಿಗ್ ಬಾಸ್ ಗೆ ಗೊತ್ತಿಲ್ಲದಂತೆ ಮನೆಯೊಳಗೆ ಇಂದು ಬರ್ತ್ ಡೇ ಸೆಲೆಬ್ರೇಷನ್ ಆಗುತ್ತಾ ಇತ್ತು. ಆದರೆ ಅದು ಬಿಗ್ ಬಾಸ್ ಗೆ ಗೊತ್ತಾಗದೆ ಇರುತ್ತದೆಯೆ.

Bigg Boss Kannada Season 10 November 3rd Espisode Namratha birthday celebration

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಬರ್ತ್ ಡೇ

ಬಿಗ್ ಬಾಸ್ ಮನೆಯಲ್ಲಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತಾರೆ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಬಿಗ್ ಬಾಸ್ ಕಡೆಯಿಂದಾನೇ ಮಾಡುತ್ತಾರೆ. ಆದರೆ ಹುಟ್ಟು ಹಬ್ಬ ಆಚರಣೆಯನ್ನು ಇಲ್ಲಿಯ ತನಕ ಮಾಡಿಲ್ಲ. ಈ ಸೀಸನ್ ನಲ್ಲಿ ಇದ್ದಕ್ಕಿದ್ದ ಹಾಗೇ ಹುಟ್ಟುಹಬ್ಬದ ಸಂಭ್ರಮವೇ ಶುರುವಾಗಿತ್ತು. ರಾತ್ರಿಯೇ ಎಲ್ಲರೂ ವಿಶ್ ಮಾಡಿದ್ದರು. ಸಂಗೀತಾ ತನ್ನ ಪಾಲಿನ ಆಪಲ್ ಅನ್ನು ಕೂಡ ನೀಡಿದ್ದರು. ಆ ಆಪಲ್ ಅನ್ನೇ ಕಟ್ ಮಾಡಿ, ರಾತ್ರಿ ಹುಟ್ಟುಹಬ್ಬ ಆಚರಣೆ ಮಾಡಿ ಆಗಿತ್ತು.

ಡೇಟ್ ಪ್ಲ್ಯಾನ್ ಮಾಡಿದ್ದ ಬಾಯ್ಸ್

ಸ್ನೇಹಿತ್ ಗೆ ನಮ್ರತಾ ಎಂದಾಗ ಮುಖದ ಭಾವನೆ, ಮನಸ್ಸಿನ ಖುಷಿ ಎಲ್ಲವೂ ಬದಲಾಗುತ್ತದೆ. ಅಣ್ಣಂಗೆ ಲವ್ವಾಗಿದೆ ಅಂತಾನೆ ಮನೆ ಮಂದಿ ರೇಗಿಸುತ್ತಾ ಇರುತ್ತಾರೆ. ನಮ್ರತಾ ಬರ್ತ್ ಡೇ ಎಂದ ಕೂಡಲೇ ಮನೆಯಲ್ಲಿಯೇ ಇರುವ ಸಾಮಾಗ್ರಿಗಳಿಂದ ಅಡುಗೆ ತಯಾರು ಮಾಡಿ, ಸೆಲೆಬ್ರೇಷನ್ ಗೆ ಪ್ಲ್ಯಾನ್ ಮಾಡಿದ್ದರು. ಅದರಲ್ಲೂ ಕಾರ್ತಿಕ್ ಹಾಗೂ ಸ್ನೇಹಿತ್ ಡೇಟ್ ಪ್ಲ್ಯಾನ್ ಬೇರೆ ಮಾಡಿದ್ದರು.

ಪ್ಲ್ಯಾನ್ ಉಲ್ಟಾ ಮಾಡಿದ ಬಿಗ್ ಬಾಸ್

ಏನಾದರೂ ವಿಶೇಷತೆ ಇದ್ದರೆ ಬಿಗ್ ಬಾಸ್ ಸೂಚನೆ‌ ನೀಡುತ್ತಾರೆ. ಆದರೆ, ನಮ್ರತಾ ವಿಚಾರಕ್ಕೆ ಬಿಗ್ ಬಾಸ್ ಮನೆಯವರಿಗೆ ಏನು ಹೇಳಿರಲಿಲ್ಲ. ಸಿರಿಗೆ ಅದು ಅನುಮಾನ ಬಂದಿತ್ತು. ಆದರೂ ಸುಮ್ಮನೆ ಆಗಿದ್ದರು. ಎಲ್ಲರೂ ಸೆಲೆಬ್ರೇಷನ್ ಮೂಡ್ ನಲ್ಲಿ ಇರುವಾಗಲೇ ಬಂದಿದ್ದು ಬಿಗ್ ಬಾಸ್ ವಾಯ್ಸ್. 'ನಿಮ್ಮ ಬರ್ತ್ ಡೇ ಸೆಲೆಬ್ರೇಷನ್ ನಲ್ಲಿ ಮನೆ ಮಂದಿ ಇದ್ದಾರೆ. ಇದು ಬಿಗ್ ಬಾಸ್ ಗೂ ಖುಷಿ ತಂದಿದೆ. 165 ದಿನಗಳ ಮೊದಲೇ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು' ಅಂತ ಸತ್ಯ ಹೇಳಿದೆ.

ಡವ್ ರಾಣಿ ಹಾಡು ಹಾಕಿದ ಬಿಗ್ ಬಾಸ್

ಬಿಗ್ ಬಾಸ್ ಹೇಳಿದ ಕೂಡಲೇ ಒಂದು ಕ್ಷಣ ವಿನಯ್ ಗೂ ಗೊಂದಲ ಆಗಿ ಹೋಯ್ತು. ನಮ್ರತಾ ಅಂತು ಎದ್ದು ಜೋರಾಗಿ ಕುಣಿಯುವುದಕ್ಕೆ ಶುರು ಮಾಡಿದರು. ಬಿಗ್ ಬಾಸ್ ಕಡೆಯಿಂದ ಅಡ್ವಾನ್ಸ್ ಗಿಫ್ಟ್ ಆಗಿ, ಡವ್ ರಾಣಿ ಹಾಡನ್ನು ಹಾಕಲಾಗಿತ್ತು. ಈ ಹಾಡಿಗೆ ಕುಣಿದವರು ಹೆಚ್ಚು. ರಕ್ಷಕ್ ಹಾಗೂ ನಮ್ರತಾ ಸೇರಿ ಮಾಡಿದ ನಾಟಕ ಇದಾಗಿತ್ತು. ಸ್ನೇಹಿತ್ ಮತ್ತು ಕಾರ್ತಿಕ್ ಮೊಟ್ಟೆಯಲ್ಲಿ ಏನೋ ಒಂದು ಸ್ಪೆಷಲ್ ಮಾಡಿದ್ದರು. ಡೇಟ್ ಕೂಡ ಫೇಲ್ ಆಯ್ತಲ್ಲ ಅಂತ ಬೇಜಾರು ಮಾಡಿಕೊಂಡರು ಇದರ ನಡುವೆ, ಹಾಕಿದ್ದ ಡವ್ ರಾಣಿ ಹಾಡಿಗೆ ಸರಿಯಾಗಿ ಮ್ಯಾಚ್ ಆಗ್ತಾರೆ ಅಂತ ತನಿಷಾ ಮಾತನಾಡಿಕೊಂಡರು.

More from Filmibeat

English summary
Bigg Boss Kannada Season 10 November 3rd Espisode Namratha birthday celebration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X